ಹಾಡು ನಿಲ್ಲಿಸಿದ ಇಂಡಿಯನ್ ಐಡಲ್ ವಿನ್ನರ್ ; 43ನೇ ವಯಸ್ಸಿನಲ್ಲಿ ಪಾತಾಳ್ ಲೋಕ್ ನಟ ನಿಧನ-ಚಿತ್ರರಂಗಕ್ಕೆ ಆಘಾತ

ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ.

ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ಇದಕ್ಕೆ ಪ್ರಶಾಂತ್ ತಮಾಂಗ್ ಅವರ ಅಕಾಲಿಕ ನಿಧನ ಮತ್ತೊಂದು ಉದಾಹರಣೆ.

The Voice of the Hills Falls Silent Indian Idol Legend Prashant Tamang Passes Away at 43

ಹೌದು, ಪ್ರಶಾಂತ್ ತಮಾಂಗ್.. ಗೂರ್ಖಾ ಸಮುದಾಯದ ಹೆಮ್ಮೆಯ ಪ್ರತೀಕ. 1983 ಜನವರಿ 4 ರಂದು ಜನ್ಮ ಪಡೆದಿದ್ದ ಪ್ರಶಾಂತ್ ತಮಾಂಗ್ ಕೋಲ್ಕತ್ತಾದಲ್ಲಿ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸಿದ್ದರು. ಸೇವೆಯಲ್ಲಿದ್ದಾಗ ಪೊಲೀಸ್ ಆರ್ಕೆಸ್ಟ್ರಾದಲ್ಲಿ ತಮ್ಮ ಚಿನ್ನದ ಕಂಠದಿಂದ ಸದ್ದು ಮಾಡಿದ್ದರು. ಹಲವರ ಹೃದಯ ಗೆದ್ದಿದ್ದರು.

ಸಹುದ್ಯೋಗಿಗಳ ಪ್ರೋತ್ಸಾಹದಿಂದ 2007ರಲ್ಲಿ ಪ್ರಸಿದ್ಧ ರಿಯಾಲಿಟಿ ಶೋ ''ಇಂಡಿಯನ್ ಐಡಲ್‌''ನ ಮೂರನೇ ಸೀಸನ್‌ನಲ್ಲಿ ಭಾಗವಹಿಸಿದ್ದ ಪ್ರಶಾಂತ್ ತಮ್ಮ ಹಾಡುಗಾರಿಕೆಯಿಂದ ಭಾರತದೆಲ್ಲೆಡೆ ಮನೆ ಮಾತಾದರು. ನೇಪಾಳಿ ಸಂಗೀತದ ಮೆರಗನ್ನು ಹೆಚ್ಚಿಸಿದರು. ಗೂರ್ಖಾ ಸಮುದಾಯದಲ್ಲಿ ಏಕತೆ ಮತ್ತು ಹೆಮ್ಮೆಯ ಭಾವನೆ ಮೂಡಿಸುವಲ್ಲಿ ಕೂಡ ಯಶಸ್ವಿಯಾದರು. ''ಇಂಡಿಯನ್ ಐಡಲ್‌''ನಲ್ಲಿ ಮೇಘಾಲಯದ ಅಮಿತ್ ಪಾಲ್ ಅವರನ್ನು ಸೋಲಿಸಿ ವಿಜೇತರಾಗಿ ಕೂಡ ಹೊರ ಹೊಮ್ಮಿದರು. ವರದಿಗಳ ಪ್ರಕಾರ, ಫಿನಾಲೆಯಲ್ಲಿ ಇವರಿಗೆ ಸುಮಾರು 7 ಕೋಟಿ ಮತಗಳು ಬಂದಿದ್ದವು.

''ಇಂಡಿಯನ್ ಐಡಲ್'' ನಂತರ ಇವರ ಬದುಕು ಬದಲಾಗಿತ್ತು. ಭಾರತದಲ್ಲಿ ಮಾತ್ರವಲ್ಲದೇ ದೇಶ ವಿದೇಶಗಳಿಗೆ ತೆರಳಿ ಸಂಗೀತ ಕಾರ್ಯಕ್ರಮವನ್ನು ಪ್ರಶಾಂತ್ ತಮಾಂಗ್ ನಡೆಸಿ ಕೊಡುತ್ತಿದ್ದರು. ಅಲ್ಲಿಯೂ ಕೂಡ ಅಪಾರ ಪ್ರಮಾಣದಲ್ಲಿ ಜನ ಬಂದು ಇವರ ಗಾಯನಕ್ಕೆ ತಲೆದೂಗುತ್ತಿದ್ದರು.

''ಗೂರ್ಖಾ ಪಲ್ಟನ್'' ಚಿತ್ರದ ಮೂಲಕ ನೇಪಾಳಿ ಚಿತ್ರರಂಗವನ್ನು ಪ್ರವೇಶ ಮಾಡಿದ್ದ ಪ್ರಶಾಂತ್ ತಮಾಂಗ್ ಅವರಿಗೆ ಮೊದಲ ಪ್ರಯತ್ನದಲ್ಲಿಯೇ ಭರ್ಜರಿ ಯಶಸ್ಸು ಸಿಕ್ಕಿತ್ತು. ಕೇವಲ ಗಾಯಕನಾಗಿ ಉಳಿಯದೇ ನಟನಾಗಿ ಕೂಡ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾದ ಪ್ರಶಾಂತ್ ತಮಾಂಗ್ ''ಪರದೇಶಿ''.. ''ಅಂಗಾಲೋ ಯೋ ಮಾಯಾ ಕೋ''.. ''ನಿಶಾನಿ''.. ಚಿತ್ರಗಳ ಮೂಲಕ ಜನ ಮನ ಗೆದ್ದರು.

The Voice of the Hills Falls Silent Indian Idol Legend Prashant Tamang Passes Away at 43

ಓಟಿಟಿ ಅಂಗಳಕ್ಕೂ ಕೂಡ ಕಾಲಿಟ್ಟಿದ್ದ ಪ್ರಶಾಂತ್ ತಮಾಂಗ್ ಅಮೆಜಾನ್ ಪ್ರೈಮ್‌ನ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾದ ''ಪಾತಾಳ್ ಲೋಕ್ 2''ರಲ್ಲಿ ಅಭಿನಯಿಸಿದ್ದರು. ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರದಲ್ಲಿರುವ ಈ ಸರಣಿಯಲ್ಲಿ ಪ್ರಶಾಂತ್ ಡೇನಿಯಲ್ ಅಚೋ ಎಂಬ ಪಾತ್ರಕ್ಕೆ ಜೀವ ತುಂಬಿದ್ದರು. ಈ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿರುವ ಸಲ್ಮಾನ್ ಖಾನ್ ಅಭಿನಯದ ''ಬ್ಯಾಟಲ್ ಆಫ್ ಗಲ್ವಾನ್'' ಚಿತ್ರದಲ್ಲಿ ಕೂಡ ಪ್ರಶಾಂತ್ ಅಭಿನಯಿಸಿದ್ದರು.

ಹೀಗೆ ಡಾರ್ಜಿಲಿಂಗ್‌ನ ಬೀದಿಯಿಂದ ಬಂದು ಭಾರತದಲ್ಲಿ ಮಾತ್ರವಲ್ಲದೇ ಹೊರ ದೇಶಗಳಲ್ಲಿ ಕೂಡ ಹೆಸರುವಾಸಿಯಾದ ಪ್ರಶಾಂತ್ ತಮಾಂಗ್ ಇಂದು (ಜನವರಿ 11) ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಪಾರ್ಶ್ವವಾಯುಗೆ ತುತ್ತಾಗಿದ್ದ 43 ವರ್ಷದ ಪ್ರಶಾಂತ್ ದೆಹಲಿಯಲ್ಲಿ ತಮ್ಮ ನಿವಾಸದಲ್ಲಿ ಕುಸಿದು ಬಿದ್ದಿದ್ದಾರೆ. ಹೃದಯಾಘಾತದಿಂದ ಕುಸಿದು ಬಿದ್ದ ಪ್ರಶಾಂತ್ ಅವರನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಲಾಯ್ತಾದರು ಕೂಡ ಬದುಕುಳಿಯಲಿಲ್ಲ. ಪ್ರಶಾಂತ್ ತಮಂಗ್ ಪತ್ನಿ ಗೀತಾ ಥಾಪಾ ಮತ್ತು ಪುಟ್ಟ ಮಗಳನ್ನು ಅಗಲಿದ್ದಾರೆ.

ಪ್ರಶಾಂತ್ ತಮಾಂಗ್ ಅವರ ನಿಧನಕ್ಕೆ ಚಿತ್ರರಂಗದವರು ಕಂಬನಿ ಮಿಡಿದಿದ್ದು ಡಾರ್ಜಿಲಿಂಗ್‌ನ ಸಂಸತ್ ಸದಸ್ಯ ಮತ್ತು ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜು ಬಿಸ್ತಾ ಕೂಡ ಸಂತಾಪ ಸೂಚಿಸಿದ್ದಾರೆ. ಇಂತಹ ಪ್ರತಿಭಾವಂತ ವ್ಯಕ್ತಿಯನ್ನು ಚಿಕ್ಕ ವಯಸ್ಸಿನಲ್ಲೇ ಭಾರತದ ಸಂಗೀತ ಲೋಕ ಮತ್ತು ಚಿತ್ರರಂಗ ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ಪ್ರಶಾಂತ್ ತಮಾಂಗ್ ಅವರ ಸಾವು ಗೂರ್ಖಾ ಸಮುದಾಯಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ಹೇಳಿದ್ದಾರೆ. ''ಇಂಡಿಯನ್ ಐಡಲ್‌'' ಸೀಸನ್ 3ರ ರನ್ನರ್ ಅಪ್ ಅಮಿತ್ ಪಾಲ್ ಕೂಡ ಕಂಬನಿ ಮಿಡಿದಿದ್ದಾರೆ.

More from Filmibeat

English summary
Tragedy strikes as Indian Idol star Prashant Tamang dies at 43 in Delhi. Read the full details on the sudden passing of the beloved singer and actor.
Read more about: death singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X