54 ವರ್ಷದ ಟಬು ಜೊತೆ ಇರುವ ಈ ಚೆಲುವ ಯಾರು ? ವೈರಲ್ ಫೋಟೊ ಹಿಂದಿನ ಅಸಲಿ ಕಥೆ ಇಲ್ಲಿದೆ
ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂಬಂಧ ಸಾಮಾನ್ಯವಾಗಿದೆ.
ಇನ್ನು.. ಮದುವೆ-ಸಂಸಾರವೇ ಬದುಕಿನ ಅಂತಿಮ ಗುರಿಯಲ್ಲ. ಬದುಕಿನ ಖುಷಿ.. ನೆಮ್ಮದಿ.. ಯಾವುದರಲ್ಲಿದೆ ಎನ್ನುವುದನ್ನು ನಾವೇ ಹುಡುಕಿಕೊಳ್ಳಬೇಕು..ನಮ್ಮ ಆಯ್ಕೆಗಳಿಗೆ ನಾವೇ ಜವಾಬ್ದಾರಿ.. ಎಂಬ ಮಾತುಗಳನ್ನಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಬಣ್ಣದ ಲೋಕ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಮೋಹಕತಾರೆ ರಮ್ಯಾ ಅವರನ್ನೊಳಗೊಂಡು 40 + ವಯಸ್ಸಾದರು ಕೂಡ ಹಲವರು ಇನ್ನೂ ಮದುವೆಯಾಗಿಲ್ಲ. ಬದಲಿಗೆ ಬ್ಯಾಚುಲರ್ ಲೈಫ್‌ನ ಎಂಜಾಯ್ ಮಾಡುತ್ತಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಸಂತೋಷವನ್ನು ಕಂಡುಕೊಂಡಿದ್ದಾರೆ. ಆ ಪೈಕಿ ಟಬು ಕೂಡ ಒಬ್ಬರು.

ಹೌದು, ಟಬು.. ಭಾರತೀಯ ಚಿತ್ರರಂಗದ ಅಪರೂಪದ ಅತ್ಯಮೂಲ್ಯ ರತ್ನ. ಪಾತ್ರ ಯಾವುದೇ ಇರಲಿ ಆ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸುವ ಪ್ರತಿಭಾವಂತೆ. ನಾಲ್ಕು ದಶಕವಾದರು ಇವರ ಕ್ರೇಜ್ ಕಡಿಮೆಯಾಗಿಲ್ಲ. ಬೆಲೆ ಕಡಿಮೆಯಾಗಿಲ್ಲ. ''ಮಾಚಿಸ್''.. ''ಅಸ್ತಿತ್ವ''.. ''ಚಾಂದಿನಿ ಬಾರ್''.. ''ಮಕ್ಬೂಲ್''.. ''ಚೀನಿ ಕಮ್''.. ''ಹೈದರ್''.. ''ಅಂಧಾಧುನ್''.. ಒಂದಾ.. ಎರಡಾ.. ಹಲವಾರು ಸ್ಮರಣೀಯ ಚಿತ್ರಗಳ ಭಾಗವಾಗಿ ಅಚ್ಚಳಿಯದ ಪಾತ್ರಗಳನ್ನು ತಮ್ಮ ಈ ಸುದೀರ್ಘ ವೃತ್ತಿ ಜೀವನದಲ್ಲಿ ಟಬು ನಿರ್ವಹಿಸಿದ್ದಾರೆ.
ಇನ್ನೂ ಗ್ಲಾಮರ್ ಲೋಕದಲ್ಲಿ ಗಾಸಿಪ್‌ಗಳಿಗೆ ಬರ ಇಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಅಜಯ್ ದೇವಗನ್ ಅವರಿಂದ ಹಿಡಿದು ಅಕ್ಕಿನೇನಿ ನಾಗಾರ್ಜುನವರೆಗೆ ಸಂಜಯ್ ಕಪೂರ್ ಅವರಿಂದ ಹಿಡಿದು ಸಾಜಿದ್ ನಾಡಿಯಾವಾಲಾವರೆಗೆ ಟಬು ಹೆಸರು ತಳುಕು ಹಾಕಿಕೊಂಡಿದೆ. ಆದರೆ ಇವೆಲ್ಲ ಅಂತೆ-ಕಂತೆಗಷ್ಟೇ ಸೀಮಿತವಾಯಿತೇ ಹೊರತು ಮದುವೆಯ ಅಧಿಕೃತ ಮುದ್ರೆ ಯಾವ ಸಂಬಂಧದ ಮೇಲೂ ಬೀಳಲಿಲ್ಲ. ಇಂಥಾ ಟಬು ಅವರ ಎರಡು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಲವರ ಹುಬ್ಬೇರಿಸಿವೆ.

ಹೌದು, ಟಬು ಇತ್ತೀಚೆಗೆ ಫತೇ ರಾಂಧವಾ ಅವರ ಜೊತೆ ಕೆಲ ಸೆಲ್ಫಿ ಹಂಚಿಕೊಂಡಿದ್ದಾರೆ. ಆತ್ಮೀಯವಾದ ಫೋಟೊಗಳಿವು. ಈ ಫೋಟೊಗಳನ್ನು ಕಂಡು ಹಲವರು ತಲೆ ಕೆಡೆಸಿಕೊಂಡಿದ್ದಾರೆ. 54ರ ಹರೆಯದಲ್ಲಿ ಟಬು ಪ್ರೀತಿಯಲ್ಲಿ ಬಿದ್ದಿದ್ದಾರಾ..? ಹೇಗೆ..? ಎಂದು ಚರ್ಚೆ ಮಾಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಇದು ಕಪೋಲಕಲ್ಪಿತ ಲವ್ ಸ್ಟೋರಿ ಅಲ್ಲ ಬದಲಿಗೆ ಫ್ಯಾಮಿಲಿ ಸ್ಟೋರಿ.
ಟಬು ಅವರ ಪಕ್ಕದಲ್ಲಿ ನಿಂತು ಸೆಲ್ಫಿಗೆ ಫೋಸ್ ನೀಡಿರುವ ಸುರ ಸುಂದರ ಫತೇ ರಾಂಧವಾ ಬೇರೆ ಯಾರು ಅಲ್ಲ ಬದಲಿಗೆ ಟಬು ಅವರ ಅಕ್ಕ ಫರ್ಹಾ ನಾಜ್ ಅವರ ಮದ್ದಿನ ಮಗ. 1996ರಲ್ಲಿ ಫರ್ಹಾ ನಾಜ್ ಭಾರತದ ಖ್ಯಾತ ಪೈಲ್ವಾನ್ ದಾರಾ ಸಿಂಗ್ ಅವರ ಮಗ ವಿಂದು ಜೊತೆ ಮದುವೆಯ ಬಂಧನಕ್ಕೊಳಗಾಗಿದ್ದರು. ಆದರೆ.. 2002ರಲ್ಲಿ ಈ ಸಂಬಂಧ ಮುರಿದು ಬಿತ್ತು.

ಆದರೂ ಕೂಡ ಮಗನ ಲಾಲನೆ ಪಾಲನೆಯನ್ನು ಅಲ್ಲಿಂದ ಜೊತೆಯಾಗಿ ಇಬ್ಬರು ಮಾಡಿಕೊಂಡು ಬಂದಿದ್ದಾರೆ. ಮನೆಯ ಸಭೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇನ್ನೂ ಫತೇ ರಾಂಧವಾ ಮಾರ್ಷಲ್ ಆರ್ಟಿಸ್ಟ್ ಕೂಡ ಹೌದು. ತಾತ-ತಂದೆ ಮತ್ತು ಚಿಕ್ಕಮನ ಜಾಡು ಹಿಡಿದು ಚಿತ್ರರಂಗಕ್ಕೆ ಬರುವ ಪ್ರಯತ್ನವನ್ನು ಫತೇ ಮಾಡುತ್ತಿದ್ದಾರೆ.
ಇಂತಹ ಫತೇ ರಾಂಧವಾ ಜೊತೆ ಟಬು ಫೋಟೊ ಕ್ಲಿಕಿಸಿಕೊಂಡಿದ್ದಾರೆ. ಆದರೆ ಇವರ ಸಂಬಂಧವನ್ನರಿಯದ ಹಲವರು ಸೋಶಿಯಲ್ ಮೀಡಿಯಾದಲ್ಲಿ ಸುಖಾ ಸುಮ್ಮನೆ ಚರ್ಚೆ ಮಾಡಲು ಶುರು ಮಾಡಿದ್ದಾರೆ. ಇದೆಲ್ಲದರ ಪರಿಣಾಮ ಟಬು ಮತ್ತು ಫತೇ ರಾಂಧವಾ ಅವರ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


Click it and Unblock the Notifications