₹10,000 ಕೋಟಿ ಒಡೆಯನಿಗೆ ಡಿವೋರ್ಸ್ ಕೊಡ್ತಾರಾ ಖ್ಯಾತ ನಟಿ ?
ಕಾಲ ಎಷ್ಟೇ ಬದಲಾದರು ಇವತ್ತು ಕೂಡ ಅದೂ-ಇದೂ ಎಂದು ಮಾತನಾಡುವರ ಸಂಖ್ಯೆ ಕಡಿಮೆಯಾಗಿಲ್ಲ. ತಮಗೆ ಸಂಬಂಧ ಇಲ್ಲದ ವಿಚಾರದ ಕುರಿತು ಹಲವಾರು ಜನ ಇವತ್ತು ಕೂಡ ಮಾತನಾಡುತ್ತಲೇ ಇರುತ್ತಾರೆ. ಅದರಲ್ಲಿಯೂ ಚಿತ್ರರಂಗದ ತಾರೆಯರ ವ್ಯೆಯಕ್ತಿಕ ಬದುಕಿನ ಕುರಿತು ಹಲವರಲ್ಲಿ ವಿಚಿತ್ರ ಕುತೂಹಲ ಇರುತ್ತೆ. ಇವರ ಕುರಿತು ಚರ್ಚೆ ಮಾಡುವುದು ಅಂದರೆ ಹಲವರಿಗೆ ಎಲ್ಲಿಲ್ಲದ ಖುಷಿ.
ಇದಕ್ಕೆ ಪೂರಕವಾಗಿ ಬಹುತೇಕ ಸೆಲೆಬ್ರಿಟಿಗಳ ಖಾಸಗಿ ಬದುಕು ಹಳಿ ತಪ್ಪಿರುತ್ತೆ. ಚರ್ಚಿತ ವಿಷಯವಾಗುತ್ತೆ. ಆಡಿಕೊಳ್ಳೋರ ಬಾಯಿಗೆ ಆಹಾರವಾಗುತ್ತೆ. ಅದರಲ್ಲಿಯೂ ಮದುವೆಯಾಗಿದ್ದರಂತೂ ಮುಗೀತು. ಇವರ ಸಾಮಾಜಿಕ ಜಾಲತಾಣದ ಮೇಲೆ ಸಮಾಜದ ಒಂದು ವರ್ಗ ಯಾವತ್ತು ಒಂದು ಕಣ್ಣಿಟ್ಟಿರುತ್ತೆ. ಯಾಕೆಂದರೆ, ಸಿನಿಮಾ ಮಂದಿಗೆ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ.

ಹೀಗಾಗಿಯೇ ಯಾವ ಕ್ಷಣದಲ್ಲಾದರೂ ಡಿವೋರ್ಸ್ ಸುದ್ದಿ ಹೊರ ಬರಬಹುದು ಎಂದು ಕಾಯುವ ಅನೇಕರು ಸೆಲೆಬ್ರೀಟಿಗಳ ಕುರಿತು ವಿಚ್ಛೇದನದ ವದಂತಿಯನ್ನೂ ಹಬ್ಬಿಸುತ್ತಾರೆ. ಹೀಗೆ ಹಬ್ಬಿಸಲಾದ ಸುದ್ದಿಗಳನ್ನು ಕಂಡು.. ಸಾಮಾನ್ಯವಾಗಿ ಕೆಲ ತಾರೆಯರು ಸುಮ್ಮನಾಗುತ್ತಾರೆ. ಇನ್ನೂ ಕೆಲವರು ಉರಿದು ಬೀಳುತ್ತಾರೆ. ಮತ್ತೂ ಕೆಲವರು ಸಮಯ ಸಂದರ್ಭ ಬಂದಾಗ ತಮ್ಮ ಕುರಿತು ಹಬ್ಬಿಸಲಾದ ಇಲ್ಲ ಸಲ್ಲದ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಉದಾಹರಣೆಗೆ ದಿವ್ಯಾ ಖೋಸ್ಲಾ ಕುಮಾರ್.
ಹೌದು ದಿವ್ಯಾ ಖೋಸ್ಲಾ ಕುಮಾರ್.. ಬಾಲಿವುಡ್‌ನ ನಾಯಕಿ, ನಿರ್ದೇಶಕಿ ಮತ್ತು ನಿರ್ಮಾಪಕಿ. ''ಅಬ್ ತುಮಾರೇ ಹವಾಲೇ ವತನ್ ಸಾತಿಯೋ''.. ''ಸತ್ಯಮೇವ ಜಯತೇ 2''.. ''ಯಾರಿಯಾ 2''.. ಚಿತ್ರಗಳಲ್ಲಿ ನಾಯಕಿ ಪಾತ್ರ ನಿರ್ವಹಿಸಿರುವ ಇವರ ಹಲವಾರು ಆಲ್ಬಂ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಇನ್ನು ನಿರ್ದೇಶಕಿಯಾಗಿ ''ಯಾರಿಯಾ'' ಮತ್ತು ''ಸನಮ್ ರೇ'' ಚಿತ್ರಗಳನ್ನು ನಿರ್ದೇಶನ ಮಾಡಿರುವ ದಿವ್ಯಾ ಖೋಸ್ಲಾ ಕುಮಾರ್ ಹಲವು ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ದಿವ್ಯಾ ಖೋಸ್ಲಾ ಕುಮಾರ್ ಅವರ ಗಂಡ ಸಾಮಾನ್ಯದವರಲ್ಲ. 10,000 ಕೋಟಿ ಸಾಮ್ರಾಜ್ಯದ ಒಡೆಯ. ಅವರು ಬೇರೆ ಯಾರು ಅಲ್ಲ ಬದಲಿಗೆ ಟೀ ಸೀರಿಸ್ ಸಂಸ್ಥೆಯ ಮಾಲೀಕ ಭೂಷಣ್ ಕುಮಾರ್. ಕಳೆದ 20 ವರ್ಷಗಳಿಂದ ಇಬ್ಬರು ಸುಖ ಸಂಸಾರವನ್ನು ನಡೆಸುತ್ತಿದ್ದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಇವರಿಗೆ ಎದೆಯೆತ್ತರಕ್ಕೆ ಬೆಳೆದ ಒಬ್ಬ ಮಗ ಕೂಡ ಇದ್ದಾನೆ.
ಇಂಥಾ ದಿವ್ಯಾ ಖೋಸ್ಲಾ ಕುಮಾರ್ ಮತ್ತು ಭೂಷಣ್ ಕುಮಾರ್ ಅವರ ದಾಂಪತ್ಯ ಜೀವನದ ಮೇಲೆ ಹಲವರ ಕಣ್ಣಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಆಗಾಗ ಭೂಷಣ್ ಕುಮಾರ್ ಅವರಿಗೆ ದಿವ್ಯಾ ಖೋಸ್ಲಾ ಕುಮಾರ್ ವಿಚ್ಛೇದನ ನೀಡಲಿದ್ದಾರೆ ಎನ್ನುವ ಸುದ್ದಿಯನ್ನು ಕೆಲವರು ತೇಲಿ ಬಿಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದಾರೆ. ಈ ಪ್ರಾಮಾಣಿಕ ಕೆಲಸವನ್ನು ಈಗ ಮತ್ತೊಮ್ಮೆ ಕೆಲವರು ಮಾಡಿದ್ದು ದಿವ್ಯಾ ಖೋಸ್ಲಾ ಕುಮಾರ್ ಈ ಬಾರಿ ಮೌನ ಮುರಿದಿದ್ದಾರೆ. ಮಾತನಾಡಿದ್ದಾರೆ.

ಹೌದು, ಅಸಲಿಗೆ ದಿವ್ಯಾ ಖೋಸ್ಲಾ ಕುಮಾರ್ ಇತ್ತೀಚೆಗೆ ''ರೆಡಿಟ್''ನಲ್ಲಿ ತಮ್ಮ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಸಮಯದಲ್ಲಿ ಒಬ್ಬರು ದಿವ್ಯಾ ಖೋಸ್ಲಾ ಕುಮಾರ್ ಅವರಿಗೆ ವಿಚ್ಛೇದನ ಕುರಿತು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರ ನೀಡಿರುವ ದಿವ್ಯಾ ಖೋಸ್ಲಾ ಕುಮಾರ್ ಇಲ್ಲ ನಾನು ಡಿವೋರ್ಸ್ ಕೊಡುತ್ತಿಲ್ಲ ಎಂದು ಹೇಳಿದ್ದಾರೆ. ಮುಂದುವರೆದು ಆದರೆ ನಾನು ಭೂಷಣ್ ಕುಮಾರ್ ಅವರಿಂದ ದೂರವಾಗಬೇಕು, ಅವರಿಗೆ ವಿಚ್ಛೇದನ ನೀಡಬೇಕೆಂದು ಮಾಧ್ಯಮಗಳು ಬಯಸುತ್ತಿವೆ ಎಂದು ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ಬಾಲಿವುಡ್ ಲಾಬಿ.. ಒತ್ತಡ.. ವಾತಾವರಣದ ಕುರಿತು ಕೂಡ ಮಾತನಾಡಿರುವ ದಿವ್ಯಾ ಖೋಸ್ಲಾ ಕುಮಾರ್ ಬಾಲಿವುಡ್ ಎಂದರೆ ಸುತ್ತಲೂ ಮೊಸಳೆಗಳಿರುವ ಸ್ಥಳ ಎಂದು ಹೇಳಿದ್ದಾರೆ. ಅವುಗಳ ನಡುವೆ ನೀವು ದಾರಿ ಮಾಡಿಕೊಂಡು ಮುನ್ನಡೆಯಬೇಕು ಎಂದು ಹೇಳಿದ್ದಾರೆ. ಸದ್ಯ ದಿವ್ಯಾ ಖೋಸ್ಲಾ ಕುಮಾರ್ ಅವರ ಈ ಮಾತುಗಳು ಬಾಲಿವುಡ್‌ನಲ್ಲಿ ಚರ್ಚೆಗೆ ಕಾರಣವಾಗಿವೆ.


Click it and Unblock the Notifications











