ಲಕ್ಷ್ಮಿ ಕಟಾಕ್ಷ -ಕುಬೇರ ವರ ; 'ಥಮ್ಮ' ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು ?
ಕನ್ನಡ ಚಿತ್ರರಂಗದಿಂದ ಇಲ್ಲಿಯವರೆಗೆ ಅನೇಕ ನಾಯಕಿಯರು ಪರಭಾಷೆಗೆ ವಲಸೆ ಹೋಗಿದ್ದಾರೆ. ಕೆಲವರು ಅಲ್ಲಿಯೇ ಬದುಕು ಕಟ್ಟಿಕೊಂಡರೆ ಇನ್ನು ಹಲವರು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಮರಳಿ ಬಂದಿದ್ದಾರೆ. ಇನ್ನೂ ಹೀಗೆ ಗುಳೆ ಹೋಗುವರಲ್ಲಿ ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಇಲ್ಲಿ ಸಿಗುವ ಸಂಭಾವನೆಗಿಂತ ಹೆಚ್ಚು ಅಲ್ಲಿ ಸಿಗುತ್ತೆ ಎಂದು ಹೋಗುತ್ತಾರೆ.
ಎಲ್ಲವೂ ಅವರವರ ನಿರ್ಧಾರ ಮತ್ತು ಬದುಕಾದರೂ ಸದ್ಯ ಹೀಗೆ ಕನ್ನಡದಿಂದ ಪರಭಾಷೆಗೆ ತೆರಳಿ ಅತ್ಯಲ್ಪ ಅವಧಿಯಲ್ಲಿಯೇ ಖ್ಯಾತಿಯ ತುತ್ತ ತುದಿಯನ್ನು ತಲುಪಿದ ರಶ್ಮಿಕಾ ಮಂದಣ್ಣ ಅವರ ಸಂಭಾವನೆ ಸದ್ಯ ಗಗನಕ್ಕೇರಿದೆ. ''ಥಮ್ಮ'' ಚಿತ್ರಕ್ಕೆ ಕಿರಿಕ್ ಚೆಲುವೆಗೆ ಒಳ್ಳೆಯ ಪೇಚೆಕ್ ನೀಡಲಾಗಿದೆ.

ಹೌದು, ''ಥಮ್ಮ'' .. ಈ ದೀಪಾವಳಿ ಹಬ್ಬದ ಪ್ರಯುಕ್ತ ತೆರೆಗೆ ಬರುತ್ತಿರುವ ಚಿತ್ರ. ಆಯುಷ್ಮಾನ್ ಖುರಾನ ಮತ್ತು ನವಾಜುದ್ದೀನ್ ಸಿದ್ದಿಕಿ ಜೊತೆ ರಶ್ಮಿಕಾ ಮಂದಣ್ಣ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಿಂದೆಂದಿಗಿಂತ ತುಸು ಹೆಚ್ಚೇ ತಮ್ಮ ಸೌಂದರ್ಯದ ಪ್ರದರ್ಶನವನ್ನು ಮಾಡಿದ್ದಾರೆ. ಈ ಹಿಂದೆ ನಿರ್ವಹಿಸದ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ.
ರಶ್ಮಿಕಾ ಅವರ ಈ ಶ್ರಮಕ್ಕೆ ಬಾಕ್ಸಾಫೀಸ್‌ನಲ್ಲಿ ಎಷ್ಟರ ಮಟ್ಟಿಗೆ ಫಲ ಸಿಗುತ್ತೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಥಮ್ಮ ಚಿತ್ರದಲ್ಲಿ ಅಭಿನಯಿಸಲು ರಶ್ಮಿಕಾ ಮಂದಣ್ಣ ಭಾರೀ ಸಂಭಾವನೆ ಪಡೆದಿದ್ದಾರೆ. ಆದರೆ .. ಇವರ ಸಂಭಾವನೆ ಆಯುಷ್ಮಾನ್ ಖುರಾನ ಅವರಿಗಿಂತ ಕಡಿಮೆ ಇದೆ. ನವಾಜುದ್ದೀನ್ ಸಿದ್ದಿಕಿ ಅವರಿಗಿಂತ ಹೆಚ್ಚಿದೆ ಎನ್ನುವುದು ವಿಶೇಷ.
ಹೌದು ''ಡಿಎನ್‌ಎ'' ವರದಿಯ ಪ್ರಕಾರ ''ಥಮ್ಮ'' ಚಿತ್ರಕ್ಕೆ ಆಯುಷ್ಮಾನ್ ಖುರಾನಗೆ ನಿರ್ಮಾಣ ಸಂಸ್ಥೆಯಾದ ಮ್ಯಾಡಾಕ್ ₹8ರಿಂದ ₹10 ಕೋಟಿಯನ್ನು ನೀಡಿದೆ. ಹಾಗೇ ನೋಡಿದರೆ ಈ ಸಂಭಾವನೆ ಆಯುಷ್ಮಾನ್ ಅರ್ಹರು. ಯಾಕೆಂದರೆ.. ಒಂದಾದ ಮೇಲೊಂದು ಬಾಲಿವುಡ್‌ಗೆ ಗೆಲುವನ್ನು ನೀಡುತ್ತಾ ಬಂದವರು ಆಯುಷ್ಮಾನ್. ಬಾಲಿವುಡ್‌ನ ಬ್ಯಾಂಕೆಬಲ್ ಸ್ಟಾರ್.
ಹೀಗಾಗಿ ಆಯುಷ್ಮಾನ್ ಖುರಾನಗೆ ₹8ರಿಂದ ₹10 ಕೋಟಿ ನೀಡಿರುವ ನಿರ್ಮಾಣ ಸಂಸ್ಥೆ ರಶ್ಮಿಕಾ ಮಂದಣ್ಣ ಅವರಿಗೆ ₹ 5ರಿಂದ ₹ 7 ಕೋಟಿ ಸಂಭಾವನೆಯನ್ನು ನೀಡಿದೆ ಎಂದು ''ಡಿಎನ್‌ಎ'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಆಯುಷ್ಮಾನ್ ಖುರಾನ ಅವರ ಸಂಭಾವನೆಗಿಂತ 50% ಕಡಿಮೆ ಸಂಭಾವನೆಯನ್ನು ರಶ್ಮಿಕಾಗೆ ನೀಡಲಾಗಿದೆ ಎಂದು ವರದಿ ಮಾಡಿದೆ.

ಇನ್ನೂ ಇದೇ ವರದಿಯ ಪ್ರಕಾರ ನವಾಜುದ್ದೀನ್ ಸಿದ್ದಿಕಿ ಅವರಿಗೆ ₹3 ರಿಂದ ₹4 ಕೋಟಿ ಸಂಭಾವನೆ ನೀಡಲಾಗಿದ್ದು ಚಿತ್ರದಲ್ಲಿ ಕಾಣಿಸುವ ಹಿರಿಯ ನಟ ಪರೇಶ್ ರಾವಲ್ ಅವರಿಗೆ ₹2 ಕೋಟಿ ಸಂಭಾವನೆ ನೀಡಲಾಗಿದೆ.
ಅಂದ್ಹಾಗೇ ''ಥಮ್ಮ'' ಚಿತ್ರದಲ್ಲಿ ಸಲ್ಮಾನ್ ಖಾನ್ ಮಾಜಿ ಅತ್ತಿಗೆ ಮಲೈಕಾ ಅರೋರಾ ಬಹು ದಿನಗಳ ನಂತರ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಮಲೈಕಾ ಜೊತೆ ಈ ಹಾಡಿನಲ್ಲಿ ರಶ್ಮಿಕಾ ಕೂಡ ತುಂಬಾ ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ಕೇವಲ ಇದೊಂದು ಹಾಡಿಗೆ ಮಲೈಕಾ ಅರೋರಾಗೆ ₹ 2 ಕೋಟಿ ಸಂಭಾವನೆ ನೀಡಲಾಗಿದೆ ಎಂದು ಡಿಎನ್‌ಎ ವರದಿ ಮಾಡಿದೆ.
ಇನ್ನುಳಿದಂತೆ ''ಬಾಲಿವುಡ್ ಹಂಗಾಮಾ'' ವರದಿಯ ಪ್ರಕಾರ ''ಥಮ್ಮ'' ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೆಟ್ ಪಡೆದು ಪಾಸಾಗಿದೆ. ಚಿತ್ರದ ದ್ವೀತಿಯಾರ್ಧದಲ್ಲಿರುವ ಲಿಪ್ ಲಾಕ್ ದೃಶ್ಯವನ್ನು ಕೇವಲ 5 ಸೆಕೆಂಡ್ ಮಾತ್ರ ಬಳಸುವಂತೆ ಸೆನ್ಸಾರ್ ಮಂಡಳಿ ಹೇಳಿದ್ದು ರಕ್ತ ಕುಡಿಯುವ ದೃಶ್ಯದ ಸೌಂಡ್ ಕಡಿಮೆ ಮಾಡುವಂತೆ ಸೂಚಿಸಿದೆ. ಚಿತ್ರ ನಾಳೆ (ಅಕ್ಟೋಬರ್ 21) ತೆರೆಗೆ ಬರಲಿದೆ.


Click it and Unblock the Notifications











