The Kashmir Files: ಕಲೆಕ್ಷನ್ ವಿಚಾರದಲ್ಲಿ ಬಾಲಿವುಡ್ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದ 'ದಿ ಕಾಶ್ಮೀರಿ ಫೈಲ್ಸ್'
'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ಇದೀಗ ಎಲ್ಲರ ಚರ್ಚೆಗೆ ಕಾರಣವಾಗುತ್ತಿದೆ. ಮಾರ್ಚ್ 11ರಂದು ಯಾವುದೇ ಪ್ರಚಾರ ಇಲ್ಲದೇ, ಸೈಲೆಂಟ್ ಆಗಿ ತೆರೆಕಂಡ ಸಿನಿಮಾ 'ದಿ ಕಾಶ್ಮೀರಿ ಫೈಲ್ಸ್' . ರಿಲೀಸ್ ಆಗಿ ಒಂದೆರೆಡು ದಿನ ಈ ಸಿನಿಮಾದ ಬಗ್ಗೆ ಹೆಚ್ಚಾಗಿ ಯಾರೂ ತಲೆಕೆಡಿಸಿಕೊಂಡಿರಲಿಲ್ಲಾ. ಇದೀಗ ಈ ಸಿನಿಮಾವನ್ನು ಜನ ಮುಗಿಬಿದ್ದು ನೋಡುತ್ತಿದ್ದಾರೆ. ಯಾಕೆಂದರೆ ಈ 1990ರಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಈ ಸಿನಿಮಾದಲ್ಲಿ ಸೆರೆ ಹಿಡಿಯಲಾಗಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆಯ ಬಗ್ಗೆ ತುಂಬಾ ರಾ ಆಗಿ ತೋರಿಸಿದ್ದಾರೆ. 'ದಿ ಕಾಶ್ಮೀರಿ ಫೈಲ್ಸ್' ಚಿತ್ರದ ಕಲೆಕ್ಷನ್ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಲಿವುಡ್‌ನಲ್ಲಿ 'ದಿ ಕಾಶ್ಮೀರಿ ಫೈಲ್ಸ್' ಈ ಸಾಲಿನ ಹಿಟ್ ಲಿಸ್ಟ್ ಸೇರುವ ಎಲ್ಲಾ ಸಾಧ್ಯತೆಗಳಿವೆ. ಸದ್ಯ ಈ ಚಿತ್ರದ ಕಲೆಕ್ಷನ್ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಅನ್ನೇ ಸೃಷ್ಟಿಸಿದೆ. ಥಿಯೇಟರ್‌ಗೆ ಬಂದು ಧೂಳೆಬ್ಬಿಸುತ್ತಿರುವ ಬಾಲಿವುಡ್ ಸಿನಿಮಾಗಳಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಮೊದಲ ಸ್ಥಾನದಲ್ಲಿದೆ. ಪ್ರಚಾರ ಇಲ್ಲದೇ ಬಂದ ಈ ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚು ಗಳಿಕೆಯನ್ನು ಮಾಡುತ್ತಿದೆ. ಹೀಗಾಗಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕಲೆಕ್ಷನ್ ಕುಸಿಯುವ ಲಕ್ಷಣಗಳನ್ನು ಕಾಣುತ್ತಿಲ್ಲ. ಅಂದ್ಹಾಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಐದು ದಿನಗಳಲ್ಲಿ 60.20 ಕೋಟಿ ಗಳಿಸಿ, ಬಾಕ್ಸ್ ಆಫೀಸ್ ಲೂಟಿ ಮಾಡಿದೆ.

ಮಾರ್ಚ್ 11 ರಂದು ಬಿಡುಗಡೆಯಾದ 'ದಿ ಕಾಶ್ಮೀರ್ ಫೈಲ್ಸ್', 1990 ರಲ್ಲಿ ಕಾಶ್ಮೀರಿ ದಂಗೆಯ ಸಮಯದಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಹಾಗೂ ವಲಸೆಯನ್ನು ಆಧರಿಸಿದ ಚಿತ್ರ. ಈ ಚಿತ್ರದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆದ 4 ನೇ ದಿನದಂದು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ರೂ 47.85 ಕೋಟಿ ಗಳಿಸಿತ್ತು. ಇನ್ನೇ 5 ನೇ ದಿನದಂದು ಕೂಡ ಕಲೆಕ್ಷನ್ ವಿಚಾರದಲ್ಲಿ ಅದ್ಭುತ ಬೆಳವಣಿಗೆಯನ್ನು ತೋರಿಸಿದೆ. ಐದನೇ ದಿನಕ್ಕೆ 15 ಕೋಟಿ ರೂಪಾಯಿ ಗಳಿಸಿತು. ಒಟ್ಟು ಕಲೆಕ್ಷನ್ ವಿಶ್ವದಾದ್ಯಂತ ಸುಮಾರು 60.20 ಕೋಟಿ ಗಳಿಸಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರ ಎರಡನೇ ವಾರದ ಕಲೆಕ್ಷನ್ ಇನ್ನೂ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಶೀಘ್ರದಲ್ಲೇ 100 ಕೋಟಿ ಕ್ಲಬ್‌ಗೆ ಸೇರುವುದು ಖಚಿತ. ಟ್ರೇಡ್ ವಿಶ್ಲೇಷಕ ತರನ್ ಆದರ್ಶ್ ಈ ಸಿನಿಮಾ ಗಳಿಕೆ ಬಗ್ಗೆ ಟ್ವೀಟ್ ಮಾಡಿ, ಮಾಹಿತಿ ಹಂಚಿಕೊಂಡಿದ್ದಾರೆ "#TheKashmirFiles #BO FANTASTIC" ಎಂದು ಬರೆದುಕೊಂಡಿದ್ದಾರೆ. ಶುಕ್ರವಾರ 3.55 ಕೋಟಿ, ಶನಿವಾರ 15.10 ಕೋಟಿ, ಸೋಮವಾರ 15.05 ಕೋಟಿ, ಮಂಗಳವಾರ 18 ಕೋಟಿ ಒಟ್ಟು 60.20 ಕೋಟಿ ಕಲೆಕ್ಷನ್ ಮಾಡಿರುವ ಬಗ್ಗೆ ಬರೆದುಕೊಂಡಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ' ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.


Click it and Unblock the Notifications











