ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ ; ಮೊದಲ ಮದುವೆ, ಆ ನರಕಯಾತನೆ , 25 ವರ್ಷ- ಸತ್ಯ ಹೇಳಿ ಕಣ್ಣೀರಾದ ಖ್ಯಾತ ನಟಿ
ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗ ಅಂದ ಕೂಡಲೇ ಕಣ್ತುಂಬ ಬಣ್ಣ ತುಂಬಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ.. ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಂಡವರಿಗೆ ಕೂಡ ಕಷ್ಟ ಇರುತ್ತೆ. ಅವರದ್ದೇ ಆದ ದು:ಖ ಸಂಕಟಗಳಿರುತ್ತವೆ. ವ್ಯೆಯಕ್ತಿಕ ಜೀವನದಲ್ಲಿ ಎಷ್ಟೇ ಪ್ರಯತ್ನ ಮಾಡಿದರು ಕೂಡ ಇವರಿಗೆ ನೆಮ್ಮದಿ ಸಿಗುವುದಿಲ್ಲ. ಹಲವು ರೀತಿಯಲ್ಲಿ ಹಲವರು ಇಲ್ಲಿ ಒಳಗೊಳಗೆ ನೋವು ಅನುಭವಿಸುತ್ತಿರುತ್ತಾರೆ. ಮತ್ತೂ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ.
ಇನ್ನೂ ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಹಣ, ಅಂತಸ್ತು, ಕೀರ್ತಿ, ಎಲ್ಲವೂ ಇರುವ ಕೆಲ ಸೆಲೆಬ್ರೆಟಿಗಳ ಬದುಕಿನಲ್ಲಿ ಒಮ್ಮೊಮ್ಮೆ ಪ್ರೀತಿ ಮರಿಚೀಕೆಯಾಗಿರುತ್ತೆ. ಯಾರನ್ನು ಇವರು ಹೆಚ್ಚು ಪ್ರೀತಿಸುತ್ತಾರೋ? ಅತಿಯಾಗಿ ಮೋಹಿಸುತ್ತಾರೋ? ಇನ್ನಿಲ್ಲದಂತೆ ಇಷ್ಟಪಡುತ್ತಾರೋ ? ಅವರೇ ಕಾಡಿಸಿ ಪೀಡಿಸಿ ನಿರಾಸೆಯನ್ನುಂಟು ಮಾಡುತ್ತಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರರಂಗದಲ್ಲಿನ ಹಲವಾರು ತಾರೆಯರ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಪರಸ್ಪರ ಪ್ರೀತಿ ವಿಶ್ವಾಸ.. ಗೌರವ.. ನಂಬಿಕೆ..ಬದ್ಧತೆಯ ಬದಲು ಸಾಂಸಾರಿಕ ಜೀವನದಲ್ಲಿ ಅನೈತಿಕ ಸಂಬಂಧ .. ಕೌಂಟಬಿಕ ಕಲಹ .. ವೈಮನಸ್ಸು .. ಸಂಶಯ .. ಮಾನಸಿಕ-ದೈಹಿಕ ಕಿರುಕುಳ.. ಇತ್ಯಾದಿ ವಿಚಾರಗಳು ಮನೆ ಮಾಡಿ ಮನಸುಗಳು ಒಡೆದು ಹೋಗಿವೆ. ಉದಾಹರಣೆಗೆ ಶೆಫಾಲಿ ಶಾ.
ಹೌದು, ಶೆಫಾಲಿ ಶಾ.. ಬಾಲಿವುಡ್‌ನ ಖ್ಯಾತ ನಟಿ. ಪಾತ್ರ ಯಾವುದೇ ಇರಲಿ ಆ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸುವ ಶೆಫಾಲಿ ಚಿತ್ರರಂಗದಲ್ಲಿ 30 ವರ್ಷಗಳನ್ನು ಪೂರೈಸಿದ್ದಾರೆ. ''ರಂಗೀಲಾ''.. ''ಸತ್ಯ''.. ''ಮೊಹಬ್ಬತ್ತೇ''.. ''ವಕ್ತ್''.. ''ಕಾರ್ತಿಕ್ ಕಾಲಿಂಗ್ ಕಾರ್ತಿಕ್''.. ''ದಿಲ್ ಧಡ್ಕನೇ ದೋ''.. ಅಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ''ಜಲ್ಸಾ''.. ''ಡಾರ್ಲಿಂಗ್ಸ್''.. ''ಹುಮನ್''.. ''ದೆಹಲಿ ಕ್ರೈಮ್''.. ಅಂತರ ಜನ ಮನ ಗೆದ್ದ ವೆಬ್ ಸರಣಿಗಳನ್ನು ಕೂಡ ಮಾಡಿದ್ದಾರೆ.
ಇಂಥಾ ಶೆಫಾಲಿ ಶಾ ತಾವು ಮೊದಲ ಮದುವೆಯಿಂದ ಅನುಭವಿಸಿದ ಭಾವನಾತ್ಮಕವಾದ ಹಿಂಸೆಯ ಕುರಿತು ಮಾತನಾಡಿದ್ದಾರೆ. ಈ ಕುರಿತು ''ಜೂಮ್'' ವಾಹಿನಿಯ ''ಸ್ಪಾಟ್‌ಲೈಟ್ ಸೆಷನ್ಸ್'' ಕಾರ್ಯಕ್ರಮದಲ್ಲಿ ಮಾತನಾಡಿರುವ ಶೆಫಾಲಿ ಶಾ ಮೊದಲ ಮದುವೆಯಾದ ನಂತರ ನಾನು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದಿದ್ದಾರೆ.
ದೈಹಿಕ ಹಿಂಸೆ ಮಾತ್ರವಲ್ಲ ಮಾನಸಿಕ ಹಿಂಸೆ ಕೂಡ ಗಾಢವಾದ ಪರಿಣಾಮ ಬೀರುತ್ತೆ ಎಂದು ಹೇಳಿರುವ ಶೆಫಾಲಿ ಶಾ ನೀವು ಯಾರಲ್ಲಾದರೂ ಮಾನಸಿಕ ಕಿರುಕುಳದ ಕುರಿತು ಪ್ರಸ್ತಾಪ ಮಾಡಿ ಆಗ ಓ ನೀವು ಜಗಳ ಮಾಡಿಕೊಂಡಿದ್ದೀರಾ..? ಯಾರಾದರೂ ನಿಮಗೆ ನೋವು ಆಗುವಂತೆ ಮಾತನಾಡಿದ್ರಾ..? ಸಂಬಂಧದಲ್ಲಿ ನಿಮಗೆ ಯಾರಾದರೂ ಅವಮಾನ ಮಾಡಿದರಾ..? ಎಂದಷ್ಟೇ ಪ್ರತಿಕ್ರಿಯೆ ನೀಡುತ್ತಾರೆ. ಎಲ್ಲ ಸಂಬಂಧಗಳಲ್ಲಿಯೂ ಇದು ತುಂಬಾ ಸಹಜ ಎಂಬಂತೆ ಮಾತುಗಳನ್ನಾಡುತ್ತಾರೆ. ಹೀಗಾಗಿ ನಾನು ಈ ವಿಚಾರ ಪ್ರಸ್ತಾಪಿಸಬೇಕಾಯ್ತು. ನಮ್ಮಲ್ಲಿ ಅನೇಕರು ಇಂತಹ ಪರಿಸ್ಥಿತಿಯನ್ನು ಎದುರಿಸಿರುತ್ತೇವೆ ಎಂದು ಹೇಳಿದ್ದಾರೆ.

ದೈಹಿಕವಾಗಿ ಹಲ್ಲೆ ಮಾಡದೇ ಕೂಗಾಡುವುದು, ಮಾತು ಮಾತಿಗೂ ಹಂಗಿಸುವುದು ಕೂಡ ಕಿರುಕುಳ ಎನ್ನುವುದನ್ನು ನಮ್ಮ ಸಮಾಜ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿರುವ ಶೆಫಾಲಿ ಶಾ ಇಂತಹ ಮಾತುಗಳಿಂದ ವ್ಯಕ್ತಿಯ ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತೆ ಎಂದು ಯಾರು ಅರ್ಥ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಮುಂದುವರೆದು ತಮ್ಮ ಮೊದಲ ಪತಿ ಹರ್ಷ ಛಾಯಾ ಜೊತೆ ಒಂದೇ ಸೂರಿನಡಿ ಇರುವುದಕ್ಕಿಂತ ಒಬ್ಬಳೇ ಇರುವುದು ಉತ್ತಮ ಎಂಬ ಭಾವನೆ ನನ್ನಲ್ಲಿ ಬಂತು ಎಂದು ಹೇಳಿರುವ ಶೆಫಾಲಿ ಪರಿಪೂರ್ಣವಾಗಲು ಗಂಡ, ಸ್ನೇಹಿತೆ, ಅಣ್ಣ, ತಂಗಿ, ಯಾರೂ ಬೇಕಿಲ್ಲ. ನಮಗೆ ನಾವೇ ಸಾಕು. ಪ್ರತಿಯೊಬ್ಬರೂ ಸ್ವತಃ ಪರಿಪೂರ್ಣರಾಗಿರುತ್ತಾರೆ ಎಂದು ಹೇಳಿದ್ದಾರೆ. ಉತ್ತಮ ಸಂಬಂಧಗಳು ಸಿಕ್ಕರೆ ಒಳ್ಳೆಯದು. ಇಲ್ಲದಿದ್ದರೆ ಆ ಸಂಬಂಧಗಳು ನಿಮ್ಮ ಮೌಲ್ಯವನ್ನು ನಿರ್ಧರಿಸುವುದಿಲ್ಲ ಎಂದು ನನಗೆ ಯಾರು ಹೇಳಿರಲಿಲ್ಲ ಎಂದಿದ್ದಾರೆ.
ಮದುವೆಯ ನಂತರ ನನಗೆ ವಾಸ್ತವದ ಅರಿವು ಆಯ್ತು, ಹೀಗೆ ಮುಂದುವರೆದರೆ ಈ ಹಿಂಸೆ ನನ್ನನ್ನು ಕೊಲ್ಲಬಹುದು ಎಂಬ ಭಾವನೆ ಬರಲು ಶುರುವಾಯ್ತು. ಹೀಗಾಗಿ ಇನ್ನೂ ಮುಂದೆ ಸಹಿಸಲು ಸಾಧ್ಯ ಇಲ್ಲವೇ ಇಲ್ಲ ಎಂದು ನಾನು ಹೊರಗಡೆ ಬಂದೆ ಎಂದು ಭಾವುಕರಾಗಿರುವ ಶೆಫಾಲಿ ಶಾ ವಯಸ್ಸಾದಂತೆ ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನದಿಂದ ನಾನು ಆಯಾಸಗೊಂಡೆ , ನಾನು ಪಿಜ್ಜಾ ಅಲ್ಲ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡೆ ಎಂದಿದ್ದಾರೆ.
ಇದೇ ಸಮಯದಲ್ಲಿ ಮೊದಲ ಸಂಬಂಧದಿಂದ ಹೊರ ಬರಲು ನಿರ್ಧಾರ ಮಾಡಿದಾಗ ಒಮ್ಮೆ ನನ್ನ ಆಪ್ತ ಗೆಳೆಯ ಮುಂದೆ ನಿನಗೆ ನಿಜವಾದ ಪ್ರೀತಿ ಸಿಗದೇ ಹೋದರೆ..? ಬದುಕು ಆಗ ಕೂಡ ರಿಸ್ಕ್ ಆಗಲ್ವಾ..? ಎಂದು ಕೇಳಿದ ಆಗ ನಾನು ರಿಸ್ಕ್ ತೆಗೆದುಕೊಳ್ಳುತ್ತೇನೆ ಹೊರತು ಸಂತೋಷ ಇರದ ಜಾಗದಲ್ಲಿ ಉಳಿಯಲು ಸಾಧ್ಯ ಇಲ್ಲ ಎಂದು ಹೇಳಿದ್ದೇ ಎನ್ನುವುದನ್ನು ಕೂಡ ಶೆಫಾಲಿ ನೆನಪು ಮಾಡಿಕೊಂಡಿದ್ದಾರೆ.
ಅಂದ್ಹಾಗೇ ಶೆಫಾಲಿ ಶಾ 1994ರಲ್ಲಿ ಹರ್ಷ್ ಛಾಯಾ ಜೊತೆ ಮದುವೆಯಾಗಿದ್ದರು. 6 ವರ್ಷದ ನಂತರ ಈ ಸಂಬಂಧ ಮುರಿದು ಬಿತ್ತು. ಆ ನಂತರ 2000ನೇ ಇಸ್ವಿಯಲ್ಲಿ ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ ನಿರ್ದೇಶಕ ವಿಫುಲ್ ಶಾ ಜೊತೆ ಶೆಫಾಲಿ ಎರಡನೇ ಮದುವೆಯಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯಕ್ಕೆ ಶೆಫಾಲಿ ಸುಖಿ ಸಂಸಾರಿ.


Click it and Unblock the Notifications











