Amy Jackson: 'ದಿ ವಿಲನ್' ನಟಿ ಹೊಸ ಅವತಾರಕ್ಕೆ ಫ್ಯಾನ್ಸ್ ಶಾಕ್: ಅಷ್ಟಕ್ಕೂ ಆಕೆಗೆ ಏನಾಯ್ತು?

ಬ್ರಿಟೀಷ್ ಬ್ಯೂಟಿ ಆಮಿ ಜಾಕ್ಸನ್‌ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದಲ್ಲಿ ಆಮಿ ನಾಯಕಿಯಾಗಿ ಮಿಂಚಿದ್ದಳು. ಸುದೀಪ್ ಜೋಡಿಯಾಗಿ ಕಮಾಲ್ ಮಾಡಿದ್ದಳು. ಆದರೆ ಆಮಿ ಹೊಸ ಲುಕ್ ಅಭಿಮಾನಿಗಳಿಗೆ ಶಾಕ್ ತಂದಿದೆ. ಅರೇ ಆಕೆಗೆ ಇದ್ದಕ್ಕಿದಂತೆ ಏನಾಯ್ತು? ಎಂದು ತಲೆ ಕೆಡಿಸಿಕೊಂಡಿದ್ದಾರೆ.

ಬ್ರಿಟನ್ ನಟಿ ಆಮಿ ಜಾಕ್ಸನ್‌ಗೆ ಭಾರತದಲ್ಲಿ ಒಳ್ಳೆ ಕ್ರೇಜ್ ಇರೋದು ಗೊತ್ತೇಯಿದೆ. ಮೊದಲಿಗೆ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಚೆಲುವೆ ಬಳಿಕ ಕನ್ನಡ, ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸಿ ಒಳ್ಳೆ ಫಾಲೋಯಿಂಗ್ ಗಿಟ್ಟಿಸಿಕೊಂಡಿದ್ದಳು. ಶಂಕರ್‌ರಂತ ನಿರ್ದೇಶಕರ ಜೊತೆ ಎರಡು ಬಾರಿ ಕೆಲಸ ಮಾಡಿದ್ದಾಳೆ. ವಿಕ್ರಮ್ ನಟನೆಯ ' ಐ' ಮತ್ತು ರಜನಿಕಾಂತ್ ನಟನೆಯ '2.O' ಚಿತ್ರಗಳಲ್ ಬಣ್ಣ ಹಚ್ಚಿದ್ದಳು. ಆದರೆ ಆ ಎರಡು ಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಗಳಿಸಲಿಲ್ಲ.

The Villain actress Amy Jackson Leaves Fans Shocked With Pics

ಆಮಿ ತಮಿಳಿನಲ್ಲಿ ಧನುಷ್, ತೆಲುಗಿನಲ್ಲಿ ರಾಮ್ ಚರಣ್ ಹೀಗೆ ಸ್ಟಾರ್‌ ನಟರ ಜೊತೆಗೆಲ್ಲಾ ನಟಿಸಿ ಸೈ ಎನಿಸಿಕೊಂಡಿದ್ದಾಳೆ. '1947 ಎ ಲವ್ ಸ್ಟೋರಿ' ಚಿತ್ರದಲ್ಲಿ ಆರ್ಯ ಎದುರು ಕೂಡ ನಟಿಸಿದ್ದಳು. ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದರೂ ಕೂಡ ಅಷ್ಟಾಗಿ ಆಕೆಗೆ ಸಕ್ಸಸ್ ಸಿಗಲಿಲ್ಲ. ಸದ್ಯ ತನ್ನ ತಾಯ್ನಾಡಿಗೆ ವಾಪಸ್ ಆಗಿದ್ದಾಳೆ. ಇತ್ತೀಚೆಗೆ ಆಮಿ ಗಂಡು ಮಗುವಿನ ತಾಯಿಯಾಗಿದ್ದು ಬಹಳ ಸುದ್ದಿಯಾಗಿತ್ತು. ಜಾರ್ಜ್ ಪನಾಯೊಟೌ ಜೊತೆ ಡೇಟಿಂಗ್ ಮಾಡ್ತಿದ್ದ ಚೆಲುವೆ ಮದುವೆಗೆ ಮೊದಲೇ ಗರ್ಭಿಣಿ ಆಗಿದ್ದಳು.

ಸದ್ಯ ನಟ, ಸಂಗೀತ ನಿರ್ದೇಶಕ ಎಡ್ ವೆಸ್ಟ್ವಿಕ್ ಜೊತೆ ಆಮಿ ಜಾಕ್ಸನ್ ಡೇಟಿಂಗ್ ನಡೆಸುತ್ತಿದ್ದಾಳೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಆಕೆ ಶೇರ್ ಮಾಡಿರುವ ಹೊಸ ಫೋಟೊಗಳು ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಕಾರಣ ಆಕೆಯ ವಿಚಿತ್ರ ಲುಕ್. ಬಹಳ ತೆಳ್ಳಗೆ ಬಳುಕುವ ಬಳ್ಳಿಯಂತೆ ಇರುವ ಆಕೆ ಹೊಸ ಫೋಟೊಶೂಟ್‌ನಲ್ಲಿ ಮತ್ತಷ್ಟು ತೆಳ್ಳಗಾಗಿ ವಿಚಿತ್ರವಾಗಿ ಕ್ಯಾಮರಾಗೆ ಪೋಸ್ ನೀಡಿದ್ದಾಳೆ.

ಆಮಿ ಜಾಕ್ಸನ್ ತನ್ನ ಬಾಯ್‌ಫ್ರೆಂಡ್ ಎಡ್ ವೆಸ್ಟ್‌ವಿಕ್ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ತೇಲಿಬಿಟ್ಟಿದ್ದಾರೆ. ಮಾಮೂಲಿಗಿಂತ ಬಹಳ ವಿಭಿನ್ನವಾದ ಮೇಕಪ್‌ನಲ್ಲಿ ವಿಭಿನ್ನ ಲುಕ್ ಟ್ರೈ ಮಾಡಿರೋದು ಗೊತ್ತಾಗುತ್ತಿದೆ. ಮತ್ತಷ್ಟು ತೆಳ್ಳಗಾಗಿ ಕೆನ್ನೆ ಒಳಕ್ಕೆ ಹೋಗಿ 'ದಿ ವಿಲನ್' ಚಿತ್ರದಲ್ಲಿ ನಟಿಸಿದ ಚೆಲುವೆ ಈಕೇನಾ? ಎನ್ನುವಂತೆ ಆಕೆ ದರ್ಶನ ಕೊಟ್ಟಿದ್ದಾಳೆ. ಸದ್ಯ ಬ್ರಿಟೀಷ್ ಬ್ಯೂಟಿಯ ಹೊಸ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

The Villain actress Amy Jackson Leaves Fans Shocked With Pics

ಅಭಿಮಾನಿಗಳು ಆಮಿ ಹೊಸ ಲುಕ್‌ ನೋಡಿ ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ. ಕೆಲವರು ಆಮಿ, 'ಆಪೆನ್‌ಹೈಮರ್' ಚಿತ್ರದಲ್ಲಿ ನಟಿಸಿದ್ದ ಐರಿಷ್ ನಟ ಕಿಲಿಯನ್ ಮರ್ಫಿ ಲುಕ್ ಟ್ರೈ ಮಾಡಿದ್ದಾಳೆ ಎನ್ನುತ್ತಿದ್ದಾರೆ. ಸಾಕಷ್ಟು ಜನ ಈ ಬಗ್ಗೆ ಜೋಕ್‌ ಕೂಡ ಮಾಡುತ್ತಿದ್ದಾರೆ. ಕೆಲವರು ಮಾತ್ರ ಆಮಿಗೆ ಏನಾಯ್ತು? ಇಷ್ಟು ವಿಚಿತ್ರವಾಗಿ ಯಾಕೆ ಕಾಣುತ್ತಿದ್ದಾರೆ? ಅಂತ ಕೇಳುತ್ತಿದ್ದಾರೆ.

'ದಿ ಫರ್ಪೆಕ್ಟ್' ಎನ್ನುವ ಮ್ಯಾಗಜೀನ್ ಪಾರ್ಟಿಗಾಗಿ ಬಾಯ್‌ಫ್ರೆಂಡ್ ಜೊತೆ ಈ ಅವತಾರದಲ್ಲಿ ಆಮಿ ಭಾಗಿ ಆಗಿದ್ದಾರೆ. ಕೆಲವರು ಆಕೆಯ ಲುಕ್ ನೋಡಿ ಕಿಲಿಯನ್ ಮರ್ಫಿ ಫೀಮೇಲ್ ವರ್ಷನ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ತಮಿಳು ಚಿತ್ರವೊಂದರಲ್ಲಿ ಆಕೆ ನಟಿಸಿದ್ದು ಶೂಟಿಂಗ್ ಕಂಪ್ಲೀಟ್ ಆಗಿದೆ.

ಇನ್ನು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಆಮಿ ನಮ್ಮ ದೇಶದ ಬಗ್ಗೆ ಮಾಡಿದ್ದ ಪೋಸ್ಟ್ ವೈರಲ್ ಆಗಿತ್ತು. "ಮದ್ರಾಸಿಪಟ್ಟಣಂ' ಚಿತ್ರದ ಮೂಲಕ ನನಗೆ ಈ ದೇಶವನ್ನೆಲ್ಲ ಸುತ್ತುವ ಅವಕಾಶ ಸಿಕ್ಕಿತು. ಆ ಸಿನಿಮಾ ಬರಹಗಾರ ಮತ್ತು ನಿರ್ದೇಶಕ ವಿಜಯ್ ಅವರಿಗೆ ನಾನು ಸದಾ ಋಣಿ. ವಿಜಯ್ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಲು ನನಗೆ ಉತ್ತಮ ಅವಕಾಶವನ್ನು ನೀಡಿದ್ದರು. ಆ ದಿನದಿಂದ ಭಾರತವೇ ನನಗೆ 2ನೇ ಮನೆ ಎಂದು ಫಿಕ್ಸ್ ಆಗಿದ್ದೆ. ಅಲ್ಲಿನ ನನ್ನ ಸ್ನೇಹಿತರೆಲ್ಲಾ ಕುಟುಂಬ ಸದಸ್ಯರಾದರು. ಅಲ್ಲಿ ಅನುಭವ, ನನ್ನ ನೆನಪುಗಳು ಸದಾ ಮನಸ್ಸಿನಲ್ಲಿರುತ್ತದೆ. ಅದರಿಂದಲೇ ನಾನು ಇವತ್ತು ಹೀಗಿದ್ದೀನಿ. ಭಾರತದಂತಹ ದೇಶ ಇನ್ನೊಂದಿಲ್ಲ" ಎಂದು ಆಮಿ ಜಾಕ್ಸನ್ ಬರೆದುಕೊಂಡಿದ್ದರು.

More from Filmibeat

English summary
The Villain actress Amy Jackson new look Goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X