ಮದುವೆಗೆ ಸೋನಂ ಧರಿಸಿದ ಉಂಗುರದ ಬೆಲೆ ಕೇಳಿದ್ರೆ, ನಿಮ್ಮ ಕಣ್ಣರಳುತ್ತೆ.!

By Harshitha

ಬಾಲಿವುಡ್ ನಟಿ, ಅನಿಲ್ ಕಪೂರ್ ಪುತ್ರಿ, ಕಪೂರ್ ಕುಟುಂಬದ ಕುವರಿ ಸೋನಂ ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಉದ್ಯಮಿ, ದೀರ್ಘ ಕಾಲದ ಗೆಳೆಯ ಆನಂದ್ ಅಹುಜಾ ಜೊತೆಗೆ ಸೋನಂ ಕಪೂರ್ ವೈವಾಹಿಕ ಜೀವನ ಆರಂಭಿಸಿದ್ದಾರೆ.

ಮೇ 8 ರಂದು ಮುಂಬೈನಲ್ಲಿ ಸೋನಂ ಕಪೂರ್-ಆನಂದ್ ಅಹುಜಾ ಮದುವೆ ಹಾಗೂ ರಿಸೆಪ್ಷನ್ ಪಾರ್ಟಿ ನಡೆದಿತ್ತು. ಮೆಹಂದಿ ಶಾಸ್ತ್ರ, ಮದುವೆ ಹಾಗೂ ರಿಸೆಪ್ಷನ್ ಪಾರ್ಟಿಗೆ ನಟಿ ಸೋನಂ ಕಪೂರ್ ಧರಿಸಿದ್ದ ಉಡುಪುಗಳು ಹೆಂಗಳೆಯರ ಕಣ್ಣು ಕುಕ್ಕಿತ್ತು.

ವಿವಾಹ ಮಹೋತ್ಸವದಲ್ಲಿ ಕೆಂಪು ಬಣ್ಣದ ಲೆಹೆಂಗಾ ಧರಿಸಿ, ಬಂಗಾರದ ಒಡವೆಗಳಿಂದ ಸಿಂಗರಿಸಿಕೊಂಡಿದ್ದರು ಸೋನಂ ಕಪೂರ್. ಈ ವೇಳೆ ಸೋನಂ ಕಪೂರ್ ಧರಿಸಿದ್ದ ಒಂದು ಉಂಗುರ ಇದೀಗ ಬ್ರೇಕಿಂಗ್ ನ್ಯೂಸ್ ಮಾಡಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

ಸೋನಂ ಕಪೂರ್ ಉಂಗುರದ ಬೆಲೆ ಎಷ್ಟು ಗೊತ್ತಾ.?

ಸೋನಂ ಕಪೂರ್ ಉಂಗುರದ ಬೆಲೆ ಎಷ್ಟು ಗೊತ್ತಾ.?

ತಮ್ಮ ಮದುವೆಗೆಂದು ಸೋನಂ ಕಪೂರ್ ಧರಿಸಿದ್ದ ಉಂಗುರದ ಬೆಲೆ ಬರೋಬ್ಬರಿ 90 ಲಕ್ಷ ರೂಪಾಯಿ. ನೀವು ನಂಬಿದ್ರೂ, ಬಿಟ್ಟರೂ ಇದೇ ಸತ್ಯ. ಸೋನಂ ಕಪೂರ್ ಗೆ ವಜ್ರ ಅಂದ್ರೆ ಪಂಚಪ್ರಾಣ. ವಜ್ರಖಚಿತವಾಗಿರುವ ಉಂಗುರವನ್ನೇ ಸೋನಂ ತಮ್ಮ ವಿವಾಹದಲ್ಲಿ ಧರಿಸಿದ್ದರು.

ಸೋನಂ ಮಾಂಗಲ್ಯ ಇದು

ಸೋನಂ ಮಾಂಗಲ್ಯ ಇದು

ಇದು ನಟಿ ಸೋನಂ ಕಪೂರ್ ರವರ ಮಾಂಗಲ್ಯ ಸರ. ತಮ್ಮ ಕರಿಮಣಿ ಮಾಂಗಲ್ಯವನ್ನ ಸ್ವತಃ ತಾವೇ ಡಿಸೈನ್ ಮಾಡಿದ್ದಾರೆ ನಟಿ ಸೋನಂ ಕಪೂರ್.

ವಜ್ರಖಚಿತ ಮಾಂಗಲ್ಯ

ವಜ್ರಖಚಿತ ಮಾಂಗಲ್ಯ

ಸೋನಂ ಕಪೂರ್ ಮಾಂಗಲ್ಯ ಸರದಲ್ಲಿ ಮಿಥುನ ಹಾಗೂ ಸಿಂಹ ರಾಶಿಯ ಚಿಹ್ನೆ ಜೊತೆಗೆ ವಜ್ರವೂ ಇದೆ.

ಮದುವೆ ನಂತರವೂ ಎಲ್ಲವೂ ಹಾಗೇ ಇದೆ

ಮದುವೆ ನಂತರವೂ ಎಲ್ಲವೂ ಹಾಗೇ ಇದೆ

ಮದುವೆ ಆದ ಮಾತ್ರಕ್ಕೆ ಸಿನಿಮಾಗಳಿಗೆ ನಟಿ ಸೋನಂ ಕಪೂರ್ ಗುಡ್ ಬೈ ಹೇಳಿಲ್ಲ. ''ಮದುವೆ ಆದ ಬಳಿಕ ಯಾವುದೂ ಬದಲಾವಣೆ ಆಗಿಲ್ಲ. ಎಲ್ಲವೂ ಹಾಗೇ ಇದೆ. ಮುಂದೆ ಸಿನಿಮಾಗಳಲ್ಲೂ ಅಭಿನಯಿಸುವೆ'' ಎಂದು ಸಂದರ್ಶನವೊಂದರಲ್ಲಿ ನಟಿ ಸೋನಂ ಕಪೂರ್ ಹೇಳಿದ್ದಾರೆ.

More from Filmibeat

English summary
According to the reports, Bollywood Actress Sonam Kapoor's wedding ring costs around 90 Lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X