ಅವಳ್ಯಾವಳೋ ಒಬ್ಬಳು ಇದ್ದಾಳೆ, ನನ್ನ ಕೈಗೆ ಸಿಗಲಿ ಇದೆ ಮಾರಿ ಹಬ್ಬ ; ಗೋವಿಂದ ಅನೈತಿಕ ಸಂಬಂಧ- ಪತ್ನಿ ಸುನಿತಾ ಮಾತು

ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಮದುವೆಯಾದ ನಂತರ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇರಬೇಕು. ಸಂಬಂಧ ಆಳವಾಗಿ ಬೇರೂರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ..ಹೊಂದಾಣಿಕೆ ಕೊರತೆ.. ದೈಹಿಕ ಅತೃಪ್ತಿ.. ಪ್ರೀತಿಯ ಕೊರತೆ.. ಹೀಗೆ ಮುಂತಾದ ಕಾರಣಗಳಿಂದ ಹಲವರು..

ಮದುವೆಯ ನಂತರ ಅನೈತಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದಾರೆ. ವೈವಾಹಿಕ ಸಂಬಂಧದಲ್ಲಿ ಸಿಗದಿದ್ದನ್ನು ಹೊರಗಡೆ ಹುಡುಕುವ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಇಂದು ವೈವಾಹಿಕ ಸಂಬಂಧ ಪವಿತ್ರವಾದ ಅನುಬಂಧ ಎನ್ನುವ ಮಾತಿಗೆ ಬೆಲೆ ಕೊಡುವವರು ತೀರಾ ಕಡಿಮೆಯಾಗಿದ್ದಾರೆ. ಈ ಸಾಲಿನಲ್ಲಿ ಬಾಲಿವುಡ್‌ನ ಸೂಪರ್ ಸ್ಟಾರ್ ''ಗೋವಿಂದ'' ಕೂಡ ಇದ್ದಾರಾ..? ಗೊತ್ತಿಲ್ಲ.

This is Not the Age Govinda s Wife Sunita Ahuja Confirms Hearing of Affair With Marathi Actress

ಆದರೆ.. ಗೋವಿಂದ ಅವರ ಪತ್ನಿ ಸುನಿತಾ ಅವರಿಗೆ ಅಂತೂ ಈ ಅನುಮಾನ ಇದೆ. ಮರಾಠಿ ಚಿತ್ರರಂಗದ ನಟಿಯ ಜೊತೆ ತಮ್ಮ ಪತಿಗೆ ಅನೈತಿಕ ಸಂಬಂಧ ಇದೆ ಎನ್ನುವ ಗುಮಾನಿ ಇದೆ. ಖುದ್ದು ಸುನಿತಾ ಅಹುಜಾ ಈ ಮಾತನ್ನು ಇತ್ತೀಚೆಗೆ ಹೇಳಿದ್ದಾರೆ.

ಹೌದು, ಗೋವಿಂದ.. ಪೈಕಿ ಅಂದಕಾಲತ್ತಿಲ್‌ನ ಬಾಲಿವುಡ್‌ನ ''ಹೀರೋ ನಂಬರ್ ಒನ್''. 90ರ ದಶಕದ ಆಸು ಪಾಸು ಭಾರತದ ಅತ್ಯಂತ ಬೇಡಿಕೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಗೋವಿಂದ ಏಕಕಾಲಕ್ಕೆ 75 ಚಿತ್ರಗಳನ್ನು ಒಪ್ಪಿಕೊಂಡು ದಾಖಲೆಯನ್ನು ಬರೆದಿದ್ದರು. ಬಾಲಿವುಡ್‌ನಲ್ಲಿ ಅನೇಕರ ಹುಬ್ಬೇರಿಸಿದ್ದರು.

ಸದ್ಯ ಬದಲಾದ ಕಾಲಘಟ್ಟದಲ್ಲಿ ಗೋವಿಂದಗೆ ಹಿಂದಿ ಚಿತ್ರರಂಗದಲ್ಲಿ ಮಾಡಲು ಕೆಲಸ ಇಲ್ಲ. ಕರೆದು ಇವರಿಗೆ ಅವಕಾಶವನ್ನು ಕೊಡುವರು ಕೂಡ ಬಾಲಿವುಡ್‌ನಲ್ಲಿ ಯಾರು ಇಲ್ಲ. ಯಾಕೆಂದರೆ ಕೆಳಗೆ ಬಿದ್ದರೂ ಕೂಡ ಮೀಸೆ ಮಣ್ಣಾಗಲಿಲ್ಲ ಎಂಬ ವ್ಯಕ್ತಿತ್ವ ಇವರದ್ದು.

ಹೀಗಾಗಿಯೇ ಹಿಂದಿ ಚಿತ್ರರಂಗದಲ್ಲಿ ಅನೇಕರು ಇವರಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ. ತಾವಾಗಿಯೇ ಹೋಗಿ ಅವಕಾಶ ಕೇಳಿದರೆ ತಮ್ಮ ಮರ್ಯಾದೆ ಕಡಿಮೆಯಾಗುತ್ತೆ ಎಂದುಕೊಂಡು ಗೋವಿಂದ ಸದ್ಯ ಮನೆಯಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ.

This is Not the Age Govinda s Wife Sunita Ahuja Confirms Hearing of Affair With Marathi Actress

ಇಂಥಾ ಗೋವಿಂದಾಗೆ ಇವರ ಪತ್ನಿ ಸುನಿತಾ ಅವರೇ ಕಳೆದ ಕೆಲ ತಿಂಗಳಿನಿಂದ ಸದ್ಯ ತಲೆ ನೋವಾಗಿದ್ದಾರೆ.ಯಾಕೆಂದರೆ ಇಷ್ಟು ವರ್ಷಗಳ ಕಾಲ ಗೋವಿಂದ ಸಂಪಾದಿಸಿದ ಹೆಸರನ್ನೆಲ್ಲಾ ಮಣ್ಣು ಪಾಲು ಮಾಡಲೇಬೇಕೆಂದು ಶಪಥ ಮಾಡಿದಂತೆ ಇರುವ ಸುನಿತಾ ಅಹುಜಾ ಒಮ್ಮೆ ವಿಚ್ಚೇದನ ನೀಡುವುದಾಗಿ ಹೇಳುತ್ತಾರೆ. ಮತ್ತೊಮ್ಮೆ ತಮ್ಮ ಪತಿಯನ್ನು ಕರೆದು ಮುದ್ದು ಮಾಡುತ್ತಾರೆ. ಹಬ್ಬ ಹರಿದಿನ ಆಚರಿಸುತ್ತಾರೆ. ಇನ್ನೂ ಕೆಲ ಒಮ್ಮೆ ನನ್ನ ಗಂಡನಿಗೆ ಕೆಲಸ ಇಲ್ಲ ಯಾರಾದರೂ ಕರೆದು ಕೆಲಸ ಕೊಡಿ, ಅವರ ಸುತ್ತ ಮುತ್ತ ಇರುವ ಜನರೇ ಅವರನ್ನು ಹಾಳು ಮಾಡುತ್ತಿದ್ದಾರೆ ಎನ್ನುತ್ತಾರೆ.

ಹೀಗೆ ಕಾಲ ಕಾಲಕ್ಕೆ ತಮ್ಮ ಪತಿಯ ಮಾನ ಮರ್ಯಾದೆಯನ್ನು ತುಂಬಾನೇ ನಿಯತ್ತಾಗಿ ಹರಾಜು ಹಾಕುತ್ತಿರುವ ಸುನಿತಾ, ಸದ್ಯ ಗೋವಿಂದಗೆ ಅನೈತಿಕ ಸಂಬಂಧ ಇದೆ ಎನ್ನುವ ವಿಚಾರ ಒಪ್ಪಿಕೊಂಡಿದ್ದಾರೆ.

ಈ ಕುರಿತು ''ಬಿಗ್ ಬಾಸ್ 13''ರ ಸ್ಫರ್ಧಿ ಪಾರಸ್ ಛಾಬ್ರಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುನಿತಾ, ಈಗೀಗ ಬಾಲಿವುಡ್‌ಗೆ ಬರುವ ಬಹುತೇಕ ಹೊಸ ನಾಯಕಿಯರಿಗೆ ''ಶುಗರ್ ಡ್ಯಾಡಿ''ಗಳೇ ಬೇಕು ಎಂದು ಹೇಳಿದ್ದಾರೆ.

ಮುಂದುವರೆದು ಅಕ್ರಮ ಸಂಬಂಧದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ಸುನಿತಾ ಅಹುಜಾ, ನನ್ನ ಗಂಡನಿಗೆ 30 ವರ್ಷದ ನಟಿಯ ಜೊತೆ ಅನೈತಿಕ ಸಂಬಂಧ ಇದೆ ಎನ್ನುವ ವಿಚಾರ ನನ್ನ ಕಿವಿಗೆ ಕೂಡ ಬಿದ್ದಿದೆ ಎಂದು ಹೇಳಿದ್ದಾರೆ. ಅವಳು ಯಾವಳೋ ಒಬ್ಬಳು ಮರಾಠಿ ನಟಿ ಎನ್ನುವುದು ನನಗೆ ಗೊತ್ತು. ಆದರೆ ರೆಡ್ ಹ್ಯಾಂಡ್‌ ಆಗಿ ನಾನು ನನ್ನ ಗಂಡನನ್ನು ಹಿಡಿಯುವವರೆಗೆ ನಾನು ಏನೂ ಹೇಳುವುದಿಲ್ಲ ಎಂದು ಹೇಳಿದ್ದಾರೆ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು ಎಂದಿದ್ದಾರೆ. ನನ್ನ ಕೈಗೆ ಇಬ್ಬರು ಸಿಕ್ಕರೆ ಆಗ ಇದೆ ಮಾರಿ ಹಬ್ಬ ಎಂದಿದ್ದಾರೆ.

ಇನ್ನೂ ಗೋವಿಂದಗೆ ಈಗ 61 ವರ್ಷ. ಈ ವಯಸ್ಸಿನಲ್ಲಿ ಇದೆಲ್ಲವೂ ಬೇಕಾ..? ಎಂದು ಪ್ರಶ್ನೆ ಮಾಡಿರುವ ಸುನಿತಾ ಅಹುಜಾ, ಈ ವಯಸ್ಸಿನಲ್ಲಿ ನನ್ನ ಗಂಡ ನನ್ನ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುವ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.

ನನ್ನ ಗಂಡನ ಅನೈತಿಕ ಸಂಬಂಧದ ಕುರಿತು ನಾನಾಗಿಯೇ ನಿಮ್ಮೆಲ್ಲರಿಗೆ ಹೇಳುವವರಗೂ ಯಾವ ಅಂತೆ ಕಂತೆಯನ್ನು ಕೂಡ ನೀವು ನಂಬಬೇಡಿ ಎಂದು ಹೇಳಿರುವ ಸುನಿತಾ, ನಾನು ಸುಳ್ಳು ಹೇಳುವುದಿಲ್ಲ. ಸತ್ಯವನ್ನೇ ಹೇಳುತ್ತೇನೆ ಎಂದು ಮಾಧ್ಯಮದವರಿಗೆ ಹೇಳಿದ್ದೇನೆ ಹೀಗಾಗಿ ಮುಂದೆಯೂ ಸತ್ಯವನ್ನೇ ಹೇಳುತ್ತೇನೆ ಎಂದಿದ್ದಾರೆ.

ಅಂದ್ಹಾಗೇ ಗೋವಿಂದ ಮತ್ತು ಸುನೀತಾ ಅಹುಜಾ ಅವರ ದಾಂಪತ್ಯ ಜೀವನ ಒಡೆದ ಹಾಲಿನಂತೆ ಆಗಿದೆ. ಅಧಿಕೃತವಾಗಿ ತಮ್ಮ 37 ವರ್ಷದ ದಾಂಪತ್ಯ ಜೀವನಕ್ಕೆ ಇಬ್ಬರು ಗುಡ್ ಬೈ ಹೇಳಿಲ್ಲ. ವಿಚ್ಛೇದನ ಪಡೆದಿಲ್ಲ ಅಷ್ಟೇ. ಆದರೆ ಇಬ್ಬರು ಪ್ರತೈಕವಾಗಿ ವಾಸ ಮಾಡಲು ಹಲವು ವರ್ಷಗಳೇ ಆಗಿವೆ. ನಾಲ್ಕು ಬೆಡ್‌ ರೂಮ್‌ ಮನೆಯಲ್ಲಿ ಸುನಿತಾ ತಮ್ಮ ಮಕ್ಕಳಾದ ಟೀನಾ ಮತ್ತು ಯಶ್‌ವರ್ಧನ್ ಜೊತೆ ವಾಸ ಮಾಡಿದರೆ ಇವರ ಮನೆಯ ಎದುರು ಗೋವಿಂದ ವಾಸ ಮಾಡುತ್ತಾರೆ. ಈ ವಿಚಾರದ ಕುರಿತು ಕೂಡ ಮಾತನಾಡಿರುವ ಸುನಿತಾ 'ಚಿಚಿ'( ಗೋವಿಂದ) ದೊಡ್ಡ ಹಾಲ್ ಇರುವ 5 ಬೆಡ್‌ರೂಮ್‌ ಇರುವ ಮನೆಯನ್ನು ಖರೀದಿ ಮಾಡಿ ನನಗೆ ಕೊಡಿ ಇಲ್ಲದಿದ್ದರೆ ನಿಮಗೊಂದು ಗತಿ ಕಾಣಿಸುತ್ತೇನೆ ಎಂದು ತಮಾಷೆ ಮಾಡಿದ್ದಾರೆ.

More from Filmibeat

English summary
Govinda's wife, Sunita Ahuja, accepts she's heard of his affair with a Marathi actress but warns, "I'll only believe when I catch him red-handed." Read the full story.
Read more about: govinda affair
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X