ಅವರು ಹೇಳಿದ್ದು ಒಂದು, ಮಾಡಿದ್ದು ಮತ್ತೊಂದು ; ಸಲ್ಮಾನ್ ಖಾನ್ ಕೆಂಗಣ್ಣಿಗೆ ಗುರಿಯಾಗ್ತಾರಾ ರಶ್ಮಿಕಾ ಮಂದಣ್ಣ ?

''ಕಿರಿಕ್ ಪಾರ್ಟಿ'' ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ. ಕನ್ನಡದಿಂದ ತೆಲುಗಿಗೆ..

ವಲಸೆ ಹೋಗಿ ಆ ನಂತರ ಅಲ್ಲಿಂದ ಕೂಡ ಕಾಲ್ಕಿತ್ತ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲಿ ಬಿಡಾರ ಹೂಡಿದ್ದಾರೆ. ''ಅನಿಮಲ್''.. ''ಛಾವಾ''..''ಥಾಮ್ಮಾ''.. ಹೀಗೆ ಒಂದಾದ ಮೇಲೊಂದು ಚಿತ್ರಗಳನ್ನು ಮಾಡಿದ್ದಾರೆ. ಬ್ಲಾಕ್ ಬಸ್ಟರ್ ಮಹಾರಾಣಿ ಎಂದು ಕರೆಯಲ್ಪಡುತ್ತಿದ್ದಾರೆ. ಶಾಹಿದ್ ಕಪೂರ್ ಜೊತೆ ''ಕಾಕ್‌ಟೈಲ್ 2'' ಚಿತ್ರವನ್ನು ಕೂಡ ರಶ್ಮಿಕಾ ಮಾಡಿದ್ದಾರೆ.

The Sikandar I Signed Was Not The Movie We Made Rashmika Mandanna Breaks Silence On Script Overhaul

ಇಂಥಾ ರಶ್ಮಿಕಾ ಮಂದಣ್ಣ ತಮ್ಮ ''ಸಿಕಂದರ್'' ಚಿತ್ರದ ಸೋಲಿನ ಕುರಿತು ಮತ್ತೊಮ್ಮೆ ಮಾತನಾಡಿದ್ದಾರೆ. ಹೌದು, ''ಸಿಕಂದರ್''.. ಸಲ್ಮಾನ್ ಖಾನ್ ಅಭಿನಯದ ಚಿತ್ರ. ಈ ಚಿತ್ರದಲ್ಲಿ ರಶ್ಮಿಕಾ ಪ್ರಮುಖ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಚಿತ್ರ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಹೊಸದೊಂದು ದಾಖಲೆ ಬರೆಯುತ್ತೆ ಅಂದುಕೊಂಡಿದ್ದರು. ಆದರೆ. ಆಗಿದ್ದು ಉಲ್ಟಾ.

ಬಾಕ್ಸಾಫೀಸ್‌ನಲ್ಲಿ ''ಸಿಕಂದರ್'' ಮಕಾಡೆ ಮಲಗಿತು. ಈ ಸೋಲಿನ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ. ಅವರು ನನಗೆ ಹೇಳಿದ್ದು ಒಂದು ಮಾಡಿದ್ದು ಮತ್ತೊಂದು ಎಂದಿದ್ದಾರೆ.

ಈ ಕುರಿತು ತೆಲುಗು ಪತ್ರಕರ್ತೆ ಪ್ರೇರಣಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ ಆರಂಭದಲ್ಲಿ ಎ.ಆರ್.ಮುರಗದಾಸ್ ಸರ್ ನನಗೆ ಹೇಳಿದ್ದ ಕಥೆ ಬೇರೆ ಇತ್ತು ಎಂದಿದ್ದಾರೆ. ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಮುರಗದಾಸ್ ಸರ್ ಜೊತೆ ನಾನು ಮಾತನಾಡಿದ್ದೆ ಬೇರೆ, ಆದರೆ ಆ ನಂತರ ನಡೆದಿದ್ದೇ ಬೇರೆ ಎಂದು ಹೇಳಿರುವ ರಶ್ಮಿಕಾ ನಾನು ಕಥೆ ಕೇಳಿದಾಗ ಅದು ತುಂಬಾನೇ ವಿಭಿನ್ನವಾಗಿತ್ತು ಎಂದಿದ್ದಾರೆ. ತೆರೆಯ ಮೇಲೆ ಬಂದಾಗ ಬೇರೆಯೇ ಆಗಿತ್ತು ಎಂದಿದ್ದಾರೆ.

ಮುಂದುವರೆದು ಸಿನಿಮಾ ಅಂದ ಮೇಲೆ ಅಲ್ಲಿ ಬದಲಾವಣೆ ಸಾಮಾನ್ಯ. ನಾವು ಆರಂಭದಲ್ಲಿ ಒಂದು ಕಥೆ ಕೇಳಿ ಅದರಿಂದ ಪ್ರಭಾವಕ್ಕೊಳಗಾಗಿ ಒಪ್ಪಿಕೊಂಡಿರುತ್ತೇವೆ ಆದರೆ ಚಿತ್ರೀಕರಣದ ಸಮಯದಲ್ಲಿ, ಗಳಿಕೆಯ ದೃಷ್ಟಿಯಿಂದ, ಸಮಯಕ್ಕೆ ಅನುಗುಣವಾಗಿ ಕೆಲ ವಿಷಯಗಳು ಬದಲಾಗುತ್ತಾವೆ, ''ಸಿಕಂದರ್'' ವಿಚಾರದಲ್ಲಿ ಕೂಡ ಅದೇ ಆಯ್ತು ಎಂದಿದ್ದಾರೆ.

The Sikandar I Signed Was Not The Movie We Made Rashmika Mandanna Breaks Silence On Script Overhaul

ಸದ್ಯ ರಶ್ಮಿಕಾ ಅವರ ಈ ಮಾತು ಚರ್ಚೆಗೆ ಗ್ರಾಸವಾಗಿದೆ. ಸಲ್ಮಾನ್ ಖಾನ್ ಕೆಂಗಣ್ಣಿಗೆ ಎಲ್ಲಿ ರಶ್ಮಿಕಾ ಗುರಿಯಾಗುತ್ತಾರೆ ಎನ್ನುವ ಆತಂಕ ಕೂಡ ಕೆಲವರನ್ನು ಕಾಡುತ್ತಿದೆ. ಯಾಕೆಂದರೆ ''ಸಿಕಂದರ್'' ಕಥೆಯ ವಿಚಾರಕ್ಕೆ ಈ ಹಿಂದೆ ಚಿತ್ರದ ನಿರ್ದೇಶಕ ಮುರಗದಾಸ್ ಮತ್ತು ಸಲ್ಮಾನ್ ಖಾನ್ ನಡುವೆ ಮಾತಿನ ಚಕಮಕಿ ನಡೆದಿದೆ.

ಹಿಂದೆ ಚಿತ್ರದ ಸೋಲಿಗೆ ಕಾರಣವನ್ನು ಕೇಳಿದಾಗ ನಿರ್ದೇಶಕ ಮುರಗದಾಸ್ ಸದ್ಯ ರಶ್ಮಿಕಾ ಹೇಳಿದಂತೆಯೇ ಹೇಳಿದ್ದರು. ಸಿಕಂದರ್'' ಮಾಡಲು ಅಕ್ಷರಶಃ ನಾನು ಹೆಣಗಾಡಿದೆ ಎಂದು ಹೇಳಿದ್ದ ಎ.ಆರ್.ಮುರಗದಾಸ್ ಕೊನೆ ಕ್ಷಣದಲ್ಲಿ ಕಥೆಯಲ್ಲಿ ಬದಲಾವಣೆಗಳನ್ನು ಮಾಡಲಾಯ್ತು. ಕಥೆಯ ಮೇಲೆ ಸಿನಿಮಾದ ಮೇಲೆ ನನ್ನ ನಿಯಂತ್ರಣ ಕೂಡ ತಪ್ಪಿ ಹೋಯಿತು ಎಂದಿದ್ದರು.

''ಸಿಕಂದರ್'' ಚಿತ್ರದ ಚಿತ್ರೀಕರಣಕ್ಕೆ ಸಲ್ಮಾನ್ ಖಾನ್ ಬರುತ್ತಿದ್ದಿದ್ದೇ ರಾತ್ರಿ 8ರ ನಂತರ ಅವರ ಈ ಧೋರಣೆಯಿಂದ ಬೆಳಗ್ಗೆ ಸೆರೆ ಹಿಡಿಯಬೇಕಾದ ದೃಶ್ಯಗಳನ್ನೆಲ್ಲಾ ನಾವು ಅನಿವಾರ್ಯವಾಗಿ ರಾತ್ರಿ ಹೊತ್ತಿನಲ್ಲಿ ಗ್ರೀನ್ ಮ್ಯಾಟ್‌ನಲ್ಲಿ ಸೆರೆ ಹಿಡಿಯಬೇಕಾಯ್ತು ಇದು ಚಿತ್ರದ ಮೇಲೆ ಮತ್ತು ತಂಡದ ಮೇಲೆ ಪರಿಣಾಮ ಬೀರಿತು ಎಂದು ಹೇಳಿದ್ದ ಮುರಗದಾಸ್ ನನಗೆ ಸಲ್ಮಾನ್ ಖಾನ್ ಸಹಕಾರ ಸಿಗಲಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಮುರಗದಾಸ್ ಅವರಾಡಿದ ಈ ಮಾತುಗಳಿಗೆ ಸಲ್ಮಾನ್ ಖಾನ್ ಪ್ರತ್ಯುತ್ತರ ನೀಡಿದ್ದರು. ನಾನು ರಾತ್ರಿ 9ಕ್ಕೆ ಬರುತ್ತಿದ್ದೆ ಇದರಿಂದ ಗೊಂದಲವಾಯ್ತು ಎಂದು ಅವರು (ಎ ಆರ್ ಮುರಗದಾಸ್ ) ಹೇಳಿದ್ದಾರೆ. ಆದರೆ, ನನ್ನ ಪಕ್ಕೆಲುಬು ಮುರಿದಿತ್ತು. ಅವರು ಇದನ್ನು ಹೇಳಿರಲಿಕ್ಕಿಲ್ಲ ಎಂದು ವ್ಯಂಗ್ಯ ಮಾಡಿದ್ದರು. ಆರಂಭದಲ್ಲಿ ''ಸಿಕಂದರ್'' ಎ.ಆರ್ ಮುರಗದಾಸ್ ಮತ್ತು ನಿರ್ಮಾಪಕ ಸಾಜಿದ್ ನಾಡಿಯಾವಾಲಾ ಅವರದ್ದಾಗಿತ್ತು. ಆದರೆ ಆ ನಂತರ ಸಾಜಿದ್ ಚಿತ್ರದಿಂದ ಹೊರ ನಡೆದರು. ಆ ನಂತರ ಮೆಲ್ಲನೆ ಮುರಗದಾಸ್ ತಮ್ಮ ಜವಾಬ್ಧಾರಿಯಿಂದ ಜಾರಿಕೊಂಡರು. ದಕ್ಷಿಣದ ಚಿತ್ರ ಮಾಡಲು ಹೋದರು ಎಂದು ಹೇಳಿದ್ದ ಸಲ್ಮಾನ್ ಖಾನ್ ''ಸಿಕಂದರ್'' ಚಿತ್ರ ಮಾಡಿದ್ದಕ್ಕೆ ನನಗೆ ಈಗ ಪಶ್ಚಾತಾಪವಾಗುತ್ತಿದೆ ಎಂದು ''ಬಿಗ್ ಬಾಸ್'' ವೇದಿಕೆಯಲ್ಲಿಯೇ ಹೇಳಿದ್ದರು.

ಇದೀಗ ರಶ್ಮಿಕಾ ಕೂಡ ಮುರಗದಾಸ್ ಅವರ ಮಾತುಗಳಿಗೆ ಸಮ್ಮತಿಯನ್ನು ಸೂಚಿಸಿದ್ದಾರೆ. ಈ ಮೂಲಕ ತಮಗೆ ಗೊತ್ತಿಲ್ಲದಂತೆಯೇ ಮುರಗದಾಸ್ ಅವರಿಗೆ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆ ಹಲವರಲ್ಲಿ ಈಗ ರಶ್ಮಿಕಾ ಮಂದಣ್ಣ ಜಸ್ಟ್ ಮಾತ್ ಮಾತಲ್ಲಿ ಸಲ್ಮಾನ್ ಖಾನ್ ಅವರನ್ನು ಕೆಣಕಿದರಾ..? ಎಂಬ ಪ್ರಶ್ನೆ ಮೂಡಿದೆ.

More from Filmibeat

English summary
"The script was different!" Rashmika Mandanna finally breaks her silence on the Sikandar controversy, revealing shocking details about how the movie changed during production. Read the full story here.
Read more about: rashmika mandanna salman khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X