For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಿರ್ಮಾಪಕಿ, ಕಾಸ್ಟಿಂಗ್ ಡೈರೆಕ್ಟರ್ ಸೆಹರ್ ಅಲಿ ಲತೀಫ್ ನಿಧನ

  |

  ಬಾಲಿವುಡ್ ನ ಖ್ಯಾತ ಕಾಸ್ಟಿಂಗ್ ಡೈರೆಕ್ಟರ್ ಮತ್ತು ನಿರ್ಮಾಪಕಿ ಸೆಹರ್ ಅಲಿ ಲತೀಫ್ ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಇರ್ಫಾನ್ ಖಾನ್ ನಟನೆಯ ದಿ ಲಂಚ್ ಬಾಕ್ಸ್ ಮತ್ತು ಸ್ವರಾ ಭಾಸ್ಕರ್ ಅಭಿನಯದ ಭಾಗ್ ಬೀನಿ ಭಾಗ್ ಸಿನಿಮಾದ ಮೂಲಕ ಖ್ಯಾತಿಗಳಿಸಿದ್ದ ಸೆಹರ್ ಸೋಮವಾರ (ಜೂನ್ 7) ಕೊನೆಯುಸಿರೆಳೆದರು.

  ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಸೆಹರ್ ಎಂಟು ದಿನಗಳ ಹಿಂದೆ ಮುಂಬೈನ ಲೀಲಾವಾತಿ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಸಿಕೊಳ್ಳುತ್ತಿದ್ದ ಸೆಹರ್ ಹೃದಯಾಘಾತದಿಂದ ನಿಧನ ಹೊಂದಿರು. ಇರ್ಫಾನ್ ಖಾನ್ ನಟನೆಯ ದಿ ಲಂಚ್ ಬಾಕ್ಸ್ ಸಿನಿಮಾದಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಮತ್ತು ನಿರ್ಮಾಪಕಿಯಾಗಿದ್ದ ಸೆಹರ್ ಗೆ ಈ ಚಿತ್ರ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು.

  ಸೆಹರ್ ನಿಧನಕ್ಕೆ 'ದಿ ಲಂಚ್ ಬಾಕ್ಸ್' ನಟಿ ನಿಮ್ರತ್ ಕೌರ್ ಸಂತಾಪ ಸೂಚಿಸಿದ್ದಾರೆ. ಇನ್ನೂ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ನಟ ರಾಜ್ ಕುಮಾರ್ ರಾವ್, ಹುಮಾ ಖುರೇಷಿ, ಅನುರಾಗ್ ಕಶ್ಯಪ್, ಶಿಬಾನಿ ದಾಂಡೇಕರ್ ಸೇರಿದಂತೆ ಬಾಲಿವುಡ್ ನ ಅನೇಕ ಮಂದಿ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.

  ಕಾಸ್ಟಿಂಗ್ ಡೈರೆಕ್ಟರ್ ಆಗಿ ಬಾಲಿವುಡ್ ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ಸೆಹರ್ ಬಳಿಕ ನಿರ್ಮಾಪಕಿಯಾಗಿಯೂ ಸಕ್ಸಸ್ ಕಂಡಿದ್ದಾರೆ. ಲಂಚ್ ಬಾಕ್ಸ್, ಶಕುಂತಲಾ ದೇವಿ, ಭಾಗ್ ಬೀನಿ ಭಾಗ್ ಸೇರಿದಂತೆ ಅನೇಕ ಭಾರತೀಯ ಸಿನಿಮಾಗಳು ಸೇರಿದಂತೆ ಅಂತಾರಾಷ್ಟ್ರೀಯ ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ.

  ಚಿರು ಸಾವಿಗೆ ಒಂದು ವರ್ಷ, ಅಣ್ಣನಿಗೆ ಪತ್ರ ಬರೆದು ನೋವನ್ನು ಹಂಚಿಕೊಂಡ ಧ್ರುವ | Filmibeat Kannada

  ಈಟ್ ಪ್ರೇ ಲವ್, ಫ್ಯೂರಿಯಸ್ 7, ವೈಸ್ ರಾಯ್ ಹೌಸ್, ಮೆಕ್ ಮಾಫಿಯಾ ಸೆನ್ಸ್ 8 ಸೇರಿದಂತೆ ಅನೇಕ ವಿದೇಶಿ ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಗೋಲ್ಡ್, ವಿದ್ಯಾ ಬಾಲನ್ ನಟನೆಯ ಶಕುಂತಲಾ ದೇವಿ ಸಿನಿಮಾಗಳಲ್ಲಿ ಸೆರಹ್ ಕಾರ್ಯಕಾರಿ ನಿರ್ಮಾಪಕರಾಗಿದ್ದರು.

  English summary
  The Lunchbox fame producer and casting director Seher Aly Latif passes away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X