ಟೈಗರ್ 3 ಸಿನಿಮಾದಲ್ಲಿ ಕತ್ರಿನಾ ಕೈಫ್ ಖಡಕ್ ಫೈಟ್: ಆಕ್ಷನ್ ಸೀನ್‌ಗಳ ತಯಾರಿಗಾಗಿ ನಟಿಯ ಟ್ರೈನಿಂಗ್ ಹೇಗಿತ್ತು ಗೊತ್ತಾ?

ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ ಆಕ್ಷನ್ ಥ್ರಿಲ್ಲರ್ ಟೈಗರ್ 3. ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದರ ಜೊತೆಗೆ ಟ್ರೇಲರ್‌ನಲ್ಲಿ ಕತ್ರಿನಾ ಕೈಫ್ ಅವರ ಆಕ್ಷನ್ ಸೀನ್‌ಗಳು ಪ್ರೇಕ್ಷಕರನ್ನು ಸಕತ್ ಇಂಪ್ರೇಸ್ ಮಾಡಿವೆ.

ಯಶ್ ರಾಜ್ ಫಿಲ್ಮಂನ ಟೈಗರ್ ಸೀಕ್ವೆಲ್ ಟೈಗರ್ 3 ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಟೈಗರ್‌ನ ಜೋಯಾ ಪಾತ್ರಕ್ಕೆ ಜೀವ ತುಂಬುವ ನಟಿ ಕತ್ರಿನಾ ಕೈಫ್ ಮತ್ತೆ ಜೋಯಾ ಆಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಗೂಢಚಾರಿಕೆ ಜೋಯಾ ಅಸಾಧಾರಣ ಪತ್ತೇದಾರಿಯಾಗಿದ್ದು, ಹಲವು ಆಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವುಗಳಿಗಾಗಿ ನಟಿಯ ತಯಾರಿ ಕೂಡ ಸಕತ್ ಜೋರಾಗಿಯೇ ನಡೆದಿದೆ.

Tiger 3 : Katrina Kaif dedicated 60 days for action sequences preparation

ಟೈಗರ್ 3 ಸಿನಿಮಾದಲ್ಲಿ ಕತ್ರಿನಾ ಕೈಫ್

ಕತ್ರಿನಾ ಕೈಫ್ ನಿಜವಾಗಿಯೂ ಜೋಯಾ ಪಾತ್ರದಲ್ಲಿ ಜೀವಿಸಿದ್ದಾರೆ. ಪ್ರತಿ ಟೈಗರ್ ಸಿನಿಮಾದಲ್ಲಿ ಚಿತ್ರತಂಡ ಅವರ ಪಾತ್ರವನ್ನು ಮತ್ತಷ್ಟು ಗಟ್ಟಿ ಮಾಡುತ್ತಿದ್ದಾರೆ. ಜೊತೆಗೆ ಹೆಚ್ಚೆಚ್ಚು ಆಕ್ಷನ್ ಸೀನ್‌ಗಳನ್ನು ನೀಡುತ್ತಿದ್ದಾರೆ. ಉಸಿರು ಬಿಗಿ ಹಿಡಿಯುವಂತಹ ಸಾಹಸ ದೃಶ್ಯಗಳಲ್ಲಿ ನಟಿ ಭಯವಿಲ್ಲದೇ ನಟಿಸಿದ್ದಾರೆ.

ಇದಕ್ಕೆ ಕಾರಣ ಟೈಗರ್ 3 ಸಿನಿಮಾ ಆಕ್ಷನ್ ಸೀನ್‌ಗಳಿಗಾಗಿ ಕತ್ರಿನಾ ಕೈಫ್ ಕಠಿಣ ತಯಾರಿಯನ್ನು ನಡೆಸಿದ್ದಾರೆ. ಇದಕ್ಕಾಗಿಯೇ ಸುಮಾರು 60 ದಿನಗಳನ್ನು ಕಠಿಣ ತರಬೇತಿ ಪಡೆದಿದ್ದಾರೆ. ಈ ಮೂಲಕ ತಾವು ನಟಿಸುವ ಸಿನಿಮಾಕ್ಕಾಗಿ ತಾವೇಷ್ಟು ನಿಷ್ಠರು ಎಂಬುದನ್ನು ತಿಳಿಸಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ಹಾಲಿವುಡ್ ನಟಿ ಮಿಶೆಲ್ ಲೀ ಅವರೊಂದಿಗೂ ಫೈಟ್ ಮಾಡಿದ್ದಾರೆ.

Tiger 3 : Katrina Kaif dedicated 60 days for action sequences preparation

"ಟೈಗರ್ 3 ತನ್ನ ಕುಟುಂಬ, ರಾಷ್ಟ್ರ ಅಥವಾ ಮಾನವೀಯತೆಯನ್ನು ಉಳಿಸುವ ವಿಷಯಕ್ಕೆ ಬಂದಾಗ ಮಹಿಳೆಯು ಏನೂ ಬೇಕಾದರೂ ಮಾಡಲು ಸಾಧ್ಯವಿದೆ ಎಂದು ತೋರಿಸುತ್ತದೆ. ಮಹಿಳೆ ಕೂಡ ಒಬ್ಬ ಪೋಷಕರಾಗಿಯೂ, ದೇಶವನ್ನು ಕಾಯುವ ಉಗ್ರ ರಕ್ಷಕರಾಗಬಹುದು ಎಂದು ಜನರಿಗೆ ಹೇಳಲು ಜೋಯಾ ಅವರಂತಹ ಪಾತ್ರವು ಮುಖ್ಯವಾಗಿದೆ ಮತ್ತು ಈಗ ಅವಶ್ಯಕವಾಗಿದೆ. ಜೋಯಾ ನನ್ನ ವೃತ್ತಿಜೀವನದ ಅತ್ಯಂತ ಪ್ರೀತಿಯ ಪಾತ್ರಗಳಲ್ಲಿ ಒಂದು" ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿರುವ ಅವರು, "ಜೋಯಾ ಅವರ ಆಕ್ಷನ್ ಶೈಲಿಯು ಸಹ ವಿಶಿಷ್ಟವಾಗಿದೆ. ಟ್ರೈಲರ್‌ನಲ್ಲಿ ನೀವು ನೋಡಿದಂತಹ ಕೆಲವು ಕಷ್ಟದ ಆಕ್ಷನ್ ಸೀಕ್ವೆನ್ಸ್‌ಗಳನ್ನು ಜೋಯಾ ಸುಲಭವಾಗಿ ಮಾಡುತ್ತಾರೆ. ಜೋಯಾ ಶತ್ರುಗಳ ಸೈನ್ಯದ ವಿರುದ್ಧ ಹೋರಾಡುತ್ತಾಳೆ. ಆಕ್ಷನ್ ಸೀನ್‌ಗಳು ಬಂದಾಗ ಪುರುಷರಿಗಿಂತ ಹೆಚ್ಚಾಗಿ ಫೈಟ್ ಮಾಡುತ್ತಾಳೆ" ಎಂದು ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇನ್ನು, ಕತ್ರಿನಾ ಕೈಫ್ ಅವರ ಆಕ್ಷನ್ ಸೀನ್‌ಗಳ ಬಗ್ಗೆ ಹಾಲಿವುಡ್ ನಟಿ ಮಿಶೆಲ್ ಲೀ ಕೂಡ ಮೆಚ್ಚುಗೆ ಮಾತಗಳನ್ನಾಡಿದ್ದಾರೆ. ಮಿಶೆಲ್ ಲೀ ಮತ್ತು ಕತ್ರಿನಾ ಕೈಫ್ ಟವೆಲ್ ಫೈಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಫೈಟ್ ಚಿತ್ರೀಕರಣವನ್ನು ನಟಿ ಮಿಶೆಲ್ ನೆನಪಿಸಿಕೊಂಡಿದ್ದರು. ಈ ಫೈಟ್ ಸೀನ್ ಶೂಟಿಂಗ್‌ಗೆ ಮೊದಲು ಎರಡು ವಾರಗಳ ಕಾಲ ತಾನು ಮತ್ತು ಕತ್ರಿನಾ ಕೈಫ್ ಪೂರ್ವಾಭ್ಯಾಸ ಮಾಡಿದ್ದೇವು ಎಂದು ಹೇಳಿದ್ದರು.

ಟೈಗರ್ 3

ಟೈಗರ್ 3, ಆದಿತ್ಯ ಚೋಪ್ರಾ ನಿರ್ಮಾಣದ ಮತ್ತು ಮನೀಶ್ ಶರ್ಮಾ ನಿರ್ದೇಶನದ ಬಹು ನಿರೀಕ್ಷಿತ ಚಿತ್ರವು. ಈ ದೀಪಾವಳಿಯ ನವೆಂಬರ್ 12 ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್, ಸಲ್ಮಾನ್ ಖಾನ್ ಮತ್ತು ಇಮ್ರಾನ್ ಹಶ್ಮಿ ನಟಿಸಿದ್ದಾರೆ.

More from Filmibeat

English summary
Katrina Kaif action sequence in Tiger 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X