ಚಿತ್ರರಂಗದಲ್ಲಿ ಹಾಸಿಗೆ ಹಂಚಿಕೊಂಡಿದ್ದಕ್ಕೆ ಅವರೆಲ್ಲ ನಾಯಕಿಯರಾಗಿ ಬೆಳೆದರು ಎಂದ ನಟಿ..!
ಬಣ್ಣದ ಪ್ರಪಂಚದಲ್ಲಿ ಅನೇಕರು ಮುಖವಾಡದ ಬದುಕನ್ನ ಬದುಕುತ್ತಾರೆ. ಇನ್ನೂ ಕೆಲವರು ಪ್ರಚಾರದ ಹುಚ್ಚಿಗೆ ಬಂದರೆ, ಬಹುತೇಕರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಈ ಕಾರಣಕ್ಕೆ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ಧ ಮನಸ್ಸುಗಳು ಖೆಡ್ಡಾ ಎಂಬ ಅರಿವಿದ್ದರೂ ಬಿದ್ದು ಏಳುವ ಸಂದರ್ಭಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರು ಇಂತಹ ಕುಕೃತ್ಯವನ್ನು ಎಡಗಾಲಲ್ಲಿ ಒದ್ದು ನಡೆದ ಪ್ರಸಂಗಗಳೂ ಇವೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಇದಕ್ಕೆ ಸುಜಾತಾ ಮತ್ತೊಂದು ಉದಾಹರಣೆ.
ಹೌದು, ಒಂದು ಕಾಲದಲ್ಲಿ ರಿಶಿ ಕಪೂರ್ ಅಭಿನಯದ ಸಾಧನಾ ಚಿತ್ರದ ಮೂಲಕ ಅನೇಕರ ಹೃದಯವನ್ನೂ ಆ ಕಾಲದಲ್ಲಿ ಗೆದ್ದಿದ್ದ ಸುಜಾತಾ, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಎಲ್ಲರಂತೆ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಮಾಡಿಕೊಂಡಿದ್ದರೆ ಕಥೆಯೇ ಬೇರೆ ಇರುತ್ತಿತ್ತು ಎಂದು ಸುಜಾತಾ ಹೇಳಿದ್ದಾರೆ.

ಸಿದ್ಧಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುಜಾತಾ, ಈಗ ಇರುವಂತೆ ಆ ಕಾಲದಲ್ಲಿ ಕೂಡ ನಮ್ಮ ಸುತ್ತ ಮುತ್ತ ಆ ತರಹದ ಜನ ಇರುತ್ತಿದ್ದರು ಎಂದಿರುವ ಸುಜಾತಾ ನನಗೂ ಕೂಡ ಕೆಲವರು ಮಂಚಕ್ಕೆ ಕರೆದಿದ್ದರು ಎಂದು ಹೇಳಿದ್ದಾರೆ. ಮುಂದುವರೆದು ನಾನು ನಿಮ್ಮ ರೆಕ್ಕೆಯಾಗುವೆ, ಈ ರೆಕ್ಕೆಯ ಸಹಾಯದಿಂದ ನೀನು ಎಲ್ಲಿ ಬೇಕಾದರೂ ಹಾರಾಡಬಹುದು , ಇನ್ನೂ ಎತ್ತರೆತ್ತರಕ್ಕೆ ಬೆಳೆಯಬಹುದು, ಬೇಗ ನಿರ್ಧಾರ ಮಾಡು ಎಂದು ಆ ವ್ಯಕ್ತಿ ನನಗೆ ಹೇಳಿದ್ದ ಎಂದಿರುವ ಸುಜಾತಾ, ನಿನ್ನ ರೆಕ್ಕೆಗಳು ನಿನ್ನ ಬಳಿಯೇ ಇರಲಿ ಎಂದು ನಾನು ಅವನಿಗೆ ನೇರವಾಗಿಯೇ ಹೇಳಿದ್ದೇ ಎಂದು ಹೇಳಿದ್ದಾರೆ.
ಹೀಗೆ ಕಾಸ್ಟಿಂಗ್ ಕೌಚ್‌ನಿಂದ ನಾನು ಚಿತ್ರರಂಗದಲ್ಲಿ ಹಲವಾರು ಅವಕಾಶಗಳನ್ನು ಕೂಡ ಕಳೆದುಕೊಂಡೆ ಎಂದಿರುವ ಸುಜಾತಾ, ನನ್ನ ಆರಂಭಿಕ ದಿನಗಳಲ್ಲಿ ಎಲ್ಲದಕ್ಕೂ ಚಿಕ್ಕಮ್ಮ ಮೂಗು ತೂರಿಸುತ್ತಿದ್ದರು. ಹೊಂದಾಣಿಕೆ ಮಾಡಿಕೊಂಡು ಬೆಳೆದ ನಟಿಯರ ಉದಾಹರಣೆಯನ್ನೂ ನನಗೆ ನೀಡುತ್ತಿದ್ದರು ಎಂದಿರುವ ಸುಜಾತಾ, ಆ ಕಾಲದಲ್ಲಿ ಹಾಸಿಗೆ ಹಂಚಿಕೊಂಡ ನಟಿಯರೇ ಚಿತ್ರರಂಗದಲ್ಲಿ ಮುಂಚೂಣಿಯ ಸ್ಥಾನದಲ್ಲಿ ಇರುತ್ತಿದ್ದರು ಎಂದು ಹೇಳಿದ್ದಾರೆ. ಹೊಂದಾಣಿಕೆ ಮಾಡಿಕೊಳ್ಳದೇ ಇದ್ದಿದ್ದರೆ ಅವರನ್ನೆಲ್ಲ ಯಾರು ತಾನೇ ತಮ್ಮ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂದಿರುವ ಸುಜಾತಾ ನಿಮ್ಮಲ್ಲಿ ಪ್ರತಿಭೆ ಎಷ್ಟೇ ಇರಲಿ, ಆ ಪ್ರತಿಭೆಯ ಜೊತೆ ಈ ಕೌಶಲ್ಯ ಕೂಡ ಆ ಕಾಲದಲ್ಲಿ ಇರಬೇಕಾಗುತ್ತಿತ್ತು ಎಂದಿದ್ದಾರೆ. ನನಗೆ ಅದೆಲ್ಲ ಗೊತ್ತಿರದ ಕಾರಣ ನಾನು ಆ ಹಾದಿಯನ್ನು ತುಳಿಯಲಿಲ್ಲ ಎಂದಿರುವ ಸುಜಾತಾ, ನಾನು ರಾಜೇಶ್ ಖನ್ನಾ ಅವರ ಜೊತೆ ಜೈ ಜೈ ಶಿವಶಂಕರ್ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಏಕಾಏಕಿ ನನ್ನ ಜಾಗಕ್ಕೆ ಡಿಂಪಲ್ ಕಪಾಡಿಯಾ ಅವರನ್ನು ನಾಯಕಿಯನ್ನಾಗಿಸಿದರು ಎಂದು ತಮ್ಮ ಬೇಸರವನ್ನೂ ಹೊರ ಹಾಕಿದ್ದಾರೆ.
ಅಂದ್ಹಾಗೇ ಸದ್ಯಕ್ಕೆ ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಆಯೋಗದ ವರದಿ ಸಂಚಲನ ಸೃಷ್ಟಿಸಿದೆ. ಇಲ್ಲಿಯವರೆಗೆ ಹದಿನೇಳಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಕೇವಲ ಮಲಯಾಳಂ ಮಾತ್ರ ಅಲ್ಲ ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಕೂಡ ಹೇಮಾ ಸಮಿತಿಯಂತೆ ಒಂದು ಸಮಿತಿ ರಚನೆಯಾಗಬೇಕೆನ್ನುವ ಮಾತು ಕೇಳಿ ಬರುತ್ತಿದೆ. ಇದರ ನಡುವೆ ಲೈಂಗಿಕ ದೌರ್ಜನ್ಯವಾಗಿದ್ದರೆ ಆ ಕ್ಷಣಕ್ಕೆ ಯಾಕೆ ಯಾರು ಧ್ವನಿ ಎತ್ತುವುದಿಲ್ಲ, ಯಾಕೆ ಐದಾರು ವರ್ಷ ಸುಮ್ಮನಾಗ್ತಾರೆ ಎನ್ನುವ ಅಸಮಾಧಾನದ ಮಾತುಗಳು ಕೂಡ ಚಿತ್ರರಂಗದಲ್ಲಿ ಕೇಳಿ ಬರುತ್ತಿವೆ.


Click it and Unblock the Notifications











