ಅಡ್ರೆಸ್ ಕೇಳುವ ನೆಪದಲ್ಲಿ ಬೆಳ್ಳಂಬೆಳಗ್ಗೆಯೇ ಕಿರುಕುಳ ; ಆ ಭಯಾನಕ ಕ್ಷಣ ವಿವರಿಸಿ ಬಿಕ್ಕಿದ 'ಉಪೇಂದ್ರ' ಚಿತ್ರದ ನಟಿ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ. ಕೆಲವರು ಮುಂದೆ ಬಂದು ತಮ್ಮ ಮೇಲಾದ ದೌರ್ಜನ್ಯದ ವಿರುದ್ದ ಹೋರಾಡುತ್ತಾರೆ, ಇನ್ನು ಕೆಲವರು ವ್ಯವಸ್ಥೆಯ ವಿರುದ್ದ ಹೋರಾಡಲು ಆ ಕ್ಷಣಕ್ಕೆ ಸಾಧ್ಯವಾಗದೇ ಸುಮ್ಮನಾಗುತ್ತಾರೆ.
ಕೇವಲ ಸಾಮಾನ್ಯ ಜನ ಮಾತ್ರವಲ್ಲ. ಈ ಕಾ*ಮುಕರ ಕೈಗೆ ಸಿಕ್ಕಿ ಚಿತ್ರರಂಗದಲ್ಲಿರುವ ಹಲವಾರು ನಾಯಕಿಯರು, ಮಹಿಳೆಯರು ಕೂಡ ನರಳಿದ್ದಾರೆ. ಬಿಕ್ಕಿದ್ದಾರೆ. ಧೈರ್ಯದಿಂದ ತಿರುಗೇಟನ್ನು ಕೂಡ ನೀಡಿದ್ದಾರೆ. ಉದಾಹರಣೆಗೆ ನೇಹಾ ಪೆಂಡ್ಸೆ.

ಹೌದು, ನೇಹಾ ಪೆಂಡ್ಸೆ.. ಮರಾಠಿಯ ಚೆಲುವೆ. ಹಿಂದಿಯಲ್ಲಿ ''ದೀವಾನೆ''.. ''ಡ್ರೀಮ್ಸ್''.. ''ಸ್ವಾಮಿ'' ಚಿತ್ರಗಳಲ್ಲಿ ಅಭಿನಯಿಸಿರುವ ನೇಹಾ ಕನ್ನಡದಲ್ಲಿ ಲಕ್ಷ್ಮೀ ರೈ ಅವರ ಜೊತೆ ''ಇನ್ಸ್‌ಪೆಕ್ಟರ್ ಝಾನ್ಸಿ'' ಚಿತ್ರವನ್ನು ಕೂಡ ಮಾಡಿದ್ದರು. ಇಷ್ಟೇ ಅಲ್ಲ ಉಪೇಂದ್ರ ಅಭಿನಯದ ''ಪರೋಡಿ'' ಚಿತ್ರದಲ್ಲಿ ನಾಯಕಿ ಪಾತ್ರವನ್ನು ಕೂಡ ನಿರ್ವಹಿಸಿದ್ದರು.
ತೆಲುಗಿನಲ್ಲಿ ''ವೀಧಿ ರೌಡಿ''.. ತಮಿಳಿನಲ್ಲಿ ''ಮೌನಂ ಪೇಸಾದೆ''.. ಚಿತ್ರಗಳಲ್ಲಿ ಕೂಡ ಅಭಿನಯಿಸುವ ಮೂಲಕ ದಕ್ಷಿಣದ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದ ನೇಹಾ ಪೆಂಡ್ಸೆ, ಮರಾಠಿಯಲ್ಲಿ ''ಟೂರಿಂಗ್ ಟಾಕೀಸ್''.. ''ಬೋಲ್ ಬೇಬಿ ಬೋಲ್''.. ''ನಟ್ ಸಾಮ್ರಾಟ್'' ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ನೇಹಾ ಕೇವಲ ಬೆಳ್ಳಿತೆರೆಯ ಬೆಡಗಿ ಅಲ್ಲ. ಬದಲಿಗೆ ಕಿರುತೆರೆಯ ಕಿನ್ನರಿ ಕೂಡ ಹೌದು. ''ಮೇ ಐ ಕನ್ ಇನ್ ಮೇಡಂ''.. ''ಭಾಬಿಜೀ ಘರ್ ಪರ್ ಹೈ''.. ಧಾರಾವಾಹಿಗಳಲ್ಲಿ ಅಭಿನಯಿಸಿರುವ ನೇಹಾ ಹಿಂದಿಯ ''ಬಿಗ್ ಬಾಸ್'' ಸೀಸನ್ 8ರ ಸ್ಫರ್ಧಿಯೂ ಹೌದು. ಇಂಥಾ ನೇಹಾ ಪಿಂಡ್ಸೆ ಸದ್ಯ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಮುಂಬೈನ ಬೀದಿಯಲ್ಲಿ ವ್ಯಕ್ತಿ ನೀಡಿದ್ದ ಕಿರುಕುಳ ನೆನೆದು ಬಿಕ್ಕಿದ್ದಾರೆ.
ಈ ಕುರಿತು ''ಹೌಟರ್ ಫ್ಲೈ''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನೇಹಾ ಅದೊಂದು ದಿನ ಮುಂಬೈನ ಅಂಧೇರಿಯಲ್ಲಿ ನಾನು ಎಂದಿನಂತೆ ಬೆಳ್ಳಂ ಬೆಳ್ಳಗ್ಗೆ ಜಾಗಿಂಗ್ ಮಾಡುತ್ತಿದ್ದೇ ಎಂದು ಹೇಳಿದ್ದಾರೆ. ಜಾಗಿಂಗ್ ಮಾಡುವ ಸಮಯದಲ್ಲಿ ವ್ಯಕ್ತಿಯೊಬ್ಬ ಕಾರಿನಲ್ಲಿ ಬಂದು ಮೆಲ್ಲ ಧ್ವನಿಯಲ್ಲಿ ನನಗೆ ಅಡ್ರೆಸ್ ಕೇಳಿದ ಎಂದು ಹೇಳಿರುವ ನೇಹಾ, ಆತನ ಧ್ವನಿ ನನಗೆ ಕೇಳದ ಕಾರಣ ನಾನು ಅವನ ಕಾರಿನ ಬಳಿ ಹೋದೆ ಎಂದು ಹೇಳಿದ್ದಾರೆ.

ಆದರೆ ಈ ಸಮಯದಲ್ಲಿ ಆ ವ್ಯಕ್ತಿ ನಾನು ಕಾರಿನ ಹತ್ರ ಬರುತ್ತಿದ್ದಂತೆಯೇ ನನ್ನ ದೇಹವನ್ನು ಬಲವಾಗಿ ಹಿಡಿದು ಎಳೆದ ಎಂದು ಹೇಳಿರುವ ನೇಹಾ ನಾನೇನಾಗುತ್ತಿದೆ ಎಂದು ಯೋಚನೆ ಮಾಡುವಷ್ಟರಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ ಎಂದಿದ್ದಾರೆ.
ಆಗ ನನ್ನ ಕೈಯಲ್ಲಿ ನನ್ನ ಕಾರಿನ ಕೀಲಿ ಇತ್ತು. ತುಂಬಾನೇ ಭಾರವಾದ ರಿಮೋಟ್‌ನಂತಹ ಕೀಲಿ ಅದು, ಆ ಕೀಲಿ ಕೈಯನ್ನು ನಾನು ಅವನ ಕಾರಿನತ್ತ ಎಸೆದೆ ಎಂದು ಹೇಳಿರುವ ನೇಹಾ, ಕೀಲಿ ಕೈ ಕಾರಿನ ಗಾಜಿಗೆ ತಗುಲಿ ಜೋರಾದ ಸದ್ದು ಕೇಳಿ ಬಂತು ಎಂದು ಹೇಳಿದ್ದಾರೆ. ಗಾಜಿಗೆ ಕೀಲಿ ಕೈ ಬಿದ್ದ ಕಾರಣ ಗಾಬರಿಯಾದ ಆ ವ್ಯಕ್ತಿ ಅರೆಕ್ಷಣ ಕಾರು ನಿಲ್ಲಿಸಿದ, ತನ್ನ ಕಾರಿನ ಗಾಜು ಒಡೆದಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡು ಅಲ್ಲಿಂದ ಕಾಲ್ಕಿತ್ತ ಎಂದು ಹೇಳಿದ್ದಾರೆ.
ನನ್ನ ಬದುಕಿನ ಭಯನಾಕ ಕ್ಷಣ ಅದು ಎಂದು ಹೇಳಿರುವ ನೇಹಾ ಪಿಂಡ್ಸೆ, ಒಂದು ವೇಳೆ ಆತ ರಿವರ್ಸ್ ಬಂದು ನನ್ನ ಮೇಲೆ ಕಾರು ಹತ್ತಿಸಿದ್ದರೆ, ನನ್ನ ಕಥೆ ಏನಾಗುತ್ತಿತ್ತು ಎಂದು ಯೋಚಿಸಿದರೆ ಈ ಕ್ಷಣಕ್ಕೂ ನನಗೆ ಭಯವಾಗುತ್ತೆ ಎಂದು ಹೇಳಿದ್ದಾರೆ. ಮುಂಬೈನಂತಹ ದೊಡ್ಡ ಊರಿನಲ್ಲಿ, ಸುರಕ್ಷಿತವೆಂದು ಭಾವಿಸಿದ ಜಾಗದಲ್ಲೇ ಇಂತಹ ಘಟನೆ ನಡೆದಿದ್ದೇ ನನಗೆ ಶಾಕಿಂಗ್ ವಿಚಾರ ಎಂದಿದ್ದಾರೆ.


Click it and Unblock the Notifications