ತಮ್ಮ 44ನೇ ವಯಸ್ಸಿನಲ್ಲಿ 12 ಕೋಟಿ ಸಂಭಾವನೆ ಪಡೆಯುವ ಈ ನಾಯಕಿ ಬಳಿ ಇದೆ 485 ಕೋಟಿ ಆಸ್ತಿ..!

ಚಿತ್ರದಿಂದ ಚಿತ್ರಕ್ಕೆ.. ಪಾತ್ರದಿಂದ ಪಾತ್ರಕ್ಕೆ.. ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾದವರು ಕರೀನಾ ಕಪೂರ್ ಖಾನ್. ಕಪೂರ್ ಖಾನ್ದಾನ್‌ನಲ್ಲಿ ಜನ್ಮ ಪಡೆದು, ತಮ್ಮ ಅಜ್ಜ-ಅಪ್ಪನ ನೆರಳಿನಾಚೆ ತಮ್ಮದೇ ಬದುಕು ಕಟ್ಟಿಕೊಂಡ ಕರೀನಾ ಕಪೂರ್ ಗೆ ವಯಸ್ಸು 44 ಆದರೂ ಕೂಡ ಬೇಡಿಕೆ ಮಾತ್ರ ಇಂದಿನ ಯುವ ನಾಯಕಿಯರಿಗೆ ಇರುವಷ್ಟೇ ಇದೆ.

ಮದ್ವೆಯಾದ ನಂತರ ಹೆಣ್ಣು ಮಕ್ಕಳಿಗೆ ಚಿತ್ರರಂಗದಲ್ಲಿ ಅವಕಾಶ ಸಿಗುವುದಿಲ್ಲ ಎಂಬ ಮಾತುಗಳಿಗೆ ಅಪವಾದ ಎಂಬಂತೆ, ಮದ್ವೆಯಾಗಿ ಎರಡು ಮಕ್ಕಳ ತಾಯಿಯಾದರೂ ಕೂಡ ಇವತ್ತು ಬಾಲಿವುಡ್‌ನಲ್ಲಿ ತಮ್ಮದೇ ಬೆಲೆ ಹೊಂದಿರುವ ಕರೀನಾ ಕಪೂರ್ ಸದ್ಯ ತಮ್ಮ ''ದಿ ಬಕಿಂಗ್ಹ್ಯಾಮ್ ಮರ್ಡರ್ಸ್'' ಚಿತ್ರಕ್ಕೆ ಸಿಕ್ತಿರುವ ಪ್ರತಿಕ್ರಿಯೆಯಿಂದ ಪುಳಕಿತಗೊಂಡಿದ್ದಾರೆ.

This actress with a net worth of 485 crore and a remuneration of 12 crore per film owns luxury car

ನಿಜಾ. ಮರುಬಿಡುಗಡೆಯಾದ ''ತುಂಬಾಡ್'' ಕರೀನಾ ನಿರ್ಮಾಣದ ''ದಿ ಬಕಿಂಗ್ಹ್ಯಾಮ್ ಮರ್ಡರ್ಸ್'' ಚಿತ್ರಕ್ಕೆ ಮುಳ್ಳಾಗಿದೆ. ಆದರೂ.. ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿಯಿಂದ ಕರೀನಾ ಕಪೂರ್ ಖುಷಿಯಾಗಿದ್ದಾರೆ. ಕೊನೆ ಪಕ್ಷ ಚಿತ್ರ ಹತ್ತು ಕೋಟಿಯನ್ನಾದರೂ ಕೊಳ್ಳೆ ಹೊಡೆಯಿತಲ್ಲ ಅಷ್ಟೇ ಸಾಕು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇಂಥಾ ಕರೀನಾ ಕಪೂರ್ ಖಾನ್ 485 ಕೋಟಿ ಆಸ್ತಿಯ ಒಡತಿ ಹೌದು ಅನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ. ಹೌದು, ಮನ್ಸೂರ್ ಅಲಿ ಖಾನ್ ಪಟೌಡಿಯ ಸೊಸೆಯಾಗಿರುವ ಕರೀನಾ ಕಪೂರ್ ಇಲ್ಲಿಯವರೆಗೆ ತಮ್ಮ ಬೆವರು ಸುರಿಸಿ 485 ಕೋಟಿ ಹಣವನ್ನು ಸಂಪಾದಿಸಿದ್ದಾರೆ. ಇನ್ನೂ.. ಸಾಮಾನ್ಯವಾಗಿ ಮದುವೆಯಾದ ನಂತರ ಅಮ್ಮನ ಪಾತ್ರವನ್ನು ನಿರ್ವಹಿಸಲು ಅನೇಕರು ತಲೆಯಾಡಿಸುತ್ತಾರೆ. ಆದರೆ, ವಯಸ್ಸು ನಲವತ್ತ್ನಾಲ್ಕು ಆದರೂ ನಾಯಕಿ ಪಾತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವ, ಮಹಿಳಾ ಪ್ರಧಾನ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವ ಕರೀನಾ ಕಪೂರ್ ಖಾನ್ ಚಿತ್ರವೊಂದಕ್ಕೆ ದುಬಾರಿ ಸಂಭಾವನೆಯನ್ನು ಕೂಡ ಪಡೆಯುತ್ತಾರೆ. ಬಾಲಿವುಡ್‌ನಲ್ಲಿ ಕೇಳಿ ಬರುವ ಸುದ್ದಿಯ ಪ್ರಕಾರ ಕರೀನಾ ಕಪೂರ್ ಚಿತ್ರವೊಂದಕ್ಕೆ ಹತ್ತರಿಂದ ಹನ್ನೆರಡು ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ.

This actress with a net worth of 485 crore and a remuneration of 12 crore per film owns luxury car

ಇನ್ನೂ ಜಾಹೀರಾತುಗಳಲ್ಲಿ ಹೀಗೆ ಬಂದು ಹಾಗೇ ಹೋಗಲು ಕರೀನಾ ಕಪೂರ್ ಖಾನ್ ಐದರಿಂದ ಆರು ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಾರೆ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮದ ಜಡ್ಜ್ ಆಗಲು ಮೂರು ಕೋಟಿ ಹಣವನ್ನು ಕೂಡ ಪಡೆಯುತ್ತಾರೆ ಕರೀನಾ ಕಪೂರ್ ಎಂದು ಇಡೀ ಮುಂಬೈ ಮಾತನಾಡಿಕೊಳ್ಳುತ್ತೆ. ಹೀಗೆ ಕೋಟಿ ಹಣವನ್ನು ಕಮಾಯಿಸುವ ಕರೀನಾ ಕಪೂರ್ ಬಳಿ ಐಶಾರಾಮಿ ಕಾರುಗಳೂ ಇವೆ. ಆ ಪೈಕಿ 1.3 ಕೋಟಿಯ BMW X7 ಒಂದಾದರೆ 1.76 ಕೋಟಿಯ Mercedes-Benz S-Class ಕೂಡ ಒಂದು. ಇವೆರಡು ಅಲ್ಲದೆ 96.34 ಲಕ್ಷದ Audi Q7 ಕಾರು ಕೂಡ ಕರೀನಾ ಕಪೂರ್ ಬಳಿ ಇದೆ.

ಇದಲ್ಲದೆ ಬಾಂದ್ರಾದಲ್ಲಿ 103 ಕೋಟಿ ಮೌಲ್ಯದ ಭವ್ಯವಾದ ಅರಮನೆಯನ್ನೂ ಕೂಡ ಕರೀನಾ ಕಪೂರ್ ಹೊಂದಿದ್ದಾರೆ. ತಮ್ಮ ಪತಿ ಸೈಫ್ ಅಲಿ ಖಾನ್ ಮತ್ತು ಮಕ್ಕಳ ಜೊತೆ ಕರೀನಾ ಕಪೂರ್ ಇಲ್ಲಿಯೇ ವಾಸವಿದ್ದು, ಸೈಫ್ ಅಲಿ ಖಾನ್ ಒಡೆತನದ ಪಟೌಡಿ ಬಂಗ್ಲೆ 800 ಕೋಟಿ ಬೆಲೆ ಬಾಳುತ್ತೆ. ಉಳಿದಂತೆ ಈ ಆಸ್ತಿ ಪಾಸ್ತಿಯನ್ನು ಹೊರತು ಪಡಿಸಿದರೆ ಸದ್ಯಕ್ಕೆ ಕರೀನಾ ಕಪೂರ್ ಖಾನ್ ಅಭಿನಯದ ಸಿಂಗಂ ರಿಟರನ್ಸ್ ಚಿತ್ರ ತೆರೆಗೆ ಬರಬೇಕಿದೆ. ಅಜಯ್ ದೇವಗನ್ ಅಭಿನಯದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನೂ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಪ್ರಭಾಸ್ ಅಭಿನಯದ ಸ್ಪಿರಿಟ್ ಚಿತ್ರದ ನಾಯಕಿ ಕರೀನಾ ಕಪೂರ್ ಎನ್ನುವ ಸುದ್ದಿ ಸದ್ಯಕ್ಕೆ ಕೇಳಿ ಬರುತ್ತಿದೆ. ಆದರೆ ಈ ಸುದ್ದಿಯ ಮೇಲೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆಗಲಿ ಕರೀನಾ ಕಪೂರ್ ಆಗಲಿ ಅಧಿಕೃತವಾದ ಮೊಹರು ಒತ್ತಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X