For Quick Alerts
  ALLOW NOTIFICATIONS  
  For Daily Alerts

  OTTಯಲ್ಲೂ ಗೆದ್ದು ಬೀಗಿದ 'ದಿ ಕಾಶ್ಮೀರ್‌ ಫೈಲ್ಸ್‌': ವೀವ್ಸ್ ಎಷ್ಟು?

  |

  ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೊಸ ಸಂಚಲನವನ್ನು ಮೂಡಿಸಿತ್ತು. ಕಾಶ್ಮೀರ ಪಂಡಿತರ ಹತ್ಯೆ ಹಾಗೂ ಜೀವನಕ್ಕಾಗಿ ಹೋರಾಟ ನಡೆಸಿದ ಘಟನೆಗಳ ಆಧಾರದ ಮೇಲೆ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿತ್ತು. ಈ ಚಿತ್ರ ಎಲ್ಲಾ ಪ್ರೇಕ್ಷಕರಿಗೂ ಹತ್ತಿರವಾಗಿತ್ತು. ಆ ಮಟ್ಟಿಗೆ ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು.

  'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಗೆ ರಾಜಕೀಯ ವಲಯದಲ್ಲೂ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಹಲವು ರಾಜ್ಯಗಳಲ್ಲಿ ತೆರಿಗೆ ರಹಿತ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಜೊತೆಗೆ ಉಚಿತ ಟಿಕೆಟ್ ವ್ಯವಸ್ಥೆಗಳನ್ನು ಕೂಡ ಮಾಡಲಾಗಿತ್ತು. ರಾಜಕೀಯ ನಾಯಕರುಗಳೇ ಈ ಸಿನಿಮಾವನ್ನು ಪ್ರತಿಯೊಬ್ಬ ಭಾರತೀಯನು ನೋಡಬೇಕು ಎಂದು ಪ್ರಚಾರ ಮಾಡಿದ್ದರು. ಆದರೆ, ಈ ಸಿನಿಮಾ ಬಗ್ಗೆ ವಿರೋಧ ಪಕ್ಷದ ನಾಯಕರು ಕಿಡಕಾರಿದ್ದರು. ಇದೊಂದು ಕಾಲ್ಪನಿಕ ಕಥೆಯೆಂದು ವಾದಿಸಿದ್ದರು. ಆದರೂ ಸಹ ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು

  ನೌಕರರ ಗಲಾಟೆ, ರಣ್ಬೀರ್-ಶ್ರದ್ಧಾ ಸಿನಿಮಾ ಚಿತ್ರೀರಕರಣಕ್ಕೆ ಅಡಚಣೆನೌಕರರ ಗಲಾಟೆ, ರಣ್ಬೀರ್-ಶ್ರದ್ಧಾ ಸಿನಿಮಾ ಚಿತ್ರೀರಕರಣಕ್ಕೆ ಅಡಚಣೆ

  'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಮಾರ್ಚ್ 11 ರಂದು ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಈ ಸಿನಿಮಾಗೆ ಪ್ರಧಾನಿ ಮೋದಿ ಸೇರಿದಂತೆ ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸಿನಿಮಾಗೆ ಸಾಥ್ ನೀಡಿದ್ದರು. ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿಕೊಂಡಿತ್ತು. 350 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಸದ್ಯ ಈ ಸಿನಿಮಾವೀಗ ಮೇ 11 ರಂದು ಒಟಿಟಿಯಲ್ಲಿ ರಿಲೀಸ್ ಆಗಿ ಅಲ್ಲಿಯೂ ಕೂಡ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.

  ಮೇ 11 ರಂದು ಜೀ5 ನಲ್ಲಿ ರಿಲೀಸ್‌ ಆದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರೀ ವೀಕ್ಷಣೆ ಪಡೆದುಕೊಂಡಿದೆ. ಕೇವಲ ಒಂದು ವಾರದಲ್ಲಿಯೇ 20 ಲಕ್ಷಕ್ಕೂ ಅಧಿಕ ಜನ ಜೀ5ನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಸಂಭ್ರಮವನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆಚರಿಸಿದ್ದಾರೆ.

  ಬಾಲಿವುಡ್‌ 'ಗುಟ್ಕಾ ಸ್ಟಾರ್'ಗಳ ವಿರುದ್ಧ ದೂರುಬಾಲಿವುಡ್‌ 'ಗುಟ್ಕಾ ಸ್ಟಾರ್'ಗಳ ವಿರುದ್ಧ ದೂರು

  ಜೀ5ನಲ್ಲಿ 20 ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿರುವ ಕುರಿತು ಮಾತನಾಡಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಜೀ5 ನಲ್ಲಿ ರಿಲೀಸ್ ಆದ ನಮ್ಮ ಸಿನಿಮಾಗೆ ಭರ್ಜರಿ ವೀವ್ಸ್ ಸಿಕ್ಕಿದೆ. ಜನರು 'ದಿ ಕಾಶ್ಮೀರ್ ಫೈಲ್ಸ್‌' ಸಿನಿಮಾಗೆ ಉತ್ತಮ ಸ್ಪಂದನೆ ನೀಡಿದ್ದಾರೆ. ಇದು ಒಂದು ದೊಡ್ಡ ಸಾಧನೆ. ನಮ್ಮ ಚಿತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ.

  The Kashmir Files Garners Over 2 Million Views on ZEE5 OTT

  'ದಿ ಕಾಶ್ಮೀರ್ ಫೈಲ್ಸ್‌' ಸಿನಿಮಾವನ್ನು ಕೇವಲ 15 ಕೋಟಿ ರೂಪಾಯಿ ಖರ್ಚು ಮಾಡಿ ತಯಾರು ಮಾಡಲಾಗಿತ್ತು. ಸಿನಿಮಾದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 1991 ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ನರಮೇಧ ಹಾಗೂ ವಲಸೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

  English summary
  The Kashmir Files on OTT: The Kashmir Files movie Garners Over 2 Million Views on ZEE5 OTT.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X