ಅಂದು ಗುಂಡು ಗುಂಡಾಗಿದ್ದ ಈ ಚೆಲುವೆ ಇಂದು ಬಳಕುವ ಬಳ್ಳಿಯಂತೆ ಆಗಿದ್ಹೇಗೆ...?

ಲಕ್ ಅಂದ್ರೆ ಇದೇ ಇರಬೇಕು. ಅಭಿನಯಿಸಿದ ಚಿತ್ರವೊಂದು ಬ್ಲಾಕ್ ಬಸ್ಟರ್ ಆದರೆ ಸಾಕು ಹಣದ ಮಳೆ ಬೀಳುತ್ತೆ, ಹೇಗೋ ಇದ್ದ ಬದುಕು ಇನ್ನ್ಹೇಗೋ ಬದಲಾಗುತ್ತೆ ಎಂಬುದಕ್ಕೆ ತೃಪ್ತಿ ದಿಮ್ರಿ ಅತ್ಯುತ್ತಮ ಉದಾಹರಣೆ.

ಹೌದು, ಅನಿಮಲ್ ಚಿತ್ರದಲ್ಲಿ ಬೆತ್ತಲೆಯಾಗುವ ಮೂಲಕ ಪಡ್ಡೆಹುಡುಗರ ಪಾಲಿನ ಕನಸಿನ ಕನ್ಯೆಯಾಗಿರುವ ತೃಪ್ತಿ ದಿಮ್ರಿ ಸದ್ಯ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಬ್ಯಾಡ್ ನ್ಯೂಸ್‌' ಚಿತ್ರಕ್ಕೆ ಸಿಕ್ಕ ರೆಸ್ಫಾನ್ಸ್‌ನಿಂದ ಪುಳಕಿತಗೊಂಡಿದ್ದಾರೆ. ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ.

Then VS Now Triptii Dimri s transformation over time has sparked discussion online

ಇಂಥಾ ತೃಪ್ತಿ ತಮ್ಮ ಅಂದವನ್ನೂ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಾ ಅನ್ನುವ ಅನುಮಾನ ಈಗ ಅನೇಕರನ್ನು ಕಾಡುತ್ತಿದೆ. ಇದಕ್ಕೆ ವೈರಲ್ ಆಗಿರುವ ತೃಪ್ತಿ ದಿಮ್ರಿಯ ಹಳೆಯ ಫೋಟೋಗಳು ಒಂದು ಕಾರಣವಾದರೆ, ಸ್ವಯಂ ಘೋಷಿತ ಪ್ಲಾಸ್ಟಿಕ್ ಸರ್ಜರಿಯ ವೈದ್ಯ ಡಾ.ಮಿಥುನ್ ಪಾಂಚಾಲ್ ತೃಪ್ತಿ ದಿಮ್ರಿಯ ಕುರಿತು ಮಾಡಿರುವ ವಿಡಿಯೋ ಮತ್ತೊಂದು ಕಾರಣ.

ಹೌದು, ಅಸಲಿಗೆ.. ತಾರೆಯರಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಎಂದು ಗೊತ್ತಾದ ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ತೃಪ್ತಿ ದಿಮ್ರಿ ಕೂಡ ಈ ಸಾಲಿಗೆ ಸೇರಿರುವ ಹೀರೋಯಿನ್ನಾ ಗೊತ್ತಿಲ್ಲ.

Then VS Now Triptii Dimri s transformation over time has sparked discussion online

ಆದರೆ.. ಇವರ ಪುರಾತನ ಕಾಲದ ಫೋಟೋಗಳ ಮೇಲೆ ಕಣ್ಣಾಡಿಸಿದರೆ ಯಾರಿಗಾದರೂ ಈ ಅನುಮಾನ ಕಾಡದೇ ಇರಲ್ಲ. ಯಾಕೆಂದರೆ.. ಇವತ್ತು ಬಳುಕುವ ಬಳ್ಳಿಯಂತೆ ಇರುವ ತೃಪ್ತಿ ಈ ಹಿಂದೆ ಮೈ ಕೈ ತುಂಬಿಕೊಂಡು ಗುಂಡು ಗುಂಡಾಗಿದ್ದರು. ಆದರೆ ಈಗ ತೃಪ್ತಿ ಮುಖದಲ್ಲಿ ವ್ಯಾಪಕ ಬದಲಾವಣೆಗಳಾಗಿವೆ. ಇದಕ್ಕೆ ಪೂರಕವಾಗಿ ಡಾ.ಮಿಥುನ್ ಪಾಂಚಾಲ್ ಕೂಡ ವಿಡಿಯೋವೊಂದನ್ನು ಮಾಡಿದ್ದಾರೆ. ತೃಪ್ತಿ ಮುಖ ಚಹರೆಯಲ್ಲಿ ಆದ ವ್ಯತ್ಯಾಸಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.

ತಮ್ಮ ಮೂಗು ಮತ್ತು ಹುಬ್ಬುಗಳ ಸುತ್ತ ಮುತ್ತ ಸರ್ಜರಿ ಮೂಲಕ ಕೆಲ ಬದಲಾವಣೆಯನ್ನು ಮಾಡಿಕೊಂಡಿರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸಿರುವ ಡಾ.ಮಿಥುನ್, ಇದು ಕೇವಲ ನನ್ನ ಅಭಿಪ್ರಾಯವಷ್ಟೇ, ತೃಪ್ತಿ ನಿಜವಾಗಿಯೂ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಹೇಳಲು ಸಾಧ್ಯ ಇಲ್ಲ ಎಂದು ಹೇಳುವುದನ್ನೂ ಮರೆತಿಲ್ಲ.

ಇನ್ನೂ.. ತೃಪ್ತಿಯ ಹಳೆಯ ಭಾವ ಚಿತ್ರ ಮತ್ತು ಡಾ ಮಿಥುನ್ ಅವರ ವಿಡಿಯೋ, ಎರಡು ವೈರಲ್ ಆದ ಬೆನ್ನಲ್ಲಿಯೇ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುವ ಅನೇಕರು, ಮೊನ್ನೆಯವರೆಗೆ ನಾವು ತೃಪ್ತಿ ಅವರದ್ದು ಸಹಜ ಸೌಂದರ್ಯ ಎಂದುಕೊಂಡಿದ್ದೇವು, ಆದರೆ.. ಇವರು ಕೂಡ ಪ್ಲಾಸ್ಟಿಕ್ ಚೆಲುವೆಯಾಗಿರಬಹುದು ಎಂದು ಕನಸು ಮನಸಿನಲ್ಲಿ ಕೂಡ ಊಹಿಸಿರಲಿಲ್ಲ ಎನ್ನುತ್ತಿದ್ದಾರೆ.

ಕೇವಲ ಹುಬ್ಬು ಮಾತ್ರ ಅಲ್ಲ ಮೊದಲು ಮತ್ತು ಈಗಿನ ಕಣ್ಣುಗಳಲ್ಲಿ ಕೂಡ ಸಾಕಷ್ಟು ವ್ಯತ್ಯಾಸ ಇದೆ ಎಂದಿದ್ದಾರೆ. ಮೊದಲಿದ್ದ ಮುಖಕ್ಕೂ ಈಗಿನ ಮುಖಕ್ಕೂ ಇಷ್ಟೊಂದು ವ್ಯತ್ಯಾಸ ಇರಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಅನೇಕರು ಮಾಡುತ್ತಿದ್ದಾರೆ.

Then VS Now Triptii Dimri s transformation over time has sparked discussion online

ಒಟ್ನಲ್ಲಿ ತೃಪ್ತಿ ದಿಮ್ರಿಯ ಹಳೆಯ ಫೋಟೋಗಳನ್ನೂ ನೋಡಿ ಬೆಕ್ಕಸ ಬೆರಗಾಗಿರುವ ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು ಅನಿಮಲ್ ಚಿತ್ರದ ನಾಯಕಿಯ ಅಂದಿನ ಮತ್ತು ಇಂದಿನ ಫೋಟೋವನ್ನ ಅಕ್ಕ-ಪಕ್ಕ ಇಟ್ಟು ಈಗ ಹೋಲಿಕೆ ಮಾಡಲು ಶುರು ಮಾಡಿದ್ದಾರೆ. ಈ ಫೋಟೋಗಳಲ್ಲಿರುವ ವ್ಯತ್ಯಾಸಗಳನ್ನ ಗುರುತಿಸಿ ಎಂದು ಬುದ್ದಿವಂತಿಕೆಗೆ ಸವಾಲು ಹಾಕುತ್ತಿದ್ದಾರೆ. ನಿಜಾ ಹೇಳಿ ನಿಮ್ಮ ಮುಖದಲ್ಲಿನ ಬದಲಾವಣೆಗೆ ಕಾರಣವೇನು ಎಂಬ ಪ್ರಶ್ನೆಯನ್ನೂ ಕೂಡ ನೇರಾನೇರವಾಗಿಯೇ ತೃಪ್ತಿಗೆ ಕೇಳುತ್ತಿದ್ದಾರೆ. ನಾಯಕಿಯಾಗುವ ಆಸೆ ಮತ್ತು ಕನಸು ತೃಪ್ತಿಯ ಸಹಜ ಸೌಂದರ್ಯವನ್ನೇ ಹಾಳು ಗೆಡವಿದೆ ಎಂಬ ವಾದವನ್ನೂ ಮಾಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X