ಬಾಯ್‌ಫ್ರೆಂಡ್ ಜೊತೆ ಗೋವಾದಲ್ಲಿ ಫುಲ್ ಜಾಲಿ ಮಾಡ್ತಿರುವ ಸ್ಟಾರ್ ನಟಿ...!
ಪ್ರೀತಿ-ಪ್ರೇಮಕ್ಕೆ ಕಾಲ ದೇಶಗಳ ಕಟ್ಟುಪಾಡಿಲ್ಲ. ಜಾತಿ ಮತ ಪಂಥಗಳ ಗೊಡವೆಯೂ ಇಲ್ಲ. ಪ್ರೀತಿ ಕೇಳುವುದು ಪ್ರೀತಿಯೊಂದನ್ನು ಮಾತ್ರ ಎನ್ನುವ ಮಾತು ಇದೆ. ಈ ಮಾತನ್ನು ಚಿತ್ರರಂಗದಲ್ಲಿ ಇಲ್ಲಿಯವರೆಗೆ ಅನೇಕರು ರುಜುವಾತು ಪಡಿಸಿದ್ದಾರೆ. ಆ ಪೈಕಿ ವಿಜಯ್ ವರ್ಮಾ ಮತ್ತು ತಮನ್ನಾ ಜೋಡಿ ಕೂಡ ಒಂದು.
ಹೌದು, ತಮನ್ನಾ ಮತ್ತು ವಿಜಯ್ ವರ್ಮಾ ಪ್ರೀತಿಯಲ್ಲಿ ಬಿದ್ದು ಅನೇಕ ದಿನಗಳಾಗಿವೆ. ಎಲ್ಲರಂತೆ ತಮ್ಮ ಪ್ರೀತಿಯನ್ನು ಮುಚ್ಚಿಡದೇ, ಕದ್ದು ಮುಚ್ಚಿ ಪ್ರೀತಿಯನ್ನು ಮಾಡದೇ, ತಮ್ಮ ನಡುವೆ ಪ್ರೇಮಾಂಕುರವಾಗಿರುವುದು ನಿಜಾ ಎಂದು ಒಪ್ಪಿಕೊಂಡಿರುವ ಇಬ್ಬರು ಮುಂದಿನ ವರ್ಷ ಮದ್ವೆಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರ ನಡುವೆ ಇಬ್ಬರು ಗೋವಾದಲ್ಲಿ ಆತ್ಮೀಯ ಕ್ಷಣಗಳನ್ನು ಕಳೆದಿದ್ದಾರೆ.

ಹೌದು, ಮೊನ್ನೆಯಷ್ಟೇ 35ನೇ ವಸಂತಕ್ಕೆ ಪಾದಾರ್ಪಣೆಯನ್ನು ಮಾಡಿರುವ ತಮನ್ನಾ, ತಮ್ಮ ಕೆಲ ಆಪ್ತ ಸ್ನೇಹಿತರ ಜೊತೆ ಗೋವಾದಲ್ಲಿ ತಮ್ಮ ಬರ್ತ್‌ಡೇಯನ್ನು ಆಚರಿಸಿಕೊಂಡಿದ್ದಾರೆ. ಸ್ನೇಹಿತರ ಈ ಗುಂಪಿನಲ್ಲಿ ತಮನ್ನಾ ಅವರ ಹೃದಯ ಗೆದ್ದ ಚೋರ ವಿಜಯ್ ವರ್ಮಾ ಕೂಡ ಇದ್ದಾರೆ. ತಮ್ಮ ಪ್ರಿಯಕರನ ಜೊತೆ ವಿಡಿಯೋ ಗೇಮ್ ಆಡಿ ತಮನ್ನಾ ಸಂಭ್ರಮಿಸಿದ್ದಾರೆ.
ಸದ್ಯಕ್ಕೆ ತಮನ್ನಾ ಮತ್ತು ವಿಜಯ್ ವರ್ಮಾ ಅವರ ಗೋವಾ ವೆಕೆಷನ್‌ನ ಫೋಟೊ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ತಮನ್ನಾ ಅವರ ಫೋಟೊಗಳಿಗೆ ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿವೆ. ಅದರಲ್ಲಿಯೂ ತಮನ್ನಾ ಅವರ ಕೊರಳಿನಲ್ಲಿರುವ ನೆಕ್ಲೆಸ್ ಅನೇಕರ ಗಮನವನ್ನು ಸೆಳೆಯುತ್ತಿದೆ.

ಅಂದ್ಹಾಗೇ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದ ಲಸ್ಟ್ ಸ್ಟೋರೀಸ್ 2 ಚಿತ್ರದ ಚಿತ್ರೀಕರಣದ ಸಮಯದಲ್ಲಿ ಮೊದಲು ಮುಖಾಮುಖಿಯಾಗಿದ್ದರು. ಅಲ್ಲಿ ಅರಳಿದ ಸ್ನೇಹ ಇದೇ ಲಸ್ಟ್ ಸ್ಟೋರೀಸ್ 2 ಚಿತ್ರದ ಚಿತ್ರೀಕರಣ ಮುಕ್ತಾಯವಾದ ನಂತರ ಪ್ರೀತಿಯ ಸ್ವರೂಪ ಪಡೆಯಿತು. ಚಿತ್ರದ ಚಿತ್ರೀಕರಣ ಮುಕ್ತಾಯವಾದ ನಂತರ ತಮನ್ನಾ ಜೊತೆ ಪಾರ್ಟಿ ಮಾಡಿದ್ದ ವಿಜಯ್ ವರ್ಮಾ ನಿಮ್ಮ ಜೊತೆ ಇನ್ನು ಹೆಚ್ಚೆಚ್ಚು ಕಾಲ ಕಳೆಯಬೇಕೆಂದು ಹೇಳಿದ್ದರು. ಆ ನಂತರ ತಮನ್ನಾ ಅವರ ಪ್ರತಿಕ್ರಿಯೆಗೆ 25ದಿನ ಕೂಡ ಕಾದರು.
ಇನ್ನುಳಿದಂತೆ ಕೆಲ ದಿನಗಳ ಹಿಂದೆ ತಮ್ಮ ಸಂಬಂಧದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಜಯ್ ವರ್ಮಾ ಎಲ್ಲರಿಗೂ ಬೇರೆಯವರ ಜೀವನದಲ್ಲಿ ಏನೆಲ್ಲ ಆಗುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲ ಅದಕ್ಕೆ ನಾವೇನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಜಗತ್ತು ಇರುವುದೇ ಹಾಗೇ, ಕೆಲಸದಲ್ಲಿ ನನ್ನಿಂದ ತಪ್ಪಾದರೆ ಹೇಳಿ ಆಗ ನಾನು ತಿದ್ದಿಕೊಳ್ಳುತ್ತೇನೆ ಎಂದು ಕೂಡ ವಿಜಯ್ ವರ್ಮಾ ಹೇಳಿದ್ದರು.
ಮುಂದುವರೆದು ಪ್ರೀತಿ ಮಾಡಿದ ನಂತರ ಜಗಕೆ ಯಾಕೆ ಹೆದರಬೇಕು ಎಂಬ ಪ್ರಶ್ನೆಯನ್ನು ಕೇಳಿದ್ದ ವಿಜಯ್ ವರ್ಮಾ, ಇಬ್ಬರು ಒಪ್ಪಿದ ಮೇಲೆ, ಇಬ್ಬರು ಜೊತೆಯಾಗಿ ಕಾಲ ಕಳೆಯುವ ನಿರ್ಧಾರವನ್ನು ಮಾಡಿದ ಮೇಲೆ, ಕದ್ದು-ಮುಚ್ಚಿ ಓಡಾಡುವುದರಲ್ಲಿ ಅರ್ಥ ಇಲ್ಲ ಎಂದು ಹೇಳಿದ್ದರು. ನಮ್ಮ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೂ ನಾವು ನಮ್ಮ ಸಂಬಂಧದಲ್ಲಿ ಇನ್ನೂ ಖಾಸಗಿತನ ಉಳಿಸಿಕೊಂಡಿದ್ದೇವೆ ಎಂದು ಕೂಡ ಹೇಳಿದ್ದರು.
ಇನ್ನೂ ತಮನ್ನಾ ಸಂಬಂಧಗಳಲ್ಲಿ ಸುಳ್ಳು ಹೇಳುವರನ್ನು ಕೂಡ ನಾವು ಯಾವತ್ತು ನಂಬಬಾರದು ಎಂದು ಹೇಳಿದ್ದರು. ಚಿಕ್ಕ ಚಿಕ್ಕ ವಿಚಾರಕ್ಕೆಲ್ಲ ಸುಳ್ಳು ಹೇಳುವವರು ಹುಟ್ಟಾ ಸುಳ್ಳುಗಾರರಾಗಿರುತ್ತಾರೆ ಎಂದು ಹೇಳಿದ್ದ ತಮನ್ನಾ ಸುಳ್ಳಿನ ಮೇಲೆ ಸಂಬಂಧದ ಸೌಧ ಕಟ್ಟಿ ನಿಲ್ಲಿಸಲು ಸಾಧ್ಯ ಇಲ್ಲ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದರು. ಒಂದು ಸಂಬಂಧ ಯಶಸ್ವಿಯಾಗಿ ಮುಂದುವರೆಯಬೇಕೆಂದರೆ ಪುರುಷರಲ್ಲಿ ಕೇಳಿಸಿಕೊಳ್ಳುವ ತಾಳ್ಮೆ ಇರಬೇಕು ಎಂದು ಹೇಳಿದ್ದರು.


Click it and Unblock the Notifications











