ಸೌರವ್ ಗಂಗೂಲಿ ಬಯೋಪಿಕ್‌ಗೆ ಮುಹೂರ್ತ ಫಿಕ್ಸ್‌ ; ಯಾರಾಗ್ತಾರೆ ಬಂಗಾಳದ ಹುಲಿ ?

ಬೆಳ್ಳಿಪರದೆಯ ಮೇಲೆ ಕ್ರೀಡಾಪಟುಗಳ ಜೀವನಗಾಥೆ ಬರೆಯುವುದು ಈಗಿನ ಟ್ರೆಂಡ್. ಸದ್ಯ ಸಿನಿಮಾ ರಂಗದಲ್ಲಿ ಬಯೋಪಿಕ್ ಹವಾ ಜೋರಾಗಿದೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ತಾರೆಯರ ಬದುಕನ್ನು ಪರದೆಯ ಮೇಲೆ ನೋಡಲು ಕಾತರರಾಗಿರುತ್ತಾರೆ. ಕ್ರಿಕೆಟ್ ಲೋಕದ ದಂತಕಥೆ ಸೌರವ್ ಗಂಗೂಲಿ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ? ಭಾರತೀಯ ಕ್ರಿಕೆಟ್‌ನ ದಿಕ್ಕು-ದಿಸೆ ಬದಲಿಸಿದವರು ಇವರು. ಇಂಥಾ ಸೌರವ್ ಗಂಗೂಲಿ ಅವರ ಜೀವನಾಧಾರಿತ ಚಿತ್ರಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.

ಹೌದು, ಅಸಲಿಗೆ ಸೌರವ್ ಗಂಗೂಲಿ ಅವರ ಬಯೋಪಿಕ್ ಬರಲಿದೆ ಎಂಬ ಸುದ್ದಿ ಇಂದು ನಿನ್ನೆಯದಲ್ಲ. ಅನೇಕ ದಿನಗಳಿಂದ ಈ ಸುದ್ದಿ ಚಾಲ್ತಿಯಲ್ಲಿದೆ. ಆದರೆ.. ಚಿತ್ರದ ಚಿತ್ರೀಕರಣ ಶುರುವಾಗುವುದು ಯಾವಾಗ..? ಬೆಳ್ಳಿತೆರೆಯ ಮೇಲೆ ದಾದಾ ಜೀವನ ಕಥೆ ಅನಾವರಣವಾಗುವುದು ಯಾವಾಗ..? ಎನ್ನುವ ಪ್ರಶ್ನೆ ಹಲವರಲ್ಲಿತ್ತು. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

The Maharaja Returns Sourav Ganguly biopic to kickstart in march 2026

ಬಾಲಿವುಡ್ ಅಂಗಳದಿಂದ ಬಂತು ಬಿಗ್ ಅಪ್ಡೇಟ್...

ಬಹಳ ದಿನಗಳಿಂದ ಕೇಳಿ ಬರುತ್ತಿದ್ದ ಸುದ್ದಿ ಈಗ ನಿಜವಾಗಿದೆ. ಭಾರತೀಯ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಸೌರವ್ ಗಂಗೂಲಿ ಅವರ ಬಯೋಪಿಕ್ ಶೂಟಿಂಗ್ ಯಾವಾಗ ಶುರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಖ್ಯಾತ ನಿರ್ದೇಶಕ ಲವ್ ರಂಜನ್ ತಮ್ಮ ಈ ಬಹುನಿರೀಕ್ಷಿತ ಸಿನಿಮಾದ ಬಗ್ಗೆ ಅಚ್ಚರಿಯ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ದಾದಾ ಅವರ ಬದುಕಿನ ಏರಿಳಿತಗಳನ್ನು ಸಿನೆಮಾದಲ್ಲಿ ಸೆರೆಹಿಡಿಯಲು ಲವ್ ರಂಜನ್ ಸಜ್ಜಾಗಿದ್ದಾರೆ. ''ಪಿಂಕ್‌ವಿಲ್ಲಾ''ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಈ ಕನಸಿನ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿರುವ ಲವ್ ರಂಜನ್ 2026ರ ಮಾರ್ಚ್ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.ಇದು ಕೇವಲ ಕ್ರಿಕೆಟ್ ಸಿನಿಮಾ ಮಾತ್ರವಲ್ಲ, ಒಬ್ಬ ವ್ಯಕ್ತಿಯ ಅದಮ್ಯ ಚೇತನದ ಕಥೆಯಾಗಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.


ಬೆಂಗಾಲಿ ಹುಲಿಯ ಅಬ್ಬರಕ್ಕೆ ಸಜ್ಜಾಗುತ್ತಿದೆ ಬಾಲಿವುಡ್...

ಸೌರವ್ ಗಂಗೂಲಿ ಎಂದರೆ ಕೇವಲ ಒಬ್ಬ ಆಟಗಾರನಲ್ಲ, ಭಾರತೀಯ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸಿದ ನಾಯಕ. ಲಾರ್ಡ್ಸ್ ಮೈದಾನದಲ್ಲಿ ಟೀ ಶರ್ಟ್ ಬಿಚ್ಚಿ ಬೀಸಿದ್ದು ಇಂದಿಗೂ ಇತಿಹಾಸ. ಅಂತಹ ದಾದಾ ಅವರ ಜೀವನವನ್ನು ತೆರೆಯ ಮೇಲೆ ನೋಡುವುದೇ ಒಂದು ಸಂಭ್ರಮ.

ದಾಖಲೆ ಬರೆಯುತ್ತಾ ಈ ಸಿನಿಮಾ?

ಕ್ರಿಕೆಟ್ ಮತ್ತು ಸಿನಿಮಾ ಭಾರತದಲ್ಲಿ ಎರಡು ದೊಡ್ಡ ಹಬ್ಬಗಳು. ಈ ಎರಡೂ ಸೇರಿದಾಗ ಅಲ್ಲಿ ದಾಖಲೆಗಳು ಸೃಷ್ಟಿಯಾಗುವುದು ಗ್ಯಾರಂಟಿ. ಎಂ.ಎಸ್. ಧೋನಿ ಬಯೋಪಿಕ್ ತೆರೆಮೇಲೆ ಮಾಡಿದ ಮೋಡಿ ನಮಗೆಲ್ಲಾ ಗೊತ್ತೇ ಇದೆ. ಈಗ ಸೌರವ್ ಗಂಗೂಲಿ ಅವರ ಸಿನಿಮಾ ಕೂಡ ಅದೇ ಹಾದಿಯಲ್ಲಿ ಸಾಗುವ ಸೂಚನೆ ಸಿಕ್ಕಿದೆ.

The Maharaja Returns Sourav Ganguly biopic to kickstart in march 2026

ಯಾರಾಗ್ತಾರೆ ಬಂಗಾಳದ ಹುಲಿ ..?

ಸೌರವ್ ಗಂಗೂಲಿ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎನ್ನುವ ಕುತೂಹಲ ಕೂಡ ಇದೆ. ಆದರೆ ಇದಕ್ಕೆ ಉತ್ತರ ಸಿಕ್ಕಿಲ್ಲ. ರಣ್‌ಬೀರ್ ಕಪೂರ್ ಈ ಪಾತ್ರಕ್ಕೆ ತಯಾರಿ ನಡೆಸಿದ್ದಾರೆ, ಸೌರವ್ ಗಂಗೂಲಿ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಲವ್ ರಂಜನ್ ಈ ಸುದ್ದಿಯ ಮೇಲೆ ಅಧಿಕೃತವಾದ ಮುದ್ರೆಯನ್ನು ಇನ್ನೂ ಒತ್ತಿಲ್ಲ. ರಣ್‌ಬೀರ್ ಕಪೂರ್ ಕೂಡ ಮಾತನಾಡಿಲ್ಲ. ಈ ಹಿನ್ನೆಲೆ ಯಾರಾಗಬಹುದು ಎನ್ನುವ ಪ್ರಶ್ನೆ ಸದ್ಯ ಹಲವರಲ್ಲಿ ಇದ್ದೇ ಇದೆ. ಮಾರ್ಚ್‌ನಲ್ಲಿ ಈ ಪ್ರಶ್ನೆಗೆ ಉತ್ತರ ಸಿಗುವ ನಿರೀಕ್ಷೆ ಇದೆ.

ಒಟ್ನಲ್ಲಿ ನಿರ್ದೇಶಕ ಲವ್ ರಂಜನ್ ಅವರು ಈ ಪ್ರಾಜೆಕ್ಟ್ ಮೇಲೆ ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಬೆಂಗಾಲಿ ಹುಲಿಯ ಘರ್ಜನೆ ಥಿಯೇಟರ್ನಲ್ಲಿ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. 2026ರ ಮಾರ್ಚ್ ತಿಂಗಳಲ್ಲಿ ಕ್ಯಾಮೆರಾ ರೋಲ್ ಆಗಲಿದ್ದು, ದಾದಾ ಅಭಿಮಾನಿಗಳಿಗೆ ಇದು ಖಂಡಿತ ಹಬ್ಬದ ಅಡುಗೆಯಾಗಲಿದೆ.

More from Filmibeat

Read more about: biopic cricket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X