ಸಲ್ಮಾನ್ ನಟನೆಯ ಟೈಗರ್ 3 ಪ್ರದರ್ಶನದ ವೇಳೆ ಪಟಾಕಿ ಹಚ್ಚಿ ಹುಚ್ಚಾಟ ಮೆರೆದ ಫ್ಯಾನ್ಸ್!: ಭಯಂಕರ ವಿಡಿಯೋ ಇಲ್ಲಿದೆ

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಟನೆಯ ಟೈಗರ್ 3 ದೀಪಾವಳಿಯಂದು ಬಿಡುಗಡೆಯಾಗಿದ್ದು, ದೇಶದೆಲ್ಲೆಡೆ ಭರ್ಜರಿ ಪ್ರದರ್ಶನ ನೀಡುತ್ತಿದೆ. ಶುಕ್ರವಾರ ಸಿನಿಮಾ ಬಿಡುಗಡೆ ಮಾಡುವ ಸಂಪ್ರದಾಯವನ್ನು ಮುರಿದು ಯಶ್ ರಾಜ್ ಫಿಲ್ಮಂ ಮೊದಲ ಬಾರಿಗೆ ಭಾನುವಾರ ಸಿನಿಮಾ ಬಿಡುಗಡೆ ಮಾಡಿದೆ. ಇದರ ಜೊತೆಗೆ ಸಲ್ಮಾನ್ ಫ್ಯಾನ್ಸ್‌ಗಳ ಹುಚ್ಚಾಟ ಬಯಲಿಗೆ ಬಂದಿದೆ.

ಟೈಗರ್ 3 ಪ್ರದರ್ಶನದ ವೇಳೆ ಮಾಲೆಗಾಂವ್ ಥಿಯೇಟರ್‌ನೊಳಗೆ ಸಲ್ಮಾನ್ ಖಾನ್ ಫ್ಯಾನ್ಸ್ ಪಟಾಕಿ ಸಿಡಿಸಿದ್ದಾರೆ. ಈ ಸಡನ್ ಘಟನೆಯಿಂದ ಸಿನಿಮಾ ಪ್ರೇಕ್ಷಕರು ಆಘಾತಕ್ಕೆ ಒಳಗಾಗಿದ್ದಾರೆ. ಸಿನಿಮಾ ಬಿಡುಗಡೆಯಾದ ಭಾನುವಾರ ಈ ಘಟನೆ ನಡೆದಿದೆ. ಪಟಾಕಿ ದುರಂತದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Tiger 3: Salman Khan Fans bursted fire crackers inside the cinema hall, watch the Horrible video

ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಸಲ್ಮಾನ್ ಫ್ಯಾನ್ಸ್!

ಯಶ್ ರಾಜ್ ಫಿಲ್ಮಂನ ಆಕ್ಷನ್ ಫ್ರಾಂಚೈಸಿಯ ಮೂರನೇ ಕಂತಾಗಿರುವ ಟೈಗರ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಪ್ರದರ್ಶನದ ವೇಳೆ ಪಟಾಕಿ ಸಿಡಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ವಿಡಿಯೀ ನೋಡಿದರೇ ಮೈ ನಡುಗುವಂತಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ನಟ ಸಲ್ಮಾನ್ ಖಾನ್ ತೆರೆಯ ಮೇಲೆ ಎಂಟ್ರಿ ನೀಡುತ್ತಿದ್ದಂತೆ ಅಭಿಮಾನಿಗಳು ಒಂದೇ ಸಲಿ ಹಲವು ಪಟಾಕಿಗಳನ್ನು ಸಿಡಿಸಿದ್ದಾರೆ. ಬೆಂಕಿಯ ಕಿಡಿಗಳು ಥಿಯೇಟರ್ ಒಳಗೆಲ್ಲಾ ಹಾರಿದೆ. ಇದರಿಂದ ಸಿನಿಮಾ ನೋಡಲು ಬಂದಿದ್ದ ಇತರೇ ಪ್ರೇಕ್ಷಕರಲ್ಲಿ ಹಲವರು ಹೆದರಿ ನಿರ್ಗಮನದ ಕಡೆಗೆ ಓಡಿದ್ದಾರೆ. ಇನ್ನು ಕೆಲವು ಸಿನಿಮಾ ಹಾಲ್‌ಗಳಲ್ಲೂ ಇದೇ ರೀತಿಯ ಘಟನೆಗಳು ವರದಿಯಾಗಿವೆ ಎನ್ನಲಾಗಿದೆ.

ಮಲ್ಟಿಫ್ಲೆಕ್ಸ್‌ಗಳಲ್ಲಿ ಬ್ಯಾಗ್‌ಗಳನ್ನು ಚೆಕ್ ಮಾಡಿ ಥಿಯೇಟರ್ ಒಳಗೆ ಕಳಿಸಲಾಗುತ್ತದೆ ಆದರೆ, ಸಿಂಗಲ್ ಸ್ಕ್ರೀನ್‌ಗಳಲ್ಲಿ ಹಾಗೆ ಮಾಡುವುದಿಲ್ಲ. ಹೀಗಾಗಿ ಸಲ್ಮಾನ್ ಖಾನ್ ಅಭಿಮಾನಿಗಳು ಪಟಾಕಿ ತೆಗೆದುಕೊಂಡು ಹೋಗಿರಬಹುದು ಎನ್ನಲಾಗಿದೆ. ಆದರೆ, ಇವರ ಹುಚ್ಚಾಟಕ್ಕೆ ಜನ ಹೆದರಿರುವುದಂತೂ ಸುಳ್ಳಲ್ಲ. ಏಕಾಏಕಿ ಈ ರೀತಿ ಘಟನೆ ನಡೆದಿದ್ದರಿಂದ ಅನೇಕರು ಭಯಬಿದ್ದು ಓಡಿ ಹೋಗಿದ್ದಾರೆ.

ಸಲ್ಮಾನ್ ಅಭಿಮಾನಿಗಳ ಹುಚ್ಚಾಟ ಇದೇ ಮೊದಲಲ್ಲ!

ಬಾಲಿವುಡ್ ಭಾಯ್‌ಜಾನ್ ಸಲ್ಮಾನ್ ಖಾನ್ ಅಭಿಮಾನಿಗಳು ಇಂತಹ ಅಪಾಯಕಾರಿ ಸಾಹಸಕ್ಕೆ ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. 2021 ರಲ್ಲಿ ಬಂದ ಆಂಥಿಮ್: ದಿ ಫೈನಲ್ ಟ್ರುತ್ ಬಿಡುಗಡೆಯ ಸಮಯದಲ್ಲಿ, ಅಭಿಮಾನಿಗಳು ಸಿನಿಮಾ ಹಾಲ್‌ನೊಳಗೆ ಪಟಾಕಿಗಳನ್ನು ಸಿಡಿಸುವ ಹಲವಾರು ವಿಡಿಯೋಗಳು ವೈರಲ್ ಆಗಿದ್ದವು. ಆಗ ನಟ ಸಲ್ಮಾನ್ ಖಾನ್ ಅಭಿಮಾನಿಗಳಲ್ಲಿ ಹೀಗೆ ಮಾಡಬಾರದು ಎಂದು ಮನವಿ ಮಾಡಿದ್ದರು.

"ಥಿಯೇಟರ್ ಒಳಗೆ ಪಟಾಕಿಗಳನ್ನು ತೆಗೆದುಕೊಂಡು ಹೋಗದಂತೆ ನನ್ನ ಎಲ್ಲಾ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ. ಹೀಗೆ ಮಾಡುವುದರಿಂದ ದೊಡ್ಡ ಅಪಾಯ ಉಂಟಾಗಬಹುದು. ಇದರಿಂದಾಗಿ ನಿಮ್ಮ ಮತ್ತು ಇತರರ ಜೀವಕ್ಕೆ ಅಪಾಯವಿದೆ. ಚಿತ್ರಮಂದಿರದೊಳಗೆ ಪಟಾಕಿಗಳನ್ನು ತೆಗೆದುಕೊಂಡು ಹೋಗಲು ಬಿಡಬೇಡಿ" ಎಂದಿದ್ದರು.

ಜೊತೆಗೆ ಪ್ರವೇಶ ದ್ವಾರದಲ್ಲಿ ಬ್ಯಾಗ್ ಚೆಕ್ ಮಾಡುವಂತೆ ಥಿಯೇಟರ್ ಮಾಲೀಕರಲ್ಲಿ ನನ್ನ ವಿನಂತಿಯಿದೆ . ಎಲ್ಲಾ ರೀತಿಯಿಂದಲೂ ಚಿತ್ರವನ್ನು ಆನಂದಿಸಿ. ಆದರೆ ದಯವಿಟ್ಟು ಇಂತಹ ಅನಾಹುತ ತಪ್ಪಿಸಿ ಎಂಬುದು ನನ್ನ ಎಲ್ಲಾ ಅಭಿಮಾನಿಗಳಿಗೆ ನನ್ನ ವಿನಂತಿ.. ಧನ್ಯವಾದಗಳು ಎಂದು ಸಲ್ಮಾನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

ಸಲ್ಮಾನ್ ಖಾನ್, ಕತ್ರಿನಾ ಕೈಫ್, ಇಮ್ರಾನ್ ಹಶ್ಮಿ ನಟನೆಯ ಆಕ್ಷನ್-ಪ್ಯಾಕ್ಡ್ ಟೈಗರ್ 3 ನಲ್ಲಿ ಶಾರುಖ್ ಖಾನ್ ಅವರ ಪಠಾಣ್ ಪಾತ್ರವು ಸಾಕಷ್ಟು ಸದ್ದು ಮಾಡುತ್ತಿದೆ.

More from Filmibeat

English summary
Tiger 3: Salman Khan Fans bursted fire crackers inside the cinema hall.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X