For Quick Alerts
  ALLOW NOTIFICATIONS  
  For Daily Alerts

  ಮದುವೆಗೂ ಮುಂಚೆ ಭಾವಿ ಪತಿ ಜೊತೆ 'ದಿ ವಿಲನ್' ನಟಿಯ ಬ್ರೇಕಪ್

  |

  'ದಿ ವಿಲನ್' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದ ಬ್ರಿಟನ್ ಚೆಲುವೆ ಆ್ಯಮಿ ಜಾಕ್ಸನ್ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಮದುವೆಯಾಗದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಆ್ಯಮಿ ಬಳಿಕ ಬಹುಕಾಲದ ಗೆಳೆಯ ಜಾರ್ಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

  ಅದರೀಗ ಆ್ಯಮಿ ಭಾವಿ ಪತಿ ಜಾರ್ಜ್ ನಿಂದ ಬ್ರೇಕಪ್ ಮಾಡಿಕೊಂಡು ದೂರ ಆಗುವ ಸೂಚನೆ ನೀಡಿದ್ದಾರೆ. ಜಾರ್ಜ್ ಜೊತೆ ಇರುವ ಫೋಟೋಗಳನ್ನು ಆ್ಯಮಿ ಜಾಕ್ಸನ್ ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿದ್ದಾರೆ. ಜಾರ್ಜ್ ಜೊತೆ ಇರುವ ಸಾಕಷ್ಟು ಫೋಟೋಗಳನ್ನು ಆ್ಯಮಿ ಶೇರ್ ಮಾಡಿದ್ದರು. ಜಾರ್ಜ್ ಮತ್ತು ಮಗನ ಜೊತೆ ಇರುವ ಫೋಟೋ, ಫಾದರ್ಸ್ ಡೇ ಫೋಟೋ ಸೇರಿದಂತೆ ಪ್ರತಿಯೊಂದು ಫೋಟೋಗಳನ್ನು ತನ್ನ ಖಾತೆಯಿಂದ ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

  ಆ್ಯಮಿ ಮತ್ತು ಜಾರ್ಜ್ ಇಬ್ಬರು 2019ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದೇ ವರ್ಷ ಆ್ಯಮಿ ಗಂಡುಮಗುವಿಗೆ ಜನ್ಮ ನೀಡಿದ್ದರು. ಮಗನಿಗೆ ಜಾರ್ಜ್ ತಂದೆಯ ಹೆಸರು ಆಂಡ್ರಿಯಸ್ ಎಂದು ಹೆಸರಿಟ್ಟಿದ್ದಾರೆ. ಇನ್ನು 2020ರಲ್ಲಿ ಇಬ್ಬರೂ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲಾನ್ ಕೂಡ ಮಾಡಿದ್ದರು. ಆದರೆ ಕೊರೊನಾ ಕಾರಣದಿಂದ ಎಲ್ಲಾ ಯೋಜನೆ ತಲೆಕೆಳಗಾಗಿತ್ತು. ಆದರೀಗ ಆ್ಯಮಿ ಜಾರ್ಜ್ ನಿಂದನೇ ದೂರ ಆಗುವ ನಿರ್ಧಾರ ಮಾಡಿದ್ದಾರೆ.

  ಆ್ಯಮಿ, ಜಾರ್ಜ್ ಜೊತೆ ಇರುವ ಫೋಟೋ ಡಿಲೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಜಾರ್ಜ್ ಜೊತೆ ಬ್ರೇಕಪ್ ಆಯಿತಾ, ಫೋಟೋಗಳನ್ನು ಯಾಕೆ ಡಿಲೀಟ್ ಮಾಡಿದ್ದೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಆ್ಯಮಿ ಜಾಕ್ಸನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ಆ್ಯಮಿ 2010ರಲ್ಲಿ ತಮಿಳು ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಮಿಂಚಿರುವ ಆ್ಯಮಿ ಸದ್ಯ ಚಿತ್ರರಂಗದಿಂದ ದೂರ ಇದ್ದಾರೆ. ಆ್ಯಮಿ ಕೊನೆಯದಾಗಿ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 2.0 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದೇ ವರ್ಷ ಕನ್ನಡ ದಿ ವಿಲನ್ ಸಿನಿಮಾ ಕೂಡ ತೆರೆಗೆ ಬಂದಿತ್ತು. ಈ ಸಿನಿಮಾಗಳ ಬಳಿಕ ಮತ್ತೆ ಬಣ್ಣದ ಲೋಕದ ಕಡೆ ಮುಖಮಾಡಿಲ್ಲ.

  ಇತ್ತೀಚಿಗೆ ಆ್ಯಮಿ ಕಾನ್ ಚಲನಚಿತ್ರೋತ್ಸವದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ನಟಿ ಆ್ಯಮಿ ಜಾಕ್ಸನ್ ರೆಡ್ ಕಾರ್ಪೆಟ್ ಲುಕ್ ಎಲ್ಲರ ಮನಸೆಳೆದಿತ್ತು. ರಾಯಲ್ ಲುಕ್ ನಲ್ಲಿ ಮಿಂಚಿದ ಆ್ಯಮಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಾರಿಯ ಕಾನ್ ಚಿತ್ರೋತ್ಸವದಲ್ಲಿ ಬಾಲಿವುಡ್ ನಟಿಯರು ಕಾಣಿಸಿಕೊಂಡಿಲ್ಲ. ಆದರೆ ನಟಿ ಆ್ಯಮಿ ಜಾಕ್ಸನ್ ಕಾರ್ಯಕ್ರಮಕ್ಕೆ ಬಾಲಿವುಡ್ ಮೆರಗು ತುಂಬಿದ್ದರು.

  English summary
  The Villan Actress Amy Jackson deletes pictures of fiance George Panayiotou.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X