ಈ ಕಾರಣಕ್ಕಾಗಿ ಗರ್ಭಿಣಿ ಎಂಬ ವಿಷ್ಯವನ್ನ ಮುಚ್ಟಿಟ್ಟಿದ್ರಾ ಈ ನಟಿ.?
ಬಾಲಿವುಡ್ ನಟಿ ನೇಹಾ ಧೂಪಿಯಾ ಮತ್ತು ನಟ ಅಂಗದ್ ಸಿಂಗ್ ಬೇಡಿ ಮದುವೆ ತರಾತುರಿಯಲ್ಲಿ ಮುಗಿದು ಹೋಯಿತು. ಧೀಡಿರ್ ಅಂತ ಯಾಕೆ ಮದುವೆ ಆಗ್ಬಿಟ್ರು ಎಂದು ಯೋಚನೆ ಮಾಡುವಷ್ಟರಲ್ಲಿ ನೇಹಾ ಧೂಪಿಯಾ ಗರ್ಭಿಣಿ ಎಂಬ ವಿಚಾರಕ್ಕೆ ಚರ್ಚೆಯಾಯಿತು.
ಅಯೋ.... ಮದುವೆ ಆಗಿ ಇನ್ನು ಎರಡು ತಿಂಗಳು ಕಳೆದಿಲ್ಲ ಅಷ್ಟು ಬೇಗಾ ಗರ್ಭಿಣಿನಾ ಎಂದು ಜನ ಮಾತನಾಡಿಕೊಳ್ಳಲು ಆರಂಭಿಸಿದರು. ಆದ್ರೆ, ಗರ್ಭಿಣಿ ಎಂಬ ವಿಷ್ಯವನ್ನ ಎಲ್ಲಿಯೂ ಹೇಳಿಕೊಂಡಿರಲಿಲ್ಲ.

ಕಳೆದ ತಿಂಗಳಲ್ಲಿ ತಾನು ಗರ್ಭಿಣಿ ಎಂದು ನೇಹಾ ಧೂಪಿಯಾ ಅಧಿಕೃತವಾಗಿ ಸ್ಪಷ್ಟಪಡಿಸಿದ್ದರು. ಆದ್ರೆ, ಇಷ್ಟು ದಿನ ಮುಚ್ಚಿಟ್ಟಿದ್ದು ಯಾಕೆ ಎಂಬ ವಿಷ್ಯ ಮಾತ್ರ ಗೊತ್ತಾಗಲೇ ಇಲ್ಲ. ಅದಕ್ಕೀಗ ನೇಹಾ ಉತ್ತರ ನೀಡಿದ್ದಾರೆ.
''ತಾನು ಗರ್ಭಿಣಿ ಎಂಬ ವಿಷ್ಯ ಗೊತ್ತಾದರೇ ನನಗೆ ಸಿನಿಮಾಗಳ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ನಾನು ಈ ವಿಷ್ಯ ಮುಚ್ಚಿಟ್ಟಿದ್ದೆ'' ಎಂದು ನೇಹಾ ಹೇಳಿಕೊಂಡಿದ್ದಾರೆ.

''ಆರು ತಿಂಗಳವರೆಗೂ ನಾನು ಗರ್ಭಿಣಿಯಂತೆ ಕಾಣಿಸಿಕೊಂಡಿಲ್ಲ. ನನಗೆ ಆಗ ಇನ್ನು ನಟಿಸುವ ಶಕ್ತಿ ಇತ್ತು. ಆಮೇಲೆ ಒಂದು ದಿನ ನನಗೆ ಸಿನಿಮಾದಿಂದ ಸ್ವಲ್ಪ ದಿನ ದೂರವಾಗಬೇಕು ಎಂಬುದು ಅರ್ಥವಾಯಿತು'' ಎಂದು ನೇಹಾ ಹೇಳಿಕೊಂಡಿದ್ದಾರೆ.
ಇನ್ನುಳಿದಂತೆ ಕಾಜೋಲ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಹೆಲಿಕಾಫ್ಟರ್ ಇಲಾ' ಚಿತ್ರದಲ್ಲಿ ನೇಹಾ ಧೂಪಿಯಾ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಅಕ್ಟೋಬರ್ 12 ರಂದು ತೆರೆಕಾಣಲಿದೆ. ಬಹುಶಃ ಈ ಸಿನಿಮಾವನ್ನ ತಾನು ಗರ್ಭಿಣಿಯಾಗಿದ್ದ ಸಮಯದಲ್ಲೇ ಮಾಡಿದ್ದರ ಎಂಬುದು ಈಗ ಕುತೂಹಲ ಕಾಡುತ್ತಿದೆ.


Click it and Unblock the Notifications











