ಕೆಜಿಎಫ್-2 ನಮಗೆ ಯಾವುದೇ ರೀತಿಯಲ್ಲಿ ಸ್ಪರ್ಧಿಯಲ್ಲ: ಜೆರ್ಸಿ ನಿರ್ಮಾಪಕ ಅಮನ್
ಏಪ್ರಿಲ್ 14ರಂದು ಕೆಜಿಎಫ್-2 ವರ್ಸಸ್ ಲಾಲ್ ಸಿಂಗ್ ಚಡ್ಡಾ ದೊಡ್ಡದೊಂದು ಪೈಪೋಟಿಯನ್ನು ಭಾರತದಲ್ಲಿ ನಿರೀಕ್ಷಿಸಲಾಗುತ್ತಿತ್ತು. ಆದರೆ ಈಗ ಅಮೀರ್ ಖಾನ್ ತನ್ನ ಚಿತ್ರವನ್ನು ಆಗಸ್ಟ್ ಹನ್ನೊಂದಕ್ಕೆ ಮುಂದೂಡಿದ್ದಾರೆ. ಇದಕ್ಕೂ ಮೊದಲು ಡಿಸೆಂಬರ್ 25ರಂದು ಬರುವುದಾಗಿ ಲಾಲ್ ಸಿಂಗ್ ಚಡ್ಡಾ ಘೋಷಣೆ ಮಾಡಿತ್ತು. ಆದರೆ ಅದೇ ಸಂದರ್ಭದಲ್ಲಿ 'ಪುಷ್ಪ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿತು. ಆರಂಭದಲ್ಲಿ ಡಿಸೆಂಬರ್ 25ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡ ಬಂದ ಲಾಲ್ ಸಿಂಗ್ ಚಡ್ಡಾ ಚಿತ್ರತಂಡ ಕೊನೆಗೆ ಬಿಡುಗಡೆಯನ್ನು ಮುಂದೂಡಿತು. ಆನಂತರ ಅಧಿಕೃತವಾಗಿ ಏಪ್ರಿಲ್ 14ರಂದು ಚಿತ್ರತಂಡ ಬರುವುದಾಗಿ ಘೋಷಣೆ ಮಾಡಿಕೊಂಡಿತ್ತು.
ಅಮೀರ್ ಖಾನ್‌ಗೆ ಕಾಡುತ್ತಿದೆ ಸೋಲಿನ ಭಯ: ಬಾಲಿವುಡ್ ಮಂದಿಗೆ ಹೇಳುತ್ತಿದ್ದದ್ದು ನಿಜವಾಯಿತು. 'ಅಮೀರ್ ಖಾನ್ ಯಾವುದೇ ಕಾರಣಕ್ಕೂ ಏಪ್ರಿಲ್ 14ರಂದು ಚಿತ್ರ ಬಿಡುಗಡೆ ಮಾಡುವುದಿಲ್ಲ ಅದು ಕೇವಲ ಪಬ್ಲಿಸಿಟಿ ಸ್ಟಂಟ್ ಅಷ್ಟೇ' ಅಂತ ಬಾಲಿವುಡ್ ಮೂಲಗಳಿಂದ ಕೇಳಿಬರುತ್ತಿತ್ತು. ಅಮೀರ್ ಅವರ ಹಿಂದಿನ ಚಿತ್ರ 'ಥಗ್ಸ್ ಆಫ್ ಹಿಂದುಸ್ತಾನ್' ಹೀನಾಯವಾಗಿ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿತ್ತು. ಹೀಗಾಗಿ ಅಮೀರ್ ಮೇಲೆ ಸಾಕಷ್ಟು ಒತ್ತಡವಿದೆ. ಹಿಂದೆ ಶಾರುಖ್ ಖಾನ್ ಅವರ 'ಜೀರೋ' ಕೂಡ 'ಕೆಜಿಎಫ್' ಚಿತ್ರದ ಮುಂದೆ ಮಕಾಡೆ ಮಲಗಿದೆ.

ಕೆಜಿಎಫ್ ಫ್ರಾಂಚೈಸಿ ನೋಡಲು ಪ್ರಪಂಚವೇ ಎದುರುನೋಡುತ್ತಿದೆ
ಈಗಂತೂ ಕೆಜಿಎಫ್ ಫ್ರಾಂಚೈಸಿ ನೋಡಲು ಪ್ರಪಂಚವೇ ಎದುರುನೋಡುತ್ತಿದೆ. ಇನ್ನೊಂದಡೆ 'ಪುಷ್ಪ' ಚಿತ್ರದ ಭರ್ಜರಿ ಯಶಸ್ಸಿನ ನಂತರ ಸೌತ ಸಿನಿಮಾಗಳ ಮೇಲೆ ನಾರ್ಥ್ ಆಡಿಯನ್ಸ್ ಸಿಕ್ಕಾಪಟ್ಟೆ ಕ್ರೇಜ್ ಬೆಳೆಸಿಕೊಂಡಿದ್ದಾರೆ ಈ ಎಲ್ಲಾ ಬೆಳವಣಿಗಳನ್ನು ಗಮನಿಸಿರುವಂತ ಅಮೀರ್ ಖಾನ್ ತನ್ನ ಮುಂದಿನ ಚಿತ್ರ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಆಗಸ್ಟ್ ಹನ್ನೊಂದಕ್ಕೆ ಅಧಿಕೃತವಾಗಿ ಮುಂದೂಡಿದ್ದಾರೆ. ಆದರೆ ಇದರ ನಡುವೆ ಮತ್ತೊಂದು ಚಿತ್ರ ಅದೇ ಜಾಗದಲ್ಲಿ ಬಂದು ಬಿಡುಗಡೆ ಮಾಡಲು ಸಿದ್ಧಗೊಳ್ಳುತ್ತಿದೆ ಅದೇ ಶಾಹಿದ್ ಕಪೂರ್ ಅಭಿನಯದ 'ಜೆರ್ಸಿ'

ಡಿಸೆಂಬರ್ 31 ರಂದು ಬಿಡುಗಡೆಯಾಗಬೇಕಿತ್ತು
ಶಾಹಿದ್ ಕಪೂರ್ ಅಭಿನಯದ 'ಜೆರ್ಸಿ' ಡಿಸೆಂಬರ್ 31, 2022 ರಂದು ಬಿಡುಗಡೆಯಾಗಲು ಸಿದ್ಧವಾಗಿತ್ತು. ಆದಾಗ್ಯೂ, ದೆಹಲಿಯ ಚಿತ್ರಮಂದಿರಗಳನ್ನು ಡಿಸೆಂಬರ್ 28 ರಿಂದ ಸ್ಥಗಿತಗೊಳಿಸಿದ ನಂತರ ಮತ್ತು ಕೋವಿಡ್ -19 ರ ಮೂರನೇ ಅಲೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದ ನಂತರ, ಈ ಚಿತ್ರದ ನಿರ್ಮಾಪಕರು ಅನಿರ್ದಿಷ್ಟವಾಗಿ ಚಿತ್ರದ ಬಿಡುಗಡೆ ಮುಂದೂಡಲು ನಿರ್ಧರಿಸಿದರು. ಇದೇ ಸಮಯದಲ್ಲಿ ಬಹುತೇಕ ನಿರ್ಮಾಪಕರು ಕೂಡ ತಮ್ಮ ಮುಂದಿನ ಚಿತ್ರಗಳ ಬಿಡುಗಡೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು. ಕರೋನಾ ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾಗುತ್ತಿದ್ದಂತೆ, ಮುಂದೂಡಲ್ಪಟ್ಟ ಹೆಚ್ಚಿನ ಚಲನಚಿತ್ರಗಳು ತಮ್ಮ ಹೊಸ ಬಿಡುಗಡೆ ದಿನಾಂಕಗಳನ್ನು ಘೋಷಿಸಿದವು. ಆದಾಗ್ಯೂ, ಜೆರ್ಸಿಯ ತಯಾರಕರು ಪರಿಸ್ಥಿತಿಯನ್ನು ಅವಲೋಕಿಸುತ್ತಾ ಕುಳಿತಿದ್ದರು ಆದರೆ ಯಾವುದೇ ಕಾರಣಕ್ಕೂ ಚಿತ್ರದ ಬಿಡುಗಡೆಯ ಬಗ್ಗೆ ನಿರ್ಧಾರವನ್ನು ಪ್ರಕಟಿಸಿರಲಿಲ್ಲ.

ಏಪ್ರಿಲ್ 14ಕ್ಕೆ ಬಿಡುಗಡೆ ಅಂತ ಘೋಷಣೆ
ಹಠಾತ್ ಬೆಳವಣಿಗೆಯಲ್ಲಿ, ಏಪ್ರಿಲ್ 14 ರಂದು ಬಿಡುಗಡೆಯಾಗಬೇಕಿದ್ದ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಅವರ ಪೋಸ್ಟ್-ಪ್ರೊಡಕ್ಷನ್ ಕೆಲಸವು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಆಗಸ್ಟ್ 11 ಕ್ಕೆ ಮುಂದೂಡಲಾಗಿದೆ. ಈ ಘೋಷಣೆಯನ್ನು ಮಾಡಿದ ನಂತರ, ಶಾಹಿದ್ ಕಪೂರ್ ಅವರು ಜೆರ್ಸಿ ಈಗ ಏಪ್ರಿಲ್ 14, 2022 ರಂದು ಗುರುವಾರ ಆಗಮಿಸಲಿದೆ ಎಂದು ಚಿತ್ರತಂಡ ಟ್ವೀಟ್ ಮಾಡಿದ್ದಾರೆ. ಅದೇ ಸಮಯದಲ್ಲಿ ನಾಲ್ಕುದಿನಗಳ ರಜೆಯನ್ನು ಎಂಕ್ಯಾಶ್ ಮಾಡಿಕೊಳ್ಳಲು ಮುಂದಾಗಿದೆ. (ಏಪ್ರಿಲ್ 14 ರಂದು ಬೈಸಾಖಿ ಮತ್ತು ಅಂಬೇಡ್ಕರ್ ಜಯಂತಿ, ಶುಕ್ರವಾರ, ಏಪ್ರಿಲ್ 15 ರಂದು ಗುಡ್ ಫ್ರೈಡೆ ಬರುತ್ತದೆ). ಈಗ ಕ್ರಿಕೆಟ್ ಹಿನ್ನೆಲೆಯನ್ನು ಹೊಂದಿರುವ 'ಜೆರ್ಸಿ', 'ಕೆಜಿಎಫ್- 2' ಜೊತೆಗೆ 14ರಂದು ಘರ್ಷಣೆಗೆ ಸಿದ್ಧಗೊಂಡಿದೆ.

ಜೆರ್ಸಿಯ ನಿರ್ಮಾಪಕ ಅಮನ್ ಗಿಲ್
ಇದೇ ವಿಚಾರವಾಗಿ ಬಾಲಿವುಡ್ ಹಂಗಾಮಾಗೆ ನೀಡಿರುವ ಸಂದರ್ಶನದಲ್ಲಿ ನಿರ್ಮಾಪಕ ಜೆರ್ಸಿಯ ನಿರ್ಮಾಪಕ ಅಮನ್ ಗಿಲ್ ಅವರು ತಮ್ಮ ಚಿತ್ರವನ್ನು ಕೆಜಿಎಫ್ 2 ಜೊತೆಗೆ ಬಿಡುಗಡೆ ಮಾಡಲು ಏಕೆ ಆಯ್ಕೆ ಮಾಡಿಕೊಂಡರು ಎಂಬುದನ್ನು ವಿವರಿಸಿದ್ದಾರೆ, "ಹಿಂದೆ, ಲಾಲ್ ಸಿಂಗ್ ಚಡ್ಡಾ ಮತ್ತು ಕೆಜಿಎಫ್- 2 ಈ ದಿನಾಂಕದಂದು ಚಿತ್ರಮಂದಿರಗಳಲ್ಲಿ ಬರಬೇಕಿತ್ತು. ಈಗ, ಅಮೀರ್ ಖಾನ್ ಅಭಿನಯದ ಚಿತ್ರವು ಬಿಡುಗಡೆ ಮುಂದೂಡುವುದರಿಂದ, ಜೆರ್ಸಿ, ಲಾಲ್ ಸಿಂಗ್ ಚಡ್ಡಾ ಅವರ ಸ್ಲಾಟ್‌ಗೆ ಸ್ಥಳಾಂತರಗೊಂಡಿದೆ. ಇದು ನಾಲ್ಕು ದಿನಗಳ ರಜೆ - ಗುರುವಾರ ಮತ್ತು ಶುಕ್ರವಾರ ಎರಡೂ ರಜಾದಿನಗಳು. ಶನಿವಾರ ಮತ್ತು ಭಾನುವಾರ ವೀಕೆಂಡ್ ಆದ್ದರಿಂದ, ಇದು ವರ್ಷದ ದೊಡ್ಡ ವಾರಾಂತ್ಯಗಳಲ್ಲಿ ಒಂದಾಗಿದೆ. ಆದ್ದರಿಂದ, ಇದು ಎರಡು ದೊಡ್ಡ ಚಲನಚಿತ್ರಗಳಿಗೆ, ವಿಶೇಷವಾಗಿ ಎರಡು ವಿಭಿನ್ನ ಪ್ರಕಾರಗಳಿಗೆ ಸುಲಭವಾಗಿ ಅವಕಾಶ ಕಲ್ಪಿಸುತ್ತದೆ. ನಮ್ಮದು ಕೌಟುಂಬಿಕ ಚಿತ್ರವಾದರೆ ಇನ್ನೊಂದು ಸಾಹಸಮಯ ಚಿತ್ರ. ಹಾಗಾಗಿ, ಎರಡೂ ಚಿತ್ರಗಳು ಎರಡು ವಿಭಿನ್ನ ರೀತಿಯ ಮನೋರಂಜನೆಯನ್ನು ಪ್ರೇಕ್ಷಕರನ್ನು ಪೂರೈಸುತ್ತವೆ.

ನಮಗೆ ಕೆಜಿಎಫ್ -2 ಸ್ಪರ್ಧಿಯಲ್ಲ
ಅಮನ್ ಗಿಲ್ ಮುಂದುವರಿಸಿ "ಎರಡು ಚಿತ್ರಗಳ ನಡುವೆ ಯಾವುದೇ ಸ್ಪರ್ಧೆಯಿಲ್ಲ. ನಾವು ಕೆಜಿಎಫ್- 2 ರೊಂದಿಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿರುವಂತೆ ಅಲ್ಲ. ನಮಗೆ ಕೆಜಿಎಫ್- 2 ಸ್ಪರ್ಧಿಯಲ್ಲ, ನಾವು ಕೆಜಿಎಫ್ -2 ಗೆ ಸ್ಪರ್ಧಿಯಲ್ಲ.ಎರಡು ವಿಭಿನ್ನ ಆಯಾಮದ ಚಿತ್ರಗಳಾಗಿದ್ದು ಎರಡು ಚಿತ್ರಗಳು ಗೆಲ್ಲುವ ವಿಶ್ವಾಸವನ್ನು ನಾನು ಹೊಂದಿದ್ದೇನೆ" ಅಂತ ಹೇಳಿದ್ದಾರೆ. 'ಜೆರ್ಸಿ' ನಲ್ಲಿ ಶಾಹಿದ್ ಕಪೂರ್ ಜೊತೆಗೆ ಮೃಣಾಲ್ ಠಾಕೂರ್ ಮತ್ತು ಪಂಕಜ್ ಕಪೂರ್ ಕೂಡ ನಟಿಸಿದ್ದಾರೆ. ಇದನ್ನು ಗೌತಮ್ ತಿನ್ನನೂರಿ ನಿರ್ದೇಶಿಸಿದ್ದಾರೆ, ಅವರು 2019 ರ ತೆಲುಗು ಮೂಲ ( ಜೆರ್ಸಿ) ಚಲನಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ. ಕುತೂಹಲಕಾರಿಯಾಗಿ, ಜೆರ್ಸಿ ಮೂಲ ಚಿತ್ರವು ರಿಮೇಕ್‌ನ ಬಿಡುಗಡೆಯ ದಿನಾಂಕದಂದು ಅದೇ ವಾರದಲ್ಲಿ ಬಿಡುಗಡೆ ಆಗುತ್ತಿದೆ.


Click it and Unblock the Notifications











