'ಕಾಶ್ಮೀರ್ ಫೈಲ್ಸ್' ಆಯ್ತು.. ಈಗ 'ಕೇರಳ ಸ್ಟೋರಿ'.. ಇದು ಕಾಣಿಯಾದ 32 ಸಾವಿರ ಮಹಿಳೆಯರ ಭಯಾನಕ ಕಹಾನಿ!

By ಫಿಲ್ಮಿಬೀಟ್ ಡೆಸ್ಕ್

ವಿವೇಕ್ ಅಗ್ನಿ ಹೋತ್ರಿ ನಿರ್ದೇಶಿಸಿದ್ದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ದೇಶಾದ್ಯಂತ ಸಂಚಲವನ್ನೇ ಸೃಷ್ಟಿಸಿತ್ತು. ಆ ಬಳಿಕ ಮತ್ತೊಂದು ಸಿನಿಮಾ ಹಲ್‌ಚಲ್ ಎಬ್ಬಿಸುವುದಕ್ಕೆ ರೆಡಿಯಾಗಿದೆ. ಅದುವೇ 'ದಿ ಕೇರಳ ಸ್ಟೋರಿ'.

'ದಿ ಕೇರಳ ಸ್ಟೋರಿ' ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಕನ್ನಡದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದ ಅದಾ ಶರ್ಮಾ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ಕೇರಳದ ಹಿಂದೂ ಹುಡುಗಿಯೊಬ್ಬಳು ಮುಸ್ಲಿಂಗೆ ಮತಾಂತರಗೊಳ್ಳುವ ಸನ್ನಿವೇಶವನ್ನು ತೋರಿಸಲಾಗಿದೆ ಹಾಗೇ ಮತಾಂತರಗೊಂಡು ಕಾಣಿಯಾಗಿರುವ ಮಹಿಳೆಯರ ಕಥೆಯನ್ನು ಹೇಳಲು ಹೊರಟಿದೆ.

The Kerala Story Trailer: Adah Sharma Starrer Movie is focusing on 32000 Missing Women in the state

ಅಂದ್ಹಾಗೆ, ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ 'ದಿ ಕೇರಳ ಸ್ಟೋರಿ' ಸಿನಿಮಾದ ನಿರ್ದೇಶಕ ವಿಫುಲ್ ಶಾ. ಇದರಲ್ಲಿ ಬಾಲಿವುಡ್ ನಟಿ ಅದಾ ಶರ್ಮಾ ಫಾತಿಮಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ನಾಲ್ವರು ಮಹಿಳೆಯರ ಪಾತ್ರದ ಮೂಲಕ ಕೇರಳದ ನೈಜ ಘಟನೆಯನ್ನು ತೆರೆಮೇಲೆ ತಂದಿರೋದಾಗಿ ಚಿತ್ರತಂಡ ಹೇಳಿಕೊಂಡಿದೆ. ಅಸಲಿಗೆ ಕೇರಳದಲ್ಲಿ ಕಾಣೆಯಾದ ಮಹಿಳೆಯರ ಕಥೆಯೇನು? ವಿವಾದ ಹುಟ್ಟಿಕೊಂಡಿದ್ದು ಯಾಕೆ? ನಿರ್ಮಾಪಕರ ಪ್ರತಿಕ್ರಿಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ದಿ ಕೇರಳ ಸ್ಟೋರಿ' ಏನು ಹೇಳುತ್ತಿದೆ?

'ದಿ ಕೇರಳ ಸ್ಟೋರಿ' ಟ್ರೈಲರ್ ದೇಶಾದ್ಯಂತ ಹಲ್‌ಚಲ್ ಎಬ್ಬಿಸಿದೆ. ಏಪ್ರಿಲ್ 26ರಂದು ರಿಲೀಸ್ ಆಗಿರೋ ಸಿನಿಮಾ ಟ್ರೈಲರ್ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಒಂದು ದಿನದ ಅಂತರದಲ್ಲಿ ಸುಮಾರು 52.32 ಲಕ್ಷ ವೀವ್ಸ್ ಸಿಕ್ಕಿದೆ. ವಿಪುಲ್ ಶಾ ನಿರ್ಮಾಣದ ಈ ಸಿನಿಮಾವನ್ನು ಸುದೀಪ್ತೋ ಸೇನ್ ನಿರ್ದೇಶನ ಮಾಡಿದ್ದಾರೆ.

The Kerala Story Trailer: Adah Sharma Starrer Movie is focusing on 32000 Missing Women in the state

ಕೇರಳದಲ್ಲಿ ಹಲವು ವರ್ಷಗಳಿಂದ ಕಾಣೆಯಾಗಿರುವ 32 ಸಾವಿರ ಮಹಿಳೆಯರ ಕಥೆಯನ್ನು 'ದಿ ಕೇರಳ ಸ್ಟೋರಿ' ಹೇಳುತ್ತಿದೆ ಎಂದು ನಿರ್ಮಾಪಕ ವಿಪುಲ್ ಶಾ ಹೇಳಿಕೊಂಡಿದ್ದಾರೆ. ಕೇರಳದಲ್ಲಿ ಕಾಣೆಯಾದ ಮಹಿಳೆಯರನ್ನು ಇಸ್ಲಾಂ ಮತಾಂತರ ಮಾಡಲಾಗುತ್ತೆ. ಬಳಿಕ ಐಸಿಸ್ ಸಂಘಟನೆಗೆ ದಾಖಲು ಮಾಡಿಕೊಳ್ಳಲಾಗುತ್ತೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಈ ಸಿನಿಮಾ ವಿರುದ್ಧ ಕೇರಳದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

"ನಮ್ಮ ಬಳಿಕ ಸಾಕ್ಷಿ ಇದೆ"

'ದಿ ಕೇರಳ ಸ್ಟೋರಿ' ಸಿನಿಮಾ ನೈಜ ಘಟನೆಗಳನ್ನು ಆಧರಿಸಿ ಮಾಡಲಾಗಿದೆ. ಸತ್ಯವನ್ನು ಎಲ್ಲರ ಮುಂದೆ ತೆರೆದಿಡುವುದಕ್ಕೆ ಸಾಕಷ್ಟು ಸಂಶೋಧನೆಯನ್ನು ಮಾಡಲಾಗಿತ್ತು ಎಂದು ನಿರ್ಮಾಪಕ ವಿಪುಲ್ ಶಾ ಮಾಧ್ಯಮಗಳಿಗೆ ಹೇಳಿದ್ದಾಗಿ ವರದಿಯಾಗಿದೆ.

" ಈ ಸಿನಿಮಾ ಹಲವು ವರ್ಷಗಳ ಹುಡುಕಾಟ ಹಾಗೂ ನೈಜ ಘಟನೆಗಳನ್ನು ಆಧರಿಸಿದ ಕಥೆ. ಇದನ್ನು ಹಿಂದೆ ಯಾರೂ ಹೇಳುವ ಧೈರ್ಯ ಮಾಡಿಲ್ಲ. ಇದು ಹಲವು ವರ್ಷಗಳಿಂದ ಅಡಗಿರುವ ಕಟು ಸತ್ಯವನ್ನು ಹೊರಹಾಕಲಿದೆ. ನಮ್ಮ ದೇಶದ ಮಹಿಳೆಯರು ಎದುರಿಸಿದ ಬೆದರಿಕೆ ಹಾಗೂ ಭಾರತದ ವಿರುದ್ಧ ರೂಪಿಸಿರುವ ಷಡ್ಯಂತರವನ್ನು ರಿವೀಲ್ ಮಾಡಲಿದೆ" ಎಂದು ವಿಪುಲ್ ಶಾ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

ಸಿನಿಮಾ ವಿರುದ್ಧ ಆಕ್ರೋಶವೇಕೆ?

ಕೇರಳದಲ್ಲಿ ಯುವತಿಯರು ದುಡಿಮೆಗಾಗಿ ವಿದೇಶಕ್ಕೆ ಹೋಗುವುದು ಕಾಮನ್. ಆದರೆ, ಮಹಿಳೆಯರು ವಿದೇಶಕ್ಕೆ ಕರೆದುಕೊಂಡು ಹೋಗಿ ಭಯೋತ್ಪಾದನೆ ಚಟುವಟಿಕೆಯಲ್ಲಿ ಬಳಸಿಕೊಳ್ಳಲಾಗುತ್ತೆ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಹಾಗೇ ಹಿಜಾಬ್, ಅಲ್ಲಾ ಮಹಿಳೆಯರನ್ನು ರಕ್ಷಿಸುತ್ತಾನೆ ಎಂಬ ಕೆಲವು ಗಂಭೀರ ವಿಷಯಗಳೂ ಇವೆ. ಹೀಗಾಗಿ 'ದಿ ಕೇರಳ ಸ್ಟೋರಿ' ಟ್ರೈಲರ್ ವಿರುದ್ಧ ಕೇರಳದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

'ದಿ ಕೇರಳ ಸ್ಟೋರಿ' ಸಿನಿಮಾ ಮೂಲಕ ಕೇರಳ ರಾಜ್ಯಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನಕ್ಕೆ ಚಿತ್ರತಂಡ ಕೈಹಾಕಿದೆ ಎಂದು ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ಯಕ್ಕೆ 'ದಿ ಕಾಶ್ಮೀರ್ ಫೈಲ್ಸ್' ಬಳಿಕ 'ದಿ ಕೇರಳ ಸ್ಟೋರಿ' ದೇಶಾದ್ಯಂತ ವಿವಾದ ಸೃಷ್ಟಿಸುವ ಸಾಧ್ಯತೆ ಇದೆ. ಈ ಸಿನಿಮಾ ಮೇ 5ಕ್ಕೆ ಬಿಡುಗಡೆಗೆ ಸಜ್ಜಾಗಿದೆ.

More from Filmibeat

English summary
The Kerala Story Trailer: Adah Sharma Starrer Movie is focusing on 32000 Missing Women in the state, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X