ಮದ್ವೆಯಾದ ಎರಡೇ ತಿಂಗಳಿಗೆ ತನ್ನ 25 ಕೋಟಿಯ ಭವ್ಯ ಮನೆ ಮಾರಲು ಮುಂದಾದ ಸೋನಾಕ್ಷಿ ಸಿನ್ಹಾ...!

ಪ್ರೀತಿಗೆ ಹುಟ್ಟೋದು ಗೊತ್ತು.. ಸಾಯೋದು ಗೊತ್ತಿಲ್ಲ.. ನಗ್ಸೋದು ಗೊತ್ತು.. ನಗು ಕಸಿಯೋದು ಗೊತ್ತಿಲ್ಲ. ಧರ್ಮ, ಬಣ್ಣ, ಭಾ‍ಷೆ, ಮೇಲು-ಕೀಳಿನ ಕಿಂಚಿತ್ತೂ ಅರಿವು ಇದಕ್ಕಿಲ್ಲ. ಕಣ್ಣಲ್ಲ್ ಹುಟ್ಟೋ ಪ್ರೀತಿಗೆ ಮನಸ್ಸೆ ಸಾಕ್ಷಿ.. ಹೃದಯವೇ ಸ್ವರ್ಗ. ಇದಕ್ಕೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ತಾಜಾ ಉದಾಹರಣೆ.

ಹೌದು, ಅಂತರ ಧರ್ಮವಾಗಿದ್ದರೂ, ವಯಸ್ಸಿನಲ್ಲಿ ಅಂತರ ಇದ್ದರೂ.. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬಂತೆ ಯಾರಿಗೂ ಕ್ಯಾರೇ ಎನ್ನದೇ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆಯಾಗಿದ್ದಾರೆ. ನೆಮ್ಮದಿಯಾಗಿ ಬದುಕುತ್ತಿದ್ದಾರೆ.

The Home Where Sonakshi Sinha Got Married is Now Up for Sale at Rs 25 Crore

ಆದರೆ. ಈ ನೆಮ್ಮದಿಗೆ ಭಂಗ ತರುವ ಕೆಲಸವನ್ನು ಕೆಲವರು ಇಬ್ಬರು ಮದುವೆಯಾದ ದಿನದಿಂದ ಮಾಡುತ್ತಲೇ ಬಂದಿದ್ದಾರೆ. ಶತ್ರುಘ್ನ ಸಿನ್ಹಾ ತಮ್ಮ ಮನೆ ರಾಮಾಯಣದಿಂದ ಸೋನಾಕ್ಷಿಯನ್ನು ಹೊರ ಹಾಕಿದ್ಧಾರೆ ಎಂದೆಲ್ಲ ವದಂತಿ ಹಬ್ಬಿಸಿದ್ದಾರೆ. ಸಹೋದರರಾದ ಲವ್ ಮತ್ತು ಕುಶ್ ಕೂಡ ಸೋನಾಕ್ಷಿಯ ಈ ನಡೆಯಿಂದ ಬೇಸರ ಮಾಡಿಕೊಂಡಿದ್ದಾರೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಸೋನಾಕ್ಷಿ ಸಿನ್ಹಾ ತಮ್ಮ ಕನಸಿನ ಅರಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ ಎನ್ನುವ ಸುದ್ದಿ ಸದ್ಯ ಹೊರ ಬಿದ್ದಿದೆ. ಸೋನಾಕ್ಷಿ ಸಿನ್ಹಾ ಅವರ ಕಾಲೆಳೆಯಲು ಕಾದು ಕುಂತಿದ್ದವರಿಗೆ ಈ ಸುದ್ದಿ ಈಗ ಆಹಾರವೂ ಆಗಿದೆ.

ಹೌದು, ಅಸಲಿಗೆ.. ರಿಯಲ್ ಎಸ್ಟೇಟ್ ಕಂಪನಿಯೊಂದು ಮನೆಯೊಂದರ ವಿಡಿಯೋ ಹಂಚಿಕೊಂಡಿದೆ. ಮನೆಯ ವಿಶೇಷತೆಯನ್ನು ಹೇಳಿದೆ. ವಿಡಿಯೋ ಮೂಲಕ ಮನೆಯ ಮೂಲೆ ಮೂಲೆಯ ದರ್ಶನವನ್ನು ಈ ರಿಯಲ್ ಎಸ್ಟೇಟ್ ಕಂಪನಿ ಮಾಡಿಸಿದೆ. ಆದರೆ ಎಲ್ಲಿಯೂ ಈ ಮನೆ ಸೋನಾಕ್ಷಿ ಸಿನ್ಹಾ ಅವರದ್ದು ಎನ್ನುವುದನ್ನು ಮಾತ್ರ ಈ ಕಂಪನಿ ಹೇಳಿಲ್ಲ.

the-home-where-sonakshi-sinha-got-married-is-now-up-for-sale-at-rs-25-crore

ಅದ್ಯಾಗೂ ಈ ಮನೆ ಸೋನಾಕ್ಷಿ ಸಿನ್ಹಾ ಅವರದ್ದೇ ಅನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ. ಈ ಅನುಮಾನ ಇನ್ನೂ ಹೆಚ್ಚಾಗುವಂತೆ ಖುದ್ದು ಸೋನಾಕ್ಷಿ ಸಿನ್ಹಾ ಅವರೇ ಈ ವಿಡಿಯೋ ಮೆಚ್ಚಿಕೊಂಡಿದ್ಧಾರೆ. ಇನ್ನೂ ಎಲ್ಲಕ್ಕಿಂತ ಹೆಚ್ಚಾಗಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ಮದುವೆ ನಡೆದಿದ್ದು ಕೂಡ ಇದೇ ಮನೆಯಲ್ಲಿ.

ಹೀಗಾಗಿಯೇ ಈ ವಿಡಿಯೋ ಕೆಳಗಿನ ಕಾಮೆಂಟ್ ಸೆಕ್ಷನ್‌ನಲ್ಲಿ ಮುಗಿ ಬಿದ್ದಿರುವ ಅನೇಕರು, ಇದು ಸೋನಾಕ್ಷಿ ಸಿನ್ಹಾ ಅವರದ್ದೇ ಮನೆ ಎನ್ನುತ್ತಿದ್ದಾರೆ. ಮದುವೆ ಮಾಡಿಕೊಂಡ ಮೇಲೆ ಮನೆ ಮಾರಿಕೊಳ್ಳುವಂತಹ ದುರ್ಗತಿ ಬಂತಾ ಎಂಬ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಇನ್ನೂ ಕೆಲವರು ಸಮುದ್ರದ ಕಡೆಗೆ ಮುಖ ಮಾಡಿರುವ ಮನೆಯನ್ನಷ್ಟೇ ತೋರಿಸಿದ್ದೀರಾ ಅಲ್ಲಿಯೇ ಎದುರು ಇರುವ ಕೊಳೆಗೇರಿ ಪ್ರದೇಶವನ್ನೂ ತೋರಿಸಿ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಬಹುಕೋಟಿ ವೆಚ್ಚದಲ್ಲಿರುವ ಈ ಮನೆಯನ್ನು ಮಾರುವ ಅವಶ್ಯಕತೆ ಮತ್ತು ಅನಿವಾರ್ಯತೆ ಸೋನಾಕ್ಷಿ ಸಿನ್ಹಾಗೆ ಏನಿದೆ ಎಂಬ ಪ್ರಶ್ನೆ ಕೂಡ ಕೇಳಿದ್ದಾರೆ.

ಅಂದ್ಹಾಗೇ 4200 ಚದರ ಅಡಿಯ ಈ ಮನೆ ಮುಂಬೈನ ಬಾಂದ್ರಾದಲ್ಲಿದೆ. ನಾಲ್ಕು ಬೆಡ್ ರೂಮ್‌ನಷ್ಟು ಜಾಗ ಇದ್ದರೂ ಈ ಮನೆಯಲ್ಲಿ ಎರಡು ವಿಶಾಲವಾದ ಬೆಡ್ ರೂಮ್‌ಗಳಿವೆ. ಇನ್ನೂ ಸಮುದ್ರದ ಕಡೆ ಮುಖ ಮಾಡಿ ಕುಳಿತರೆ ಸ್ವರ್ಗ ಧರೆಗಿಳಿದ ಅನುಭವ. ಪ್ರೈವೇಟ್ ಲಿಫ್ಟ್ ಮತ್ತು ಜಿಮ್‌ ಸೇರಿ ಅನೇಕ ಸೌಕರ್ಯಗಳು ಈ ಮನೆಯಲ್ಲಿವೆ. ಇನ್ನೂ ಈ ಮನೆಯ ಬೆಲೆ ಹತ್ತು ಹದಿನೈದು ಅಲ್ಲ ಬದಲಿಗೆ ಇಪ್ಪತ್ತೈದು ಕೋಟಿ ರೂಪಾಯಿ. ಇನ್ನೂ ಮನೆಯ ಒಳಾಂಗಣ ವಿನ್ಯಾಸಕ್ಕೆ ಐದು ಕೋಟಿಯನ್ನು ಖರ್ಚು ಮಾಡಲಾಗಿದೆ. ಹೀಗೆ ಕಷ್ಟಪಟ್ಟು ದುಡಿದ ಹಣದಿಂದ ಇಷ್ಟಪಟ್ಟು ಸೋನಾಕ್ಷಿ ಮುಂಬೈನ ಬಾಂದ್ರಾದಲ್ಲಿ ದುಬಾರಿ ಮನೆಯನ್ನು ಹೊಂದಿದ್ದಾರೆ.

ಆದರೆ, ಈಗ ಇದೇ ಮನೆ ಮಾರಲು ಮುಂದಾಗಿದ್ದಾರೆ. ಸೋನಾಕ್ಷಿಯ ಈ ನಡೆ ಈಗ ಅನೇಕರಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮದುವೆ ನಂತರ ಹಣದ ಕೊರತೆ ಉಂಟಾಗಿರಬಹುದೇನೋ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ನಿಜಕ್ಕೂ ಮನೆ ಮಾರಲು ಕಾರಣವೇನು ಅನ್ನುವುದನ್ನು ಖುದ್ದು ಸೋನಾಕ್ಷಿ ಸಿನ್ಹಾ ಅವರೇ ಈಗ ಹೇಳಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X