ಸುಶಾಂತ್ ಸಿಂಗ್ ರಿಜೆಕ್ಟ್ ಮಾಡಿದ ಈ ಪ್ರಮುಖ ಸಿನಿಮಾಗಳು ಸೂಪರ್ ಹಿಟ್ ಆಗಿವೆ

ಬಾಲಿವುಡ್ ನ ಖ್ಯಾತ ನಟ ಸುಶಾಂತ್ ಸಿಂಗ್ ರಾಜಪೂತ್ ನಿಧನಹೊಂದಿ ಒಂದು ವರ್ಷ ಸಮೀಪಿಸುತ್ತಿದೆ. ಕಳೆದ ವರ್ಷ 2020 ಜೂನ್ 14ರಂದು ಮುಂಬೈನ ಬಾಂದ್ರಾದ ತನ್ನ ನಿವಾಸದಲ್ಲಿ ಸುಶಾಂತ್ ಶವವಾಗಿ ಪತ್ತೆಯಾಗಿದ್ದರು. ಬಾಲಿವುಡ್ ಬಹುಬೇಡಿಕೆಯ ನಟನ ಸಾವು ದೊಡ್ಡ ಮಟ್ಟದ ಸಂಚಲನ ಸೃಷ್ಟಿಮಾಡಿತ್ತು.

ಒಂದು ವರ್ಷವಾದರೂ ಸುಶಾಂತ್ ಸಾವಿನ ಹಿಂದಿನ ರಹಸ್ಯ ಬಹಿರಂಗವಾಗಿಲ್ಲ. ಸಿಬಿಐ ತನಿಖೆ ನಡೆಸುತ್ತಿದ್ದು ಇನ್ನೂ ಅಂತಿಮ ವರದಿ ಸಲ್ಲಿಸಿಲ್ಲ. ಸುಶಾಂತ್ ಸಾವಿನ ಅಂತಿಮ ವರದಿಗೆ ಇಡೀ ದೇಶ ಕುತೂಹಲದಿಂದ ಕಾಯುತ್ತಿದೆ. ಅದ್ಭುತ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಸುಶಾಂತ್ ಇನ್ನು ಉತ್ತಮ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರುವ ಕನಸು ಕಂಡಿದ್ದರು. ಆದರೆ ಅಷ್ಟರಲ್ಲೇ ತನ್ನ ಪಯಣವನ್ನು ಅರ್ಧಕ್ಕೆ ನಿಲ್ಲಿಸಿ ಬಾರದ ಲೋಕಕ್ಕೆ ಹೊರಟು ಹೋದರು.

ಅಂದಹಾಗೆ ಸುಶಾಂತ್ ಅನೇಕ ಪ್ರಮುಖ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ. ಸುಶಾಂತ್ ತಿರಸ್ಕರಿಸಿದ ಕೆಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ನೆಪೋಟಿಸಂ, ಗ್ರೂಪಿಸಂ ಕಾರಣಕ್ಕೆ ಒಂದಿಷ್ಟು ಉತ್ತಮ ಸಿನಿಮಾಗಳು ಸುಶಾಂತ್ ಕೈತಪ್ಪಿದರೆ, ಇನ್ನು ಕೆಲವು ಸಿನಿಮಾಗಳು ಡೇಟ್ ಹೊಂದಾಣಿಕೆ ಮತ್ತು ಬೇರೆ ಕಾರಣಗಳಿಂದ ಸುಶಾಂತ್ ಅವರೇ ತಿರಸ್ಕರಿಸಿದ್ದರು. ಸುಶಾಂತ್ ರಿಜೆಕ್ಟ್ ಮಾಡಿದ ಪ್ರಮುಖ ಸಿನಿಮಾಗಳು ಯಾವುದು? ಇಲ್ಲಿದೆ ವಿವರ..

ರಾಮ್ ಲೀಲಾ

ರಾಮ್ ಲೀಲಾ

ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಸೂಪರ್ ಹಿಟ್ ರಾಮ್ ಲೀಲಾ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು ಸುಶಾಂತ್ ಸಿಂಗ್. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ರಾಮ್ ಲೀಲಾ ಸಿನಿಮಾಗೆ ಮೊದಲು ಆಯ್ಕೆ ಮಾಡಿದ್ದು ಅದ್ಭುತ ಪ್ರತಿಭೆ ಹೊಂದಿದ್ದ ಸುಶಾಂತ್ ಸಿಂಗ್ ಅವರನ್ನು. ಆದರೆ ಸುಶಾಂತ್ ಬೇರೆ ಸಿನಿಮಾಗಳಿಗೆ ಕಮಿಟ್ ಆಗಿದ್ದ ಕಾರಣ ರಾಮ್ ಲೀಲಾ ಸಿನಿಮಾವನ್ನು ತಿರಸ್ಕರಿದ್ದರು.

ಕಬೀರ್ ಸಿಂಗ್

ಕಬೀರ್ ಸಿಂಗ್

ಸುಶಾಂತ್ ರಿಜೆಕ್ಟ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಕಬೀರ್ ಸಿಂಗ್ ಚಿತ್ರ ಕೂಡ ಇದೆ. ಶಾಹಿದ್ ಕಪೂರ್ ಮತ್ತು ಕಿಯಾರಾ ನಟನೆಯ ಕಬೀರ್ ಸಿಂಗ್, ತೆಲುಗಿನ ಸೂಪರ್ ಹಿಟ್ ಅರ್ಜುನ್ ರೆಡ್ಡಿ ಸಿನಿಮಾದ ರಿಮೇಕ್. ಬಾಲಿವುಡ್ ನಲ್ಲೂ ದೊಡ್ಡ ಮಟ್ಟದ ಸಕ್ಸಸ್ ಕಂಡಿರುವ ಕಬೀರ್ ಸಿಂಗ್ ಚಿತ್ರಕ್ಕೆ ಮೊದಲ ಆಯ್ಕೆ ಸುಶಾಂತ್ ಆಗಿದ್ದರು. ಆದರೆ ಸುಶಾಂತ್ ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ಬಳಿಕ ಅರ್ಜುನ್ ಕಪೂರ್ ಕೂಡ ಈ ಸಿನಿಮಾ ರಿಜೆಕ್ಟ್ ಮಾಡಿದ್ದರು. ನಂತರ ಶಾಹಿದ್ ಕಪೂರ್ ಕಬೀರ್ ಸಿಂಗ್ ಆಗಿ ಮಿಂಚಿದರು.

ಆಯುಷ್ಮಾನ್ ನಟನೆಯ ಅಂಧಾಧುನ್

ಆಯುಷ್ಮಾನ್ ನಟನೆಯ ಅಂಧಾಧುನ್

ಸುಶಾಂತ್ ಸಿಂಗ್ ತಿರಸ್ಕರಿಸಿದ ಸಿನಿಮಾಗಳಲ್ಲಿ ಪ್ರಮುಖವಾದ ಚಿತ್ರ ಅಂಧಾಧುನ್. ಚಿತ್ರದ ನಿರ್ದೇಶಕ ನಾಯಕನಾಗಿ ಸುಶಾಂತ್ ಅವರನ್ನು ಆಯ್ಕೆ ಮಾಡಲು ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದ ಸುಶಾಂತ್ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುವಿದಿಲ್ಲ. ಬಳಿಕ ಮತ್ತೋರ್ವ ಖ್ಯಾತ ನಟ ಆಯುಷ್ಮಾನ್ ಖುರಾನ ಈ ಪಾತ್ರ ನಿಭಾಯಿಸುತ್ತಾರೆ.

ಆದಿತ್ಯ ರಾಯ್ ನಟನೆಯ ಫಿತೂರ್

ಆದಿತ್ಯ ರಾಯ್ ನಟನೆಯ ಫಿತೂರ್

ಆಧಿತ್ಯ ರಾಯ್ ಕಪೂರ್ ನಟನೆಯ ಫಿತೂರ್ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು ಸುಶಾಂತ್ ಸಿಂಗ್. ಆದರೆ ಸುಶಾಂತ್ ತುಂಬಾ ಬ್ಯುಸಿ ಇದ್ದ ಕಾರಣ ಈ ಸಿನಿಮಾ ಕೈಬಿಡುತ್ತಾರೆ. ಬಳಿಕ ಆದಿತ್ಯ ರಾಯ್ ನಾಯಕನಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಸಿನಿಮಾ ರಿಜೆಕ್ಟ್ ಮಾಡಿದ್ದ ಬಗ್ಗೆ ಸುಶಾಂತ್ ಸಿಂಗ್ ಗೆ ಸಂತೋಷವಾಗಿತ್ತು. ಯಾಕೆಂದರೆ ಈ ಸಿನಿಮಾ ಅಷ್ಟು ಚೆನ್ನಾಗಿ ಇರಲಿಲ್ಲ ಎನ್ನುವುದು ಅವರಿಗೆ ಗೊತ್ತಿತ್ತು.

ರಣ್ವೀರ್ ಸಿಂಗ್ ನಟನೆಯ ಬೆಫಿಕ್ರೆ

ರಣ್ವೀರ್ ಸಿಂಗ್ ನಟನೆಯ ಬೆಫಿಕ್ರೆ

ರೊಮ್ಯಾಂಟಿಕ್ ಸಿನಿಮಾ ಬೆಫಿಕ್ರೆ ಚಿತ್ರದಲ್ಲಿ ಸುಶಾಂತ್ ಸಿಂಗ್ ಮತ್ತು ವಾಣಿ ಕಪೂರ್ ಜೋಡಿಯಾಗಿ ನಟಿಸಬೇಕೆಂದು ನಿರ್ಮಾಪಕ ಆದಿತ್ಯ ಚೋಪ್ರ ಬಯಸಿದ್ದರು. ಆದರೆ ಈ ಸಿನಿಮಾ ಕೂಡ ಸುಶಾಂತ್ ಕೈತಪ್ಪಿಹೋಯಿತು. ಸುಶಾಂತ್ ನಟಿಸಬೇಕಿದ್ದ ಜಾಗದಲ್ಲಿ ರಣ್ವೀರ್ ಸಿಂಗ್ ಕಾಣಿಸಿಕೊಂಡರು. ಅಂದಹಾಗೆ ಸುಶಾಂತ್ ನಟಿಸಬೇಕಿದ್ದ ಬಹುತೇಕ ಸಿನಿಮಾಗಳಲ್ಲಿ ರಣ್ವೀರ್ ಸಿಂಗ್ ಮಿಂಚಿದ್ದಾರೆ.

Recommended Video

Yash Radhikaರ ಮಗನ ಹೊಸ ವಿಡಿಯೋ ಫುಲ್ ವೈರಲ್ | Filmibeat Kannada
ಹಾಫ್ ಗರ್ಲ್ ಫ್ರೆಂಡ್

ಹಾಫ್ ಗರ್ಲ್ ಫ್ರೆಂಡ್

ಅರ್ಜುನ್ ಕಪೂರ್ ಮತ್ತು ಶ್ರದ್ಧಾ ಕಪೂರ್ ನಟನೆಯ ಹಾಫ್ ಗರ್ಲ್ ಫ್ರೆಂಡ್ ಚಿತ್ರದ ಬಾಲಿವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಚೇತನ್ ಭಗತ್ ಅವರ ಕಾದಂಬರಿ ಆಧಾರಿತ ಹಾಫ್ ಗರ್ಲ್ ಫ್ರೆಂಡ್ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಸುಶಾಂತ್ ಸಿಂಗ್. ವಿಶೇಷ ಎಂದರೆ ಸುಶಾಂತ್ ಜೊತೆ ನಾಯಕಿಯಾಗಿ ಗೆಳತಿ ಕೃತಿ ಸನೂನ್ ಆಯ್ಕೆಯಾಗಿದ್ದರು.ಆದರೆ ಇಬ್ಬರೂ ಈ ಸಿನಿಮಾವನ್ನು ರಿಜೆಕ್ಟ್ ಮಾಡಿದರು.

ಇನ್ನೂ ಅನೇಕ ಸಿನಿಮಾಗಳನ್ನು ಸುಶಾಂತ್ ತಿರಸ್ಕರಿಸಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದ ಸುಶಾಂತ್ ಅನಿವಾರ್ಯವಾಗಿ ಕೆಲವು ಅದ್ಭುತ ಸಿನಿಮಾಗಳನ್ನು ಕೈ ಬಿಡಬೇಕಾಗಿತ್ತು.

More from Filmibeat

English summary
These major films rejected by Sushant Singh Rajput.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X