ಬಾರ್ಡರ್ 2 ತಂದ ಭಾಗ್ಯ ; ಇದೇ ಮೊದಲ ಬಾರಿ ಸನ್ನಿ ಡಿಯೋಲ್‌ಗೆ ಜೋಡಿಯಾದ ಸೂರ್ಯ ಪತ್ನಿ ಜ್ಯೋತಿಕಾ
ಚಿತ್ರರಂಗ ಎನ್ನುವುದೇ ಒಂದು ಅದ್ಭುತ ಲೋಕ. ಇಲ್ಲಿ ದಿನಕ್ಕೊಂದು ಅಚ್ಚರಿಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ನಾವು ನಿರೀಕ್ಷಿಸದ ಕಾಂಬಿನೇಷನ್‌ನ ಚಿತ್ರಗಳು ಸದ್ದಿಲ್ಲದೆ ರೆಡಿಯಾಗುತ್ತವೆ. ಈಗಲೂ ಅಷ್ಟೇ, ತಮಿಳುನಾಡಿನಿಂದ ಹಿಡಿದು ಮುಂಬೈ ಅಂಗಳದವರೆಗೆ ಒಂದು ಸಖತ್ ನ್ಯೂಸ್ ಸೌಂಡ್ ಮಾಡುತ್ತಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣವೊಂದು ಹತ್ತಿರ ಬಂದಿದೆ. ಚಿತ್ರಪ್ರೇಮಿಗಳಿಗೆ ಇದೊಂದು ದೊಡ್ಡ ಹಬ್ಬದ ಉಡುಗೊರೆಯಂತೂ ಹೌದು.
ದೊಡ್ಡ ಬ್ಯಾನರ್, ಪ್ರಸಿದ್ಧ ನಿರ್ದೇಶಕ ಹಾಗೂ ಅದ್ಭುತ ಕಲಾವಿದರು ಒಂದೇ ಚಿತ್ರಕ್ಕೆ ಕೈ ಜೋಡಿಸಿದ್ದಾರೆ. ಈ ಸುದ್ದಿಯ ಸುಳಿವು ಸಿಕ್ಕಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಈ ಸಿನಿಮಾ ಸಿನಿರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯುವುದರಲ್ಲಿ ಅನುಮಾನವೇ ಇಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.

ಆಕ್ಷನ್ ಕಿಂಗ್ ಮತ್ತು ಸೌತ್ ಕ್ವೀನ್ ಜುಗಲ್ಬಂದಿ
ಹೌದು ಅನೇಕರಿಗೆ ಗೊತ್ತಿರುವಂತೆ ಸದ್ಯ ''ಬಾರ್ಡರ್ 2'' ಅಲೆ ಎದ್ದಿದೆ. ಬಾಕ್ಸಾಫೀಸ್‌ನಲ್ಲಿ ದಾಖಲೆಯ ಗಳಿಕೆಯನ್ನು ಕೂಡ ಮಾಡುತ್ತಿದೆ. ಸನ್ನಿ ಡಿಯೋಲ್ ಅವರ ಕ್ರೇಜ್ ಆಗಲಿ ಅಥವಾ ಸ್ಟಾರ್ ಪವರ್ ಆಗಲಿ ಕಡಿಮೆಯಾಗಿಲ್ಲ ಎನ್ನುವುದನ್ನು ಕೂಡ ಸಾಬೀತು ಮಾಡಿದೆ. ಈ ಹಿನ್ನೆಲೆ ಹಲವರು ಸನ್ನಿ ಡಿಯೋಲ್ ಜೊತೆ ಸಿನಿಮಾ ಮಾಡಲು ಸದ್ಯ ತುದಿಗಾಲಿನಲ್ಲಿ ನಿಲ್ಲುತ್ತಿದ್ದಾರೆ. ಆ ಪೈಕಿ ಖ್ಯಾತ ನಿರ್ದೇಶಕ ಎ.ಆರ್.ಮುರಗದಾಸ್ ಕೂಡ ಒಬ್ಬರು.
ಎಕ್ಸೆಲ್ ಎಂಟರ್ಟೈನ್ಮೆಂಟ್ ಮತ್ತು ಮುರುಗದಾಸ್ ಮ್ಯಾಜಿಕ್
ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿದ್ವಾನಿ ಜೊತೆ ಮುರಗದಾಸ್ ಕೈ ಜೋಡಿಸಿದ್ಧಾರೆ. ಬಾಲಿವುಡ್‌ನ ಈ ಖ್ಯಾತನಾಮರ ಜೊತೆ ಸೇರಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ''ಬಾಲಿವುಡ್ ಹಂಗಾಮ'' ಈ ಚಿತ್ರದ ಸುಳಿವು ನೀಡಿದ್ದು ಬಾಲಾಜಿ ಗಣೇಶ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

ಸನ್ನಿ ಡಿಯೋಲ್‌ಗೆ ಮೊದಲ ಬಾರಿ ಜೊತೆಯಾದ ಜ್ಯೋತಿಕಾ
ಸನ್ನಿ ಡಿಯೋಲ್ ಚಿತ್ರರಂಗಕ್ಕೆ ಬಂದು 42 ವರ್ಷಗಳಾಗಿವೆ. ಸೂರ್ಯ ಪತ್ನಿ ಜ್ಯೋತಿಕಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 27 ವರ್ಷಗಳಾಗಿವೆ. ಇಬ್ಬರು ಇಲ್ಲಿಯವರೆಗೆ ಹಲವರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆದರೆ.. ಎದುರು ಬದುರು ಯಾವತ್ತು ಇಬ್ಬರು ಆಗಿರಲಿಲ್ಲ. ಒಂದೇ ಚಿತ್ರವನ್ನು ಮಾಡಿರಲಿಲ್ಲ.
ಇದೇ ಮೊದಲ ಬಾರಿ ಈ ಚಿತ್ರದ ಮೂಲಕ ಸನ್ನಿ ಡಿಯೋಲ್ ಮತ್ತು ಜ್ಯೋತಿಕಾ ತೆರೆಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಜೋಡಿಯ ಕೆಮಿಸ್ಟ್ರಿ ನೋಡಲು ಫ್ಯಾನ್ಸ್ ಈಗಲೇ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಸನ್ನಿ ಡಿಯೋಲ್ ಕೆರಿಯರ್‌ನಲ್ಲಿ ಹೊಸ ಮೈಲಿಗಲ್ಲು
'ಗದರ್ 2' ಮತ್ತು 'ಬಾರ್ಡರ್ 2' ಯಶಸ್ಸಿನ ನಂತರ ಸನ್ನಿ ಡಿಯೋಲ್ ಮಾರ್ಕೆಟ್ ದುಪ್ಪಟ್ಟಾಗಿದೆ. ಈಗ ಮುರುಗದಾಸ್ ಜೊತೆಗಿನ ಸಿನಿಮಾ ಅವರ ಕೆರಿಯರ್ಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ. ಇನ್ನು ಜ್ಯೋತಿಕಾ 'ಶೈತಾನ್' ಚಿತ್ರದ ನಂತರ ಮತ್ತೆ ಬಾಲಿವುಡ್‌ಗೆ ಮರಳುತ್ತಿದ್ದಾರೆ.
ಒಟ್ಟಿನಲ್ಲಿ ಈ ಸಿನಿಮಾ ಅನೌನ್ಸ್ ಆದ ಕ್ಷಣದಿಂದಲೇ ಹೈಪ್ ಕ್ರಿಯೇಟ್ ಮಾಡಿದೆ. ತಾಂತ್ರಿಕವಾಗಿಯೂ ಈ ಸಿನಿಮಾ ಬಹಳ ಶ್ರೀಮಂತವಾಗಿರಲಿದೆ ಎನ್ನಲಾಗಿದೆ. ಕೇವಲ ನಟನೆ ಮಾತ್ರವಲ್ಲದೆ, ಕಥೆಯಲ್ಲೂ ಒಂದು ವಿಶಿಷ್ಟ ಸಂದೇಶ ಇರಲಿದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಈ ಪ್ರಾಜೆಕ್ಟ್ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಪ್ಡೇಟ್ಸ್ ಹೊರಬೀಳಲಿವೆ.


Click it and Unblock the Notifications











