ಎಲ್ಲರ ಎದುರು ಇಮ್ರಾನ್ ಹಶ್ಮಿಗೆ ಕಿಸ್ ಕೊಟ್ಟ ನಟ ಸಲ್ಮಾನ್ ಖಾನ್: ವೈರಲ್ ವಿಡಿಯೋ ಇಲ್ಲಿದೆ

ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ ಆಕ್ಷನ್ ಥ್ರಿಲ್ಲರ್ 'ಟೈಗರ್ 3' ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸೂಪರ್‌ಸ್ಟಾರ್ ಸಲ್ಮಾನ್ ಖಾನ್, ಇಮ್ರಾನ್ ಹಶ್ಮಿ ಮತ್ತು ಕತ್ರಿನಾ ಕೈಫ್ ಕಾಣಿಸಿಕೊಂಡಿರುವ ಹೈ ಆಕ್ಷನ್ ಸಿನಿಮಾಕ್ಕೆ ಅಭಿಮಾನಿಗಳು ಜೈಕಾರ ಹಾಕಿದ್ದು, ಬಾಕ್ಸ್ ಆಫೀಸ್‌ನಲ್ಲಿಯೂ ಉತ್ತಮ ದಾಖಲೆ ಮಾಡುತ್ತಿದೆ.

ಈ ಹಿನ್ನೆಲೆ ಶುಕ್ರವಾರ, 'ಟೈಗರ್ 3' ನಿರ್ಮಾಪಕರು ಮುಂಬೈನಲ್ಲಿ ಚಿತ್ರದ ಸಕ್ಸಸ್ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ನಟರಾದ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಕೂಡ ಭಾಗವಹಿಸಿದ್ದರು. ಈ ವೇಳೆ ಸಹ ನಟ ಇಮ್ರಾನ್ ಹಶ್ಮಿಯನ್ನು ಸಲ್ಲು ಭಾಯ್ ಚುಂಬಿಸಿರುವ ವಿಡಿಯೋ ಸಕತ್ ವೈರಲ್ ಆಗಿದೆ.

tiger-3-actor-salman-khans-kissed-emraan-hashmi

ಇಮ್ರಾನ್ ಹಶ್ಮಿಗೆ ಸಲ್ಮಾನ್ ಖಾನ್ 'ಕಿಸ್'

ಸಕ್ಸಸ್ ಈವೆಂಟ್‌ನಲ್ಲಿ ಮೂವರು ಸೆಲೆಬ್ರಿಟಿಗಳು ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದರು. ಈ ವೇಳೆ ತಮ್ಮ ಚಿತ್ರದ ಮೇಲೆ ಪ್ರೀತಿಯನ್ನು ಧಾರೆಯೆರೆದ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದರ ಜೊತೆಗೆ ಸಮಾರಂಭದಲ್ಲಿ ಮಾತನಾಡಿದ ಸಲ್ಮಾನ್ ಖಾನ್, "ಕತ್ರಿನಾ ಈ ಸಿನಿಮಾದಲ್ಲಿ ಇದ್ದಾರೆ ಎಂದ ಮೇಲೆ ಸ್ವಲ್ಪ ರೊಮ್ಯಾನ್ಸ್ ಇರಬೇಕಲ್ಲವೇ...?" ಎಂದು ಪ್ರಶ್ನಿಸಿದ್ದಾರೆ.

ನಂತರ ಪಕ್ಕದಲ್ಲೇ ಇದ್ದ ಸಹನಟ ಇಮ್ರಾನ್‌ ಹಶ್ಮಿ ಅವರನ್ನು ನೋಡಿ, "ಇಮ್ರಾನ್ ಅವರ ಪಾತ್ರ ಅತಿಶ್ ಆಗಿರದೆ ಇದ್ದಿದ್ದರೇ ಏನಾಗಿರುತ್ತಿತ್ತು ಗೊತ್ತೆ...?" ಎಂದು ಪ್ರಶ್ನಿಸುತ್ತಾ, ಸೀದಾ ಅವರ ಬಳಿಗೆ ಹೋಗಿ ಮುತ್ತಿಟ್ಟಿದ್ದಾರೆ. ತಕ್ಷಣ ಅಲ್ಲಿದ್ದ ಅಭಿಮಾನಿಗಳು ಮುಗಿಲು ಮುಟ್ಟುವಂತೆ ಉತ್ಸಾಹದಿಂದ ಚಪ್ಪಾಳ ತಟ್ಟುತ್ತಾ ಸಂಭ್ರಮಿಸಿದ್ದಾರೆ.

ಕಿಸ್ಸಿಂಗ್ ಸೀನ್‌ಗೆ ಇಮ್ರಾನ್ ಹಶ್ಮಿ ಫೇಮಸ್

ಬಾಲಿವುಡ್ ನಟ ಇಮ್ರಾನ್ ಹಶ್ಮಿ ಹಲವಾರು ಸೂಪರ್ ಹಿಟ್ ಬಾಲಿವುಡ್ ಚಿತ್ರಗಳನ್ನು ನೀಡಿದವರು. ಸಲ್ಮಾನ್ ಖಾನ್ ಚಿತ್ರದಲ್ಲಿ ಖಳನಟನಾಗಿ ಅಬ್ಬರಿಸಿದ್ದಾರೆ. ಆದರೆ, ಬಾಳಿವುಡ್‌ನಲ್ಲಿ ಕಿಸ್ಸಿಂಗ್ ಸೀನ್ ಎಂದು ಬಂದರೆ ಮೊದಲು ನೆನಪಾಗುವುದು ಇಮ್ರಾನ್ ಹಶ್ಮಿ ಅವರೆ. ಅಷ್ಟು ಫೇಮಸ್ ಆಗಿದ್ದಾರೆ. ಅವರಿರುವ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಇಲ್ಲ ಎಂದರೇ ಅಸು ಸಿನಿಮಾವೇ ಅಲ್ಲ ಎಂಬ ಮಟ್ಟಿಗೂ ಮಾತುಗಳು ಕೇಳಿ ಬರುತ್ತವೆ.

ಟೈಗರ್ 3

ಮನೀಶ್ ಶರ್ಮಾ ನಿರ್ದೇಶನದ, ಸಲ್ಮಾನ್ ಖಾನ್ ಅಭಿನಯದ 'ಟೈಗರ್ 3' ಚಿತ್ರ ಈ ವರ್ಷದ ದೀಪಾವಳಿಯಂದು ಗ್ರ್ಯಾಂಡ್ ಆಗಿ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿತು. ವಿಶ್ವದಾದ್ಯಂತ ಉತ್ತಮ ಪ್ರದರ್ಶನ ನೀಡಿದ ಈ ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ಕ್ಲಬ್‌ಗೆ ಪ್ರವೇಶಿಸಿದೆ. ಆದರೆ, ಭಾರೀ ನಿರೀಕ್ಷೆಯಿಂದ ಬಿಡುಗಡೆಯಾದ ಈ ಸಿನಿಮಾ ಶಾರುಖ್ ಖಾನ್ ಅವರ ಪಠಾಣ್, ಜವಾನ್ ಸಿನಿಮಾಗಳ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

tiger-3-actor-salman-khans-kissed-emraan-hashmi

ವಿಶ್ವಕಪ್‌ನಲ್ಲಿ ಇಂಡಿಯಾ ಗೆಲ್ಲಲಿದೆ ಎಂದ ಸಲ್ಮಾನ್ ಖಾನ್

ಇನ್ನು, ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವಕಪ್‌ ಪಂದ್ಯದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಮುಡಿಗೇರಿಸಿಕೊಳ್ಳಲಿದೆ ಎಂದು ಸಲ್ಮಾನ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಇಂಡಿಯಾ ಪ್ರತಿಯೊಂದು ಪಂದ್ಯವನ್ನು ಗೆದ್ದಿದೆ. ವಿಶ್ವಕಪ್ ನಡೆಯುತ್ತಿರುವ ಸಮಯದಲ್ಲಿ ಅದರ ಜೊತೆಗೆ ನಾವು ಬಂದಿದ್ದೇವೆ. ನಮ್ಮ ಬಾಕ್ಸ್ ಆಫೀಸ್ ಕಲೆಕ್ಷನ್‌ ಕೂಡ ಚೆನ್ನಾಗಿದೆ. ಈಗ ಭಾರತ ವಿಶ್ವಕಪ್ ಗೆಲ್ಲುತ್ತದೆ ಮತ್ತು ನೀವೆಲ್ಲರೂ ಮತ್ತೆ ಥಿಯೇಟರ್‌ಗಳಿಗೆ ಹಿಂತಿರುಗುತ್ತೀರಿ" ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಈ ವೇಳೆ ಅಭಿಮಾನಿಗಳು ಜೋರಾಗಿ ಚಪ್ಪಾಳೆ ತಟ್ಟಿ ಒಪ್ಪಿಗೆ ಸೂಚಿಸಿದ್ದಾರೆ.

More from Filmibeat

English summary
Actor Salman Khan's kissed Emraan Hashmi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X