'ಥಗ್ಸ್ ಆಫ್ ಹಿಂದೂಸ್ತಾನ'ದ ಕಿಲ್ಲಿಂಗ್ ಲುಕ್ ನಲ್ಲಿ ಅಮಿತಾಬ್, ಫಾತೀಮಾ
ಬಾಲಿವುಡ್ ನ ಬಹುನಿರೀಕ್ಷೆಯ ಸಿನಿಮಾ 'ಥಗ್ಸ್ ಆಫ್ ಹಿಂದೂಸ್ತಾನ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಲುಕ್ ಬಹಿರಂಗವಾಗಿದ್ದು, ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ. ಚಿತ್ರದಲ್ಲಿ ಕೂಡಭಕ್ಷ್ ಪಾತ್ರದಲ್ಲಿ ಅಮಿತಾಬ್ ಕಾಣಿಸಿಕೊಂಡಿದ್ದು, ವಾರಿಯರ್ ಗೆಟೆಪ್ ನಲ್ಲಿ ಬಿಗ್ ಬಿ ಘರ್ಜಿಸಿದ್ದಾರೆ.
ಅಮಿತಾಬ್ ನಂತರ ಈಗ ಫಾತೀಮಾ ಸನಾ ಅವರ ಲುಕ್ ರಿವೀಲ್ ಮಾಡಲಾಗಿದೆ. 'ಥಗ್ಸ್ ಆಫ್ ಹಿಂದೂಸ್ತಾನ' ಚಿತ್ರದಲ್ಲಿ ಪಾತೀಮಾ ಅವರು ಜಫೀರಾ ಎಂಬ ಪಾತ್ರದಲ್ಲಿ ಅಭಿನಯಿಸಿದ್ದು, ಫಾತೀಮಾ ಕೂಡ ಜಬರ್ ದಸ್ತ್ ಆಗಿ ಅಭಿನಯಿಸಿದ್ದಾರೆ.
ಫಾತೀಮಾ ಈ ಹಿಂದೆ 'ದಂಗಲ್' ಚಿತ್ರದಲ್ಲಿ ಕುಸ್ತಿಪಟು ಆಗಿ ಪ್ರೇಕ್ಷಕರ ಮನಸೆಳೆದಿದ್ದರು. ಇದೀಗ, ಮತ್ತೊಂದು ಚಾಲೆಂಜಿಂಗ್ ಪಾತ್ರವನ್ನ ನಿಭಾಯಿಸಿದ್ದಾರೆ.

ವಿಜಯ ಕೃಷ್ಣ ಆಚಾರ್ಯ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಅಮೀರ್ ಖಾನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ಕತ್ರಿಕಾ ಕೈಫ್ ಅಭಿನಯಿಸಿದ್ದು, ಅಮೀರ್ ಮತ್ತು ಕ್ಯಾಟ್ ಲುಕ್ ಇನ್ನು ಬಿಡುಗಡೆಯಾಗಿಲ್ಲ.
ಅಂದ್ಹಾಗೆ, ಈ ಚಿತ್ರದ ಕಲೋನಿಯಲ್ ಫಿಲಿಪ್ ಮೀಡೋಸ್ ಟೇಲರ್ ನ 'ಕನ್ಫೆಶನ್ಸ್ ಆಫ್ ಎ ಥಗ್' ಎಂಬ ಕಾದಂಬರಿಯಾಧಾರಿತವಾಗಿದೆ. 1790 ರಿಂದ 1805ರ ಸಮಯದಲ್ಲಿ ಬ್ರಿಟಿಷರಿಗೆ ಸವಾಲಾಗಿದ್ದ ಥಗ್ಸ್( ದರೋಡೆಕೋರ ಗುಂಪು) ಕಥೆಯ ಸುತ್ತಾ ಸಿನಿಮಾ ಸಾಗುತ್ತೆ.

ಯಶ್ ರಾಜ್ ಬ್ಯಾನರ್ ನಲ್ಲಿ ಈ ಅದ್ಧೂರಿ ಸಿನಿಮಾ ನಿರ್ಮಾಣವಾಗಿದ್ದು, ನವೆಂಬರ್ 8 ರಂದು ಸಿನಿಮಾ ತೆರೆಕಾಣಲಿದೆ.


Click it and Unblock the Notifications










