For Quick Alerts
  ALLOW NOTIFICATIONS  
  For Daily Alerts

  ಶಾರುಖ್, ಸಲ್ಮಾನ್ ಅನ್ನು ಟ್ರೋಲ್ ಮಾಡಿ ತಗಲಾಕ್ಕೊಂಡ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ

  |

  'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಹಿಟ್ ಆದ ಬೆನ್ನಲ್ಲೆ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಿಂದೆಂದಿಗಿಂತಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿಬಿಟ್ಟಿದ್ದಾರೆ.

  ಟ್ವಿಟ್ಟರ್‌ನಲ್ಲಿ ಕೆಲವು ಟ್ರೋಲ್ ಪಡೆಗಳ ಬೆಂಬದೊಂದಿಗೆ ಹಲವರೊಡನೆ ಈಗಾಗಲೇ ಜಗಳಕ್ಕಿಳಿದಿರುವ ವಿವೇಕ್ ಅಗ್ನಿಹೋತ್ರಿ, ಶಶಿ ತರೂರ್, ಅನುಪಮಾ ಚೋಪ್ರಾ, ಕೆಲವು ಮಾಜಿ ಐಎಎಸ್ ಅಧಿಕಾರಿಗಳು ಇನ್ನು ಕೆಲವರೊಡನೆ ಟ್ವಿಟ್ಟರ್‌ನಲ್ಲಿ ಜಗಳವಾಡಿದ್ದಾರೆ.

  ಕೆಲವು ದಿನಗಳ ಹಿಂದೆ ವಿವೇಕ್ ಅಗ್ನಿಹೋತ್ರಿ, ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಸೇರಿದಂತೆ ಬಾಲಿವುಡ್‌ನ ಇತರ ಸ್ಟಾರ್‌ ಖಾನ್‌ಗಳ ಬಗ್ಗೆ ಟ್ವೀಟ್‌ ಮಾಡಿದ್ದರು.

  ಅಂತರಾಷ್ಟ್ರೀಯ ಸುದ್ದಿವಾಹಿಯೊಂದು ಶಾರುಖ್ ಖಾನ್ ಬಗ್ಗೆ ಬರೆದಿದ್ದ ಟ್ವೀಟ್‌ ಗೆ ಪ್ರತಿಕ್ರಿಯಿಸಿರುವ ಅಗ್ನಿಹೋತ್ರಿ, ''ಬಾಲಿವುಡ್‌ನಲ್ಲಿ ಕಿಂಗ್, ಬಾದ್‌ಶಾ, ಸುಲ್ತಾನ್‌ಗಳು ಇರುವವರೆಗೆ ಬಾಲಿವುಡ್‌ ಮುಳುಗುತ್ತಲೇ ಇರುತ್ತದೆ. ಈ ಉದ್ಯಮವನ್ನು ಜನರ ಉದ್ಯಮವನ್ನಾಗಿಸಿ, ಜನರ ಕತೆಗಳನ್ನು ಹೇಳಿ, ಆಗ ಭಾರತದ ಚಿತ್ರರಂಗವು ಅಂತರಾಷ್ಟ್ರೀಯ ಚಿತ್ರರಂಗದ ನಾಯಕತ್ವವನ್ನೂ ಸಹ ವಹಿಸಿಕೊಳ್ಳುತ್ತದೆ'' ಎಂದಿದ್ದಾರೆ.

  ಆದರೆ ವಿವೇಕ್‌ ಅಗ್ನಿಹೋತ್ರಿಯ ಈ ಟ್ವೀಟ್‌ಗೆ ಸಾಕಷ್ಟು ವಿರೋಧ ಎದುರಾಗಿದೆ. ಈ ಹಿಂದೆ ಇದೇ ವಿವೇಕ್ ಅಗ್ನಿಹೋತ್ರಿ, ಶಾರುಖ್ ಖಾನ್ ಅನ್ನು ಹೊಗಳಿ ಮಾಡಿದ್ದ ಟ್ವೀಟ್‌ ಅನ್ನು ಹುಡುಕಿ ತೆಗೆದಿರುವ ನೆಟ್ಟಿಗರು ಆಗ ಹಾಗೆ, ಈಗ ಹೀಗೆ ಏಕೆಂದು ಪ್ರಶ್ನೆ ಮಾಡಿದ್ದಾರೆ.

  ಈ ಹಿಂದೆ ಶಾರುಖ್ ಖಾನ್ ಅನ್ನು ಹೊಗಳಿ ಟ್ವೀಟ್ ಮಾಡಿದ್ದ ವಿವೇಕ್ ಅಗ್ನಿಹೋತ್ರಿ, ''ಕೆಲವು ಸಾಮಾನ್ಯ ಸಿನಿಮಾಗಳಿವೆ, ಕೆಲವು ಬ್ಲಾಕ್‌ಬಸ್ಟರ್‌ಗಳಿವೆ, ಆ ನಂತರ ಇರುವುದೇ ಶಾರುಖ್ ಖಾನ್'' ಎಂದು ಕಿಂಗ್ ಖಾನ್ ಅನ್ನು ಹೊಗಳಿದ್ದರು ವಿವೇಕ್ ಅಗ್ನಿಹೋತ್ರಿ.

  ಶಾರುಖ್ ಖಾನ್ ಬಗೆಗಿನ ವಿವೇಕ್ ಅಗ್ನಿಹೋತ್ರಿಯ ಹೊಸ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕೆಲವರು, ''ಇದು ಅಹಂಕಾರ, ಅಸಹನೆ ತುಂಬಿದ ಟ್ವೀಟ್'' ಎಂದಿದ್ದಾರೆ. ಇನ್ನು ಕೆಲವರು, ''ಇದು ಹೇಗಾಯಿತೆಂದರೆ, ಪರೀಕ್ಷೆಯಲ್ಲಿ ಕೇವಲ ಒಂದು ಪ್ರಶ್ನೆಗೆ ಉತ್ತರ ತಿಳಿದಿರುವ ವಿದ್ಯಾರ್ಥಿ ನಾನೇ ಜಗತ್ತಿನ ಅತಿ ಬುದ್ಧಿವಂತ ಎಂದುಕೊಂಡಾಯಿತು'' ಎಂದಿದ್ದಾರೆ.

  ದೇಶ ಕಷ್ಟದಲ್ಲಿದ್ದಾಗ ಶಾರುಖ್ ಖಾನ್ ತಮ್ಮ ದುಡಿಮೆಯ ಹಣವನ್ನು ಸಂತ್ರಸ್ತರಿಗೆ ನೀಡಿದರು, ಸಾಕಷ್ಟು ಸಾಮಾಜಿಕ ಚಟುವಟಿಕೆ ಮಾಡಿದರು. ಆದರೆ ವಿವೇಕ್ ಅಗ್ನಿಹೋತ್ರಿ, ತಮ್ಮ ಹಿಟ್ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ನ ಲಾಭದ ಹಣವನ್ನು ಕಾಶ್ಮೀರ ಪಂಡಿತರ ಏಳಿಗೆಗೆ ಕೊಡುವುದಿಲ್ಲವೆಂದು ಬಹಿರಂಗವಾಗಿಯೇ ಹೇಳಿದ್ದಾರೆ ಎಂದು ನೆನಪು ಮಾಡಿಸಿದ್ದಾರೆ.

  ವಿವೇಕ್ ಅಗ್ನಿಹೋತ್ರಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ದೇಶಕರಾಗಿದ್ದು, ಈ ಹಿಂದೆ 'ಚಾಕಲೇಟ್', 'ಧನಾ ಧನ್ ಗೋಲ್', 'ಹೇಟ್ ಸ್ಟೋರಿ', 'ಜಿದ್', 'ಬುದ್ಧಾ ಇನ್ ಟ್ರಾಫಿಕ್ ಜಾಮ್', 'ಜುನೂನಿಯತ್', 'ದಿ ತಾಷ್ಕೆಂಟ್ ಫೈಲ್ಸ್' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ 'ದಿ ಡೆಲ್ಲಿ ಫೈಲ್ಸ್' ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ.

  English summary
  The Kashmir Files movie director Vivek Agnihotri tweet about Shah Rukh Khan sees backlash. Netizen dig out Vivek's old tweet about Shah Rukh Khan.
  Sunday, July 17, 2022, 10:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X