Tiger 3: ಕತ್ರಿನಾ ಕೈಫ್ ಜೊತೆಗಿನ 'ಟವೆಲ್ ಫೈಟ್'ನಲ್ಲಿ ಟವೆಲ್ ಸಂಭಾಳಿಸುವುದೇ ದೊಡ್ಡ ಸವಾಲು ಎಂದ ಹಾಲಿವುಡ್ ನಟಿ
ನಟ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ನಟನೆಯ ಬಹುನಿರೀಕ್ಷಿತ ಆಕ್ಷನ್ ಸಿನಿಮಾ 'ಟೈಗರ್ 3' ನವೆಂಬರ್ 12 ರ ದೀಪಾವಳಿಯಂದು ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಟ್ರೇಲರ್‌ನಲ್ಲಿ ಅತಿ ಹೆಚ್ಚು ಗಮನ ಸೆಳೆದಿರುವುದು ಮಿಶೆಲ್ ಲೀ ಮತ್ತು ಕತ್ರಿನಾ ಕೈಫ್ ಅವರ ಟವೆಲ್ ಫೈಟ್ ಸೀನ್.
ಎಸ್... ಆಕ್ಷನ್ ಫೈಟ್ ಸೀಕ್ವೆನ್ಸ್‌ಗಳಲ್ಲಿ ಪರಿಣತಿ ಹೊಂದಿರುವ ಹಾಲಿವುಡ್ ನಟಿ ಮಿಶೆಲ್ ಲೀ, ಈಗ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ 3 ಸಿನಿಮಾದಲ್ಲಿ ನಟಿಸುತ್ತಿದ್ದು, ಸಕತ್ ಫೈಟ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಿಶೆಲ್ ಲೀ ಮತ್ತು ಕತ್ರಿನಾ ಕೈಫ್ ಟವೆಲ್ ಫೈಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಫೈಟ್ ಚಿತ್ರೀಕರಣವನ್ನು ನಟಿ ಮಿಶೆಲ್ ನೆನಪಿಸಿಕೊಂಡಿದ್ದಾರೆ.

ಟವೆಲ್ ಫೈಟ್ ನೆನಪಿಸಿಕೊಂಡ ನಟಿ ಮಿಶೆಲ್ ಲೀ
ಟೈಗರ್ 3 ರಲ್ಲಿ ಸಿನಿಮಾದ ಈ ಟವರಲ್ ಫೈಟ್ ಅನ್ನು ಟರ್ಕಿಯ ಹಮಾಮ್‌ನಲ್ಲಿ ಚಿತ್ರೀಕರಿಸಲಾಗಿತ್ತು. ನಟಿ ಮಿಶೆಲ್ ಲೀ, ಈ ಹಿಂದೆ ಸ್ಕಾರ್ಲೆಟ್ ಜೋಹಾನ್ಸನ್ ಅವರೊಂದಿಗೆ 'ಬ್ಲ್ಯಾಕ್ ವಿಡೋ', ಜಾನಿ ಡೆಪ್ 'ಪೈರೇಟ್ಸ್ ಆಫ್ ದಿ ಕೆರಿಬಿಯನ್', ಬ್ರಾಡ್ ಪಿಟ್ 'ಬುಲೆಟ್ ಟ್ರೈನ್' ಮತ್ತು ಟಾಮ್ ಹಾರ್ಡಿ ಅವರ 'ವೆನಮ್' ನಲ್ಲಿ ನಟಿಸಿದ್ದಾರೆ.
'ಟೈಗರ್ 3' ಸಿನಿಮಾದ ಟವೆಲ್ ಫೈಟ್ ಟ್ರೇಲರ್‌ನ ದೊಡ್ಡ ಚರ್ಚೆಯ ವಿಷಯವಾಗಿರುವ ಬಗ್ಗೆ ತಾನು ಯಾವುದೇ ಆಶ್ಚರ್ಯಪಡಲಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಈ ಫೈಟ್ ಸೀನ್ ಶೂಟಿಂಗ್‌ಗೆ ಮೊದಲು ಎರಡು ವಾರಗಳ ಕಾಲ ತಾನು ಮತ್ತು ಕತ್ರಿನಾ ಕೈಫ್ ಪೂರ್ವಾಭ್ಯಾಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಕತ್ರಿನಾ ಜೊತೆಗಿನ ವೈರಲ್ ಟವೆಲ್ ಫೈಟ್ ದೃಶ್ಯ
"ನನಗೆ ಈ ಸೀನ್ ವೈರಲ್ ಆಗಿರುವ ಬಗ್ಗೆ ಯಾವುದೇ ಆಶ್ಚರ್ಯವಿಲ್ಲ. ನಾವು ಫೈಟ್ ಶೂಟ್ ಮಾಡುವಾಗ ಇದು ತುಂಬಾ ಚೆನ್ನಾಗಿ ಬರುತ್ತದೆ ಎಂದು ನಾನು ಭಾವಿಸಿದ್ದೆವು. ನಾವು ಒಂದೆರಡು ವಾರಗಳ ಕಾಲ ಫೈಟ್ ಸೀನ್ ಅಭ್ಯಾಸ ಮಾಡಿ ನಂತರ ಅದನ್ನು ಶೂಟ್ ಮಾಡಿದ್ದೇವೆ. ಸೆಟ್ ವಿನ್ಯಾಸವು ತುಂಬಾ ಚೆನ್ನಾಗಿತ್ತು. ಹೋರಾಟ ಕೂಡ ಫನ್ನಿಯಾಗಿತ್ತು. ಅಂತರಾಷ್ಟ್ರೀಯ ಚಿತ್ರದಲ್ಲಿ ನಟಿಸಿರುವುದು ಅದ್ಭುತ ಅನುಭವ" ಎಂದು ಹೇಳಿದ್ದಾರೆ.

ತಮ್ಮ ಸಹನಟಿ ಕತ್ರಿನಾ ಕೈಫ್ ಬಗ್ಗೆ ಮಾತನಾಡುತ್ತಾ, "ಕತ್ರೀನಾ ತುಂಬಾ ವೃತ್ತಿಪರರಾಗಿದ್ದರು. ಫೈಟ್ ಸೀನ್‌ಗಳಲ್ಲಿ ಅವರು ತುಂಬಾ ಕಷ್ಟಪಟ್ಟಿದ್ದಾರೆ. ಅವರಿಗೆ ಡ್ಯಾನ್ಸ್‌ನಲ್ಲಿ ತುಂಬಾ ಅನುಭವವಿದೆ ಎಂಬುದು ಸ್ಪಷ್ಟ. ಆದ್ದರಿಂದ ಅವಳೊಂದಿಗೆ ಕೆಲಸ ಮಾಡುವುದು ತುಂಬಾ ಸುಲಭ. ನಾವು ಬೆವರು ಸುರಿಸಿ ಕೆಲಸ ಮಾಡಿದ್ದೇವು" ಎಂದು ತಮ್ಮ ಅನುಭವ ತಿಳಿಸಿದ್ದಾರೆ.
ಟವೆಲ್ ಬೀಳದಂತೆ ಹಿಡಿಯುವುದೇ ದೊಡ್ಡ ಸವಾಲು
ಇನ್ನು, "ತಮ್ಮ ದೇಹಕ್ಕೆ ಸುತ್ತಿಕೊಂಡಿದ್ದ ಟವೆಲ್‌ಗಳನ್ನು ನಿರ್ವಹಿಸುವುದು ಈ ಫೈಟ್‌ನ ದೊಡ್ಡ ಸವಾಲಾಗಿತ್ತು ಎಂದು ಮಿಶೆಲ್ ಹೇಳುತ್ತಾರೆ. "ಮುಖ್ಯ ಸವಾಲುಗಳಲ್ಲಿ ನಮ್ಮ ಟವೆಲ್‌ಗಳು ಸರಿಯಾದ ಸ್ಥಳದಲ್ಲಿ ಇರುವಂತೆ ಮಾಡಿಕೊಳ್ಳುವುದೇ ಆಗಿತ್ತು. ಫೈಟ್ ಸೀನ್‌ಗಳಲ್ಲಿ ತುಂಬಾ ಮೂಮೆಂಟ್ಸ್ ಇದ್ದ ಕಾರಣ ಇದು ಖಂಡಿತವಾಗಿಯೂ ಸವಾಲಾಗಿತ್ತು" ಎಂದು ಹೇಳಿದ್ದಾರೆ.
'ಟೈಗರ್ 3'
ಯಶ್ ರಾಜ್ ಫಿಲಂ ಸ್ಪೈ ಯೂನಿವರ್ಸ್‌ನ 'ಏಕ್ ಥಾ ಟೈಗರ್', 'ಟೈಗರ್ ಜಿಂದಾ ಹೈ', 'ವಾರ್' ಮತ್ತು 'ಪಥಾನ್' ಬಳಿಕ 'ಟೈಗರ್ 3' ನಿರ್ಮಾಣ ಮಾಡುತ್ತಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್, ಅವಿನಾಶ್ ಮತ್ತು ಜೋಯಾ ಪಾತ್ರದಲ್ಲಿ ಮುಂದುವರೆದಿದ್ದಾರೆ. ಈ ಸಿನಿಮಾ 2023 ರ ದೀಪಾವಳಿಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











