ನನಗೆ ಬಟ್ಟೆ ಬಿಚ್ಚುವುದಷ್ಟೇ ಗೊತ್ತು ; ಕಣ್ಣೀರು ಹಾಕಿದ ಸಲ್ಮಾನ್ ಖಾನ್ ನೆಚ್ಚಿನ ಸುಂದರಿ
ಪುರುಷ ಪ್ರಧಾನ ಚಿತ್ರರಂಗದಲ್ಲಿ ನಾಯಕಿಯರು ಅಂದರೆ ಕೇವಲ ಗ್ಲಾಮರ್ ಗೊಂಬೆ ಮಾತ್ರ ಎನ್ನುವ ಕಲ್ಪನೆ ಹಲವರಲ್ಲಿದೆ. ಇಲ್ಲಿ ಪ್ರತಿಭೆ ನೋಡಿ ಮಣೆ ಹಾಕುವುದಿಲ್ಲ. ಬದಲಿಗೆ ಅಂದ..ಚೆಂದ.. ಒನಪು.. ವಯ್ಯಾರಕ್ಕೆ ಹಲವರು ಮಾರು ಹೋಗುತ್ತಾರೆ. ಇನ್ನೂ ಬೋಲ್ಡ್ ಆದ ಪಾತ್ರ ಎಲ್ಲರಿಂದ ಮಾಡಲು ಸಾಧ್ಯ ಇಲ್ಲ. ಯಾಕೆಂದರೆ ಅದು ಕೂಡ ಒಂದು ಕಲೆ.
ಆದರೆ ಈ ಕಲೆಗೆ ಬೆಲೆ ಕೊಡದ ಕೆಲವರು ಅಭಿನಯದ ಅ ಆ ಇ ಈ ಗೊತ್ತಿರದವರು ಅಷ್ಟೇ ಬಟ್ಟೆ ಬಿಚ್ಚುವ ಪಾತ್ರಗಳನ್ನು ಮಾಡುತ್ತಾರೆ ಎಂದು ಕುಹುಕವಾಡುತ್ತಾರೆ. ನಾಯಕಿಯರ ಗ್ಲಾಮರ್‍ನ ತಮ್ಮ ಲಾಭಕ್ಕಾಗಿ ಉಪಯೋಗ ಮಾಡಿಕೊಂಡು ಆ ನಂತರ ಅದೇ ಗ್ಲಾಮರ್ ನಡಿ ನಿಂತು ನಾಯಕಿಯರ ಮಾನ ಹರಾಜು ಹಾಕುತ್ತಾರೆ. ಉದಾಹರಣೆಗೆ ಜರೀನ್ ಖಾನ್ ಅವರ ಜೀವನಾನುಭವದ ಕಥೆಯನ್ನೇ ತೆಗೆದುಕೊಳ್ಳಿ.

ಹೌದು.. ಜರೀನ್ ಖಾನ್.. ಒಂದ್ಕಾಲದಲ್ಲಿ ಕತ್ರಿನಾ ಕೈಫ್ ಅವರ ತದ್ರೂಪಿಯೆಂದೇ ಹೆಸರಾದ ಚೆಲುವೆ. ಇಷ್ಟೇ ಅಲ್ಲ ಕತ್ರಿನಾ ಅವರಂತೆಯೇ ಸಲ್ಮಾನ್ ಖಾನ್ ಅವರ ಕ್ಯಾಂಪ್‌ನಲ್ಲಿ ಗುರುತಿಸಿಕೊಂಡ ಬೆಡಗಿ ಕೂಡ ಹೌದು ಜರೀನ್ ಖಾನ್. ಆದರೆ.. ಕತ್ರಿನಾ ಕೈಫ್‌ಗೆ ಸಿಕ್ಕ ಯಶಸ್ಸು.. ಅವಕಾಶ.. ಜರೀನ್ ಖಾನ್‌ಗೆ ಸಿಗಲಿಲ್ಲ. ವೃತ್ತಿ ಬದುಕು ಮೇಲಕ್ಕೇರಲಿಲ್ಲ.
ಇಂಥಾ ಜರೀನ್ ಖಾನ್ ಮಾಡಿರುವ ಕೆಲವೇ ಕೆಲ ಬೆರಳಣಿಕಯ ಚಿತ್ರಗಳಲ್ಲಿ ''ಹೇಟ್ ಸ್ಟೋರಿ-3'' ಕೂಡ ಒಂದು. ಡಿಸೆಂಬರ್ 2015ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ವಿಶಾಲ್ ಪಾಂಡ್ಯ ನಿರ್ದೇಶನದ ಈ ಚಿತ್ರ ತೆರೆಗೆ ಬಂದು ಹತ್ತು ವರ್ಷಗಳಾಗಿವೆ. ಆದರೆ.. ಈ ಚಿತ್ರ ಮಾಡಿದ್ದಕ್ಕೆ ಜರೀನ್ ಖಾನ್ ಅವರಿಗೆ ಇವತ್ತು ಕೂಡ ಪಶ್ಚಾತಾಪ ಕಾಡುತ್ತಿದೆ. ಹೀಗಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿರುವ ಜರೀನ್ ಖಾನ್ ಬಾಲಿವುಡ್‌ನ ಮನಸ್ಥಿತಿಗೆ ಕೈಗನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ.
ಈ ಕುರಿತು ''ಮ್ಯಾಮೂತ್ ಮೀಡಿಯಾ''ದ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಜರೀನ್ ಖಾನ್, ''ಹೇಟ್ ಸ್ಟೋರಿ 3'' ಚಿತ್ರದ ಕಥೆಯ ವಿಚಾರಕ್ಕೆ ಬಂದರೆ ಅವರು ನನಗೆ ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು ಎಂದು ಹೇಳಿದ್ದಾರೆ. ಆರಂಭದಲ್ಲಿ ''ಹೇಟ್ ಸ್ಟೋರಿ 3''ಯಲ್ಲಿ ಬೋಲ್ಡ್ ದೃಶ್ಯ ಇರಲ್ಲ ಎಂದು ನನಗೆ ಭರವಸೆ ನೀಡಿದರು, ಹೀಗಾಗಿ ನಾನು ಒಪ್ಪಿಕೊಂಡೆ ಎಂದು ಹೇಳಿರುವ ಜರೀನ್ ಖಾನ್ ಚಿತ್ರದ ಚಿತ್ರೀಕರಣಕ್ಕೆ ನಾನು ಹೋದ ನಂತರ ಎಲ್ಲವೂ ಬದಲಾಯ್ತು ಎಂದು ಹೇಳಿದ್ದಾರೆ.
ಪ್ರತಿ ದೃಶ್ಯವೂ ಲಿಪ್ ಕಿಸ್ ಮೂಲಕ ಆರಂಭವಾಗಿ ಲಿಪ್ ಕಿಸ್ ಮೂಲಕವೇ ಮುಗಿಯಲು ಶುರುವಾಯ್ತು ಎಂದು ಹೇಳಿರುವ ಜರೀನ್ ಖಾನ್, ಇದ್ದಕ್ಕಿದ್ದಂತೆಯೇ ಬಂದು ಬಟ್ಟೆ ಬಿಚ್ಚಿಸಿದರು, ಕೇವಲ ಬ್ರಾ ದಲ್ಲಿ ಕಾಣಿಸಿಕೊಳ್ಳುವಂತೆ ಹೇಳಿದರು ಎಂದು ಹೇಳಿದ್ದಾರೆ.

ನನಗೆ ಬೋಲ್ಡ್ ದೃಶ್ಯಗಳನ್ನು ಮಾಡಲು ಯಾವ ಅಭ್ಯಂತರವೂ ಇರಲಿಲ್ಲ. ಆದರೆ, ನಿರ್ದೇಶಕರು ಆರಂಭದಿಂದಲೂ ಪ್ರತಿಯೊಂದು ಹಂತದಲ್ಲಿಯೂ ನನ್ನ ದಾರಿ ತಪ್ಪಿಸಿದರು, ತಪ್ಪು ಮಾಹಿತಿಗಳನ್ನು ನೀಡಿದರು, ಎಂದು ಹೇಳಿದ್ದಾರೆ.
ನಿರ್ಮಾಪಕರಿಗೆ ಒಂದು ವಿಷಯ ಹೇಳಿ, ನನ್ನ ವೇಷಭೂಷಣ ವಿನ್ಯಾಸಕ ಶಾಹಿದ್ ಅಮೀರ್‌ಗೆ ಮತ್ತೊಂದು ವಿಷಯ ಹೇಳಿ, ನನಗೆ ಇನ್ನೊಂದು ವಿಷಯ ಹೇಳಿ ಆ ಚಿತ್ರವನ್ನು ಅವರು ಮಾಡಿದ್ದಾರೆ ಎಂದು ಹೇಳಿರುವ ಜರೀನ್ ''ಹೇಟ್ ಸ್ಟೋರಿ 3'' ಮುನ್ನ ನಾನು ''ಅಕ್ಸರ್ 2''ನಲ್ಲಿಯೂ ಬೋಲ್ಡ್ ದೃಶ್ಯಗಳನ್ನು ಮಾಡಿದ್ದೆ, ಆ ಚಿತ್ರವನ್ನು ನೋಡಿದ್ದ ನಿರ್ಮಾಪಕರು ಕೂಡ ನನ್ನನ್ನೂ ಕೇವಲ ಬ್ರಾದಲ್ಲಿ ನೋಡಲು ಬಯಸಿದ್ದರು, ನಿರ್ದೇಶಕರಿಗೆ ಹೇಳಿ ಪ್ರಚೋದನಾಕಾರಿಯಾದ ಸನ್ನಿವೇಶಗಳನ್ನು ಮಾಡಿಸಿದರು, ನನಗೆ ಅದು ನ್ಯಾಯ ಸಮ್ಮತ ಎಂದು ಅನಿಸಲಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಚಿತ್ರದಿಂದ ಅರ್ಧಕ್ಕೆ ಹೊರಬರಲು ನಾನು ನಿರ್ಧಾರ ಮಾಡಿದ್ದೇ, ಆದರೆ ನಾನು
ಇನ್ನೂ ಅಂಬೆಗಾಲು ಇಡುತ್ತಿದ್ದ ದಿನಗಳವು, ಎಲ್ಲಕ್ಕಿಂತ ಮುಖ್ಯವಾಗಿ ನನ್ನಿಂದ ಬೇರೆ ಎಲ್ಲರಿಗೆ ತೊಂದರೆಯಾಗುವುದು ಬೇಡ ಎಂದು ನಾನು ಸುಮ್ಮನಾದೆ, ಆದರೆ ಚಿತ್ರ ಮುಕ್ತಾಯವಾದ ನಂತರ ನನ್ನನ್ನೇ ವಿಲನ್ ರೀತಿ ಮಾಧ್ಯಮಗಳ ಮೂಲಕ ಬಿಂಬಿಸಿದರು ಎಂದು ತಮ್ಮ ನೋವನ್ನು ಜರೀನ್ ಖಾನ್ ಹಂಚಿಕೊಂಡಿದ್ದಾರೆ.
ಸಿನಿಮಾ ಬಿಡುಗಡೆಯಾದ ನಂತರವೂ ಕೂಡ ಅವಮಾನ ಎದುರಿಸಬೇಕಾಯ್ತು ಎಂದು ಹೇಳಿರುವ ಜರೀನ್ ಖಾನ್, ಅವಳಿಗೆ ಆಕ್ಟಿಂಗ್ ಅಂದ್ರೇನು ಎನ್ನುವುದೇ ಗೊತ್ತಿಲ್ಲ. ಹೀಗಾಗಿ ಬಟ್ಟೆ ಬಿಚ್ಚಿದ್ದಾಳೆ, ಎಷ್ಟು ಬೇಕಾದರೂ ಬಿಚ್ಚುತ್ತಾಳೆ ಎಂದು ನಿರ್ದೇಶಕರು ಇಡೀ ಬಾಲಿವುಡ್ ತುಂಬೆಲ್ಲಾ ಹೇಳಿಕೊಂಡು ಬಂದರು ಎಂದು ಕೂಡ ಜರೀನ್ ಈ ಸಂದರ್ಶನದಲ್ಲಿ ಹೇಳಿದ್ದಾರೆ. ಬಿಕ್ಕಿದ್ದಾರೆ.


Click it and Unblock the Notifications











