For Quick Alerts
  ALLOW NOTIFICATIONS  
  For Daily Alerts

  ಸೆಪ್ಟೆಂಬರ್ ತಿಂಗಳ ವಿಶೇಷ ದಿನ ಸಿನಿಮಾ ಟಿಕೆಟ್ ಬೆಲೆಯಲ್ಲಿ ಭಾರಿ ಕಡಿತ: ಇದೆ ವಿಶೇಷ ಕಾರಣ

  |

  ಸಿನಿಮಾ ಟಿಕೆಟ್ ದರಗಳ ಬಗ್ಗೆ ಚರ್ಚೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಟಿಕೆಟ್ ಬೆಲೆಗಳು ಹೆಚ್ಚಾದವು, ಬೆಲೆ ಏರಿಕೆ ಕಾರಣದಿಂದಾಗಿ ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ವಾದ ಇದೆ. ಈ ವಾದದ ನಡುವೆ ಇದೀಗ ಸಿನಿಮಾ ಟಿಕೆಟ್ ದರಗಳನ್ನು ದೊಡ್ಡ ಪ್ರಮಾಣದಲ್ಲಿ ಇಳಿಸಲಾಗುತ್ತಿದೆ ಆದರೆ ಅದು ಒಂದು ದಿನದ ಮಟ್ಟಿಗೆ ಮಾತ್ರ.

  ಸೆಪ್ಟೆಂಬರ್ 16 ರಂದು ಭಾರತದಾದ್ಯಂತ ಸುಮಾರು 4000 ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್ ದರವನ್ನು ಗಣನೀಯವಾಗಿ ಇಳಿಸಲಾಗುತ್ತಿದೆ. ಆ ಚಿತ್ರಮಂದಿರದ ನಿಗದಿತ ಟಿಕೆಟ್ ದರ ಎಷ್ಟೇ ಇದ್ದರು ಅದನ್ನು 75 ರುಪಾಯಿ ಮಾಡಲಾಗುತ್ತಿದೆ. ಐನಾಕ್ಸ್, ಪಿವಿಆರ್, ಸಿನಿಪೋಲೀಸ್ ಸೇರಿದಂತೆ ಪ್ರಮುಖ ಮಲ್ಟಿಪ್ಲೆಕ್ಸ್ ಚೈನ್‌ಗಳಲ್ಲಿ ಆ ದಿನ ಅತಿ ಕಡಿಮೆ ಬೆಲೆಗೆ ಸಿನಿಮಾ ವೀಕ್ಷಿಸಬಹುದಾಗಿರುತ್ತದೆ.

  ಸೆಪ್ಟೆಂಬರ್ 16 ರಾಷ್ಟ್ರೀಯ ಸಿನಿಮಾ ದಿನ ಆಗಿದೆ. ಹಾಗೂ ಈ ವರ್ಷ ಸ್ವಾತಂತ್ರ್ಯದ ಅಮೃತಮಹೋತ್ಸವ ವರ್ಷ ಆಗಿರುವ ಕಾರಣ ಸಿನಿಮಾ ಟಿಕೆಟ್ ದರವನ್ನು 75 ರುಪಾಯಿ ಮಾಡಲಾಗಿದೆ. ಹೆಚ್ಚಿನ ಜನ ಅಂದು ಸಿನಿಮಾ ನೋಡಲಿ, ಚಿತ್ರಮಂದಿರಗಳಲ್ಲಿ ಸಮಯ ಕಳೆಯಲಿ ಎಂಬ ಸದುದ್ದೇಶದಿಂದ ಸಿನಿಮಾ ಟಿಕೆಟ್ ದರವನ್ನು ಇಳಿಸಲಾಗಿದೆ.

  ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದವರು ಹೀಗೊಂದು ನಿರ್ಣಯ ತೆಗೆದುಕೊಂಡಿದ್ದು, ಇದಕ್ಕೆ 'ಥ್ಯಾಂಕ್ ಯೂ' ಅಭಿಯಾನವೆಂದು ಹೆಸರಿಟ್ಟಿದ್ದಾರೆ. ಕೋವಿಡ್ ಕಾಲದಲ್ಲಿ ಚಿತ್ರಮಂದಿರ ಭವಿಷ್ಯ ಅಯೋಮಯವಾಗಿದ್ದ ಸಮಯದಲ್ಲಿಯೂ ಜನ ಚಿತ್ರಮಂದಿರಗಳ ಕೈಬಿಡಲಿಲ್ಲವಾದ್ದರಿಂದ ಜನರಿಗೆ ಧನ್ಯವಾದ ಹೇಳಲು ಈ ಸದಾವಕಾಶವನ್ನು ಬಳಸಿಕೊಳ್ಳುತ್ತಿರುವುದಾಗಿ ಎಂಎಐ ಹೇಳಿದೆ.

  ಸೆಪ್ಟೆಂಬರ್ 16 ರಂದು ಯಾವುದೇ ಭಾಷೆಯ, ಯಾವುದೇ ಮಾದರಿಯ ಸಿನಿಮಾ ಆದರೂ ಅದರ ಟಿಕೆಟ್ ಬೆಲೆ 75 ರುಪಾಯಿ ಆಗಿರಲಿದೆ. ಎಲ್ಲ ತೆರಿಗೆಗಳನ್ನು ಸೇರಿ ಟಿಕೆಟ್ ಬೆಲೆ 75 ಆಗಿರಲಿದೆ. ಆದರೆ, ಆ ದಿನ ಟಿಕೆಟ್ ಅನ್ನು ಬುಕ್‌ಮೈ ಶೋ ಅಥವಾ ಇನ್ನಿತರೆ ಅಪ್ಲಿಕೇಶನ್‌ಗಳಲ್ಲಿ ಬುಕ್ ಮಾಡಿದರೆ ಟಿಕೆಟ್ ಬೆಲೆ 75 ರುಪಾಯಿ ಮೇಲೆ ಇಂಟರ್ನೆಟ್ ಹ್ಯಾಂಡಲಿಂಗ್ ಚಾರ್ಜ್ ಹಾಗೂ ಇತರೆ ಚಾರ್ಜಸ್‌ಗಳನ್ನು ನೀಡಬೇಕಾಗುತ್ತದೆ. ಆದರೆ ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಿದರೆ 75 ರುಪಾಯಿಗೆ ಟಿಕೆಟ್ ದೊರಕಲಿದೆ.

  ನ್ಯಾಷನಲ್ ಸಿನಿಮಾ ಡೇ ಭಾರತದಲ್ಲಿ ಮಾತ್ರವೇ ಅಲ್ಲದೆ ಅಮೆರಿಕದಲ್ಲಿಯೂ ಆಚರಿಸಲಾಗುತ್ತಿದ್ದು, ಅಲ್ಲಿ ಸಹ ಹಲವು ಮುಖ್ಯ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆಯನ್ನು ಕಡಿತಗೊಳಿಸಲಾಗಿದೆ.

  English summary
  On the occasion of National Cinema Day on September 16 movie ticket price in India will be reduced to 75 rs.
  Saturday, September 3, 2022, 11:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X