For Quick Alerts
  ALLOW NOTIFICATIONS  
  For Daily Alerts

  ಸಾಲಕ್ಕೆ ಸಿಲುಕಿ ಅಪ್ಪ ಮಾರಿದ್ದ ಹಳೆ ಮನೆಯನ್ನು ಮರಳಿ ಖರೀದಿಸಿದ ಟೈಗರ್ ಶ್ರಾಫ್

  |

  ಸಿನಿಮಾ ರಂಗದಲ್ಲಿರುವವರಿಗೆ ಏಳು-ಬೀಳು ಸಾಮಾನ್ಯ. ವೃತ್ತಿಯ ಉತ್ತುಂಗದಲ್ಲಿದ್ದ ಹಲವರು ಕೆಲವೇ ವರ್ಷಗಳಲ್ಲಿ ಪಾತಾಳ ಕಂಡಿದ್ದೂ ಇದೆ.

  ಅಪ್ಪನ ಕನಸಿನ ಮನೆಯನ್ನು ವಾಪಾಸ್ ಕೊಡಿಸಿದ ಮಗ | Filmibeat Kannada

  ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿರುವ ಬಾಲಿವುಡ್ ನಟ ಜಾಕಿ ಶ್ರಾಫ್ ಒಂದು ಸಮಯದಲ್ಲಿ ವೃತ್ತಿಯ ಉತ್ತುಂಗದಲ್ಲಿದ್ದವರು ಆದರೆ ಕೆಲವೇ ವರ್ಷಗಳಲ್ಲಿ ನಷ್ಟದ ಮೇಲೆ ನಷ್ಟ ಅನುಭವಿಸಿ ಇದ್ದ ಮನೆಯನ್ನೂ ಮಾರಿಕೊಂಡರು.

  ಆದರೆ ಈಗ ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್ ಬಾಲಿವುಡ್‌ ಜನಪ್ರಿಯ ಯುವನಟ. ಸಿನಿಮಾ ಒಂದಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅಪ್ಪ ಆಗ ಮಾರಿದ್ದ ಹಳೆಯ ಮನೆಯನ್ನು ಮರಳಿ ಖರೀದಿಸಿದ್ದಾರೆ ಟೈಗರ್ ಶ್ರಾಫ್.

  2003 ರಲ್ಲಿ ಬಿಡುಗಡೆ ಆದ 'ಭೂಮ್' ಸಿನಿಮಾವನ್ನು ಜಾಕಿ ಶ್ರಾಫ್ ನಿರ್ಮಾಣ ಮಾಡಿದ್ದರು. ಅಮಿತಾಬ್ ಬಚ್ಚನ್ ಸೇರಿದಂತೆ ದೊಡ್ಡ-ದೊಡ್ಡ ಸ್ಟಾರ್ ನಟರು ಆ ಸಿನಿಮಾದಲ್ಲಿದ್ದರು. ಆದರೂ ಆ ಸಿನಿಮಾ ಹೀನಾಯವಾಗಿಗ ನೆಲ ಕಚ್ಚಿತು. ಹಾಗಾಗಿ ಜಾಕಿ ಶ್ರಾಫ್ ಕುಟುಂಬ ವಾಸವಿದ್ದ ಮನೆಯನ್ನು ಮಾರಬೇಕಾಗಿತ್ತು.

  ಟೈಗರ್ ಶ್ರಾಫ್ ಹಲವು ವರ್ಷ ಆಡಿ ಬೆಳೆದಿದ್ದ ಅದೇ ಮನೆಯನ್ನು ಅವರೇ ಈಗ ಮರಳಿ ಖರೀದಿಸಿದ್ದಾರೆ. ಈ ವಿಷಯವನ್ನು ಜಾಕಿ ಶ್ರಾಫ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ವಿಷಯ ಹೇಳುತ್ತಲೂ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಜಾಕಿ ಶ್ರಾಫ್.

  ''ನನ್ನ ಮಕ್ಕಳಿಬ್ಬರ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ಆ ಮನೆಯನ್ನು ವಾಪಸ್ ಖರೀದಿಸಿದ್ದಾರೆ. ನನ್ನ ಪತ್ನಿಗೆ ಆ ಮನೆ ವಾಪಸ್ ಖರೀದಿಸುವುದು ಇಷ್ಟವಿರಲಿಲ್ಲ. ಹೋಗಿದ್ದು ಹೋಯಿತು ಸುಮ್ಮನಾಗಿ ಎಂದಿದ್ದರು. ಆದರೆ ಟೈಗರ್ ಶ್ರಾಫ್ ಬಿಡಲಿಲ್ಲ. ಅವನು ಅಮ್ಮನಿಗಾಗಿ ಎಂದೇ ಆ ಮನೆಯನ್ನು ಮರಳಿ ಖರೀದಿಸಿದ'' ಎಂದಿದ್ದಾರೆ ಜಾಕಿ ಶ್ರಾಫ್.

  ಇದೀಗ ಜಾಕಿ ಶ್ರಾಫ್ ಸಹ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ಕೊನೆಯದಾಗಿ ಸಲ್ಮಾನ್ ಖಾನ್ ನಟನೆಯ 'ರಾಧೆ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಟೈಗರ್ ಸಹ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಪ್ರಸ್ತುತ 'ಹೀರೋಪನ್ತಿ 2', 'ಗಣ್‌ಪತ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Jackie Shroff sold his house when he went bankrupt. Now Tiger Shroff and Krishna Shroff bought back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X