ಅಕ್ಟೋಬರ್ 1 ರಿಂದ ಒಂದು ರಾಜ್ಯದಲ್ಲಿ ಮಾತ್ರ ಚಿತ್ರಮಂದಿರ ಪುನರಾರಂಭ

ದೇಶದಾದ್ಯಂತ ಚಿತ್ರಮಂದಿರಗಳು ಬಂದ್ ಆಗಿ ಏಳು ತಿಂಗಳ ಮೇಲಾದವು. ಕರ್ನಾಟಕದಲ್ಲಿ ಸಹ ಮಾರ್ಚ್‌ ತಿಂಗಳಿಂದಲೂ ಚಿತ್ರಮಂದಿರಗಳು ತೆರೆದಿಲ್ಲ. ಆದರೆ ಇನ್ನೂ ಸಹ ಚಿತ್ರಮಂದಿರ ತೆರೆಯುವ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಸಿಕ್ಕಿಲ್ಲ.

ಕೇಂದ್ರವು ಚಿತ್ರಮಂದಿರಗಳನ್ನು ತೆರೆಯುವ ಬಗ್ಗೆ ಸೂಚನೆ ನೀಡದೇ ಇದ್ದರೂ ಸಹ ಒಂದು ರಾಜ್ಯ ಮಾತ್ರ ಅಕ್ಟೋಬರ್ ಒಂದರಿಂದ ಚಿತ್ರಮಂದಿರಗಳನ್ನು ತೆರೆಯುವಂತೆ ಆದೇಶ ಹೊರಡಿಸಿದೆ.

ಹೌದು, ಮಮತಾ ಬ್ಯಾನರ್ಜಿ ಸಿಎಂ ಆಗಿರುವ ಪಶ್ಚಿಮ ಬಂಗಾಳದಲ್ಲಿ ಅಕ್ಟೋಬರ್ 1 ರಿಂದ ಚಿತ್ರಮಂದಿರಗಳು ಪುನಃ ಕಾರ್ಯಾರಂಭ ಮಾಡಲಿವೆ. ಹೀಗೆಂದು ಸರ್ಕಾರವೇ ಆದೇಶ ಹೊರಡಿಸಿದೆ.

ಅಕ್ಟೋಬರ್ 1 ರಿಂದ ಚಿತ್ರಮಂದಿರ ಓಪನ್: ಮಮತಾ ಬ್ಯಾನರ್ಜಿ

ಅಕ್ಟೋಬರ್ 1 ರಿಂದ ಚಿತ್ರಮಂದಿರ ಓಪನ್: ಮಮತಾ ಬ್ಯಾನರ್ಜಿ

ಶನಿವಾರ ಮಾತನಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, 'ಅಕ್ಟೋಬರ್ 1 ರಿಂದ ರಾಜ್ಯದ ಚಿತ್ರಮಂದಿರಗಳು ಕಾರ್ಯಾರಂಭ ಮಾಡಬಹುದು' ಎಂದಿದ್ದಾರೆ. ಚಿತ್ರಮಂದಿರಗಳು ಕಾರ್ಯಾರಂಭ ಮಾಡುವ ಮುನ್ನಾ ಪೂರ್ಣ ಸ್ಯಾನಿಟೈಸ್ ಆಗಬೇಕಿವೆ. ಜೊತೆಗೆ ಕೆಲವು ನಿಯಮಗಳನ್ನು ಪಾಲಿಸಬೇಕಿವೆ.

ಮನೊರಂಜನಾತ್ಮಕ ಕಾರ್ಯಕ್ರಮ ಆಯೋಜನೆಗೆ ಒಪ್ಪಿಗೆ

ಮನೊರಂಜನಾತ್ಮಕ ಕಾರ್ಯಕ್ರಮ ಆಯೋಜನೆಗೆ ಒಪ್ಪಿಗೆ

ಚಿತ್ರಮಂದಿರಗಳು ಮಾತ್ರವೇ ಅಲ್ಲದೆ, ಸಂಗೀತ, ನೃತ್ಯ ಕಾರ್ಯಕ್ರಮಗಳು, ಇನ್ನಿತರೆ ಮನೊರಂಜನಾತ್ಮಕ ಕಾರ್ಯಕ್ರಮಗಳ ಆಯೋಜನೆ ಸಹ ಮಾಡಲು ಅಕ್ಟೋಬರ್‌ 1ರಿಂದ ಅವಕಾಶ ನೀಡಲಾಗಿದೆ. ಜಾತ್ರೆ, ರಥೋತ್ಸವಗಳಿಗೂ ಅನುಮತಿ ನೀಡಲಾಗಿದೆ.

ಸೀಟುಗಳ ನಡುವೆ ಅಂತರ ಇಟ್ಟು ಪ್ರೇಕ್ಷಕರು ಕೂರಬೇಕು

ಸೀಟುಗಳ ನಡುವೆ ಅಂತರ ಇಟ್ಟು ಪ್ರೇಕ್ಷಕರು ಕೂರಬೇಕು

ಪ.ಬಂಗಾಳದಲ್ಲಿ ಚಿತ್ರಮಂದಿರಗಳು ತೆರೆದರೂ ಸಹ ಕೇವಲ 50 ಮಂದಿಗೆ ಅಷ್ಟೆ ಕೂರಲು ಅವಕಾಶ ನೀಡಲಾಗಿದೆ. ದೊಡ್ಡ ಚಿತ್ರಮಂದಿರವಾಗಿದ್ದಲ್ಲಿ ಸೀಟಿನ ನಡುವೆ ಅಂತರ ಬಿಟ್ಟು ಕೂರಲು ಪ್ರೇಕ್ಷಕನಿಗೆ ಕೂರಲು ಅವಕಾಶ ನೀಡಲಾಗಿದೆ.

Recommended Video

ಸಚಿವರ ಕೆಟ್ಟ ಅಂತ್ಯಕ್ರಿಯೆ ನೋಡಿ ಕಂಬನಿ ಮಿಡಿದ ಜಗ್ಗೇಶ್ | Filmibeat Kannada
ರಾಜ್ಯದಲ್ಲಿ ಚಿತ್ರಮಂದಿರಗಳು ತೆರೆಯಬಹುದೇ?

ರಾಜ್ಯದಲ್ಲಿ ಚಿತ್ರಮಂದಿರಗಳು ತೆರೆಯಬಹುದೇ?

ದೇಶದಾದ್ಯಂತ ಮಾರ್ಚ್‌ ತಿಂಗಳಿಂದ ಚಿತ್ರಮಂದಿರಗಳು ಬಂದ್ ಆಗಿವೆ. ರಾಜ್ಯದಲ್ಲೂ ಸಹ ಚಿತ್ರಮಂದಿರಗಳು ಬಂದ್ ಆಗಿವೆ. ಸಿನಿಮಾ ಪ್ರಮುಖರು ಸಿಎಂ ಅನ್ನು ಭೇಟಿ ಮಾಡಿ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೇಳಿದ್ದಾರಾದರೂ ಆ ಬಗ್ಗೆ ಸಿಎಂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ.

More from Filmibeat

English summary
Movie theaters will re Open in West Bengal state from October 1. CM Mamata Banerjee says all music, dance, Jatra any other programs can be organized.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X