»   » ಆರ್ಫಿ ಲಂಬ ನಟನೆಯ 'ದಿ ಈಡಿಯಟ್ಸ್' AAIFF ಚಿತ್ರೋತ್ಸವದಲ್ಲಿ ಪ್ರೀಮಿಯರ್

ಆರ್ಫಿ ಲಂಬ ನಟನೆಯ 'ದಿ ಈಡಿಯಟ್ಸ್' AAIFF ಚಿತ್ರೋತ್ಸವದಲ್ಲಿ ಪ್ರೀಮಿಯರ್

Posted By:
Subscribe to Filmibeat Kannada

ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ 'ಸ್ಲಮ್‌ಡಾಗ್ ಮಿಲೇನಿಯರ್'(2008) ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ ನಟ ಆರ್ಫಿ ಲಂಬ ಅಭಿನಯದ 'ದಿ ಈಡಿಯಟ್ಸ್'(The Idiots) ಕಿರುಚಿತ್ರ 40ನೇ ಏಷಿಯನ್ ಅಮೆರಿಕನ್ ಇಂಟರ್‌ನ್ಯಾಷನಲ್ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ.

ನಟ ಆರ್ಫಿ ಲಂಬ 'ಸ್ಲಮ್‌ಡಾಗ್ ಮಿಲೇನಿಯರ್' ಮಾತ್ರವಲ್ಲದೇ 'ಫಗ್ಲಿ'(Fugly), 'ಸಿಂಗ್ ಈಸ್ ಬ್ಲಿಂಗ್' ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಈಗ ಅವರ ನಟನೆಯ ಕಿರುಚಿತ್ರ 'ದಿ ಈಡಿಯಟ್ಸ್' ಇಸ್ಲಾಮೋಫೋಬಿಯಾ( ಇಸ್ಲಾಂ ಮತ್ತು ಮುಸ್ಲಿಂ ಬಗೆಗಿನ ಹೆದರಿಕೆ ಅಥವಾ ವಿರೋಧ) ಕಾನ್ಸೆಪ್ಟ್ ಆಧಾರಿತವಾಗಿದೆ. ಕಿರುಚಿತ್ರವು ನಾಳೆ(ಜುಲೈ 27) ನ್ಯೂಯಾರ್ಕ್ ನಲ್ಲಿ ನಡೆಯಲಿರುವ '40ನೇ ಏಷಿಯನ್ ಅಮೆರಿಕನ್ ಇಂಟರ್‌ನ್ಯಾಷನಲ್ ಚಲನಚಿತ್ರೋತ್ಸವ'ದಲ್ಲಿ ಪ್ರೀಮಿಯರ್ ಶೋ ಕಾಣಲಿದೆ.

'The Idiots' Short film will premiere at 40th Asian American International Film Festival on 27th July !

18 ನಿಮಿಷಗಳ 'ದಿ ಈಡಿಯಟ್ಸ್' ಕಿರುಚಿತ್ರವನ್ನು ರುಚಿ ಜೋಶಿ ಮತ್ತು ಶ್ರೀರಾಮ್ ಗಣಪತಿ ಎಂಬುವರು ನಿರ್ದೇಶನ ಮಾಡಿದ್ದಾರೆ. ಸತ್ಯಘಟನೆಯಿಂದ ಪ್ರೇರಣೆ ಹೊಂದಿ ನಿರ್ಮಿಸಲಾದ ಈ ಕಿರುಚಿತ್ರವನ್ನು ಸಂಪೂರ್ಣ ಕಪ್ಪು ಮತ್ತು ಬಿಳುಪು ಕಲರ್ ನಲ್ಲೇ ಶೂಟ್‌ ಮಾಡಲಾಗಿದೆ. ನಟ ಆರ್ಫಿ ಲಂಬ ರವರು ಚಿತ್ರ ಟೈಟಲ್ ಪಾತ್ರವನ್ನು ನಿರ್ವಹಣೆ ಮಾಡಿದ್ದಾರೆ. ಲಂಬ ರವರ ಬಾಂಬೆ ಬರ್ಲಿನ್ ಫಿಲ್ಮ್ ಪ್ರೊಡಕ್ಷನ್ ಕಂಪನಿ ಕಿರುಚಿತ್ರವನ್ನು ನಿರ್ಮಾಣ ಮಾಡಿದೆ.

ಅಂದಹಾಗೆ ಆರ್ಫಿ ಲಂಬ ರವರು ಕಿರುಚಿತ್ರದಲ್ಲಿ ಆಕ್ಟ್ ಮಾಡಿರುವ ಕುರಿತು, 'ಇಸ್ಲಾಮೋಫೋಬಿಯಾ ದಂತ ಸಮಸ್ಯೆ ನಿಭಾಯಿಸುವ ಚಿತ್ರದಲ್ಲಿ ನಟಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ' ಎಂದು ಹೇಳಿದ್ದಾರೆ.

'The Idiots' Short film will premiere at 40th Asian American International Film Festival on 27th July !

ಲಂಬ ರವರು ಕಿರು ಚಿತ್ರಕ್ಕೆ ಹೊಸಬರೇನು ಅಲ್ಲ. ಕಲಾವಿದರಾಗಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ದೀರ್ಘಕಾದಲಿಂದಲೂ ಕಿರುಚಿತ್ರಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. 2007 ರಲ್ಲಿ 'ಶೂನ್ಯತ' (Shunyata), 'ಎ ಪರ್ಫೆಕ್ಟ್ ಮರ್ಡರ್'(A Perfect Murde) ಮತ್ತು ರೋಷನ್ ಸಭಾವಾಲ್‌ ರವರ 'ಶೇಡ್ಸ್‌ ಆಫ್ ಗ್ರೇ'(Shades of Grey) ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

English summary
short film on Islamophobia , starring Slumdog Millionaire, Fugly , Singh is Bling famed actor Arfi Lamba to have its world premiere at the 40th Asian American International Film Festival in New York on 27th July !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada