ರವೀನಾ ಟಂಡನ್ ರಂಪ ರಾಮಾಯಣಕ್ಕೆ ಧರ್ಮದ ಬಣ್ಣ ಹಚ್ಚುವ ಯತ್ನ ? ಸಿಸಿಟಿವಿಯಲ್ಲಿ ಸತ್ಯ ಬಯಲು..!

ಸಾಮಾಜಿಕ ಜಾಲತಾಣ ಇವತ್ತು ಕೇವಲ ಮನರಂಜನಾ ತಾಣ ಅಥವಾ ಹರಟೆಯ ಕಟ್ಟೆಯಾಗಿ ಉಳಿದಿಲ್ಲ ಬದಲಿಗೆ ದೈನಂದಿನ ಬದುಕಿನ ದೊಡ್ಡ ಭಾಗವಾಗಿದೆ. ಬದಲಾದ ಈ ಕಾಲದಲ್ಲಿ ಇವತ್ತು ಅನೇಕರು ಈ ಸಾಮಾಜಿಕ ಜಾಲತಾಣದ ಸದ್ಭಳಕೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ದುರ್ಬಳಕೆಯನ್ನೂ ಮಾಡಿಕೊಂಡು ಸತ್ಯವನ್ನ ಮರೆ ಮಾಚಿ, ಫೇಕ್ ನ್ಯೂಸ್ ಗಳನ್ನು ಹರಡಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನೂ ಮಾಡುತ್ತಿದ್ದಾರೆ. ಬಾಲಿವುಡ್‌ ನ ನಾಯಕಿ ರವೀನಾ ಟಂಡನ್ ವಿಚಾರದಲ್ಲಿ ಕೂಡ ಇಂಥಹದ್ದೇ ಕೆಲಸ ಆಗಿದೆಯಾ ಅನ್ನುವ ಅನುಮಾನ ಈಗ ಅನೇಕರನ್ನ ಕಾಡುತ್ತಿದೆ. ಅದಕ್ಕೆ ಕಾರಣ ಸಿಸಿಟಿವಿಯಲ್ಲಿ ಸೆರೆಯಾದ ಫುಟೇಜ್.

ಹೌದು, ನಿನ್ನೆ ರಾತ್ರಿ ಮೊಹಮ್ಮದ್ ಎಂಬ ವ್ಯಕ್ತಿ ಮತ್ತು ಆತನ ಕುಟುಂಬದ ಜೊತೆ ರವೀನಾ ಟಂಡನ್ ಅನುಚಿತವಾಗಿ ವರ್ತಿಸಿದ್ದಾರೆ, ಮದ್ಯದ ಅಮಲಿನಲ್ಲಿ ಹಲ್ಲೆಯನ್ನೂ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇವತ್ತು ಬೆಳ್ಳಿಗ್ಗೆ ತನ್ನ ಸುತ್ತ ಮುತ್ತ ನೆರೆದ ಜನರನ್ನ ಕಂಡು ಗಾಬರಿಯಾದ ರವೀನಾ ಟಂಡನ್ ನನಗೇನು ಮಾಡಬೇಡಿ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಿರುವ ವಿಡಿಯೋ ಕೂಡ ವೈರಲ್ ಆಯಿತು.

ವಿಡಿಯೋದಲ್ಲಿ ರವೀನಾ ಟಂಡನ್ ಅವರ ದಯನಿಯ ಸ್ಥಿತಿಯನ್ನ ಕಂಡು ಕೆಲವರು ಮಮ್ಮಲ ಮರುಗಿದರೆ, ಬಹುತೇಕರು.. ದುಡ್ಡಿನ ದರ್ಪ, ಇಂತಹವರಿಗೆಲ್ಲ ತಕ್ಕ ಶಾಸ್ತಿಯಾಗಬೇಕೆಂಬ ಅಭಿಪ್ರಾಯವನ್ನೂ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದರು.

ಆದರೆ ಈಗ ಈ ಸಂಪೂರ್ಣ ಪ್ರಕರಣಕ್ಕೆ ಸಿಸಿಟಿವಿಯ ದೃಶ್ಯಾವಳಿ ತಿರುವನ್ನ ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಹಂತದ ಚರ್ಚೆಗೆ ನಾಂದಿಯನ್ನೂ ಹಾಡಿದೆ. ಯಾಕೆಂದರೆ.. ವೈರಲ್ ಆಗ್ತಿರುವ ಈ ಸಿಸಿಟಿವಿ ಫುಟೇಜ್ ನಲ್ಲಿ ರವೀನಾ ಟಂಡನ್ ಅವರ ಕಾರು, ಆರೋಪ ಮಾಡಿರುವ ಮೊಹಮ್ಮದ್ ಅವರ ಹತ್ತಿರ ಕೂಡ ಹೋಗಿಲ್ಲ. ಮೊಹಮ್ಮದ್ ಹೇಳಿರುವಂತೆ ಅವರ ಕುಟುಂಬದ ಯಾರೊಬ್ಬರಿಗೂ ಕಾರು ಡಿಕ್ಕಿಯನ್ನ ಹೊಡೆದಿಲ್ಲ. ಆದರೂ ರಂಪ-ರಾಮಾಯಣ ಆಗಿದೆ. ಸಾಮಾಜಿಕ ಜಾಲತಾಣದ ಸಹಾಯದ ಮೂಲಕ ರವೀನಾ ಟಂಡನ್ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ.

ಹೀಗಾಗಿಯೇ ಈ ಸಂಪೂರ್ಣ ಘಟನಾವಳಿಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಿರುವ ಅನೇಕರು ಈಗ ಈ ಪ್ರಕರಣಕ್ಕೆ ಧರ್ಮದ ಬಣ್ಣವನ್ನ ಹಚ್ಚುತ್ತಿದ್ದಾರೆ. ರವೀನಾ ಮೇಲೆ ಮೊಹಮ್ಮದ್ ಮಾಡಿದ ಆರೋಪಕ್ಕೆ ಸಿಸಿಟಿವಿಯ ದೃಶ್ಯಗಳನ್ನ ಸಾಕ್ಷಿಯನ್ನಾಗಿ ನೀಡಿ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ತಪ್ಪು ಯಾರದ್ದೇ ಇರಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ.

ಇನ್ನೂ ರವೀನಾ ಟಂಡನ್ ಅವರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ಸಂಪೂರ್ಣ ಮೌನಕ್ಕೆ ಶರಣಾಗಿದೆ. ರವೀನಾ ಟಂಡನ್ ಅವರ ಪರವಾಗಿ ಕೂಡ ಯಾರು ಮಾತನಾಡಿಲ್ಲ. ಈ ಘಟನೆಯನ್ನ ಇಲ್ಲಿಯವರೆಗೆ ಯಾರು ಖಂಡಿಸಿಲ್ಲ. ಈ ಕಾರಣಕ್ಕೆ ಬಾಲಿವುಡ್‌ನ ಸೆಲೆಬ್ರೀಟಿಗಳ ಮೇಲೆ ಕೆಂಡ ಕಾರುತ್ತಿರುವ ಅನೇಕರು ಬಾಲಿವುಡ್‌ ತಾರೆಯರ ರಾಜಕೀಯ ನಿಲುವನ್ನ ಪ್ರಶ್ನೆ ಮಾಡುತ್ತಿದ್ದಾರೆ. ಧರ್ಮದ ಬಗ್ಗೆಯೂ ಕೂಡ ಪಾಠ ಮಾಡುತ್ತಿದ್ದಾರೆ.

ಒಟ್ನಲ್ಲಿ ರವೀನಾ ಟಂಡನ್ ಅವರ ಈ ಹಲ್ಲೆ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಸಿಸಿಟಿವಿಯ ದೃಶ್ಯಾವಳಿ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪರ - ವಿರೋಧದ ಚರ್ಚೆ ಕೂಡ ನಡೆಯುತ್ತಿದೆ. ಇನ್ನೂ ಇಷ್ಟೆಲ್ಲ ಆಗಿ ಹತ್ ಹತ್ರ 24 ಘಂಟೆಗಳಾಗ್ತಾ ಬಂದರೂ ಕೂಡ ರವೀನಾ ಟಂಡನ್ ಈ ಸಂಪೂರ್ಣ ಪ್ರಕರಣದ ಬಗ್ಗೆ ಇನ್ನೂ ಮೌನ ಮುರಿದಿಲ್ಲ. ಅವರ ಕಥೆಯನ್ನ ಇನ್ನೂ ಹೇಳಿಲ್ಲ.

More from Filmibeat

English summary
The Raveena Tandon assault case sparked a religious controversy, Contrary to Initial Claims, CCTV Footage Suggests Raveena Tandon's Car Did Not Hit Burqa-Clad Woman
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X