ದಿನದಿಂದ ದಿನಕ್ಕೆ ನನ್ನ ಬದುಕು ದುಸ್ತರವಾಗುತ್ತಿದೆ ಎಂದ ಅಮಿತಾಬ್ ಬಚ್ಚನ್, ಕಾಜೋಲ್ ಜೊತೆ ಅಭಿನಯಿಸಿದ್ದ ನಟಿ...!

ಚಿತ್ರರಂಗದಲ್ಲಿ ಕಲೆ ಇದ್ದವರಿಗೆ ಬೆಲೆ ಇರಲ್ಲ. ಬೆಲೆ ಇದ್ದವರಲ್ಲಿ ಕಲೆ ಇರಲ್ಲ. ಇದಕ್ಕೆ ಅಹನಾ ಕುಮ್ರಾ ಸದ್ಯದ ಉದಾಹರಣೆ. ಹೌದು, ಅಹನಾ ಕುಮ್ರಾ.. ಒಂದ್ಕಾಲದಲ್ಲಿ ಪ್ರಸಾರವಾದ ಯುದ್ದ್ ಎಂಬ ಕಿರುತೆರೆಯ ಕಾರ್ಯಕ್ರಮದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದ ನಾಯಕಿ. ವಿಶೇಷ ಅಂದರೆ 20 ಸಂಚಿಕೆಗಳ ಈ ಸರಣಿಯಲ್ಲಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರೆ ಅಹನಾ ಬಿಗ್ ಬಿಯ ಮಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ತಮ್ಮ ಅಭಿನಯದಿಂದ ಎಲ್ಲರ ಗಮನವನ್ನು ಕೂಡ ಸೆಳೆದರು.

ಆ ನಂತರ ಏಜೆಂಟ್ ರಾಘವ್ ಎಂಬ ಮತ್ತೊಂದು ಕಿರುತೆರೆಯ ಸರಣಿಯಲ್ಲಿ ಕಾಣಿಸಿಕೊಂಡ ಅಹನಾ ಆ ನಂತರ 2013ರಲ್ಲಿ ಬೆಳ್ಳಿ ತೆರೆಗೆ ಬಂದರು. ಸೋನಾ ಸ್ಪಾ ಚಿತ್ರದ ಮೂಲಕ ಚಿತ್ರದ ನಾಯಕಿಯಾಗಿ ಬಡ್ತಿ ಪಡೆದರು. ಆದರೆ, ಬಾಲಿವುಡ್ ಇವರನ್ನು ಒಪ್ಪಲಿಲ್ಲ. ಅಪ್ಪಿಕೊಳ್ಳಲಿಲ್ಲ. ಈ ಕಾರಣಕ್ಕೆ ಕುಡ್ಲಾ ಕೆಫೆ ಎಂಬ ತುಳು ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಅಹನಾ ಆ ನಂತರ ಒಂದಾದ ಮೇಲೊಂದು ಕಿರುಚಿತ್ರಗಳಲ್ಲಿ ಕಾಣಿಸಿಕೊಂಡರು. ಕಿರುಚಿತ್ರಗಳಲ್ಲಿ ಅಭಿನಯಿಸುತ್ತಾ ಎಲ್ಲರ ಗಮನಸೆಳೆದ ಅಹನಾ ಅದೃಷ್ಟ ವೆಬ್ ಸರಣಿಗಳಲ್ಲಿತ್ತು.

This actress who worked with Amitabh Bachchan and Kajol has been jobless for three years now

2016ರಲ್ಲಿ ವೆಬ್ ಸರಣಿ ಪ್ರಪಂಚಕ್ಕೆ ಧುಮುಕಿದ ಅಹನಾ ಇನ್‌ಸೈಡ್ ಎಡ್ಜ್‌ , ರಂಗಬಾಜ್, ಮರ್ಜಿ, ಬೇತಾಳ್, ಹೀಗೆ ಒಂದಾದ ಮೇಲೊಂದು ಅವಕಾಶಗಳನ್ನು ಪಡೆದರು. ತಮ್ಮ ಅಭಿನಯ ಸಾಮರ್ಥ್ಯದ ಪ್ರದರ್ಶನವನ್ನು ಕೂಡ ಮಾಡಿದರು. ಇದರ ನಡುವೆ ಮಧುರ್ ಭಂಡಾರಕರ್ ನಿರ್ದೇಶನದ ಇಂಡಿಯಾ ಲಾಕ್ ಡೌನ್, ಕಾಜೋಲ್ ಅಭಿನಯದ ಸಲಾಂ ವೆಂಕಿ ಚಿತ್ರಗಳ ಮೂಲಕ ಬೆಳ್ಳಿತೆರೆಗೆ ಕೂಡ ಅಹನಾ ಮರಳಿದರು.

ಇಂಥಾ ಅಹನಾ ಕುಮ್ರಾ ಕಳೆದ ಮೂರು ವರ್ಷಗಳಿಂದ ಖಾಲಿ ಕುಳಿತಿದ್ದಾರೆ. ಇಂದಲ್ಲ ನಾಳೆ ಯಾರಾದರೂ ಕರೆದು ಅವಕಾಶವನ್ನು ನೀಡಬಹುದು ಎಂದು ಕಾಯುತ್ತಿದ್ದಾರೆ. ದುರಾದೃಷ್ಟ.. ಮೂರು ವರ್ಷ ಉರುಳಿದರು ಕೂಡ ಬಾಲಿವುಡ್‌ನಲ್ಲಿ ಯಾರೊಬ್ಬರಿಗೂ ಅಹನಾ ನೆನಪಾಗಲಿಲ್ಲ.

ಇನ್ನೂ.. ಚಿತ್ರರಂಗದಲ್ಲಿ ಬೆಳೆಯಬೇಕು ಎಂದರೆ ಗಾಡ್ ಫಾದರ್ ಇರಬೇಕು, ಕೈಯಲ್ಲಿ ಹಣ ಇರಬೇಕು. ಅಹನಾ ಕಡೆ ಇವೆರಡು ಇಲ್ಲ. ಈ ಕಾರಣಕ್ಕೆ ಇನ್ನೂ ಅವಕಾಶಕ್ಕೆ ಕಾದು ಕುಂತರೆ ಒಂದೊತ್ತಿನ ಊಟಕ್ಕೂ ಪರದಾಡಬೇಕಾಗುತ್ತೆ ಎಂದು ಆಕ್ಟಿಂಗ್‌ನ್ನೇ ತೊರೆಯುವ ನಿರ್ಧಾರಕ್ಕೆ ಅಹನಾ ಬಂದಿದ್ದಾರೆ. ತಮ್ಮದೇ ಚಿಕ್ಕ ನಿರ್ಮಾಣ ಸಂಸ್ಥೆಯನ್ನು ಆರಂಭ ಮಾಡಿ ಚಿತ್ರರಂಗಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತಮ್ಮನ್ನು ತೋಡಗಿಸಿಕೊಳ್ಳಲು ಮುಂದಾಗಿದ್ದಾರೆ.

ಈ ಕುರಿತು ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಹನಾ ಕಳೆದ ಮೂರು ವರ್ಷಗಳಿಂದ ಕೆಲಸ ಇಲ್ಲ. ಯಾರು ಅವಕಾಶ ಕೊಡುತ್ತಿಲ್ಲ ಎಂದಿದ್ದಾರೆ. ಮೊದಲು ನನಗೆ ಓಟಿಟಿ ವೇದಿಕೆಯಲ್ಲಾದರೂ ಕೆಲಸ ಸಿಗುತ್ತಿತ್ತು. ಆದರೆ ಮೂರು ವರ್ಷಗಳಿಂದ ಅಲ್ಲಿಯೂ ಕೂಡ ಅವಕಾಶದ ಬರ ಎದುರಾಗಿದೆ ಎಂದಿದ್ದಾರೆ. ಇನ್ನೂ ಜೀವನ ನಿರ್ವಹಣೆಗೆ ಹಣ ಬೇಕು ಹೀಗಾಗಿ ಕಾದು-ಸಾಕಾಗಿ ಪ್ರೊಡಕ್ಷನ್ ಹೌಸ್ ಶುರು ಮಾಡುತ್ತಿದ್ದೇನೆ ಎಂದು ಹೇಳಿರುವ ಅಹನಾ ಇಲ್ಲಿ ಎಲ್ಲರಿಗೂ ದೊಡ್ಡ ದೊಡ್ಡ ಸ್ಟಾರ್‌ ನಾಯಕಿಯರೇ ಬೇಕು, ನಮಗೆಲ್ಲ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ಒಂದು ರೀತಿ ಫಿಶ್ ಮಾರ್ಕೆಟ್ ಆದಂತೆ ಆಗಿದೆ ಇಲ್ಲಿ ಯಾವತ್ತು ಬೇಕಾದರೂ ಯಾರ ಬೇಕಾದರೂ ಬಂದು ನಿಮ್ಮನ್ನು ಆಚೆ ಕಳುಹಿಸಬಹುದು ಎಂದು ಕೂಡ ಅಹನಾ ಕುಮ್ರಾ ಹೇಳಿದ್ದಾರೆ.

More from Filmibeat

Read more about: life actress bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X