ಬಾಲಿವುಡ್ ಗೆ ಗುಡ್ ಬೈ ಹೇಳಿದ ಮೂವರು ಖ್ಯಾತ ನಿರ್ದೇಶಕರು

ಬಾಲಿವುಡ್‌ ಈಗ ಮೊದಲಿನಂತಿಲ್ಲ. ಅದು ಮುರಿದ ಮನೆಯಾಗಿದೆ. ಪ್ರತಿದಿನ ಒಬ್ಬರಮೇಲೊಬ್ಬರು ಬೆಂಕಿ ಉಗುಳುತ್ತಿದ್ದಾರೆ.

Recommended Video

Danish Sait ಬಡಿಸಲಿರುವ French Biryani ಹಿಂದಿನ ಕಥೆ ಕೇಳಿ | Filmibeat Kannada

ಸುಶಾಂತ್ ಸಿಂಗ್ ರಜಪೂತ್ ಸಾವು ಎಲ್ಲವನ್ನೂ ಬದಲಾಯಿಸಿಬಿಟ್ಟಿದೆ. ಈ ಮೊದಲು ಅಲ್ಲಲ್ಲಿ ಕೇಳಿಬರುತ್ತಿದ್ದ ಸ್ವಜನಪಕ್ಷಪಾತ, ಗುಂಪುಗಾರಿಕೆ ವಿಷಯಗಳು ಬಾಲಿವುಡ್‌ನಲ್ಲಿ ದೊಡ್ಡ ಕಂದಕಗಳನ್ನೇ ಸೃಷ್ಟಿಸಿಬಿಟ್ಟಿದೆ.

ಸಿನಿಮಾ ರಾಜಕೀಯ ಬಾಲಿವುಡ್‌ನಲ್ಲಿ ತಾರಕ್ಕೇರಿದೆ. ಬಾಲಿವುಡ್‌ನಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಕ್ರಿಯಾಶೀಲ ಮಂದಿಗೆ ಮುಜುಗರ ತರುತ್ತಿದೆ, ಉಸಿರುಟ್ಟಿಸುತ್ತಿದೆ. ಹಾಗಾಗಿ ಇಂದು ಒಂದೇ ದಿನ ಮೂವರು ಸಿನಿಮಾ ನಿರ್ದೇಶಕರು ಬಾಲಿವುಡ್‌ನಿಂದ ಹೊರನಡೆಯುತ್ತಿರುವುದಾಗಿ ಪ್ರಕಟಿಸಿದ್ದಾರೆ. ಈ ಹಿಂದೆ ಇಂಥಹಾ ಘಟನೆ ನಡೆದ ಉದಾಹರಣೆಯಿಲ್ಲ.

ಬಾಲಿವುಡ್ ಬಿಟ್ಟ ತಪ್ಪಡ್ ನಿರ್ದೇಶ

ಬಾಲಿವುಡ್ ಬಿಟ್ಟ ತಪ್ಪಡ್ ನಿರ್ದೇಶ

ತಪ್ಪಡ್ ರೀತಿಯ ಸೃಜನಾತ್ಮಕ, ಚಿಂತನಶೀಲ ಸಿನಿಮಾ ನೀಡಿದ ನಿರ್ದೇಶಕ ಅನುಭವ್ ಸಿನ್ಹಾ ತಾವು ಬಾಲಿವುಡ್ ಬಿಡುತ್ತಿರುವುದಾಗಿ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ. ಬಾಲಿವುಡ್‌ನ ಇತ್ತೀಚಿನ ಬೆಳವಣಿಗೆಗಳು ಅವರಲ್ಲಿ ಅಸಹನೆ ಮೂಡಿಸಿದೆ. ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹೆಸರಿನ ಮುಂದೆ 'ನಾಟ್ ಬಾಲಿವುಡ್' ಎಂದು ಸೇರಿಸಿಕೊಂಡಿದ್ದಾರೆ ಅವರು.

ಸುಧೀರ್ ಮಿಶ್ರಾ ಸಹ ಹೊರನಡೆದಿದ್ದಾರೆ

ಸುಧೀರ್ ಮಿಶ್ರಾ ಸಹ ಹೊರನಡೆದಿದ್ದಾರೆ

ಮತ್ತೊಬ್ಬ ನಿರ್ದೇಶಕ ಸುಧೀರ್ ಮಿಶ್ರಾ, ಬಾಲಿವುಡ್ ಚೋಡೋ (ಬಾಲಿವುಡ್ ಬಿಡಿ) ಎಂದು ಕರೆ ನೀಡಿದ್ದಾರೆ ಅವರು. ಹಲವು ನಿರ್ದೇಶಕರನ್ನು ತಮ್ಮ ಟ್ವೀಟ್‌ಗೆ ಟ್ಯಾಗ್ ಮಾಡಿದ್ದಾರೆ. ನಾನು ಸತ್ಯಜಿತ್ ರೇ, ರಾಜ್ ಕಪೂರ್ ಇನ್ನೂ ಹಲವರನ್ನು ಆದರ್ಶವಾಗಿಟ್ಟುಕೊಂಡು ಇಲ್ಲಿಗೆ ಬಂದೆ, ಆದರೆ ಇಂದು ಆ ವೈಭವ ಇಲ್ಲ' ಎಂದು ಬೇಸರ ಹೊರಹಾಕಿದ್ದಾರೆ ಅವರು.

ನಿರ್ದೇಶಕ ಹನ್ಲಲ್ ಮೆಹ್ತಾ ಟ್ವೀಟ್

ನಿರ್ದೇಶಕ ಹನ್ಲಲ್ ಮೆಹ್ತಾ ಟ್ವೀಟ್

ದಿ ಆಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್, ಸಿಟಿಲೈಟ್ಸ್, ಬೋಸ್; ಡೆಡ್ ಆರ್ ಅಲೈವ್ ಸೇರಿ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ಹನ್ಸಲ್ ಮೆಹ್ತಾ, 'ಇಬ್ಬರು ನಿರ್ದೇಶಕರು ಬಾಲಿವುಡ್‌ನಿಂದ ಹೊರಹೋಗಿದ್ದಾರೆ. ನಾನೂ ಹೊರಹೋಗುತ್ತೇನೆ, ಆದರೆ ಬಾಲಿವುಡ್ ಬದಲಿಗೆ ಹಿಂದಿ ಸಿನಿಮಾ ನಿರ್ದೇಶಿಸುತ್ತೇನೆ' ಎಂದಿದ್ದಾರೆ.

ಬಾಲಿವುಡ್ ಪದಬಳಕೆ ಬಗ್ಗೆ ಆಕ್ಷೇಪ

ಬಾಲಿವುಡ್ ಪದಬಳಕೆ ಬಗ್ಗೆ ಆಕ್ಷೇಪ

ಕೆಲವು ನಿರ್ದೇಶಕರು ಮೊದಲಿನಿಂದಲೂ ಬಾಲಿವುಡ್ ಪದಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾರೆ. ಅನುರಾಗ್ ಕಶ್ಯಪ್, ರಾಜ್‌ಕುಮಾರ್ ಹಿರಾನಿ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇನ್ನೂ ಕೆಲವು ನಿರ್ದೇಶಕರು ಬಾಲಿವುಡ್ ಬಿಡುವ ಸಾಧ್ಯತೆಯೂ ಇದೆ.

More from Filmibeat

English summary
Three noted movie directors quit bollywood. Anubhav Singha, Hansal Mehta and Sudhir Mishra quit bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X