ಹಾರರ್ ಸಿನಿಮಾ ದಿ 'ನನ್' ಪೋಸ್ಟರ್ ಬಗ್ಗೆ ಸಕತ್ 'ಫನ್'
ಹಾಲಿವುಡ್ಡಿನ ಹೊಚ್ಚ ಹೊಸ ಹಾರರ್ ಸಿನಿಮಾ 'ದಿ ನನ್' ಬಗ್ಗೆ ಸಕತ್ತಾಗಿ 'ಫನ್' ಮಾಡುತ್ತಿವೆ ಟ್ರಾಲ್, ಮೀಮ್ಸ್ ಪುಟಗಳು. ಬಾಲಿವುಡ್ ಶೈಲಿಯಲ್ಲಿ ಮೀಮ್ಸ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.
ಅನುಷ್ಕಾ ಶರ್ಮ ಅಭಿನಯದ ಸೂಯಿ ಧಾಗಾ ಚಿತ್ರ, ಹೃತಿಕ್ ರೋಷನ್ ಅವರ ಸೂಪರ್ 30 ಪೋಸ್ಟರ್ ಕುರಿತ ಮೀಮ್ಸ್ ಗಳು ಜನಪ್ರಿಯಗೊಂಡಿವೆ. ಈಗ ನನ್ ಚಿತ್ರದ ಸರದಿ.
ಬಾಲಿವುಡ್ ನ ಜನಪ್ರಿಯ ಚಿತ್ರಗಳು ಹಾಗೂ ಚಿತ್ರದ ಕ್ಯಾರೆಕ್ಟರ್ ಗಳನ್ನು ಬಳಸಿಕೊಂಡು ದಿ ನನ್ ಚಿತ್ರದ ಪೋಸ್ಟರ್ ಗೆ ಹೊಂದಿಸಲಾಗಿದೆ. ರಣಬೀರ್ ಕಪೂರ್, ಅನುಷ್ಕಾ ಶರ್ಮ, ಅಮೀರ್ ಖಾನ್ ಅಲ್ಲದೆ ಕೆಲವು ಸಿನಿಮಾಗಳ ಡೈಲಾಗ್ ಗಳನ್ನು ಹೊಂದಿಸಲಾಗಿದೆ. ನೀವು ನೋಡಿ ಆನಂದಿಸಿ...

ಅನುಷ್ಕಾ 'ದಿ ನನ್' ಶರ್ಮ
ಅನುಷ್ಕಾ ಶರ್ಮ ಅವರ ಸೂಯಿ ಧಾಗ ಚಿತ್ರದ ಪೋಸ್ಟರ್ ಗಳು ಇಂಟರ್ನೆಟ್ ನಲ್ಲಿ ಈಗಾಗಲೇ ಹರಿದಾಡುತ್ತಿವೆ. ಇಬ್ಬರು ಅನುಷ್ಕಾ ಅವರು ಕುಕ್ಕರಗಾಲಲ್ಲಿ ಕೂತು ಯೋಚಿಸುತ್ತಿರುವ ರೀತಿಯ ಚಿತ್ರವನ್ನು ಎಲ್ಲಾ ಸ್ಥಳಕ್ಕೆ ಹೊಂದಿಸಲಾಗುತ್ತಿದೆ. ಇಲ್ಲಿ ಟ್ವಿಟ್ಟರ್ ಖಾತೆ Mask Ishan @Mr_LoLwa ಅವರು ಅನುಷ್ಕಾ ಅವರ ನನ್ ಪೋಸ್ಟರ್ ಮಾಡಿ ಸ್ಸಾರಿ ಎಂದು ಅಡಿಬರಹ ಕೊಟ್ಟಿದ್ದಾರೆ.

ಘ'ನನ್' ಘನನ್
ಅಮೀರ್ ಖಾನ್ ಅವರ ಸ್ಮರಣೀಯ ಚಿತ್ರ ಲಾಗನ್ ನ ಜನಪ್ರಿಯ ಪೋಸ್ ಬಳಸಿಕೊಂಡು ನನ್ ಪೋಸ್ಟರ್ ಗೆ ಹೊಂದಿಸಲಾಗಿದೆ. ಎಐಬಿ ಅವರು ಘ 'ನನ್' ಘನನ್ ಎಂದು ಲಾಗನ್ ಹಾಡನ್ನು ನೆನಪಿಸಿದ್ದಾರೆ.

ಸಂಜು ಬನ್ ಗಯಾ ನನ್
ಸಂಜಯ್ ದತ್ ಗೆಟ್ ಅಪ್ ನಲ್ಲಿರುವ ರಣಬೀರ್ ಕಪೂರ್ ಅವರನ್ನು ದಿ ನನ್ ಚಿತ್ರದ ಪೋಸ್ಟರ್ ಗೆ ಹೊಂದಿಸಲಾಗಿದ್ದು, ಒನ್ ನನ್ ಮೆನಿ ಲೀವ್ಸ್ ಎಂದು ಅಡಿಬರಹ ನೀಡಲಾಗಿದೆ.

ಡೈಸಿ ಶಾ ಡೈಲಾಗ್
ರೇಸ್ 3 ಚಿತ್ರದಲ್ಲಿ ಡೈಸಿ ಶಾ ಹೇಳುವ ' 'It's none of your business'? ಡೈಲಾಗ್ ಬಳಸಿಕೊಂಡು ಮೀಮ್ಸ್ ಮಾಡಲಾಗಿದೆ. none ಬದಲಿಗೆ nun ಎಂದು ಪದ ಬದಲಿಸಲಾಗಿದೆ.

ತಮಾಷೆ ಜೊತೆಗೆ ಜಾಗೃತಿ
ಬೆಂಗಳೂರು ಪೊಲೀಸರು ಗೇಮ್ ಆಫ್ ಥ್ರೋನ್ಸ್ ಪಾತ್ರಧಾರಿಗಳನ್ನು ಬಳಸಿಕೊಂಡು ಹೆಲ್ಮೆಟ್ ಧರಿಸುವಂತೆ ಟ್ವೀಟ್ ಮಾಡುವುದನ್ನು ನೋಡಿರಬಹುದು ಅದೇ ರೀತಿ ಮುಂಬೈ ಪೊಲೀಸರು ದಿ ನನ್ ಪೋಸ್ಟರ್ ಬಳಸಿಕೊಂಡು ಪಾರ್ಕಿಂಗ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.


Click it and Unblock the Notifications











