ವಿಕ್ಕಿ, ರಣ್‌ವೀರ್, ಯಶ್, ಶಾರುಕ್..? ಮಹಾಭಾರತ ಕಥೆ ಆಧರಿಸಿ 300 ಕೋಟಿ ರೂ. ಬಜೆಟ್ ಸಿನಿಮಾ?

ಸಾಕಷ್ಟು ಸಿನಿಮಾಗಳು ಶೂಟಿಂಗ್ ಮಧ್ಯದಲ್ಲೇ ನಿಂತು ಹೋಗಿವೆ. ಇನ್ನು ಕೆಲ ಸಿನಿಮಾಗಳು ಘೋಷಣೆ ಆದ್ರು, ಸೆಟ್ಟೇರದೇ ಜನ ಮರೆತ ಉದಾಹರಣೆ ಕೂಡ ಇದೆ. ಬಾಲಿವುಡ್‌ನಲ್ಲಿ 3 ವರ್ಷಗಳ ಹಿಂದೆ ಘೋಷಣೆಯಾಗಿದ್ದ ಸಿನಿಮಾ ಇನ್ನು ಶುರುವಾಗಿಲ್ಲ. ಮಹಾಭಾರತದ ಅಶ್ವತ್ಥಾಮನ ಕಥೆ ಆಧರಿಸಿ, ಈ ಸಿನಿಮಾ ಬರಬೇಕಿತ್ತು. ಭಾರೀ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಬೇಕಿತ್ತು. ಆದರೆ ಯಾವುದು ಕೂಡ ನಡೆಯಲೇ ಇಲ್ಲ.

ವಿಕ್ಕಿ ಕೌಶಲ್ ನಟನೆಯ 'ಉರಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದರ ಬೆನ್ನಲ್ಲೇ ನಿರ್ದೇಶಕ ಆದಿತ್ಯಾ ಧರ್ ತಮ್ಮ ಕನಸಿನ ಸಿನಿಮಾ ಆರಂಭಿಸಿದ್ದರು. 'ದಿ ಇಮ್ಮಾರ್ಟಲ್ ಅಶ್ವತ್ಥಾಮ' ಎನ್ನುವ ಸಿನಿಮಾ ಘೋಷಣೆ ಆಗಿತ್ತು. ವಿಕ್ಕಿ ಕೌಶಲ್ ಚಿತ್ರದ ನಾಯಕರಾಗಿ ನಟಿಸಬೇಕಿತ್ತು. ಮಹಾಭಾರತದ ಚಿರಂಜೀವಿಗಳಲ್ಲಿ ಒಬ್ಬ ಎನ್ನಲಾಗುವ ಅಶ್ವತ್ಥಾಮನ ಕಥೆಯನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ನಡೀತು. ಇದಕ್ಕಾಗಿ ಪ್ರೀ ಪ್ರೊಡಕ್ಷನ್ ವರ್ಕ್‌ ಕೂಡ ಶುರುವಾಗಿತ್ತು. ಆದರೆ ಕಲಾವಿದರ ಆಯ್ಕ ವಿಳಂಬವಾಗಿ ಸಿನಿಮಾ ಸೆಟ್ಟೇರಲೇಯಿಲ್ಲ.

The Immortal Ashwatthama shelved as with a Rs 30 crore loss on pre production

'ಉರಿ' ನಂತರ ಬಂದ ವಿಕ್ಕಿ ಕೌಶಲ್ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಮೊದಲು ರೋನಿ ಸ್ಕ್ರೂವಾಲಾ ಸಿನಿಮಾ ನಿರ್ಮಾಣಕ್ಕೆ ಮುಂದೆ ಬಂದಿದ್ದರು. ನಂತರ ಜಿಯೋ ಸಂಸ್ಥೆ ಸಿನಿಮಾ ನಿರ್ಮಿಸುತ್ತದೆ ಎನ್ನಲಾಯಿತು. ಆ ಸಂಸ್ಥೆ ಮಾರ್ಕೆಟ್ ಇಲ್ಲದ ವಿಕ್ಕಿ ಜೊತೆ ಇಷ್ಟು ದೊಡ್ಡ ಬಜೆಟ್ ಸಿನಿಮಾ ಬೇಡ ಡನ್ನುವ ನಿರ್ಧಾರಕ್ಕೆ ಬಂತು. ನಂತರ ರಣ್‌ವೀರ್ ಸಿಂಗ್ ಹಿರೋ ಆಗಿ ನಟಿಸ್ತಾರೆ ಎನ್ನಲಾಯಿತು. ಸಾರಾ ಅಲಿಖಾನ್ ನಾಯಕಿ ಪಾತ್ರದಲ್ಲಿ ನಟಿಸಬೇಕಿತ್ತು. ನಂತರ ಸಮಂತಾ ಹೆಸರು ಕೇಳಿಬಂತು. ಏನೇ ಆದರೂ ಸಿನಿ ಮಾತ್ರ ಶುರುವಾಗಲಿಲ್ಲ.

'ದಿ ಇಮ್ಮಾರ್ಟಲ್ ಅಶ್ವತ್ಥಾಮ' ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ಗಾಗಿಯೇ 30 ಕೋಟಿ ರೂ.ಗೂ ಅಧಿಕ ಖರ್ಚಾಗಿದೆ. ಆದರೆ ಸಿನಿಮಾ ಮಾತ್ರ ಶುರುವಾಗಲೇಯಿಲ್ಲ. 'RRR' ಸಕ್ಸಸ್ ಆಗುತ್ತಿದ್ದಂತೆ ಜ್ಯೂ. ಎನ್‌ಟಿಆರ್ ಅಥವಾ ರಾಮ್‌ಚರಣ್ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಯಿತು. ಇದೆಲ್ಲದರ ನಡುವೆ 'KGF' ಚಾಪ್ಟರ್‌- 2 ನಂತರ ಯಶ್‌ನ ಈ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಮಾಡುವ ಪ್ರಯತ್ನಗಳು ನಡೀತು. ಆದರೆ ಯಾವುದು ಕೂಡ ಸಫಲವಾಗಲಿಲ್ಲ. ಇದೀಗ ಜಿಯೋ ಸಂಸ್ಥೆ ಈ ಚಿತ್ರವನ್ನು ಕೈಬಿಡುವ ನಿರ್ಧಾರಕ್ಕೆ ಬಂದಿದೆ.

ಈ ಹಿಂದೆ ರಣ್‌ವೀರ್ ಸಿಂಗ್ 'ಶಕ್ತಿಮಾನ್' ಪಾತ್ರದಲ್ಲಿ ನಟಿಸಲು ಆಸಕ್ತರಾಗಿರುವಾಗಿ ಸುದ್ದಿ ವೈರಲ್ ಆಗಿತ್ತು. ಆದರೆ 'ದಿ ಇಮ್ಮಾರ್ಟಲ್ ಅಶ್ವತ್ಥಾಮ' ಬಗ್ಗೆ ಯಾವುದೇ ಮಾತು ಕೇಳಿಬರಲಿಲ್ಲ. ಇನ್ನು 3 ವರ್ಷಗಳಿಂದ ತಮ್ಮ ಕನಸಿನ ಪ್ರಾಜೆಕ್ಟ್‌ಗಾಗಿ ಕೆಲಸ ಮಾಡಿ ನಿರ್ದೇಶಕ ಆದಿತ್ಯಾ ಧರ್ ಬೇಸರಗೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಎಲ್ಲಿ ತಪ್ಪಾಗುತ್ತಿದೆ ಎನ್ನುವುದು ಗೊತ್ತಿಲ್ಲ. ಇಂತಹ ಸಮಯದಲ್ಲಿ 200, 300 ಕೋಟಿ ರೂ. ಹೂಡಿಕೆ ಮಾಡಿ ಸಿನಿಮಾ ಮಾಡುವುದಕ್ಕಿಂತ 30 ಕೋಟಿ ರೂ. ಹೋದರೆ ಹೋಗಲಿ ಎನ್ನುವ ನಿರ್ಧಾರಕ್ಕೆ ಚಿತ್ರತಂಡ ಬಂದಿದೆಯಂತೆ.

The Immortal Ashwatthama shelved as with a Rs 30 crore loss on pre production

'ಪಠಾಣ್' ಸಿನಿಮಾ ಸಕ್ಸಸ್ ನಂತರ ಶಾರುಕ್ ಖಾನ್ ಹೆಸರು ಈ ಚಿತ್ರಕ್ಕಾಗಿ ಕೇಳಿ ಬರ್ತಿದೆ. ಆದರೆ ಕಿಂಗ್‌ಖಾನ್ ಈಗಾಗಲೇ ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಪೌರಾಣಿಕ ಚಿತ್ರಕ್ಕೆ ಕೈಹಾಕುವುದಿಲ್ಲ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ನಿರ್ದೇಶಕ ಆದಿತ್ಯಾ ಧರ್ ಸದ್ಯಕ್ಕೆ 'ದಿ ಇಮ್ಮಾರ್ಟಲ್ ಅಶ್ವತ್ಥಾಮ' ಸಿನಿಮಾ ಬಿಟ್ಟು ಬೇರೆ ಸಿನಿಮಾ ಮಾಡುವತ್ತ ಗಮನ ಹರಿಸಿದ್ದಾರೆ. ಒಂದು ವೇಳೆ ಬಾಲಿವುಡ್ ಸಿನಿಮಾಗಳು ಸಕ್ಸಸ್ ಆಗಿ ಯಾರಾದರೂ ನಿರ್ಮಾಪಕರು ಮತ್ತೆ ಬಂದು ಈ ಸಿನಿಮಾ ಮಾಡೋಣ ಅಂದ್ರೆ ನೋಡೋಣ ಎಂದುಕೊಂಡಿದ್ದಾರೆ.

More from Filmibeat

English summary
The Immortal Ashwatthama shelved as with a Rs 30 crore loss on pre production. 3 years ago Director aditya dhar dream project were announced. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X