ಸುಶಾಂತ್ ಸಿಂಗ್ ಕೊನೆಯ ಸಿನಿಮಾಕ್ಕೆ ಹಾಲಿವುಡ್ ಸ್ಟಾರ್ ನಟ ಫಿದಾ
ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಭೌತಿಕವಾಗತಿ ಇಲ್ಲವಾಗಿದ್ದಾರೆ. ಆದರೆ ಅವರ ಸಿನಿಮಾಗಳಿಗೆ ಸಾವಿಲ್ಲ. ಸುಶಾಂತ್ ಅಭಿನಯದ ಸಿನಿಮಾಗಳು ಪ್ರೇಕ್ಷಕರ ಮನರಂಜಿಸುತ್ತಲೇ ಇವೆ.
ಸುಶಾಂತ್ ಅಭಿನಯದ ಕೊನೆಯ ಸಿನಿಮಾ, 'ದಿಲ್ ಬೇಚಾರಾ' ಅನ್ನು ಸುಶಾಂತ್ ಅಭಿಮಾನಿಗಳು ಮುಗಿಬಿದ್ದು ನೋಡಿದರು. ಡಿಸ್ನಿ ಹಾಟ್‌ಸ್ಟಾರ್ ನಲ್ಲಿ ಬಿಡುಗಡೆ ಆಗಿದ್ದ ದಿಲ್ ಬೇಚಾರಾ ಸಿನಿಮಾ ದಾಖಲೆಗಳನ್ನು ಸೃಷ್ಟಿಸಿತು.
ಸುಶಾಂತ್ ಅಭಿನಯದ ದಿಲ್ ಬೇಚಾರಾ ಸಿನಿಮಾ, ಹಾಲಿವುಡ್‌ನ 'ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್' ಸಿನಿಮಾದ ರೀಮೇಕ್. ಹಾಲಿವುಡ್ ನ ಈ ಸಿನಿಮಾ ಇದೇ ಹೆಸರಿನ ಕಾದಂಬರಿ ಆಧರಿಸಿ ಚಿತ್ರೀಕರಣ ಗೊಂಡಿತ್ತು. ಕಾದಂಬರಿಯ ಕರ್ತೃ ಜಾನ್ ಗ್ರೀನ್.
ದಿ ಫಾಲ್ಟ್ ಇನ್ ಅವರ್ ಸ್ಟಾರ್ ಕಾದಂಬರಿಯ ಕರ್ತೃ ಜಾನ್ ಗ್ರೀನ್ 'ದಿಲ್ ಬೇಚಾರಾ' ಸಿನಿಮಾವನ್ನು ವೀಕ್ಷಿಸಿದ್ದು, ಸಿನಿಮಾದ ನಾಯಕಿ ಸಂಜನಾ ಸಂಘಿ ಅವರ ನಟನೆಯನ್ನು ವಿಪರೀತ ಮೆಚ್ಚಿಕೊಂಡಿದ್ದಾರೆ. ಸಂಜನಾ ಸಂಘಿಗೆ ಸಂದೇಶವನ್ನೂ ಕಳಿಸಿದ್ದಾರೆ ಜಾನ್ ಗ್ರೀನ್.

ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ನಟಿ
ಜಾನ್ ಗ್ರೀನ್ ಸಂದೇಶವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಸಂಜನಾ ಸಂಘಿ. 'ಕಿಜಿ ಪಾತ್ರಕ್ಕೆ ಅದ್ದಭುತವಾಗಿ ಜೀವ ತುಂಬಿದ್ದೀರಿ. ಸಿನಿಮಾವನ್ನು ನಾನು ಬಹಳ ಎಂಜಾಯ್ ಮಾಡಿದೆ. ಪಾತ್ರಕ್ಕೆ ಹಾಸ್ಯ ಮತ್ತು ಭಾವನಾತ್ಮಕತೆಯನ್ನು ಚೆನ್ನಾಗಿ ತುಂಬಿದ್ದೀರಿ ಎಂದಿದ್ದಾರೆ ಗ್ರೀನ್.

'ಸುಶಾಂತ್ ಸಿಂಗ್ ಅನ್ನು ಕಳೆದುಕೊಂಡ ಬಗ್ಗೆ ಬೇಸರವಾಯಿತು'
'ನಿಮ್ಮ ಸಹನಟ (ಸುಶಾಂತ್ ಸಿಂಗ್ ರಜಪೂತ್) ಅನ್ನು ಕಳೆದುಕೊಂಡ ಬಗ್ಗೆ ತಿಳಿಯಿತು, ಆ ಘಟನೆ ನಿಮಗೆ ಬಹಳವೇ ನೋವುಂಟು ಮಾಡಿರಬಹುದು. ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ಸುಶಾಂತ್ ಅನ್ನು ಸಹ ನೆನಪಿಸಿಕೊಂಡಿದ್ದಾರೆ ಜಾಣ್ ಗ್ರೀನ್.

'ಅದ್ಭುತ ಭವಿಷ್ಯ ಎದುರಾಗಲಿ'
ನನ್ನ ಕಾದಂಬರಿಯ ಪಾತ್ರ ಹೇಜಲ್ ಗ್ರೇಸ್ ಲ್ಯಾಂಕ್ಯಾಸ್ಟರ್ ಗೆ ಜೀವ ತುಂಬಿದ್ದಕ್ಕೆ ಬಹಳ, ಬಹಳ ಧನ್ಯವಾದಗಳು, ನಿಮ್ಮ ಜೀವನದಲ್ಲಿ ಸಂತೋಷವೇ ತುಂಬಿರಲಿ, ನಿಮಗೆ ಅದ್ಭುತವಾದ ಭವಿಷ್ಯ ಎದುರಾಗಲಿ ಎಂದು ಹಾರೈಸಿದ್ದಾರೆ ಜಾನ್ ಗ್ರೀನ್.

ನಾಯಕಿಯಾಗಿ ಮೊದಲ ಸಿನಿಮಾ ದಿಲ್ ಬೇಚಾರಾ
ಸಂಜನಾ ಸಂಘಿ ಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ದಿಲ್ ಬೇಚಾರಾ ಮೊದಲ ಸಿನಿಮಾ, ಈ ಹಿಂದೆ ರಾಕ್‌ಸ್ಟಾರ್, ಹಿಂದಿ ಮೀಡಿಯಮ್, ಫಕ್ರಿ ರಿಟರ್ನ್ಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಅವರು. ಆದರೆ ದಿಲ್ ಬೇಚಾರಾ ದೊಡ್ಡ ಹೆಸರನ್ನೇ ಸಂಜನಾ ಗೆ ತಂದುಕೊಟ್ಟಿದೆ.


Click it and Unblock the Notifications