ಮಹಾರಾಷ್ಟ್ರದಲ್ಲಿ ಚಿತ್ರಮಂದಿರ ಬಂದ್: ಸಂಕಷ್ಟಕ್ಕೆ ಸಿಲುಕಿದ 14 ಸಿನಿಮಾಗಳು
ಭಾರತೀಯ ಸಿನಿಮಾದ ಹೃದಯ ಎಂದು ಕರೆಯಲಾಗುವ ಮುಂಬೈನಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯವು ಇಂದು ಹೊರಡಿಸಿರುವ ಆದೇಶದಂತೆ ಮುಂಬೈ ಸೇರಿದಂತೆ ರಾಜ್ಯದಾದ್ಯಂತ ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್‌ಗಳನ್ನು ಬಂದ್ ಮಾಡಲಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಈ ನಿರ್ಣಯ ತೆಗೆದುಕೊಂಡಿದೆ ಸರ್ಕಾರ.
ಮಹಾರಾಷ್ಟ್ರ ಸರ್ಕಾರದ ಈ ಹಠಾತ್ ನಿರ್ಣಯದಿಂದ ಬಾಲಿವುಡ್ ಆತಂಕಕ್ಕೆ ಸಿಲುಕಿದೆ. ಕೆಲವು ದಿನಗಳ ಹಿಂದಿನ ವರೆಗೆ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದವು, ಕೆಲವು ದಿನಗಳ ಹಿಂದಷ್ಟೆ 50% ಸೀಟುಗಳನ್ನಷ್ಟೆ ಭರ್ತಿ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶಿಸಿತು. ಈಗ ಚಿತ್ರಮಂದಿರಗಳನ್ನೇ ಬಂದ್ ಮಾಡಿದೆ.
ಏಪ್ರಿಲ್ ತಿಂಗಳಲ್ಲಿ ಕೆಲವು ಸೂಪರ್ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗುವುದರಲ್ಲಿದ್ದವು. ಅವೆಲ್ಲವೂ ಅನಿವಾರ್ಯವಾಗಿ ಮುಂದಕ್ಕೆ ಹೋಗಲಿವೆ. ಯಾವ-ಯಾವ ಹಿಂದಿ ಸಿನಿಮಾಗಳು ಏಪ್ರಿಲ್‌ನಲ್ಲಿ ಬಿಡುಗಡೆ ಆಗಲು ತಯಾರಾಗಿದ್ದವು. ಯಾವ ಸಿನಿಮಾಗಳು ಮುಂದೂಡಲ್ಪಡುತ್ತವೆ ಎಂಬ ಪಟ್ಟಿ ಇಲ್ಲಿದೆ.

'ಸೂರ್ಯವಂಶಿ'ಯ ಟೈಮೇ ಸರಿಯಿಲ್ಲ!
ಅಕ್ಷಯ್ ಕುಮಾರ್ ನಟನೆಯ 'ಸೂರ್ಯವಂಶಿ' ಸಿನಿಮಾವು ಏಪ್ರಿಲ್ 30 ಕ್ಕೆ ಬಿಡುಗಡೆ ಆಗುವುದಕ್ಕೆ ರೆಡಿಯಾಗಿತ್ತು. ಆದರೆ ಸರ್ಕಾರದ ಹೊಸ ಆದೇಶದಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿರುವ ಈ ಸಿನಿಮಾದ ಬಿಡುಗಡೆ ಈಗಾಗಲೇ ಎರಡು ಬಾರಿ ಮುಂದೂಡಿಕೆಯಾಗಿದೆ.

ಕಂಗನಾ ರನೌತ್ ಸಿನಿಮಾ ಬಿಡುಗಡೆ ಆಗಬೇಕಿತ್ತು
ಕಂಗನಾ ರನೌತ್ ನಟನೆಯ 'ತಲೈವಿ' ಸಿನಿಮಾ ಇದೇ ತಿಂಗಳ 23 ರಂದು ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿತ್ತು. ಆದರೆ ಈಗ ಚಿತ್ರಮಂದಿರಗಳು ಬಂದ್ ಆಗಿರುವ ಕಾರಣ ಸಿನಿಮಾ ಬಿಡುಗಡೆ ಮುಂದೂಡಿಕೆ ಆಗಲಿದೆ. ಆದರೆ ಇದೇ ಸಿನಿಮಾದ ತಮಿಳು, ತೆಲುಗು ವರ್ಷನ್‌ಗಳ ಬಿಡುಗಡೆ ಸಹ ಮುಂದೂಡಲ್ಪಡುತ್ತದೆಯೇ ಇಲ್ಲವೆ ಎಂಬ ಬಗ್ಗೆ ಚಿತ್ರತಂಡ ಮಾಹಿತಿ ನೀಡಬೇಕಿದೆ.

ಸೈಫ್ ಅಲಿ ಖಾನ್ ನಟನೆಯ ಸಿನಿಮಾಕ್ಕೂ ಇದೇ ಗತಿ
ರಾಣಿ ಮುಖರ್ಜಿ, ಸೈಫ್ ಅಲಿ ಖಾನ್, ಸಿದ್ಧಾರ್ಥ್ ಚತುರ್ವೇದಿ, ಶರ್ವರಿ ನಟಿಸಿರುವ 'ಬಂಟಿ ಔರ್ ಬಬ್ಲಿ 2' ಸಿನಿಮಾ ಏಪ್ರಿಲ್ 15 ಕ್ಕೆ ಬಿಡುಗಡೆ ಆಗಬೇಕಿತ್ತು. ಸೂಪರ್ ಹಿಟ್ ಸಿನಿಮಾ 'ಬಂಟಿ ಔರ್ ಬಬ್ಲಿ'ಯ ಸೀಕ್ವೆಲ್ ಆದ ಈ ಸಿನಿಮಾ ಬಗ್ಗೆ ನಿರೀಕ್ಷೆಗಳಿತ್ತು, ಆದರೆ ಈಗ ಈ ಸಿನಿಮಾ ಅಡಕತ್ತರಿಗೆ ಸಿಲುಕಿದೆ.

ವಿಕ್ಕಿ ಕೌಶಲ್ ಸಿನಿಮಾ ಬಿಡುಗಡೆ ಆಗುವುದಿತ್ತು
ವಿಕ್ಕಿ ಕೌಶಲ್ ನಟನೆಯ 'ಸರ್ದಾರ್ ಉದ್ಧಮ್ ಸಿಂಗ್' ಸಿನಿಮಾ ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಬಿಡುಗಡೆ ಆಗಲಿಲ್ಲ. ಈ ಏಪ್ರಿಲ್ 15 ಕ್ಕೆ ಸಿನಿಮಾ ಬಿಡುಗಡೆಗೆ ನಿರ್ಣಯಿಸಲಾಗಿತ್ತು. ಆದರೆ ಈ ಸಿನಿಮಾ ಸಹ ಮುಂದೂಡಲ್ಪಡಲಿದೆ. ಅಂದಹಾಗೆ ವಿಕ್ಕಿ ಕೌಶಲ್‌ಗೆ ಕೊರೊನಾ ಪಾಸಿಟಿವ್ ಆಗಿದೆ.

ಎ.ಆರ್.ರೆಹಮಾನ್ ಮೊದಲ ಪ್ರಯತ್ನದ ಸಿನಿಮಾ '99 ಸಾಂಗ್ಸ್'
ಎ.ಆರ್.ರೆಹಮಾನ್ ಕತೆ ಬರೆದು ನಿರ್ಮಾಣ ಸಹ ಮಾಡಿರುವ ಸಿನಿಮಾ '99 ಸಾಂಗ್ಸ್' ಇದೇ ಏಪ್ರಿಲ್ 16 ರಂದು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಈಗ ಈ ಸಿನಿಮಾದ ಬಿಡುಗಡೆ ಮುಂದೂಡಲ್ಪಡಲಿದೆ. ಆದರೆ ಇದೇ ಸಿನಿಮಾದ ತೆಲುಗು, ತಮಿಳು ವರ್ಷನ್‌ಗಳು ಬಿಡುಗಡೆ ಆಗುತ್ತವೆಯೇ ಕಾದುನೋಡಬೇಕಿದೆ.
Recommended Video

ಇನ್ನೂ ಹಲವು ಸಿನಿಮಾಗಳು ಬಿಡುಗಡೆ ಆಗಲಿದ್ದವು
ಇವುಗಳ ಹೊರತಾಗಿ, 'ಹಲೋ ಚಾರ್ಲಿ', 'ಹಲೋ ಕೌನ್', 'ಆ ಭಿ ಜಾವ್ ಓ ಪಿಯಾ', 'ಬಬ್ಲೂ ಬ್ಯಾಚುಲರ್', 'ಮೇರಿ ದೇಶ್ ಕಿ ದರ್ತಿ', 'ಗಾಲಿಬ್', 'ರೋಸಿ' ಹಿಂದಿ ಸಿನಿಮಾಗಳು ಇದೇ ತಿಂಗಳು ಬಿಡುಗಡೆ ಆಗಲಿದ್ದವು. ಹಿಂದಿ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಮಹಾರಾಷ್ಟ್ರ ಆದರೆ ಈಗ ಆ ರಾಜ್ಯದಲ್ಲಿಯೇ ಚಿತ್ರಮಂದಿರಗಳು ಬಂದ್ ಆಗಿವೆ.


Click it and Unblock the Notifications











