For Quick Alerts
  ALLOW NOTIFICATIONS  
  For Daily Alerts

  ₹17.90 ಕೋಟಿ ಬೆಲೆಯ ಹೊಸ ಅಪಾರ್ಟ್‌ಮೆಂಟ್ ಖರೀದಿಸಿದ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ!

  |

  ಬಾಲಿವುಡ್‌ನ ವಿವಾದಾತ್ಮಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. 'ದಿ ಕಾಶ್ಮೀರ್ ಫೈಲ್ಸ್' ಅಂತಹ ಸಿನಿಮಾ ನಿರ್ದೇಶಿಸಿ ಸುದ್ದಿಯಲ್ಲಿದ್ದರು. ವಿಶ್ವದಾದ್ಯಂತ ವಿವಾದದ ಅಲೆ ಎಬ್ಬಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಿಕ್ಕಾ ಪಟ್ಟೆ ಸೌಂಡ್ ಮಾಡಿತ್ತು.

  'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಈ ವರ್ಷ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಲಿಸ್ಟ್‌ನಲ್ಲಿದೆ. ಅನುಪಮ್‌ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಷಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  The Kashmir Files:ವಿವಾದಾತ್ಮಕ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ನಿರ್ದೇಶಕ ವಿವೇಶ್ ಅಗ್ನಿಹೋತ್ರಿ ಹಿನ್ನೆಲೆಯೇನು?The Kashmir Files:ವಿವಾದಾತ್ಮಕ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ನಿರ್ದೇಶಕ ವಿವೇಶ್ ಅಗ್ನಿಹೋತ್ರಿ ಹಿನ್ನೆಲೆಯೇನು?

  ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದರೂ, ಸತ್ಯಕ್ಕೆ ದೂರವಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಕೆಲವರು ಈ ಸಿನಿಮಾದಲ್ಲಿ ಕಾಲ್ಪನಿಕ ಸನ್ನಿವೇಶಗಳು ಇವೆ ಎಂದು ಟೀಕೆ ಮಾಡಿದ್ದರು. ಸದ್ಯ ವಿವೇಕ್ ಅಗ್ನಿ ಹೋತ್ರಿ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಸಿನಿಮಾದಿಂದ ಅಲ್ಲ. ಹೊಸ ಅಪಾರ್ಟ್ಮೆಂಟ್ ಖರೀದಿ ಮಾಡಿ, ಸದ್ದು ಮಾಡುತ್ತಿದ್ದಾರೆ.

   ಮುಂಬೈನಲ್ಲಿ ₹17.90 ಕೋಟಿ ಅಪಾರ್ಟ್‌ಮೆಂಟ್!

  ಮುಂಬೈನಲ್ಲಿ ₹17.90 ಕೋಟಿ ಅಪಾರ್ಟ್‌ಮೆಂಟ್!

  ಬಾಲಿವುಡ್‌ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗೂ ಪಲ್ಲವಿ ಜೋಷಿ ಮುಂಬೈನಲ್ಲಿ ಹೊಸ ಅಪಾರ್ಟ್‌ಮೆಂಟ್ ಅನ್ನು ಖರೀದಿ ಮಾಡಿದ್ದಾರೆ. ಮುಂಬೈನ ವೆರ್ಸೋವಾದಲ್ಲಿ ದುಬಾರು ಫ್ಲ್ಯಾಟ್ ಅನ್ನು ಖರೀದಿಸಿದ್ದಾರೆ. ಇದರ ಬೆಲೆ ಸುಮಾರು ₹17.90 ಕೋಟಿ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಳಿಕ ವಿವೇಕ್ ಇಷ್ಟೊಂದು ದುಬಾರಿ ಮೊತ್ತದ ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದು, ನೆಟ್ಟಿಗರ ಕಣ್ಣು ಕುಕ್ಕಿದೆ.

  ಬಿಜೆಪಿ ಶಾಸಕರೊಂದಿಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಬಿಎಸ್‌ವೈಬಿಜೆಪಿ ಶಾಸಕರೊಂದಿಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಬಿಎಸ್‌ವೈ

   ವಿವೇಕ್ ದುಬಾರಿ ಫ್ಲ್ಯಾಟ್‌ನ ಹೈಲೈಟ್ ಏನು?

  ವಿವೇಕ್ ದುಬಾರಿ ಫ್ಲ್ಯಾಟ್‌ನ ಹೈಲೈಟ್ ಏನು?

  'ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿ ಸುಮಾರು 3258 ಚದರ ಅಡಿಯ ಅಪಾರ್ಟ್‌ಮೆಂಟ್ ಅನ್ನು ಖರೀದಿಸಿದ್ದಾರೆ. ಈ ಫ್ಲ್ಯಾಟ್‌ನಲ್ಲಿ ಸುಮಾರು ಮೂರು ಕಾರ್‌ ಪಾರ್ಕಿಂಗ್‌ಗೆ ಅವಕಾಶವಿದೆ. ಮುಂಬೈನ ಎಕ್ಸ್‌ಟಸಿ ಪ್ರೈವೇಟ್ ಜೋಷಿ ಎಂಬುವವರಿಂದ ಈ ಅಪಾರ್ಟ್‌ಮೆಂಟ್ ಅನ್ನು ಪರ್ಚೇಸ್ ಮಾಡಿದ್ದಾರೆ. ಈಗಾಗಲೇ ₹1.07 ಕೋಟಿಯನ್ನು ಸ್ಟ್ಯಾಂಪ್ ಡ್ಯೂಟಿಗೆಂದು ನೀಡಲಾಗಿದೆ ಎನ್ನಲಾಗಿದೆ. ಆದರೆ, ವಿವೇಕ್ ಅಗ್ನಿಹೋತ್ರಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ.

   ಬಾಕ್ಸಾಫೀಸ್‌ನಲ್ಲಿ ಕಾಶ್ಮೀರ್ ಫೈಲ್ಸ್ ಸದ್ದು!

  ಬಾಕ್ಸಾಫೀಸ್‌ನಲ್ಲಿ ಕಾಶ್ಮೀರ್ ಫೈಲ್ಸ್ ಸದ್ದು!

  ವಿವೇಕ್ ಅಗ್ನಿಹೋತ್ರಿ ಸುಮಾರು 55 ಸಾವಿರ ರೂಪಾಯಿಯನ್ನು ಒಂದು ಚದರ ಅಡಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. 'ದಿ ಕಾಶ್ಮೀರ್ ಫೈಲ್ಸ್' ಭಾರತದ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸುಮಾರು ₹252 ಕೋಟಿ ಕಲೆ ಹಾಕಿತ್ತು. ಇದೇ ವರ್ಷ ಮಾರ್ಚ್‌ನಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಕಾಶ್ಮೀರಿ ಪಂಡಿತರ ಹತ್ಯೆಯನ್ನು ಮುಖ್ಯ ವಿಷಯವನ್ನಾಗಿಟ್ಟುಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು.

   ಸೌಂಡ್ ಮಾಡಿದ್ದು ಎರಡು ಸಿನಿಮಾ ಮಾತ್ರ

  ಸೌಂಡ್ ಮಾಡಿದ್ದು ಎರಡು ಸಿನಿಮಾ ಮಾತ್ರ

  ವಿವೇಕ್ ಅಗ್ನಿಹೋತ್ರಿ ಈ ಹಿಂದೆ ನಿರ್ದೇಶಿಸಿದ ಸಿನಿಮಾ ಹೆಚ್ಚು ಸದ್ದು ಮಾಡಿಲ್ಲ. 'ಬುದ್ಧ', 'ಟ್ರಾಫಿಕ್ ಜಾಮ್', 'ಜುನೂನಿಯತ್', 'ಹೇಟ್ ಸ್ಟೋರಿ', 'ಧನ್ ಧನಾ ಧನ್ ಗೋಲ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದವು. 'ದಿ ತಾಷ್ಕೆಂಟ್ ಫೈಲ್ಸ್' ಹಾಗೂ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಗಳು ಸದ್ದು ಮಾಡಿದ್ದು ಬಿಟ್ಟರೆ ಬೇರೆ ಸಿನಿಮಾ ಗೆಲುವು ತಂದುಕೊಟ್ಟಿಲ್ಲ. ಸದ್ಯ ಯಶಸ್ಸಿನ ಗುಂಗಿನಲ್ಲಿರೋ ವಿವೇಕ್ 'ದಿ ದೆಲ್ಲಿ ಫೈಲ್ಸ್' ನಿರ್ಮಾಣದ ಬಗ್ಗೆ ಗಮನ ಹರಿಸುತ್ತಿದ್ದಾರೆ.

  English summary
  The Kashmir Files director Vivek Agnihotri Buys Rs 17.90 crore Apartment In Mumbai, Know More.
  Tuesday, October 4, 2022, 14:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X