583 ಕೋಟಿ ಗಳಿಸಿದ ಯಾವ ಸೂಪರ್‌ ಸ್ಟಾರ್‌ಗಳಿರದ ಈ ಚಿತ್ರಕ್ಕೆ ಖರ್ಚಾಗಿದ್ದು ಕೇವಲ 50 ಕೋಟಿ ಮಾತ್ರ..!

ಬಾಲಿವುಡ್‌ನಲ್ಲಿ ಲಕ್ಷವೆಲ್ಲಾ ಅಲಕ್ಷ್ಯ. ಒಂದೆರಡು ಕೋಟಿಗಳಂತೂ ಕಾಲ ಕಸ. ಅಲ್ಲೇನೇ ಇದ್ದರೂ 100-200 ಕೋಟಿಗಳದ್ದೇ ಕಾರು ಬಾರು ಅನ್ನುವ ಮಾತು ಈ ಹಿಂದೆ ಇತ್ತು. ಆದರೆ ಕೊರೊನಾದ ನಂತರ ಬಾಲಿವುಡ್ಡಿಗೆ ಅಕ್ಷರಶ ಗರ ಬಡಿದಿತ್ತು.

2022ರಲ್ಲಿ ಕನ್ನಡ ಚಿತ್ರರಂಗ ಪಳ ಪಳ ಅಂತ ಹೊಳೆಯುತ್ತಿದ್ದಾಗ ಮಂಕಾಗಿದ್ದ ಹಿಂದಿ ಉದ್ಯಮ, ಚೇತರಿಸಿಕೊಂಡಿದ್ದು ಕಳೆದ ವರ್ಷವಷ್ಟೇ. ಜವಾನ್..ಪಠಾಣ್.. ಗದರ್‌ 2.. ಅನಿಮಲ್.. ಹೀಗೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ ಗೆಲುವಿನ ನಗೆ ಬೀರಿದ್ದ ಬಾಲಿವುಡ್‌ನಲ್ಲಿ ಈ ವರ್ಷ ಚಿನ್ನದ ಬೆಳೆ ಬೆಳೆದಿದ್ದು ಮಾತ್ರ ಶ್ರದ್ಧಾ ಕಪೂರ್, ರಾಜ್ ಕುಮಾರ್ ರಾವ್ ಅಭಿನಯದ ಸ್ತ್ರೀ 2.

This film with a 50 crore budget earned 583 crore at the box office making it the highest-grossing

ಹೌದು, ಸ್ತ್ರೀ 2.. ಕಳೆದ 34 ದಿನಗಳಿಂದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. ಹಾಗೇ ನೋಡಿದರೆ ಹೇಳಿಕೊಳ್ಳೋಕೆ ಇಲ್ಲಿ ಯಾವ ಸ್ಟಾರ್‌ಗಳಿಲ್ಲ. ಆದರೂ ಈ ಚಿತ್ರದ ಸದ್ದು ಯಾವ ಸೂಪರ್ ಸ್ಟಾರ್‌ಗಳ ಚಿತ್ರಗಳಿಗಿಂತ ಕಡಿಮೆ ಇಲ್ಲ. ಕೇವಲ 50 ಕೋಟಿಯಲ್ಲಿ ನಿರ್ಮಾಣವಾದ ಈ ಚಿತ್ರ ಇಲ್ಲಿಯವರೆಗೆ ಹತ್ತಾರು ದಾಖಲೆ ಬರೆದಿದೆ. ಕೆ.ಜಿ.ಎಫ್‌ { ಹಿಂದಿ } ಬಾಹುಬಲಿ { ಹಿಂದಿ } ಅನಿಮಲ್, ಪಠಾಣ್, ಗದರ್ ಚಿತ್ರಗಳಿಗೆ ಸೆಡ್ಡು ಹೊಡೆದು ಎಲ್ಲರನ್ನೂ ನಿಬ್ಬೇರಗಾಗಿಸಿದೆ. ಇಂಥಾ ಸ್ತ್ರೀ 2 ಈಗ ಜವಾನ್ ಚಿತ್ರವನ್ನು ಹಿಂದಿಕ್ಕಿ ಬಾಲಿವುಡ್ ನಲ್ಲಿ ಹೊಸ ಇತಿಹಾಸವೊಂದನ್ನು ಸೃಷ್ಟಿಸಿದೆ.

ಹೌದು, ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ದಾಖಲೆಯನ್ನೂ ಸ್ತ್ರೀ 2 ಮುರಿದಿದೆ. 583 ಕೋಟಿಯನ್ನು ಕೊಳ್ಳೆ ಹೊಡೆಯುವ ಮೂಲಕ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ಹೆಗ್ಗಳಿಕೆಗೆ ಸ್ತ್ರೀ 2 ಪಾತ್ರವಾಗಿದೆ. ಇನ್ನೂ.. ಇದು ಓಟಿಟಿ ಕಾಲ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿಲ್ಲ ಎನ್ನುವ ಮಾತು ಎಲ್ಲ ಭಾಷೆಯಲ್ಲಿ ಕೂಡ ಕೇಳಿ ಬರ್ತಾನೆ ಇದೆ. ಆದರೂ ಕೂಡ ಸ್ತ್ರೀ 2 ಚಿತ್ರ ಜವಾನ್ ಕಲೆ ಹಾಕಿದ್ದ 582.31 ಕೋಟಿ ಹಣಕ್ಕಿಂತ ಹೆಚ್ಚಿನ ಹಣವನ್ನು ಚಿತ್ರಮಂದಿರದಲ್ಲಿ ಕಲೆ ಹಾಕಿದೆ. ಹೀಗಾಗಿ ಆಶ್ಚರ್ಯ ಚಕಿತಗೊಂಡಿರುವ ಬಾಲಿವುಡ್‌ನ ಪಂಡಿತರು ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಇದು ಜ್ವಲಂತ ಉದಾಹರಣೆ ಎನ್ನುತ್ತಿದ್ದಾರೆ. ಸ್ತ್ರೀ 2 ಚಿತ್ರದ ಈ ದಾಖಲೆಯನ್ನು ಈ ವರ್ಷ ಬೇರೆಯವರು ಮುರಿಯುವುದು ಅಸಾಧ್ಯವೆನ್ನುತ್ತಿದ್ದಾರೆ.

This film with a 50 crore budget earned 583 crore at the box office making it the highest-grossing

ಇನ್ನೂ ಸ್ತ್ರೀ 2 ತೆರೆಗೆ ಬಂದು 34 ದಿನಗಳಾದರೂ ಇವತ್ತು ಕೂಡ ಈ ಚಿತ್ರದ ಗಳಿಕೆ ಕಡಿಮೆಯಾಗಿಲ್ಲ. ಚಿತ್ರ ನೋಡುವ ಪ್ರೇಕ್ಷಕರ ಸಂಖ್ಯೆಯಲ್ಲಿ ಕೂಡ ಇಳಿಮುಖವವಾಗಿಲ್ಲ. ಇವತ್ತು ಕೂಡ ಪುಣೆಯಲ್ಲಿ ಕೇವಲ ರಾತ್ರಿಯ ಪ್ರದರ್ಶನದಂದು ಶೇಕಡಾ 23 % ಚಿತ್ರಮಂದಿರ ಭರ್ತಿಯಾಗುತ್ತಿದೆ. ಇನ್ನೂ ಬೆಂಗಳೂರಿನಲ್ಲಿ ಕೂಡ ಶೇಕಡಾ 19 % ಚಿತ್ರ ರಸಿಕರು ಈ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹೈದ್ರಾಬಾದ್‌ನಲ್ಲಿ ಎಲ್ಲಕ್ಕಿಂತ ಹೆಚ್ಚು ಕ್ರೇಜ್ ಹೊಂದಿರುವ ಈ ಚಿತ್ರವನ್ನು ಶೇಕಡಾ 36 % ಚಿತ್ರಪ್ರೇಮಿಗಳು ನೋಡಿ ಬೆಚ್ಚಿ ಬೀಳುತ್ತಿದ್ದಾರೆ.

ಹೀಗಾಗಿ ಸ್ತ್ರೀ 2 ಚಿತ್ರ 600 ಕೋಟಿಯ ಗಡಿಯನ್ನು ಅನಾಯಾಸವಾಗಿ ದಾಟುತ್ತೆ ಎನ್ನುವ ಮಾತು ಈಗ ಮುಂಬೈನಲ್ಲಿ ಬಲವಾಗಿ ಕೇಳಿ ಬರುತ್ತಿವೆ. ಚಿತ್ರಮಂದಿರದಲ್ಲಿ ಚಿತ್ರ 50 ದಿನದ ಪ್ರದರ್ಶನವನ್ನು ಕಾಣುವುದು ಕೂಡ ಖಚಿತವೆನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಒಟ್ನಲ್ಲಿ 582 ಕೋಟಿಯನ್ನು ಗಳಿಸಿ ನಂಬರ್ ಓನ್ ಹಿಂದಿ ಚಿತ್ರವೆಂಬ ಪಟ್ಟವನ್ನ ಅಲಂಕರಿಸಿರುವ ಸ್ತ್ರೀ 2 ಒಟ್ಟು ಎಷ್ಟು ಗಳಿಸಲಿದೆ ಎನ್ನುವುದು ಸದ್ಯದ ಕುತೂಹಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X