ಮತ್ತೆ ಮನಸ್ಸು ಗೆದ್ದ ಅಮೀರ್ : ಬಚ್ಚನ್ ಸಾಹಸಕ್ಕೆ ಬಹುಪರಾಕ್
ಅಮೀರ್ ಖಾನ್ ಈಗ ಮತ್ತೆ ಬಂದಿದ್ದಾರೆ. ಅಮೀರ್ ಯಾವಾಗ ಬಂದ್ರು ಸುಮ್ಮನೆ ಬರುವುದಿಲ್ಲ. ಪ್ರತಿ ಸಿನಿಮಾದಲ್ಲಿಯೂ ಒಂದೊಂದು ರೀತಿಯ ಅದ್ಭುತಗಳನ್ನು ಸೃಷ್ಟಿಸುವ ಅವರು ಈಗ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರವನ್ನು ಮಾಡುತ್ತಿದ್ದಾರೆ.
ಈ ಚಿತ್ರದ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೂರು ದಿನಗಳಿಂದ ಟ್ರೇಲರ್ ಯೂ ಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ವಿಡಿಯೋ ಆಗಿದೆ. ಈಗಾಗಲೇ ಬರೊಬ್ಬರಿ 34 ಮಿಲಿಯನ್ ಹಿಟ್ಸ್ ಅನ್ನು ಟ್ರೇಲರ್ ಪಡೆದುಕೊಂಡಿದೆ.
ಈ ಚಿತ್ರದಲ್ಲಿ 1795 ರಿಂದ 1805ರ ವರೆಗೆ ನಡೆದ ಭಾರತದ ಇತಿಹಾಸವನ್ನು ಹೇಳಲಾಗಿದೆ. ಖುದಾಭಕ್ಷ್ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ನಲ್ಲಿ ಬರುವ ಸಾಹಸ ದೃಶ್ಯಗಳನ್ನು ನೋಡುತ್ತಿದ್ದರೆ ಬಚ್ಚನ್ ಸಾಹಸಕ್ಕೆ ಸೆಲ್ಯೂಟ್ ಹೊಡೆಯಬೇಕು.

ಅಮೀರ್ ಖಾನ್ ಫಿರಂಗಿ ಮಲ್ಹಾ ಪಾತ್ರದಲ್ಲಿ ನಟಿಸಿದ್ದಾರೆ. ಅಮೀರ್ ತಮ್ಮ ಎಂದಿನ ಚಾರ್ಮ್ ನಲ್ಲಿ ಇಲ್ಲಿಯೂ ಮಿಂಚಿದ್ದಾರೆ. 'ದಂಗಲ್' ಖ್ಯಾತಿಯ ಫಾತಿಮಾ ಒಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕತ್ರೀನಾ ಆಸ್ತಾನದಲ್ಲಿ ನೃತ್ಯ ಮಾಡಿದ್ದಾರೆ.
ವಿನಯ್ ಕಷ್ಣ ಆಚಾರ್ಯ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಯಶ್ ರಾಜ್ ಬ್ಯಾನರ್ ನಲ್ಲಿ 300 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಆಗಿದೆ. ನವೆಂಬರ್ 8 ರಂದು ಸಿನಿಮಾ ಬಿಡುಗಡೆಯಾಗಲಿದೆ.


Click it and Unblock the Notifications











