For Quick Alerts
  ALLOW NOTIFICATIONS  
  For Daily Alerts

  ಪೈರಸಿ ಸಿನಿಮಾ ಪ್ರದರ್ಶನಕ್ಕೆ ಮುಂದಾದ ಚಿತ್ರಮಂದಿರ! ದೂರು ನೀಡಿದ ಚಿತ್ರತಂಡ

  |

  ಪೈರಸಿ ಎಂಬುದು ದಿನೇ-ದಿನೇ ಹೆಚ್ಚಾಗುತ್ತಲೇ ಸಾಗುತ್ತಿದೆ. ಚಿತ್ರಮಂದಿರಗಳಿದ್ದಾಗ ಸಣ್ಣ ಪ್ರಮಾಣದಲ್ಲಿದ್ದ ಪೈರಸಿ ಭೂತ, ಒಟಿಟಿಗಳ ಜಮಾನಾದಲ್ಲಿ ಬೃಹತ್ತಾಗಿ ಬೆಳೆದಿದೆ. ಒಟಿಟಿಗಳಿಗೆ ಬಿಡುಗಡೆ ಆಗುವ ಸಿನಿಮಾಗಳು, ಬಿಡುಗಡೆ ಆದ ಕೆಲವೇ ನಿಮಿಷಗಳಲ್ಲಿ ಪೈರಸಿ ಆಗಿ ಹಲವಾರು ಮೊಬೈಲ್‌ ಆಪ್‌ಗಳಲ್ಲಿ, ವೆಬ್‌ಸೈಟ್‌ಗಳಲ್ಲಿ ಒಳ್ಳೆಯ ಗುಣಮಟ್ಟದಲ್ಲಿಯೇ ಲಭ್ಯವಾಗುತ್ತಿವೆ.

  ಪೈರಸಿ ಭೂತದ ವಿರುದ್ಧ ಉರಿದು ಬೆಂಕಿಯಾಗುತ್ತಿದ್ದ ಚಿತ್ರಮಂದಿರಗಳೇ ಈಗ ಪೈರಸಿ ಸಿನಿಮಾ ಪ್ರದರ್ಶನ ಮಾಡುವಂತಾಗಿದೆ ಪರಿಸ್ಥಿತಿ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ.

  ನಾಸಿಕ್‌ನ ಚಿತ್ರಮಂದಿರವೊಂದು ಡಿಸೆಂಬರ್ 25 ರಂದು ತಮ್ಮ ಚಿತ್ರಮಂದಿರದಲ್ಲಿ ವರುಣ್ ಧವನ್, ಸಾರಾ ಅಲಿ ಖಾನ್ ನಟನೆಯ 'ಕೂಲಿ ನಂ 1' ಸಿನಿಮಾ ಪ್ರದರ್ಶಿಸುವುದಾಗಿ ಪೋಸ್ಟರ್‌ಗಳನ್ನು ಅಂಟಿಸಿದೆ. ವಿಶೇಷವೆಂದರೆ 'ಕೂಲಿ ನಂ 1' ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಲೇ ಇಲ್ಲ.

  ಅಮೆಜಾನ್‌ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ ಸಿನಿಮಾ

  ಅಮೆಜಾನ್‌ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ ಸಿನಿಮಾ

  'ಕೂಲಿ ನಂ 1' ಡಿಸೆಂಬರ್ 25 ರಂದು ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಆದರೆ ಅದೇ ಸಿನಿಮಾವನ್ನು ಅದೇ ದಿನ ಬೆಳಿಗ್ಗೆಯಿಂದಲೇ ಚಿತ್ರಮಂದಿರದಲ್ಲಿ ಪ್ರದರ್ಶಿಸುವುದಾಗಿ ಹೇಳಿಕೊಂಡಿದೆ ನಾಸಿಕ್‌ ನ ಮುಸಲ್ಗೋನ್ ನಲ್ಲಿರುವ ಸಾಯಿ ಸಮರ್ಥ್ ಚಿತ್ರಮಂದಿರ.

  ಪೈರಸಿ ಸಿನಿಮಾ ಪ್ರದರ್ಶಿಸಲು ಮುಂದಾಗಿರುವ ಚಿತ್ರಮಂದಿರ

  ಪೈರಸಿ ಸಿನಿಮಾ ಪ್ರದರ್ಶಿಸಲು ಮುಂದಾಗಿರುವ ಚಿತ್ರಮಂದಿರ

  ಚಿತ್ರಮಂದಿರದವರ ಉದ್ದೇಶ ಸ್ಪಷ್ಟ, ಅಮೆಜಾನ್‌ನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಅದರ ಉತ್ತಮ ಗುಣಮಟ್ಟದ ಪೈರಸಿ ಹೊರಬೀಳುತ್ತದೆ. ಕೆಲವೇ ರೂಪಾಯಿಗಳು ಖರ್ಚು ಮಾಡಿದರೆ ದೊರಕಿಬಿಡುವ ಪೈರಸಿ ಸಿನಿಮಾವನ್ನು ಡೌನ್‌ಲೋಡ್‌ ಮಾಡಿಕೊಂಡು, ತಮ್ಮ ಚಿತ್ರಮಂದಿರದಲ್ಲಿ ದೊಡ್ಡ ಪರದೆಯಲ್ಲಿ ಪ್ರದರ್ಶಿಸುವ ಸ್ಕೀಮ್‌ ಹಾಕಿದ್ದಾರೆ ಈ ಚಿತ್ರಮಂದಿರದ ಮಾಲೀಕರು.

  ಚಿತ್ರತಂಡದಿಂದ ಪೊಲೀಸರಿಗೆ ದೂರು

  ಚಿತ್ರತಂಡದಿಂದ ಪೊಲೀಸರಿಗೆ ದೂರು

  ಸಾಯಿ ಸಮರ್ಥ್ ಚಿತ್ರಮಂದಿರದ ಪೋಸ್ಟರ್‌ಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಚಿತ್ರತಂಡಕ್ಕೆ ವಿಷಯ ಗಮನಕ್ಕೆ ಬರುತ್ತಿದ್ದಂತೆ, ಮುಸಲ್ಗೋನ್ ನ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದು, ಮೇಲ್‌ ಮೂಲಕ ದೂರು ಸಹ ಸಲ್ಲಿಸಿದ್ದಾರೆ.

  ಒಟ್ಟಿಗೆ ಕಾಣಿಸಿಕೊಂಡ ಶಿವಣ್ಣ, ಸುದೀಪ್, ಸಿಂಪಲ್ ಸುನಿ | Filmibeat Kannada
  ಹಳೆಯ ಸಿನಿಮಾಕ್ಕೆ ಹೊಸ ರೂಪ

  ಹಳೆಯ ಸಿನಿಮಾಕ್ಕೆ ಹೊಸ ರೂಪ

  'ಕೂಲಿ ನಂ 1' ಸಿನಿಮಾವನ್ನು ವರುಣ್ ಧವನ್ ತಂದೆ ಡೇವಿಡ್ ಧವನ್ ನಿರ್ದೇಶಿಸುತ್ತಿದ್ದಾರೆ. ನಾಯಕಿಯಾಗಿ ಸಾರಾ ಅಲಿ ಖಾನ್, ನಾಯಕನಾಗಿ ವರುಣ್ ಧವನ್ ನಟಿಸಿದ್ದಾರೆ. 1995 ರಲ್ಲಿ ಇದೇ ಹೆಸರಿನ ಸಿನಿಮಾ ಬಿಡುಗಡೆ ಆಗಿತ್ತು, ಅದನ್ನೂ ಡೇವಿಡ್ ಧವನ್ ನಿರ್ದೇಶಿಸಿದ್ದರು. ಅದರಲ್ಲಿ ಗೋವಿಂದಾ ಹಾಗೂ ಕರಿಶ್ಮಾ ಕಪೂರ್ ನಟಿಸಿದ್ದರು. ಅದೇ ಸಿನಿಮಾದ ಆಧುನಿಕ ರೂಪ ಈ 'ಕೂಲಿ ನಂ 1' ಸಿನಿಮಾ.

  English summary
  Sai Samarth theater trying to show pirated movie in theater. Cooli no1 movie is releasing on Amazon prime, but theater advertising that they will show the movie in theater.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X