ತಲೆ ಬೋಳಿಸಿಕೊಂಡ ರಣ ವಿಕ್ರಮನ ರಾಣಿ ಅದಾ ಶರ್ಮಾ ; ಅಂತದ್ದೇನಾಯ್ತು.. ?

ಎಷ್ಟೇ ಪಡಿಪಾಟಲು ಪಟ್ಟರೂ ಅವಕಾಶಗಳು ದೊರೆಯದೇ ಅದಾ ಶರ್ಮಾ ನರಳುತ್ತಿದ್ದಾರೆಂಬುದು ಬಲ್ಲವರ ಅಭಿಪ್ರಾಯ. ಅದಕ್ಕಾಗಿಯೇ ಅದಾ ಶರ್ಮ ಮಾಡ್ತಿರುವ ಕಸರತ್ತು ಒಂದೆರಡಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಅದಾ ಶರ್ಮಾ ಸದ್ಯಕ್ಕೆ ತಲೆ ಬೋಳಿಸಿಕೊಂಡು ಸುದ್ದಿಯಾಗುವ ಪ್ರಯತ್ನವನ್ನ ಮಾಡಿದ್ದಾರೆ.

ಹೌದು, ಸದಾ ಕಾಲ ಒಂದಿಲ್ಲೊಂದು ಫೋಟೋ ಹಂಚಿಕೊಳ್ಳುವ ಮೂಲಕ ಕಣ್ಮನ ಸೆಳೆಯುವ ಅದಾ ಶರ್ಮಾ, ಏಕಾಏಕಿ ತಮ್ಮ ತಲೆಯನ್ನ ಬೋಳಿಸಿಕೊಂಡಿದ್ದಾರೆ. ಸಹಜವಾಗಿ ಇವರನ್ನ ಇಷ್ಟು ಪಡುವ ಒಂದು ವರ್ಗ ಅದಾ ಅವರ ಈ ಅವತಾರ ಕಂಡು ಬೆಚ್ಚಿ ಬಿದ್ದಿದೆ. ಆರೋಗ್ಯದಲ್ಲಿ ಏನಾದರೂ ಏರು ಪೇರಾಗಿದೆಯಾ ಅನ್ನುವ ಪ್ರಶ್ನೆಯನ್ನೂ ಕೇಳ್ತಿದೆ.

the-kerala-story-fame-actress-adah-sharma-shaved-her-head

ಆದರೆ.. ಈ ಪ್ರಶ್ನೆಗಳಿಗೆಲ್ಲ ಸ್ಪಷ್ಟವಾದ ಉತ್ತರ ನೀಡದ ಅದಾ ಶರ್ಮಾ ತಮ್ಮ ಇನ್ನೆರಡು ಫೋಟೋಗಳನ್ನೂ ಈ ಫೋಟೋ ಜೊತೆ ಹಂಚಿಕೊಂಡಿದ್ದಾರೆ. ಕಟ್ಟಿದ ಕೂದಲು, ಸಡಿಲ ಕೂದಲು, ಕೂದಲು ಇಲ್ಲದೇ ಇರುವುದು ಈ ಮೂರರಲ್ಲಿ ನಿಮಗೆ ನನ್ಯಾವ ಲುಕ್ ಕಿಕ್ ಕೊಡುತ್ತೆ ಎಂದು ಕೇಳಿದ್ದಾರೆ.

ಅದಾ ಶರ್ಮಾ ಅವರ ಈ ವಿನಂತಿಯ ಮೇರೆಗೆ ಅನೇಕರು ತಮ್ಮ ಮತವನ್ನ ಚಲಾಯಿಸುತ್ತಿದ್ದಾರೆ. ಅದಾ ಅಂದ -ಚೆಂದವನ್ನ ಹಾಡಿ ಹೊಗಳುತ್ತಿದ್ದಾರೆ. ಕೂದಲು ಇದ್ದರೂ.. ಇದ್ದದಿದ್ದರೂ.. ನಮಗೆ ನೀವೆ ಅಪ್ಸರೆ ಎನ್ನುವ ಅಭಿಪ್ರಾಯವನ್ನೂ ಕೂಡ ವ್ಯಕ್ತಪಡಿಸುತ್ತಿದ್ದಾರೆ.

ಉಳಿದಂತೆ ಚಿತ್ರರಂಗಕ್ಕೆ ಬಂದು ಒಂದೂವರೆ ದಶಕವಾದರೂ ಇವರ ಕೈ ಹಿಡಿದಿದ್ದು ದಿ ಕೇರಳ ಸ್ಟೋರಿ ಮಾತ್ರ. ದಿ ಕೇರಳ ಸ್ಟೋರಿಯ ಬೆನ್ನಲ್ಲಿ ತೆರೆಗೆ ಬಂದ ಬಸ್ತರ್- ದಿ ನಕ್ಸಲ್ ಸ್ಟೋರಿ ಕೂಡ ಪವಾಡ ಮಾಡುತ್ತೆ ಎಂಬ ನಿರೀಕ್ಷೆ ಅದಾ ಶರ್ಮಾಗೆ ಇತ್ತಾದರೂ ಆ ನಿರೀಕ್ಷೆ ಹುಸಿಯಾಯಿತು. ಇವೆರಡು ಸಿನಿಮಾ ಹೊರತು ಪಡಿಸಿದರೆ ಸನ್ ಫ್ಲವರ್ ವೆಬ್ ಸರಣಿ ತಕ್ಕ ಮಟ್ಟಿಗೆ ಇವರಿಗೆ ಹೆಸರನ್ನ ತಂದು ಕೊಡ್ತು.

ಈ ಚಿತ್ರಗಳನ್ನ ಹೊರತು ಪಡಿಸಿದರೆ ಹಿಂದಿಯಲ್ಲಿ ಇವರು ಅಭಿನಯಿಸಿದ ಚಿತ್ರಗಳೆಲ್ಲ ಬಂದಿದ್ದು ಹೋಗಿದ್ದು ಯಾರಿಗೂ ಗೊತ್ತಾಗಲಿಲ್ಲ. ಇನ್ನೂ ರಣ ವಿಕ್ರಮ ಚಿತ್ರದ ಮೂಲಕ ಕನ್ನಡದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದ ಅದಾ, ಆಂಧ್ರ ಪ್ರದೇಶ ಮತ್ತು ತಮಿಳುನಾಡನ್ನೂ ಒಂದು ಸುತ್ತು ಹಾಕಿಕೊಂಡು ಹೋಗಿದ್ದಾರೆ.

the-kerala-story-fame-actress-adah-sharma-shaved-her-head

ಸದ್ಯಕ್ಕೆ ದಿ ಗೇಮ್ ಆಫ್ ಗಿರಗಿಟ್ ಎಂಬ ಚಿತ್ರವೊಂದು ಅದಾ ಕೈಯಲ್ಲಿದೆ. ಈ ಚಿತ್ರವನ್ನ ಹೊರತು ಪಡಿಸಿದರೆ ಬೇರೆ ಯಾವ ಚಿತ್ರವಾಗಲಿ.. ವೆಬ್ ಸರಣಿಯಾಗಲಿ.. ಅದಾ ಕೈಯಲ್ಲಿ ಇಲ್ಲ. ಹೀಗಾಗಿಯೇ ಪುರಸೊತ್ತಾಗಿರುವ ಅದಾ ಶರ್ಮಾ ತಲೆ ಬೋಳಿಸಿಕೊಳ್ಳುವ ಮೂಲಕ ಬಾಲಿವುಡ್‌ನ ಗಮನ ಸೆಳೆಯುವ ಪ್ರಯತ್ನವನ್ನ ಮಾಡ್ತಿದ್ದಾರೆ ಅನ್ನುವ ಮಾತು ಸದ್ಯಕ್ಕೆ ಕೇಳಿ ಬರುತ್ತಿದೆ. ಅದಾ ಶರ್ಮಾ ಅವರ ಈ ಸರ್ಕಸ್ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆಯೂ ನಡೆಯುತ್ತಿದೆ.

More from Filmibeat

English summary
Adah Sharma, renowned for her performance in 'The Kerala Story,' recently shaved her head
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X