For Quick Alerts
  ALLOW NOTIFICATIONS  
  For Daily Alerts

  ಪ್ರೇಯಸಿ ಜೊತೆ ಪ್ರಯಾಣಿಸುತ್ತಿದ್ದ ಟೈಗರ್ ಶ್ರಾಫ್‌ನ ಕಾರು ತಡೆದ ಪೊಲೀಸರು

  |

  ನಟ ಟೈಗರ್ ಶ್ರಾಫ್ ಹಾಗೂ ನಟಿ ದಿಶಾ ಪಟಾನಿ ಪರಸ್ಪರ ಪ್ರೇಮಿಸುತ್ತಿರುವುದು ಒಟ್ಟೊಟ್ಟಿಗೆ ಸುತ್ತಾಡುತ್ತಿರುವುದು ಹೊಸ ವಿಷಯವೇನಲ್ಲ.

  ಲಾಕ್‌ಡೌನ್ ಅವಧಿಯಲ್ಲಿ ವಿದೇಶಗಳಲ್ಲಿ ಸುತ್ತಾಡಿ ಬಂದ ಈ ಜೋಡಿ ಮುಂಬೈನಲ್ಲಿಯೂ ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ. ಜಿಮ್‌ಗೆ ಹಾಗೂ ಇತರ ಕಡೆಗಳಿಗೆ ಈ ಯುವ ಒಟ್ಟೊಟ್ಟಿಗೆ ಓಡಾಡುವುದು ಮಾಮೂಲಿಯಾಗಿದೆ.

  ಆದರೆ ನಿನ್ನೆಯಷ್ಟೆ (ಜೂನ್ 01) ದಿಶಾ ಪಟಾನಿ ಹಾಗೂ ಟೈಗರ್ ಶ್ರಾಫ್ ಪ್ರಯಾಣಿಸುತ್ತಿದ್ದ ಕಾರನ್ನು ಮುಂಬೈ ಪೊಲೀಸರು ತಡೆದಿದ್ದಾರೆ. ಮಂಗಳವಾರ ಈ ಇಬ್ಬರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಡ್ಡಗಟ್ಟಿದ ಪೊಲೀಸರು ಲಾಕ್‌ಡೌನ್ ಅವಧಿಯಲ್ಲಿ ಹೊರಗೆ ಬಂದಿದ್ದಕ್ಕೆ ಕಾರಣ ಕೇಳಿದ್ದಾರೆ.

  ದಿಶಾ ಹಾಗೂ ಟೈಗರ್‌ ಅವರುಗಳು ಖಾಸಗಿ ಜಿಮ್‌ಗೆ ಹೋಗಿ ಮರಳಿ ಹೋಗುವಾಗ ಪೊಲೀಸರು ಅಡ್ಡಗಟ್ಟಿದ್ದಾರೆ. ಪೊಲೀಸರು ಅಡ್ಡಗಟ್ಟಿದ ವೇಳೆ ಇಬ್ಬರೂ ಮಾಸ್ಕ್ ಧರಿಸಿದ್ದರು. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿದ್ದಾರೆ ಹಾಗಾಗಿ ಇಬ್ಬರನ್ನೂ ಬಿಟ್ಟು ಕಳಿಸಿದ್ದಾರೆ. ಯಾವುದೇ ಪ್ರಕರಣ ಅವರ ಮೇಲೆ ದಾಖಲಾಗಿಲ್ಲ.

  ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಪರಸ್ಪರ ಪ್ರೇಮಿಸುತ್ತಿದ್ದಾರೆ. ಇಬ್ಬರೂ ಸಹ ಫಿಟ್‌ನೆಸ್‌ ಫ್ರೀಕ್‌ಗಳಾಗಿದ್ದು ಒಟ್ಟಿಗೆ ಜಿಮ್‌ಗೆ ಹೋಗುತ್ತಾರೆ. ತಮ್ಮ ದೈಹಿಕ ಕಸರತ್ತಿನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇಬ್ಬರೂ ಸಹ ಕೆಲವು ತಿಂಗಳ ಹಿಂದೆ ಮಾಲ್ಡೀವ್ಸ್‌ನಲ್ಲಿ ರಜೆ ಕಳೆದು ಬಂದಿದ್ದಾರೆ.

  ಮತ್ತೊಂದು ಹೊಸ ದಾಖಲೆ ಬರೆದು ಭಾರತದಲ್ಲೇ No 1 ಆದ KGF 2 | Filmibeat Kannada

  ಟೈಗರ್ ಶ್ರಾಫ್, 'ಹೀರೋಪನ್ತಿ 2', 'ಗಣಪತ್ 1', 'ರ್ಯಾಂಬೊ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ದಿಶಾ ಪಟಾನಿ, 'ಏಕ್ ವಿಲನ್ ರಿಟರ್ನ್ಸ್', 'ಯೋದ್ಧ', 'ಕೆ ಟೀನಾ', 'ಮಲಂಗ್ 2' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Mumbai Police pulled over Disha Patani and Tiger Shroff's car while they returning from gym.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X