ಸಲ್ಮಾನ್ ಖಾನ್‌ಗೆ ಧೋನಿ ಈಗ ಆಪ್ತಸಖ ; ಕೆಸರಿನಲ್ಲಿ ಸ್ನಾನ - ಕಾರು ಡ್ರಿಫ್ಟ್ ಮಾಡಿದ ದಿಗ್ಗಜರು
ಬಣ್ಣದ ಲೋಕದ ಕುರಿತು ಅಭಿಮಾನಿಗಳಲ್ಲಿ ಯಾವಾಗಲೂ ಕುತೂಹಲ ಇದ್ದೇ ಇರುತ್ತದೆ. ಸಿನಿಮಾ ತಾರೆಯರು ಎಲ್ಲಿಗೆ ಹೋಗುತ್ತಾರೆ, ಯಾರನ್ನು ಭೇಟಿ ಮಾಡುತ್ತಾರೆ ಎನ್ನುವುದನ್ನು ತಿಳಿಯಲು ಅಭಿಮಾನಿಗಳು ಸದಾ ಕಾತರದಿಂದ ಕಾಯುತ್ತಿರುತ್ತಾರೆ. ಮುಂಬೈ ಮಹಾನಗರದ ಜಂಜಾಟದಿಂದ ದೂರದಲ್ಲಿರುವ ಆ ಒಂದು ತಾಣ ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ. ಅಲ್ಲಿ ನಡೆದ ಒಂದು ವಿಶೇಷ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.
ಸಾಮಾನ್ಯವಾಗಿ ಸ್ಟಾರ್‌ಗಳು ಭೇಟಿಯಾದಾಗ ಅಲ್ಲಿ ಹೊಸ ಸಿನಿಮಾ ಮುಹೂರ್ತ ಅಥವಾ ದೊಡ್ಡ ಮಟ್ಟದ ಪಾರ್ಟಿ ಇರುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಈ ಬಾರಿ ನಡೆದಿದ್ದೇ ಬೇರೆ. ಗದ್ದಲವಿಲ್ಲದ ಆ ಪ್ರದೇಶದಲ್ಲಿ ಅನಿರೀಕ್ಷಿತ ಅತಿಥಿಗಳ ಎಂಟ್ರಿಯಾಗಿದೆ. ಈ ಸುಳಿವು ಯಾರಿಗೂ ಸಿಗದಂತೆ ಅತೀ ಹೆಚ್ಚು ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿತ್ತು. ಕ್ಯಾಮೆರಾ ಕಣ್ಣುಗಳಿಂದ ದೂರವಿರಲು ಬಯಸಿದ್ದ ಆ ದಿಗ್ಗಜರು ಕೊನೆಗೂ ಒಂದೇ ಫ್ರೇಮ್‌ನಲ್ಲಿ ಸೆರೆಯಾಗಿದ್ದಾರೆ.

ಆ ಫೋಟೋಗಳು ಹೊರಬೀಳುವವರೆಗೂ ಈ ಭೇಟಿಯ ಬಗ್ಗೆ ಯಾರಿಗೂ ಅಂದಾಜಿರಲಿಲ್ಲ. ಅರಬ್ಬಿ ಸಮುದ್ರದ ತೀರದ ಈ ನಗರದಲ್ಲಿ ದಿನವೂ ಸಾವಿರಾರು ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಆದರೆ ಈ ಭೇಟಿಯ ಹಿಂದೆ ಕೇವಲ ಸ್ನೇಹ ಮಾತ್ರವಿತ್ತೇ ಅಥವಾ ಹೊಸದೇನಾದರೂ ಸಿದ್ದವಾಗುತ್ತಿದೆಯೇ ಎಂಬ ಚರ್ಚೆ ಶುರುವಾಗಿದೆ. ಅಭಿಮಾನಿಗಳಿಗೆ ಈ ಮಸ್ತ್ ಸಮಾಚಾರ ಸಿಗುವ ಹೊತ್ತಿಗೆ ಅಲ್ಲಿ ಧೂಳೆಬ್ಬಿಸುವ ಕೆಲಸವೊಂದು ಯಶಸ್ವಿಯಾಗಿ ಮುಗಿದು ಹೋಗಿತ್ತು.
ಸಲ್ಮಾನ್ ಖಾನ್ ಜೊತೆ ಧೋನಿ ಎಂಟ್ರಿ
ಕೊನೆಗೂ ಆ ಸಸ್ಪೆನ್ಸ್ ಬಯಲಾಗಿದೆ. ಬಾಲಿವುಡ್‌ನ ಸುಲ್ತಾನ್ ಸಲ್ಮಾನ್ ಖಾನ್ ಅವರ ಪನ್ವೇಲ್ ಫಾರ್ಮ್ಹೌಸ್ನಲ್ಲಿ ದೊಡ್ಡ ಮಟ್ಟದ ಹಲ್‌ಚಲ್ ನಡೆದಿದೆ. ಸಲ್ಮಾನ್ ಖಾನ್ ಅಂದಮೇಲೆ ಅಲ್ಲಿ ಗೆಳೆಯರ ದಂಡು ಇರಲೇಬೇಕು. ಆದರೆ ಈ ಬಾರಿ ಸಲ್ಮಾನ್ ಜೊತೆ ಸೇರಿಕೊಂಡಿದ್ದು ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಕೂಲ್ ಸಿಟಿಜನ್ ಎಂ.ಎಸ್. ಧೋನಿ. ಹೌದು, ಕ್ರಿಕೆಟ್ ಮತ್ತು ಸಿನಿಮಾ ರಂಗದ ಈ ಇಬ್ಬರು ದಿಗ್ಗಜರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡು ಫ್ಯಾನ್ಸ್‌ಗೆ ಸರ್‌ಫ್ರೈಸ್ ನೀಡಿದ್ಧಾರೆ.
ಪನ್ವೇಲ್‌ನಲ್ಲಿ ಎಟಿವಿ ರೈಡ್ ಅಡ್ವೆಂಚರ್
ಕೇವಲ ಸಲ್ಮಾನ್ ಮತ್ತು ಧೋನಿ ಮಾತ್ರವಲ್ಲ, ಇವರ ಜೊತೆಗೆ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಮೂವರು ಪನ್ವೇಲ್‌ನ ವಿಶಾಲವಾದ ಫಾರ್ಮ್ಹೌಸ್‌ನಲ್ಲಿ ATV ರೈಡ್ ಮಾಡಿದ್ದಾರೆ. ಮಣ್ಣಿನ ಹಾದಿಯಲ್ಲಿ ಧೂಳೆಬ್ಬಿಸುತ್ತಾ ಈ ಸ್ಟಾರ್‌ಗಳು ಸಖತ್ ಎಂಜಾಯ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಅವರಿಗೆ ಪನ್ವೇಲ್ ಫಾರ್ಮ್ಹೌಸ್ ಎಂದರೆ ಪಂಚಪ್ರಾಣ. ಅಲ್ಲಿ ಅವರು ಆಗಾಗ ಇಂತಹ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ ಈ ಬಾರಿ ಧೋನಿ ಮತ್ತು ಧಿಲ್ಲೋನ್ ಕೂಡ ಸಾಥ್ ನೀಡಿರುವುದು ವಿಶೇಷ.

ವೈರಲ್ ಆಗಿವೆ ಫೋಟೋಗಳು...
ಈ ಮೂವರು ದಿಗ್ಗಜರು ಒಟ್ಟಾಗಿರುವ ಫೋಟೋಗಳು ಈಗ ಇಂಟರ್‌ನೆಟ್‌ನಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ. ಸಲ್ಮಾನ್ ಖಾನ್ ಅವರ ಮಾಸ್ ಲುಕ್ ಮತ್ತು ಧೋನಿ ಅವರ ಸಿಂಪ್ಲಿಸಿಟಿ ಅಭಿಮಾನಿಗಳ ಮನಗೆದ್ದಿದೆ. ಇವರು ಯಾವುದೇ ಸಿನಿಮಾ ಕೆಲಸಕ್ಕಾಗಿ ಸೇರಿಲ್ಲ. ಬದಲಾಗಿ ಒಂದು ಸಣ್ಣ ಬ್ರೇಕ್ ಪಡೆದು, ವೀಕೆಂಡ್ ಕಳೆಯಲು ಒಂದೆಡೆ ಜಮಾಯಿಸಿದ್ದರು ಎನ್ನಲಾಗಿದೆ.
ಅಭಿಮಾನಿಗಳ ಕಾಮೆಂಟ್ ಸುರಿಮಳೆ
ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು "ಕ್ರಿಕೆಟ್ ಮತ್ತು ಸಿನಿಮಾ ರಂಗದ ಕಿಂಗ್ಗಳು ಒಂದೇ ಕಡೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅವರ ಫಾರ್ಮ್ಹೌಸ್ ಪಾರ್ಟಿಗಳು ಯಾವಾಗಲೂ ಫೇಮಸ್. ಆದರೆ ಈ ಬಾರಿ ಈ ಅತಿಥಿಗಳ ಎಂಟ್ರಿಯಿಂದಾಗಿ ಈ ಭೇಟಿ ಇನ್ನೂ ಸ್ಪೆಷಲ್ ಎನಿಸಿಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಈ ಎಟಿವಿ ರೈಡ್ ಫೋಟೋಗಳದ್ದೇ ಹವಾ.


Click it and Unblock the Notifications











